ಶೀಲಾ ಓ ಮೈ ಶೀಲಾ; ದ್ವಾರಕೀಶ್ ನಿರ್ದೇಶನದ ಆಫ್ರಿಕಾದಲ್ಲಿ ಶೀಲಾ ಸಿನಿಮಾ ನಾಯಕಿ ಸಾಹಿಲಾ ಚಡ್ಡಾ ಈಗಿನ ಫೋಟೋಗಳು
ಸುಮಾರು 30-40 ವರ್ಷಗಳ ಹಿಂದೆ ನಾಯಕಿಯರಾಗಿ ಬೆಳ್ಳಿ ಪರದೆ ಮೇಲೆ ಮಿಂಚಿದ ಬಹಳಷ್ಟು ನಟಿಯರು ಕೂಡಾ ತೆರೆಮರೆಗೆ ಸರಿದಿದ್ದಾರೆ. ಅವರಲ್ಲಿ ಕೆಲವರು ನಿಧನರಾಗಿದ್ದರೆ, ಕೆಲವರು ಮದುವೆ ಆಗಿದ್ದಾರೆ, ಕೆಲವರು ಮದುವೆ ಆಗಿ ಸೆಟಲ್ ಆಗಿದ್ದಾರೆ. ಆಫ್ರಿಕಾದಲ್ಲಿ ಶೀಲಾ ನಟಿ ಸಾಹಿಲಾ ಈಗ ಮದುವೆ ಆಗಿ ಮುಂಬೈನಲ್ಲಿ ನೆಲೆಸಿದ್ದಾರೆ.
(1 / 12)
ಆಫ್ರಿಕಾದಲ್ಲಿ ಶೀಲಾ ಸಿನಿಮಾ 1986ರಲ್ಲಿ ತೆರೆ ಕಂಡಿತ್ತು. ಚಿತ್ರವನ್ನು ತಮ್ಮದೇ ದ್ವಾರಕೀಶ್ ಚಿತ್ರ ಬ್ಯಾನರ್ ಅಡಿ ಹಿರಿಯ ನಟ ದ್ವಾರಕೀಶ್ ನಿರ್ಮಿಸಿ, ನಿರ್ದೇಶನ ಮಾಡಿದ್ದರು. (PC: Sahila Chaddha Instagram)
(2 / 12)
ಚಿತ್ರದಲ್ಲಿ ಚರಣ್ ರಾಜ್ ನಾಯಕನಾಗಿ, ಮುಂಬೈ ಮೂಲದ ಸಾಹಿಲಾ ಚಡ್ಡಾ ನಾಯಕಿಯಾಗಿ ನಟಿಸಿದ್ದರು. ನಾಯಕಿ ಪಾತ್ರಕ್ಕೆ ಆಕೆ ಹೇಳಿ ಮಾಡಿಸಿದಂತೆ ಇದ್ದರು.
(3 / 12)
ಕನ್ನಡಕ್ಕೆ ಬರುವ ಮುನ್ನ ಸಾಹಿಲಾ ಚಡ್ಡಾ, 2 ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದರು. ಅದಕ್ಕೂ ಮುನ್ನ ಸಾಹಿಲಾ ಮಿಸ್ ಇಂಡಿಯಾ ಕಿರೀಟ ಗೆದ್ದಿದ್ದರು.
(4 / 12)
ಕಾಡು ಪ್ರಾಣಿಗಳ ಮಧ್ಯೆ ಬೆಳೆಯುವ ಹೆಣ್ಣು ಮಗು ದೊಡ್ಡವಳಾದ ನಂತರ ಅವಳನ್ನು ಹುಡುಕುತ್ತಾ ಮನೆಯವರು ಬರುತ್ತಾರೆ. ಅವಳನ್ನು ಒಪ್ಪಿಸಿ ಮನೆಗೆ ಕರೆದೊಯ್ಯುತ್ತಾರೆ. ಆದರೆ ನಗರವಾಸಿಗಳ ಮಧ್ಯೆ ಇರಲಾರದೆ ಆಕೆ ಮತ್ತೆ ಕಾಡಿಗೆ ವಾಪಸ್ ಆಗುವ ಕಥೆಯನ್ನು ಆಫ್ರಿಕಾದಲ್ಲಿ ಶೀಲಾ ಚಿತ್ರದಲ್ಲಿ ತೋರಿಸಲಾಗಿತ್ತು.
(5 / 12)
ಆಫ್ರಿಕಾದಲ್ಲಿ ಶೀಲಾ ಸಿನಿಮಾ, ತಮಿಳಿಗೆ ಕಿಳಕ್ಕು ಆಫ್ರಿಕಾವಿಲ್ ಶೀಲಾ ಹೆಸರಿನಲ್ಲಿ 1987ರಲ್ಲಿ ರೀಮೇಕ್ ಆಯ್ತು. ಈ ಸಿನಿಮಾ ನಂತರ ಸಾಹಿಲಾ ಮತ್ತೆ ಕನ್ನಡದಲ್ಲಿ ನಟಿಸಲಿಲ್ಲ.
(6 / 12)
ಹಿಂದಿಯ ವೀರಾನಾ, ನಾಚ್ ನಾಗಿನ್ ಗಲಿ ಗಲಿ, ಭಾಬಿ, ಧರಮ್ ಸಂಕಟ್, ಮಾ, ಭೋಲ್ ರಾಧಾ ಬೋಲ್, ಹಮ್ ಆಪ್ ಹೈ ಕೌನ್, ಆಂಟಿ ನಂಬರ್ ಒನ್ ಸೇರಿ ಅನೇಕ ಸಿನಿಮಾಗಳಲ್ಲಿ ಸಾಹಿಲಾ ನಟಿಸಿದ್ದಾರೆ.
(8 / 12)
ಸಾಹಿಲಾ ಚಡ್ಡಾ, ನಿಮೈ ಬಾಲಿ ಎಂಬ ನಟನನ್ನು ಪ್ರೀತಿಸಿ ಮದುವೆ ಆದರು ಈ ದಂಪತಿಗೆ ಪ್ರಿನ್ಸೆಸ್ ಬಾಲಿ ಎಂಬ ಮಗಳಿದ್ದಾಳೆ.
(9 / 12)
ಸಹನಟನೊಬ್ಬನ ಕಾರಣದಿಂದ ಸಾಹಿಲಾ ಹಾಗೂ ನಿಮೈ ನಡುವೆ ಮನಸ್ತಾಪ ಉಂಟಾಯ್ತು. ಡಿವೋರ್ಸ್ ನೀಡದೆ ಇಬ್ಬರೂ ಬೇರೆ ಬೇರೆ ವಾಸಿಸಲು ಶುರು ಮಾಡಿದರು.
(10 / 12)
ಸಾಹಿಲಾ ಹಾಗೂ ನಿಮೈ ಮನೆಯವರು ಇಬ್ಬರನ್ನು ಒಂದು ಮಾಡಲು ಎಷ್ಟು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಸದ್ಯಕ್ಕೆ ಸಾಹಿಲಾ, ಮಗಳು ಪ್ರಿನ್ಸೆಸ್ ಜೊತೆ ಮುಂಬೈನಲ್ಲಿ ನೆಲೆಸಿದ್ದಾರೆ.
(11 / 12)
ಸಾಹಿಲಾ ಚಡ್ಡಾ, ಸಿನಿಮಾಗಳಲ್ಲಿ ನಟಿಸದಿದ್ದರೂ. ಸೋಷಿಯಲ್ ಮೀಡಿಯಾ ಮೂಲಕ ಸಿನಿಮಾಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಆಗ್ಗಾಗ್ಗೆ ಬಾಲಿವುಡ್ ಕಾರ್ಯಕ್ರಮಗಳಿಗೆ ಮಗಳೊಂದಿಗೆ ಭಾಗಿಯಾಗುತ್ತಾರೆ.
ಇತರ ಗ್ಯಾಲರಿಗಳು