ಭಜರಂಗಿಯನ್ನು ಭೇಟಿಯಾದ ಹನುಮಾನ್; ಶಕ್ತಿಧಾಮದ ಮಕ್ಕಳಿಗೆ ಸಿನಿಮಾ ತೋರಿಸ್ತಾರಂತೆ ಶಿವಣ್ಣ
- ಹನುಮಾನ್ ಸಿನಿಮಾ ಬಾಕ್ಸ್‌ಆಫೀಸ್‌ನಲ್ಲಿ ಬ್ಲಾಕ್‌ಬಸ್ಟರ್ ಆಗಿದ್ದು. ಇದೇ ಸಮಯದಲ್ಲಿ ಈ ಚಿತ್ರದ ಹೀರೋ ತೇಜ ಸಜ್ಜ ಅವರು ಸ್ಯಾಂಡಲ್‌ವುಡ್ ನಟ ಶಿವರಾಜ್ ಕುಮಾರ್ ಅವರನ್ನು ಭೇಟಿಯಾಗಿದ್ದಾರೆ. ಸಿನಿಮಾ ಗೆಲ್ಲಿಸಿದ ಕನ್ನಡ ಜನತೆಗೆ ಹೃದಯಪೂರ್ವಕ ಧನ್ಯವಾದಗಳು.. ಜೈ ಹನುಮಾನ್ ಎಂದು ತೇಜ ಸಜ್ಜ ಟ್ವೀಟ್ ಮಾಡಿದ್ದಾರೆ.
- ಹನುಮಾನ್ ಸಿನಿಮಾ ಬಾಕ್ಸ್‌ಆಫೀಸ್‌ನಲ್ಲಿ ಬ್ಲಾಕ್‌ಬಸ್ಟರ್ ಆಗಿದ್ದು. ಇದೇ ಸಮಯದಲ್ಲಿ ಈ ಚಿತ್ರದ ಹೀರೋ ತೇಜ ಸಜ್ಜ ಅವರು ಸ್ಯಾಂಡಲ್‌ವುಡ್ ನಟ ಶಿವರಾಜ್ ಕುಮಾರ್ ಅವರನ್ನು ಭೇಟಿಯಾಗಿದ್ದಾರೆ. ಸಿನಿಮಾ ಗೆಲ್ಲಿಸಿದ ಕನ್ನಡ ಜನತೆಗೆ ಹೃದಯಪೂರ್ವಕ ಧನ್ಯವಾದಗಳು.. ಜೈ ಹನುಮಾನ್ ಎಂದು ತೇಜ ಸಜ್ಜ ಟ್ವೀಟ್ ಮಾಡಿದ್ದಾರೆ.
(1 / 8)
ಹನುಮಾನ್ ಸಿನಿಮಾ ಬಾಕ್ಸ್‌ಆಫೀಸ್‌ನಲ್ಲಿ ಬ್ಲಾಕ್‌ಬಸ್ಟರ್ ಆಗಿದ್ದು. ಇದೇ ಸಮಯದಲ್ಲಿ ಈ ಚಿತ್ರದ ಹೀರೋ ತೇಜ ಸಜ್ಜ ಅವರು ಸ್ಯಾಂಡಲ್‌ವುಡ್ ನಟ ಶಿವರಾಜ್ ಕುಮಾರ್ ಅವರನ್ನು ಭೇಟಿಯಾಗಿದ್ದಾರೆ. ಸಿನಿಮಾ ಗೆಲ್ಲಿಸಿದ ಕನ್ನಡ ಜನತೆಗೆ ಹೃದಯಪೂರ್ವಕ ಧನ್ಯವಾದಗಳು.. ಜೈ ಹನುಮಾನ್ ಎಂದು ತೇಜ ಸಜ್ಜ ಟ್ವೀಟ್ ಮಾಡಿದ್ದಾರೆ.
(2 / 8)
ಹನುಮಾನ್ ಮೀಟ್ಸ್ ಭಜರಂಗಿ. ಶಿವಣ್ಣ ಸರ್, ನಿಮ್ಮ ಅಮೂಲ್ಯ ಪ್ರೀತಿಗೆ ಧನ್ಯವಾದಗಳು ಸರ್ ಎಂದು ತೇಜ ಸಜ್ಜ ಟ್ವೀಟ್ ಮಾಡಿದ್ದಾರೆ. ಅಂದಹಾಗೆ ಹನುಮಾನ್ ಸಿನಿಮಾವನ್ನು ನಿನ್ನೆ ಶಿವರಾಜ್ ಕುಮಾರ್ ವೀಕ್ಷಿಸಿದ್ದಾರೆ.
(3 / 8)
ಅತ್ಯುತ್ತಮ ತಂತ್ರಜ್ಞಾನ ಬಳಸಿಕೊಂಡು ನಿರ್ಮಿಸಿರುವ ಹನುಮಾನ್ ಸಿನಿಮಾವು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಗಳಿಕೆ ಮಾಡುತ್ತಿದೆ. ಈ ಸಿನಿಮಾವನ್ನು ಶಿವರಾಜ್ ಕುಮಾರ್ ಅವರು ಗೀತಾ ಶಿವರಾಜ್ ಕುಮಾರ್ ಜತೆ ವೀಕ್ಷಿಸಿದ್ದಾರೆ.
(4 / 8)
ಈ ಸಿನಿಮಾ ನೋಡಿ ಖುಷಿಗೊಂಡಿರುವ ಶಿವಣ್ಣ, ಶಕ್ತಿಧಾಮದ ಮಕ್ಕಳಿಗೆ ಈ ಚಿತ್ರ ತೋರಿಸುವುದಾಗಿ ಹೇಳಿದ್ದಾರೆ. ಜತೆಗೆ ತಮ್ಮ ಕುಟುಂಬ ಅಂಜನೇಯ ಸ್ವಾಮಿಯ ಭಕ್ತರು ಎಂಬ ವಿಚಾರವನ್ನು ಹೇಳಿದ್ದಾರೆ.
(5 / 8)
ಇತ್ತೀಚೆಗೆ ಡಾಲಿ ಧನಂಜಯ್ ಕೂಡ ಹನುಮಾನ್ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. "ಇದಕ್ಕೆ ಧನ್ಯವಾದಗಳು ಡಾಲಿ ಸರ್ ಬಡವರ ಮಕ್ಳು ಬೆಳೀಬೇಕ್ ಕಣ್ರಯ್ಯಾ" ಎಂದು ತೇಜ ಸಜ್ಜ ಪ್ರೀತಿಯಿಂದ ಮಾರುತ್ತರ ನೀಡಿದ್ದರು.
(6 / 8)
ರಿಷಬ್ ಶೆಟ್ಟಿ ಕೂಡ ಹನುಮಾನ್ ಸಿನಿಮಾಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದಕ್ಕೆ ತೇಜ ಸಜ್ಜ "ಧನ್ಯವಾದ ಅಣ್ಣಾ, ಕಾಂತಾರಕ್ಕೆ ಕಾಯುತ್ತಿದ್ದೇನೆ" ಎಂದು ಮಾರುತ್ತರ ನೀಡಿದ್ದಾರೆ.
(7 / 8)
ಸದ್ಯ ಲಭ್ಯವಿರುವ ಮಾಹಿತಿ ಪ್ರಕಾರ ಕಳೆದ ನಾಲ್ಕು ದಿನಗಳಲ್ಲಿ ಹನುಮಾನ್ ಸಿನಿಮಾವು ಭಾರತದಲ್ಲಿ 55.15 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಸಿನಿಮಾ ಮಹೇಶ್ ಬಾಬು ಅವರ ಗುಂಟೂರು ಬಾಬುಗಿಂತಲೂ ಹೆಚ್ಚು ಜನಪ್ರಿಯತೆಗೊಳ್ಳುತ್ತಿದೆ.
ಇತರ ಗ್ಯಾಲರಿಗಳು