Birth Date: ಹುಟ್ಟಿದ ದಿನಾಂಕವೇ ತಿಳಿಸುತ್ತೆ ನಿಮ್ಮ ವ್ಯಕ್ತಿತ್ವ; ಜೀವನದಲ್ಲಿ ಉದ್ಯೋಗ, ಆರ್ಥಿಕ ಸ್ಥಿತಿ ಬಗ್ಗೆಯೂ ಹೇಳುತ್ತೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Birth Date: ಹುಟ್ಟಿದ ದಿನಾಂಕವೇ ತಿಳಿಸುತ್ತೆ ನಿಮ್ಮ ವ್ಯಕ್ತಿತ್ವ; ಜೀವನದಲ್ಲಿ ಉದ್ಯೋಗ, ಆರ್ಥಿಕ ಸ್ಥಿತಿ ಬಗ್ಗೆಯೂ ಹೇಳುತ್ತೆ

Birth Date: ಹುಟ್ಟಿದ ದಿನಾಂಕವೇ ತಿಳಿಸುತ್ತೆ ನಿಮ್ಮ ವ್ಯಕ್ತಿತ್ವ; ಜೀವನದಲ್ಲಿ ಉದ್ಯೋಗ, ಆರ್ಥಿಕ ಸ್ಥಿತಿ ಬಗ್ಗೆಯೂ ಹೇಳುತ್ತೆ

ಹುಟ್ಟಿದ ದಿನಾಂಕದ ಆಧಾರದ ಮೇಲೆ ಜನರು ಹೇಗಿರುತ್ತಾರೆ ಎಂಬುದುನ್ನು ತಿಳಿದುಕೊಳ್ಳಬಹುದು. ಅಷ್ಟೇ ಅಲ್ಲ, ಜೀವನದ ಹಲವು ಅಂಶಗಳಲ್ಲಿ ಹೇಗೆ ವರ್ತಿಸುತ್ತಾರೆ ಎಂಬುದನ್ನು ತಿಳಿಸುತ್ತೆ. ನಿಮ್ಮ ಜನ್ಮ ದಿನಾಂಕ ನಿಮಗೆ ಗೊತ್ತಿದ್ದರೆ ನಿಮ್ಮ ವ್ಯಕ್ತಿತ್ವ, ಉಗ್ಯೋಗ ಹಾಗೂ ಭವಿಷ್ಯದ ಆರ್ಥಿಕ ಪರಿಸ್ಥಿತಿಯ ಬಗ್ಗೆ ತಿಳಿಯಿರಿ.

ಹುಟ್ಟಿದ ದಿನಾಂಕದ ಆಧಾರದಲ್ಲಿ ನಿಮ್ಮ ವ್ಯಕ್ತಿತ್ವವನ್ನು ತಿಳಿಯಿರಿ
ಹುಟ್ಟಿದ ದಿನಾಂಕದ ಆಧಾರದಲ್ಲಿ ನಿಮ್ಮ ವ್ಯಕ್ತಿತ್ವವನ್ನು ತಿಳಿಯಿರಿ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜನ್ಮ ದಿನಾಂಕ, ತಿಂಗಳು ಹಾಗೂ ನಕ್ಷತ್ರಗಳ ಆಧಾರದ ಮೇಲೆ ನಾವು ನಮ್ಮ ಭವಿಷ್ಯವನ್ನು ಊಹಿಸಬಹುದು. ಜೀವನದಲ್ಲಿ ಬರುವ ಸಮಸ್ಯೆಗಳನ್ನು ವಿವಿಧ ಸಂದರ್ಭಗಳಲ್ಲಿ ಹೇಗೆ ಎದುರಿಸಬೇಕೆಂದು ಕಲಿಯಬಹುದು. ಸಂಖ್ಯಾಶಾಸ್ತ್ರದ ಪ್ರಕಾರ, ನಿರ್ದಿಷ್ಟ ದಿನಾಂಕಗಳಲ್ಲಿ ಜನಿಸಿದವರು ಭವಿಷ್ಯದಲ್ಲಿ ಉತ್ತಮ ಸಾಧನೆಗಳು ಮತ್ತು ತೃಪ್ತಿಯನ್ನು ಹೊಂದುವ ಸಾಧ್ಯತೆಯಿದೆ. ಸಂಖ್ಯಾಶಾಸ್ತ್ರದ ಪ್ರಕಾರ ಜನ್ಮ ದಿನಾಂಕಗಳ ಆಧಾರದ ಮೇಲೆ ಜನರ ಜೀವನ, ವೃತ್ತಿ, ಆರ್ಥಿಕ ಸ್ಥಿತಿ ಮತ್ತು ಭವಿಷ್ಯದ ಬೆಳವಣಿಗೆಗಳು ಹೇಗೆ ಎಂದು ತಿಳಿಯೋಣ.

ಪ್ರಮುಖ ದಿನಾಂಕಗಳು

  • 1, 10, 19, 28: ಈ ದಿನಾಂಕಗಳಲ್ಲಿ ಜನಿಸಿದ ಜನರು ಸಾಮಾನ್ಯವಾಗಿ ಶಕ್ತಿಯುತವಾದ ನವೀನ ಕಲ್ಪನೆಗಳನ್ನು ಹೊಂದಿರುತ್ತಾರೆ. ವೃತ್ತಿಜೀವನದಲ್ಲಿ ಬೆಳೆಯಲು ಹೊಸ ಅವಕಾಶಗಳನ್ನು ಹುಡುಕುತ್ತಾರೆ. ತುಂಬಾ ಸೃಜನಶೀಲರು ಮತ್ತು ಅದೃಷ್ಟವಂತರು ಎಂದು ಪರಿಗಣಿಸಲಾಗಿದೆ.
  • 2, 11, 20, 29: ಈ ದಿನಾಂಕಗಳಲ್ಲಿ ಜನಿಸಿದವರು ಮಾತು ಮತ್ತು ಅಭಿವ್ಯಕ್ತಿಯಲ್ಲಿ ಮುಂದಾಳತ್ವ ವಹಿಸುವ ಮೂಲಕ ಸಮುದಾಯದಲ್ಲಿ ಅಧಿಕಾರವನ್ನು ಪಡೆಯುವ ಸಾಧ್ಯತೆಯಿದೆ. ಇವರು ನೈಸರ್ಗಿಕ ನಾಯಕತ್ವದ ಗುಣಗಳೊಂದಿಗೆ ಹೊರಹೊಮ್ಮುತ್ತಾರೆ.
  • 3, 12, 21, 30: ಈ ದಿನಾಂಕಗಳಲ್ಲಿ ಜನಿಸಿದವರು ಉತ್ತಮ ಸಾಮಾಜಿಕ ಸಂಬಂಧಗಳು, ಸ್ಪಷ್ಟ ಚಿಂತನೆ ಹಾಗೂ ಉತ್ತಮ ಪರಿಕಲ್ಪನೆಗಳನ್ನು ಹೊಂದಿರುತ್ತಾರೆ.

ಇದನ್ನೂ ಓದಿ: 2025 ಸಂಖ್ಯೆಯ ವಿಶೇಷ ಏನು? ಗಣಿತದ ಅದ್ಭುತಗಳಿವೆ ಗಮನಿಸಿ; ಪರಿಪೂರ್ಣ ವರ್ಗ, ಸತತ ಬೆಸ ಸಂಖ್ಯೆಗಳ ಮೊತ್ತ

  • 4, 13, 22: ಈ ದಿನಾಂಕಗಳಲ್ಲಿ ಜನಿಸಿದವರು ಆರ್ಥಿಕವಾಗಿ ಉತ್ತಮವಾಗಿರುತ್ತಾರೆ. ಇತರರಿಗೆ ಹೋಲಿಸಿದರೆ ಇವರು ಜೀವನದಲ್ಲಿ ಶ್ರೀಮಂತರಾಗಲು ಉತ್ತಮ ಅವಕಾಶವನ್ನು ಹೊಂದಿದ್ದಾರೆ.
  • 5, 14, 23: ಈ ದಿನಾಂಕಗಳಲ್ಲಿ ಜನಿಸಿದ ಜನರು ಪ್ರಗತಿಯಲ್ಲಿ ಸಾಕಷ್ಟು ಶಕ್ತಿಯನ್ನು ಹೊಂದಿರುತ್ತಾರೆ. ಉತ್ತಮ ಪ್ರಯೋಜನಗಳನ್ನು ಪಡೆಯುವಲ್ಲಿ ಪ್ರತಿಭೆಯನ್ನು ತೋರಿಸುತ್ತಾರೆ.
  • 6, 15, 24: ಈ ದಿನಾಂಕಗಳಲ್ಲಿ ಜನಿಸಿದವರು ಯಾವಾಗಲೂ ಕುಟುಂಬ ಮತ್ತು ಸಂಬಂಧಗಳಲ್ಲಿ ಶಾಂತಿ ಮತ್ತು ಸಂತೋಷವನ್ನು ಬಯಸುತ್ತಾರೆ. ಇವರು ಸ್ವಾಭಾವಿಕವಾಗಿ ದಯೆ ಮತ್ತು ಪ್ರೀತಿಯಿಂದ ಕೂಡಿರುತ್ತಾರೆ.

ಇದನ್ನೂ ಓದಿ: ಸಂಖ್ಯಾಶಾಸ್ತ್ರ: ಹುಟ್ಟಿದ ಮನೆ ಮಾತ್ರವಲ್ಲ, ಈ ರಾಡಿಕ್ಸ್‌ ನಂಬರ್‌ ಹುಡುಗಿಯರು ಮೆಟ್ಟಿದ ಮನೆಗೂ ಕೀರ್ತಿ ತರುತ್ತಾರೆ

  • 7, 16, 25: ಈ ದಿನಾಂಕಗಳಲ್ಲಿ ಜನಿಸಿದವರು ಅನ್ವೇಷಣೆ, ಸಂಶೋಧನೆ ಹಾಗೂ ಅಧ್ಯಾತ್ಮಿಕ ಬಗ್ಗೆ ಉತ್ಸುಕರಾಗಿರುತ್ತಾರೆ. ಇವರು ಇತರರಿಗೆ ಹಾನಿಯಾಗದ ಮಾರ್ಗವನ್ನು ಆರಿಸಿಕೊಳ್ಳುತ್ತಾರೆ ಜೊತೆಗೆ ಆತ್ಮವಿಶ್ವಾಸದಿಂದ ವರ್ತಿಸುತ್ತಾರೆ.
  • 8, 17, 26: ಈ ದಿನಾಂಕಗಳಲ್ಲಿ ಜನಿಸಿದವರು ಆರ್ಥಿಕವಾಗಿ ಉತ್ತಮವಾಗಿ ನಿಲ್ಲುತ್ತಾರೆ. ಇವರು ಪ್ರಾಮಾಣಿಕರು ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಬಲವಾದ ನಂಬಿಕೆಯನ್ನು ಹೊಂದಿದ್ದಾರೆ.
  • 9, 18, 27: ಈ ದಿನಾಂಕಗಳಲ್ಲಿ ಜನಿಸಿದವರು ದೃಷ್ಟಿ, ಬದಲಾವಣೆ ಹಾಗೂ ಆತ್ಮ ವಿಶ್ವಾಸದಿಂದ ಬದುಕುತ್ತಾರೆ.

ಇದನ್ನೂ ಓದಿ: ನಿಮ್ಮ ಅದೃಷ್ಟದ ಸಂಖ್ಯೆ ಪ್ರಕಾರ ಫೋನ್ ವಾಲ್‌ಪೇಪರ್‌ನಲ್ಲಿ ಯಾವ ಚಿತ್ರವಿರಬೇಕು? ಇಲ್ಲಿದೆ ನೋಡಿ ಮಾಹಿತಿ

ಹುಟ್ಟಿದ ದಿನಾಂಕವನ್ನು ಆಧರಿಸಿದ ಭವಿಷ್ಯ

  • 1 ರಿಂದ 9 ರ ನಡುವೆ ಜನಿಸಿದವರು ಅದೃಷ್ಟವಂತರು. ಈ ದಿನಾಂಕಗಳು ಸೋಮವಾರ ಮತ್ತು ಶನಿವಾರದ ನಡುವೆ ಬಂದರೆ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ.
  • 10 ರಿಂದ 18 ನೇ ದಿನಾಂಕಗಳಲ್ಲಿ ಜನಿಸಿದವರು ಸಾಮಾನ್ಯವಾಗಿ ಅದೃಷ್ಟ, ಪ್ರೀತಿ, ವಿಷಾದ ಮತ್ತು ಸಂಬಂಧಗಳನ್ನು ಬಲಪಡಿಸುವ ಉತ್ತಮ ಅವಕಾಶಗಳನ್ನು ಪಡೆದಿರುತ್ತಾರೆ.
  • 19 ರಿಂದ 27 ರ ನಡುವೆ ಜನಿಸಿದವರು ಸಮಾಜದಲ್ಲಿ ಉತ್ತಮ ಮನ್ನಣೆ, ಕೆಲಸದಲ್ಲಿ ಯಶಸ್ಸು ಹಾಗೂ ನಾಯಕತ್ವದಲ್ಲಿ ಉತ್ತಮ ಅವಕಾಶಗಳನ್ನು ಹೊಂದಿರುತ್ತಾರೆ.
  • ಜ್ಯೋತಿಷ್ಯಶಾಸ್ತ್ರದ ಪ್ರಕಾರ, 28, 29 ಮತ್ತು 30 ರಂದು ಜನಿಸಿದವರು ಶ್ರೀಮಂತರು ಮತ್ತು ಪ್ರಸಿದ್ಧರಾಗಿದ್ದಾರೆ.

(ಗಮನಿಸಿ: ಈ ವಿಷಯಗಳು ಜ್ಯೋತಿಷ್ಯವನ್ನು ಆಧರಿಸಿವೆ. ಇದು ವೈಯಕ್ತಿಕ ಅನುಭವ, ನಕ್ಷತ್ರ ಚಕ್ರಗಳ ಆಧಾರದ ಮೇಲೆ ಬದಲಾವಣೆಗೆ ಒಳಪಟ್ಟಿರುತ್ತದೆ)

Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.