ಕೊಹ್ಲಿ, ರೋಹಿತ್ ಅಲ್ಲ; ಭಾರತದ ಈ ಆಟಗಾರ ಕಂಡರೆ ಭಯ ಜಾಸ್ತಿ; ತಮಗೆೆ ನಡುಕ ಹುಟ್ಟಿಸಿದ ಆಟಗಾರನ ಹೆಸರಿಸಿದ ಸ್ಕಾಟ್ ಬೋಲ್ಯಾಂಡ್
- Scott Boland: ಭಾರತ ತಂಡದಲ್ಲಿ ಯಾವ ಆಟಗಾರನನ್ನು ಕಂಡರೆ ಭಯ ಆಗುತ್ತದೆ ಎಂಬುದನ್ನು ಆಸ್ಟ್ರೇಲಿಯಾದ ವೇಗಿ ಸ್ಕಾಟ್ ಬೋಲ್ಯಾಂಡ್ ಬಹಿರಂಗಪಡಿಸಿದ್ದಾರೆ.
- Scott Boland: ಭಾರತ ತಂಡದಲ್ಲಿ ಯಾವ ಆಟಗಾರನನ್ನು ಕಂಡರೆ ಭಯ ಆಗುತ್ತದೆ ಎಂಬುದನ್ನು ಆಸ್ಟ್ರೇಲಿಯಾದ ವೇಗಿ ಸ್ಕಾಟ್ ಬೋಲ್ಯಾಂಡ್ ಬಹಿರಂಗಪಡಿಸಿದ್ದಾರೆ.
(1 / 5)
ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿಗೆ ಟೀಮ್ ಇಂಡಿಯಾ ಸಜ್ಜಾಗಿದೆ. ನವೆಂಬರ್ 22ರಿಂದ ಐದು ಪಂದ್ಯಗಳ ಸರಣಿ ಉಭಯ ತಂಡಗಳ ನಡುವೆ ನಡೆಯಲಿದೆ. ನವೆಂಬರ್ 10ರಂದು ಟೀಮ್ ಇಂಡಿಯಾ ಆಟಗಾರರು ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದಾರೆ. ಆದರೆ ಅದಕ್ಕೂ ಮುನ್ನವೇ ನ್ಯೂಜಿಲೆಂಡ್ ಸರಣಿಯಲ್ಲಿ ಅವಕಾಶ ಪಡೆಯದ ಕೆಎಲ್ ರಾಹುಲ್ ಮತ್ತು ಧ್ರುವ್ ಜುರೆಲ್ ಅವರು ಭಾರತ ಎ ತಂಡದ ಪರ ಆಡಲು ಆಸ್ಟ್ರೇಲಿಯಾಗೆ ಹಾರಿದ್ದಾರೆ. ಇದೆಲ್ಲದರ ನಡುವೆಯೇ ಆಸ್ಟ್ರೇಲಿಯಾದ ಆಟಗಾರನೊಬ್ಬ, ತಮಗೆ ಭಯ ಹುಟ್ಟಿಸುವ ಆಟಗಾರ ಯಾರೆಂದು ಬಹಿರಂಗಪಡಿಸಿದ್ದಾರೆ.
(2 / 5)
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶುಭ್ಮನ್ ಗಿಲ್.. ಬೇರೆ ಯಾರೂ ಅಲ್ಲ. ಕೆಎಲ್ ರಾಹುಲ್ ಆಸ್ಟ್ರೇಲಿಯಾ ತಂಡಕ್ಕೆ ಹೆಚ್ಚು ಭಯ ಹುಟ್ಟಿಸಿದ್ದಾರೆ ಎಂದು ಆಸೀಸ್ ವೇಗಿ ಸ್ಕಾಟ್ ಬೋಲ್ಯಾಂಡ್ ತಿಳಿಸಿದ್ದಾರೆ. ರಾಹುಲ್ ಆಸ್ಟ್ರೇಲಿಯಾದಲ್ಲಿ 5 ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 2015ರಲ್ಲಿ ಸಿಡ್ನಿಯಲ್ಲಿ ರಾಹುಲ್ ಶತಕ ಗಳಿಸಿದ್ದರು. ಕೆಎಲ್ ರಾಹುಲ್ ಅವರನ್ನು ಒತ್ತಡಕ್ಕೆ ಸಿಲುಕಿಸುವುದು ಸುಲಭವಲ್ಲ. ಬೌಲರ್ಗಳು ಹೆಚ್ಚು ಅಧ್ಯಯನ ಮಾಡಬೇಕಾಗುತ್ತದೆ., ಆರಂಭದಿಂದಲೂ ಆಕ್ರಮಣಕಾರಿಯಾಗಿ ಬೌಲಿಂಗ್ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.(AP)
(3 / 5)
"ನಾನು ಭಾರತದಲ್ಲಿ ಟೆಸ್ಟ್ ಆಡುವಾಗ ರಾಹುಲ್ ವಿರುದ್ಧ ಬೌಲಿಂಗ್ ಮಾಡಿದ್ದೇನೆ. ಆದರೆ, ಅವರಿಗೆ ಬೌಲಿಂಗ್ ಮಾಡುವುದು ವಿಭಿನ್ನ ಅನುಭವ ಎಂದು ಬೋಲ್ಯಾಂಡ್ ಹೇಳಿದ್ದಾರೆ. ಅವರು ವಿಶ್ವ ದರ್ಜೆಯ ಬ್ಯಾಟ್ಸ್ಮನ್ ಮತ್ತು ಉತ್ತಮ ಕ್ರಿಕೆಟಿಗ. ಬೌಲರ್ಗಳು ಆರಂಭದಿಂದಲೂ ಅವರ ಮೇಲೆ ಒತ್ತಡ ಹೇರಿದರೆ, ಅದೇ ಒತ್ತಡದೊಂದಿಗೆ ಸರಣಿಯುದ್ದಕ್ಕೂ ಅವರನ್ನು ಸೈಲೆಂಟ್ ಮಾಡಬಹುದು ಎಂದು ತಮ್ಮ ಬೌಲರ್ಗಳಿಗೆ ಸಲಹೆ ನೀಡಿದ್ದಾರೆ ಬೋಲ್ಯಾಂಡ್.
(4 / 5)
ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಭಾರತ ತಂಡವು ವೈಟ್ವಾಶ್ ಆಗಿದೆ, ಆದ್ದರಿಂದ ಭಾರತ ತಂಡ ಸಾಕಷ್ಟು ಒತ್ತಡದಲ್ಲಿದೆ. ಭಾರತೀಯ ವಿಕೆಟ್ ಮತ್ತು ಆಸೀಸ್ ವಿಕೆಟ್ ನಡುವೆ ದೊಡ್ಡ ವ್ಯತ್ಯಾಸವಿದೆ. ಇದರ ಪರಿಣಾಮ ಭಾರತ ತಂಡವು ಇಲ್ಲಿ ಅದೇ ರೀತಿಯಲ್ಲಿ ಆಡಲಿದೆ. ಏಕೆಂದರೆ ಆಸ್ಟ್ರೇಲಿಯಾದ ಪಿಚ್ಗಳಲ್ಲಿ ಸೀಮ್ ಮತ್ತು ವೇಗವು ತುಂಬಾ ಹೆಚ್ಚಾಗಿದೆ ಎಂದಿದ್ದಾರೆ.
(5 / 5)
ಕೆಎಲ್ ರಾಹುಲ್ ಸೇರಿದಂತೆ ಭಾರತೀಯ ಕ್ರಿಕೆಟ್ ತಂಡದ ಸಿದ್ಧತೆಯ ಬಗ್ಗೆ ಮಾತನಾಡಿದ ರೋಹಿತ್ ಶರ್ಮಾ, ಅಭ್ಯಾಸ ಪಂದ್ಯದಲ್ಲಿ ಆಡುವುದಕ್ಕಿಂತ ನೆಟ್ಸ್ನಲ್ಲಿ ಅಭ್ಯಾಸ ಮಾಡುವುದು ಉತ್ತಮ ಎಂದು ಹೇಳಿದ್ದಾರೆ. ಏಕೆಂದರೆ ಅಭ್ಯಾಸ ಪಂದ್ಯದಲ್ಲಿ ನೀವು ಔಟಾದರೆ, ನೀವು ದಿನವಿಡೀ ಕುಳಿತುಕೊಳ್ಳಬೇಕು. ಆದರೆ ನೀವು ನೆಟ್ನಲ್ಲಿ ಅಭ್ಯಾಸ ಮಾಡಲು ಬಯಸುವವರೆಗೂ ಅಭ್ಯಾಸ ಮಾಡಬಹುದು. ಇದು ತಂಡಕ್ಕೆ ಒಳ್ಳೆಯದು ಎಂದಿದ್ದಾರೆ. ಇದರ ನಂತರ, ಭಾರತ ಎ ತಂಡದೊಂದಿಗೆ ಭಾರತೀಯ ಹಿರಿಯರ ತಂಡದ ಅಭ್ಯಾಸ ಪಂದ್ಯವನ್ನು ರದ್ದುಗೊಳಿಸಲಾಯಿತು.
ಇತರ ಗ್ಯಾಲರಿಗಳು