Chakra Reservoir: ಮೈತುಂಬಿ ಹರಿಯುತ್ತಿರುವ ಮಲೆನಾಡಿನ ಚಕ್ರಾ ಜಲಾಶಯಕ್ಕೆ ಪ್ರವಾಸಿಗರ ದಾಂಗುಡಿ, ಎಲ್ಲಿದೆ ಈ ತಾಣ photos
ಮಲೆನಾಡಿನ ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಯ ಗಡಿಯಲ್ಲಿರುವ ಚಕ್ರಾ ಜಲಾಶಯವು( Chakra reservoir) ಚಕ್ರಾ ನದಿಯ ಭಾಗ. ಪುಟ್ಟ ಜಲಾಶಯ ತುಂಬಿ ನೀರು ಹರಿಯುತ್ತಿದೆ. ಪ್ರವಾಸಿಗರು ಚಕ್ರಾ ಜಲಾಶಯ ವೀಕ್ಷಣೆಗೆ ಆಗಮಿಸುತ್ತಿದ್ದಾರೆ.
(1 / 6)
ಶಿವಮೊಗ್ಗ ಜಿಲ್ಲೆಯ ಪುಟ್ಟ ಜಲಾಶಯಗಳಲ್ಲೊಂದು ಚಕ್ರಾ ಜಲಾಶಯ. ಐದು ದಶಕಕ್ಕೂ ಹಳೆಯದಾದ ಜಲಾಶಯ ಮಳೆಗಾಲದಲ್ಲಿ ತನ್ನ ವೈಭವ ಹೆಚ್ಚಿಸಿಕೊಳ್ಳುತ್ತದೆ.,
(2 / 6)
ಕೊಡಚಾದ್ರಿ ಬೆಟ್ಟಸಾಲುಗಳಲ್ಲಿ ಹುಟ್ಟಿ ಅರಬ್ಬಿ ಸಮುದ್ರ ಕಡೆಗೆ ಹರಿಯುವ ಚಕ್ರ ನದಿಗೆ ಮಾಸ್ತಿಕಟ್ಟೆ ಸಮೀಪದಲ್ಲಿ ಕಿರು ಜಲಾಶಯವನ್ನು ನಿರ್ಮಿಸಲಾಗಿದೆ. ಮಳೆಗಾಲದಲ್ಲಿ ಜಲಾಶಯ ತುಂಬಿ ನೀರು ಹರಿಸಿದಾಗ ಇಂತಹ ವೈಭವ ಕಾಣಲಿದೆ.(Ravi )
(3 / 6)
ಶಿವಮೊಗ್ಗದಿಂದ ಹೊಸನಗರ ತಾಲ್ಲೂಕಿನಲ್ಲಿರುವ ಮಾಸ್ತಿಕಟ್ಟೆಗೆ ಹೋಗಿ (ಶಿವಮೊಗ್ಗದಿಂದ 100 ಕಿ.ಮೀ). ಮಾಸ್ತಿಕಟ್ಟೆಯಿಂದ ಚಕ್ರಾ ಅಣೆಕಟ್ಟು ಸುಮಾರು 20 ಕಿ.ಮೀ ದೂರದಲ್ಲಿದೆ. ಸ್ವಂತ ವಾಹನ ಇದ್ದರೆ ಒಳಿತು.
(4 / 6)
ಚಕ್ರ ಆಣೆಕಟ್ಟನ್ನು ಕರ್ನಾಟಕ ವಿದ್ಯುತ್ ನಿಗಮದವರೇ ವಿದ್ಯುತ್ ಬಳಕೆಗೆ ಬಳಸುತ್ತಾರೆ. ಇಲ್ಲಿನ ಭೇಟಿಗೆ ಅನುಮತಿ ಬೇಕಾಗುತ್ತದೆ.
(5 / 6)
ಮಳೆಗಾಲ ಬಂದರೆ ತುಂಬುವ ಜಲಾಶಯದ ಜಲ ವಾತಾವರಣವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ.
ಇತರ ಗ್ಯಾಲರಿಗಳು