ತಂದೆಗೆ ತಕ್ಕ ಮಗಳು: ಸೌರವ್ ಗಂಗೂಲಿ 22 ವರ್ಷದ ಮಗಳ ವೇತನ ಲಕ್ಷ ಲಕ್ಷ, ಅದು ಕೂಡ ಮೊದಲ ಕೆಲಸದಲ್ಲೇ!
- Sourav Ganguly Daughter: ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಮಗಳು ಸನಾ ಗಂಗೂಲಿ ತನ್ನ ಮೊದಲ ಕೆಲಸದಲ್ಲೇ ಲಕ್ಷ ಲಕ್ಷ ವೇತನ ಪಡೆಯುತ್ತಿದ್ದಾರೆ. ಕೆಲಸ ಮಾಡುತ್ತಿರುವುದೆಲ್ಲಿ? ವೇತನ ಎಷ್ಟಿದೆ? ಇಲ್ಲಿದೆ ವಿವರ.
- Sourav Ganguly Daughter: ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಮಗಳು ಸನಾ ಗಂಗೂಲಿ ತನ್ನ ಮೊದಲ ಕೆಲಸದಲ್ಲೇ ಲಕ್ಷ ಲಕ್ಷ ವೇತನ ಪಡೆಯುತ್ತಿದ್ದಾರೆ. ಕೆಲಸ ಮಾಡುತ್ತಿರುವುದೆಲ್ಲಿ? ವೇತನ ಎಷ್ಟಿದೆ? ಇಲ್ಲಿದೆ ವಿವರ.
(1 / 10)
ಕೋಲ್ಕತ್ತಾ ವೈದ್ಯೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸೌರವ್ ಗಂಗೂಲಿ ನೀಡಿದ್ದ ಹೇಳಿಕೆಯು ವಿವಾದಕ್ಕೆ ಗುರಿಯಾಗಿತ್ತು. ಈ ಒಂದು ಘಟನೆಯಿಂದ ಬಂಗಾಳ ಸುರಕ್ಷಿತವಲ್ಲ ಎಂದು ಹೇಳುವುದು ಸರಿಯಲ್ಲ ಎಂದು ಹೇಳಿದ್ದರು. ಇದು ಆಕ್ರೋಶಕ್ಕೆ ಕಾರಣವಾಗಿತ್ತು.
(2 / 10)
ಈ ಎಲ್ಲದರ ನಡುವೆ ಸೌರವ್ ಗಂಗೂಲಿ ಅವರ ಮಗಳ ಸನಾ ಗಂಗೂಲಿ ಕೆಲಸ ಮತ್ತು ವೇತನದ ಕುರಿತು ಚರ್ಚೆಗಳು ನಡೆಯುತ್ತಿವೆ. ತಂದೆಗೆ ತಕ್ಕ ಮಗಳು ಎಂದು ಕರೆಸಿಕೊಳ್ಳುತ್ತಿದ್ದಾಳೆ ಸನಾ. ಹಾಗಿದ್ದರೆ ಸನಾ ಕೆಲಸ ಮಾಡುತ್ತಿರುವುದೆಲ್ಲಿ? ಅವರ ಸಂಬಳ ಎಷ್ಟಿದೆ? ಇಲ್ಲಿದೆ ವಿವರ.
(3 / 10)
ಸನಾ ವಾರ್ಷಿಕ ಆದಾಯ ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು! 22 ವರ್ಷದ ಈಕೆ ಅಮೆರಿಕದ 'ಇನೋವೆರೊವ್'ನಲ್ಲಿ ಸಲಹೆಗಾರ ಕೆಲಸ ಗಿಟ್ಟಿಸಿಕೊಂಡಿದ್ದು, ಗ್ಲಾಸ್ಡೋರ್ ವೆಬ್ಸೈಟ್ ಪ್ರಕಾರ ಯುಕೆಯಲ್ಲಿ ಸಲಹೆಗಾರರ ವಾರ್ಷಿಕ ವೇತನವು ಕನಿಷ್ಠ 49,647 ಡಾಲರ್ ಆಗಿದೆ.
(4 / 10)
'ಇನೋವೆರೊವ್' ಕಂಪನಿಯ ಉದ್ಯೋಗಿಗಳಿಗೆ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಸಂಬಳ ನೀಡಲಾಗುತ್ತದೆ. ಹಾಗಾಗಿ ಸನಾ ವಾರ್ಷಿಕ ಆದಾಯ ಕನಿಷ್ಠ 50 ಸಾವಿರ ಪೌಂಡ್‌ಗಳು. ಅಂದರೆ, ಭಾರತೀಯ ಕರೆನ್ಸಿಯಲ್ಲಿ ಸುಮಾರು 55 ಲಕ್ಷ ರೂಪಾಯಿ ವೇತನ.
(5 / 10)
ವಾರ್ಷಿಕ 55 ಲಕ್ಷ ಸಂಬಳ ಪಡೆಯುವ ಸನಾ ಅವರಿಗೆ ತಿಂಗಳಿಗೆ 4.50 ಲಕ್ಷ ಸಿಗುತ್ತಿತ್ತು. ಇಂಟರ್ನ್ಶಿಪ್ನಲ್ಲೂ ವಾರ್ಷಿಕ ಸ್ಟೈಫಂಡ್ ಕೂಡ ಲಕ್ಷ ಲಕ್ಷ ಸಿಗುತ್ತಿತ್ತು. ಈ ಹಿಂದೆ ಡೆಲಾಯ್ಟ್ನಲ್ಲಿ (UK) ಇಂಟರ್ನ್‌ಶಿಪ್ ಸನಾ ಮಾಸಿಕ 1,870 ವೇತನ ಪಡೆಯುತ್ತಿದ್ದರು. ಅಂದರೆ ಭಾರತೀಯ ಕರೆನ್ಸಿಯಲ್ಲಿ ಸುಮಾರು 1,94,000 ರೂಪಾಯಿ.
(6 / 10)
ಸೌರವ್ ಮತ್ತು ಡೋನಾ ದಂಪತಿಗೆ ಸನಾ ಒಬ್ಬಳೇ ಮಗಳು. 2001ರಲ್ಲಿ ಜನಿಸಿದ ಸನಾ, ಅಧ್ಯಯನದ ಜತೆಗೆ ತಾಯಿಯ ಬಳಿ ನೃತ್ಯ ತರಬೇತಿ ಪಡೆದಿದ್ದಾರೆ. ಆದರೆ ಕ್ರೀಡೆಯತ್ತ ಅಷ್ಟೊಂದು ಒಲವಿರಲಿಲ್ಲ. ಸಮಯ ಸಿಕ್ಕಾಗಲೆಲ್ಲಾ ಗಂಗೂಲಿ-ಡೋನಾ ತಮ್ಮ ಮಗಳೊಂದಿಗೆ ಸಮಯ ಕಳೆಯಲು ಲಂಡನ್‌ಗೆ ಹೋಗುತ್ತಾರೆ.
(7 / 10)
ಸನಾ 12ನೇ ತರಗತಿವರೆಗೆ ಕೋಲ್ಕತ್ತಾದಲ್ಲಿ ಓದಿದ್ದರು. ಉನ್ನತ ಶಿಕ್ಷಣಕ್ಕಾಗಿ ಲಂಡನ್‌ಗೆ ತೆರಳಿದರು. ಸನಾ ಯುಸಿಎಲ್ ಅಂದರೆ ಯೂನಿವರ್ಸಿಟಿ ಕಾಲೇಜ್ ಲಂಡನ್‌ನಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು.
(8 / 10)
ವೈದ್ಯೆಯ ಕೊಲೆ ಮತ್ತು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ನಡೆದ ಪ್ರತಿಭಟನಾ ಮೆರವಣಿಗೆ ಕಾರಣ ಇತ್ತೀಚೆಗೆ ಡೋನಾ ಅವರ ನೃತ್ಯ ಶಾಲೆ ನಡೆಯಲು ಅವಕಾಶ ನೀಡಿರಲಿಲ್ಲ. ಇದೇ ವೇಳೆ ಡೋನಾ ಮೇಣದಬತ್ತಿಯನ್ನು ಬೆಳಗಿಸಿ ಪ್ರತಿಭಟಿಸಿದ್ದರು.
(9 / 10)
ಈ ತಿಂಗಳು ಕೋಲ್ಕತ್ತಾಗೆ ಬಂದಿದ್ದ ಸನಾ ಕೂಡ ಮೇಣದ ಬತ್ತಿ ಬೆಳಗಿಸುವ ಸಂದರ್ಭದಲ್ಲಿ ತಾಯಿಯೊಂದಿಗಿದ್ದರು. ಇದೇ ವೇಳೆ ಮೀಡಿಯಾದವರು ಸನಾ ಅವರಿಗೆ ಸುರಕ್ಷತೆ ಎಷ್ಟಿದೆ ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ್ದ ಸನಾ ಅವರು, ನಾನು ಕೋಲ್ಕತ್ತಾದಲ್ಲಿ ವಾಸಿಸುತ್ತಿಲ್ಲ ಎಂದು ಹೇಳುವ ಮೂಲಕ ವಿವಾದ ಹುಟ್ಟು ಹಾಕಿದ್ದರು.
ಇತರ ಗ್ಯಾಲರಿಗಳು