ಪ್ಯಾರಿಸ್‌ ಒಲಿಂಪಿಕ್ಸ್: ಬಿಲ್ಲುಗಾರಿಕೆಯಲ್ಲಿ ಕ್ವಾರ್ಟರ್ ಫೈನಲ್ ತಲುಪಿದ ಭಾರತ ವನಿತೆಯರು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಪ್ಯಾರಿಸ್‌ ಒಲಿಂಪಿಕ್ಸ್: ಬಿಲ್ಲುಗಾರಿಕೆಯಲ್ಲಿ ಕ್ವಾರ್ಟರ್ ಫೈನಲ್ ತಲುಪಿದ ಭಾರತ ವನಿತೆಯರು

ಪ್ಯಾರಿಸ್‌ ಒಲಿಂಪಿಕ್ಸ್: ಬಿಲ್ಲುಗಾರಿಕೆಯಲ್ಲಿ ಕ್ವಾರ್ಟರ್ ಫೈನಲ್ ತಲುಪಿದ ಭಾರತ ವನಿತೆಯರು

  • Paris Olympics Archery: ಪ್ಯಾರಿಸ್‌ ಒಲಿಂಪಿಕ್ಸ್ 2024ರ ಬಿಲ್ಲುಗಾರಿಕೆಯಲ್ಲಿ ಭಾರತ ವನಿತೆಯರ ತಂಡವು ನೇರವಾಗಿ ಕ್ವಾರ್ಟರ್ ಫೈನಲ್‌ ಪ್ರವೇಶಿಸಿದೆ. ಜುಲೈ 25ರಂದು ನಡೆದ ಶ್ರೇಯಾಂಕ ಸುತ್ತಿನಲ್ಲಿ 1983 ಅಂಕಗಳೊಂದಿಗೆ ನಾಲ್ಕನೇ ಸ್ಥಾನವನ್ನು ಪಡೆಯುವ ಮೂಲಕ ಭಾರತದ ವನಿತೆಯರು ಆರಂಭದಲ್ಲೇ ಉತ್ತಮ ಸಾಧನೆ ಮಾಡಿದ್ದಾರೆ.

ಮಹಿಳೆಯರ ಬಿಲ್ಲುಗಾರಿಕೆ ಶ್ರೇಯಾಂಕ ಸುತ್ತಿನಲ್ಲಿ ದಕ್ಷಿಣ ಕೊರಿಯಾ ತಂಡವು ಒಟ್ಟು 2046 ಅಂಕಗಳೊಂದಿಗೆ ಅಗ್ರಸ್ಥಾನ ಪಡೆಯಿತು. ಚೀನಾ 1996 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದರೆ, ಮೆಕ್ಸಿಕೊ 1986 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆಯಿತು. ಭಾರತ 1983 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆಯಿತು.
icon

(1 / 7)

ಭಾರತದ ಭಜನ್ ಕೌರ್, ದೀಪಿಕಾ ಕುಮಾರಿ ಮತ್ತು ಅಂಕಿತಾ ಭಕತ್ ಅವರನ್ನೊಳಗೊಂಡ ಭಾರತೀಯ ಮಹಿಳಾ ಆರ್ಚರಿ ತಂಡವು ನಾಲ್ಕನೇ ಸ್ಥಾನ ಪಡೆದು ಕ್ವಾರ್ಟರ್‌ ಫೈನಲ್‌ ಪ್ರವೇಶ ಪಡೆಯಿತು. ಭಾರತದ ಪರ ಅಂಕಿತಾ ಭಕತ್ 666 ಅಂಕಗಳೊಂದಿಗೆ ಒಟ್ಟಾರೆಯಾಗಿ 11ನೇ ಸ್ಥಾನ ಪಡೆದರು. ಇದು ಪ್ರಸಕ್ತ ಋತುವಿನಲ್ಲಿ ಭಾರತದ ಪರ ಉತ್ತಮ ದಾಖಲೆಯಾಗಿದೆ. ಭಜನ್ ಕೌರ್ ಮತ್ತು ದೀಪಿಕಾ ಕುಮಾರಿ ಕ್ರಮವಾಗಿ 22 ಮತ್ತು 23ನೇ ಸ್ಥಾನ ಪಡೆದರು. ಭಾರತ ಒಟ್ಟಾರೆ 1983 ಅಂಕಗಳನ್ನು ಗಳಿಸಿತು.
icon

(2 / 7)

ಭಾರತ ತಂಡವು ಕ್ವಾರ್ಟರ್ ಫೈನಲ್‌ನಲ್ಲಿ ಫ್ರಾನ್ಸ್ ಅಥವಾ ನೆದರ್ಲ್ಯಾಂಡ್ಸ್ ವಿರುದ್ಧ ಸ್ಪರ್ಧಿಸುವ ಸಾಧ್ಯತೆಯಿದೆ. ಆದಾಗ್ಯೂ, ಅಲ್ಲಿ ಗೆದ್ದ ಬಳಿಕ ದಕ್ಷಿಣ ಕೊರಿಯಾ ವಿರುದ್ಧ ಸೆಮಿಫೈನಲ್‌ನಲ್ಲಿ ಕಣಕ್ಕಿಳಿಯಬೇಕಾಗಬಹುದು. ಮಹಿಳಾ ತಂಡದ ಸ್ಪರ್ಧೆಯಲ್ಲಿ ಕೊರಿಯಾ ಇದುವರೆಗೆ ಒಂದು ಬಾರಿಯೂ ಸೋತಿಲ್ಲ ಎಂಬುದು ಗಮನಾರ್ಹ ಅಂಶ. ಒಂದು ವೇಳೆ ಭಾರತ ಸೆಮಿಫೈನಲ್‌ನಲ್ಲಿ ಸೋತರೆ ಕಂಚಿನ ಪದಕಕ್ಕಾಗಿ ಸೆಣಸಬೇಕಾಗುತ್ತದೆ.
icon

(3 / 7)

ಅಗ್ರ ನಾಲ್ಕು ಸ್ಥಾನ ಪಡೆದ ದೇಶಗಳು ನೇರವಾಗಿ ಕ್ವಾರ್ಟರ್‌ಫೈನಲ್‌ಗೆ ಅರ್ಹತೆ ಪಡೆದಿವೆ. ದಕ್ಷಿಣ ಕೊರಿಯಾದ ಲಿಮ್ ಸಿಹ್ಯೆನ್ ಅತಿನಹೆಚ್ಚು, ಅಂದರೆ 694 ಅಂಕ ಕಲೆ ಹಾಕಿ  ವಿಶ್ವ ದಾಖಲೆ ನಿರ್ಮಿಸಿದ್ದಾರೆ. ನಾಮ್ ಸುಹ್ಯೆನ್ 688 ಅಂಕಗಳೊಂದಿಗೆ ಮಹಿಳೆಯರ ಶ್ರೇಯಾಂಕದಲ್ಲಿ ಮೊದಲ ಮತ್ತು ಎರಡನೇ ಸ್ಥಾನ ಪಡೆದರು.
icon

(4 / 7)

ದೀಪಿಕಾ ಕುಮಾರಿ ಭಾರತೀಯರ ಪೈಕಿ ಕೊನೆಯ ಸ್ಥಾನದಲ್ಲಿದ್ದಾರೆ. ಆರಂಭದಲ್ಲಿ ಹಿನ್ನಡೆ ಅನುಭವಿಸಿದ್ದ ಅವರು, ಅಂತಿಮ ಸೆಟ್‌ನಲ್ಲಿ ಸತತ ನಾಲ್ಕು ಬಾರಿ 10 ಅಂಕ ಗಳಿಸಿ ಮಿಂಚಿದರು. 57 ಅಂಕಗಳನ್ನು ಗಳಿಸಿ ಒಟ್ಟು 658 ಅಂಕಗಳೊಂದಿಗೆ 23ನೇ ಸ್ಥಾನ ಪಡೆದರು.
icon

(5 / 7)

ಅಂಕಿತಾ ಮೊದಲ ಸುತ್ತಿನಲ್ಲಿಯೇ ಉತ್ತಮ ಆರಂಭ ಪಡೆದರು. ಅವರು ಒಂದು ಹಂತದಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದರು. ಆದರೆ ನಂತರ 11ನೇ ಸ್ಥಾನಕ್ಕೆ ಇಳಿದರು. ಅಂತಿಮ ಸೆಟ್‌ನಲ್ಲಿ 54 ಅಂಕಗಳನ್ನು ಸಂಗ್ರಹಿಸಿದರು. ಅಂತಿಮವಾಗಿ ಅವರು 666 ಅಂಕಗಳೊಂದಿಗೆ 11ನೇ ಸ್ಥಾನದೊಂದಿಗೆ ಮುಗಿಸಿದರು.
icon

(6 / 7)

ಭಜನ್ ಕೌರ್ ಅಂತಿಮ ಸೆಟ್ ಅನ್ನು 53 ಅಂಕಗಳೊಂದಿಗೆ ಮುಗಿಸಿದರು. ಅವರು ಒಟ್ಟು 659 ಅಂಕಗಳೊಂದಿಗೆ 22ನೇ ಸ್ಥಾನವನ್ನು ಪಡೆದರು.
icon

(7 / 7)

ಇತರ ಗ್ಯಾಲರಿಗಳು