ಲಿಯೋನೆಲ್ ಮೆಸ್ಸಿ ಅಭಿಮಾನಿಗಳಿಗೆ ಗುಡ್ ನ್ಯೂಸ್; ಭಾರತದಲ್ಲಿ ಪಂದ್ಯ ಆಡಲಿದ್ದಾರೆ ಅರ್ಜೆಂಟೀನಾ ಫುಟ್ಬಾಲ್ ದಿಗ್ಗಜ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಲಿಯೋನೆಲ್ ಮೆಸ್ಸಿ ಅಭಿಮಾನಿಗಳಿಗೆ ಗುಡ್ ನ್ಯೂಸ್; ಭಾರತದಲ್ಲಿ ಪಂದ್ಯ ಆಡಲಿದ್ದಾರೆ ಅರ್ಜೆಂಟೀನಾ ಫುಟ್ಬಾಲ್ ದಿಗ್ಗಜ

ಲಿಯೋನೆಲ್ ಮೆಸ್ಸಿ ಅಭಿಮಾನಿಗಳಿಗೆ ಗುಡ್ ನ್ಯೂಸ್; ಭಾರತದಲ್ಲಿ ಪಂದ್ಯ ಆಡಲಿದ್ದಾರೆ ಅರ್ಜೆಂಟೀನಾ ಫುಟ್ಬಾಲ್ ದಿಗ್ಗಜ

  • ದಿಗ್ಗಜ ಫುಟ್ಬಾಲ್‌ ಆಟಗಾರ ಲಿಯೋನೆಲ್ ಮೆಸ್ಸಿಯನ್ನು ಕಣ್ತುಂಬಿಕೊಳ್ಳುವ ಅವಕಾಶ ಭಾರತೀಯರಿಗೆ ಸಿಗುತ್ತಿದೆ. ಭಾರತದ ನೆಲದಲ್ಲೇ ಭಾರತೀಯರ ಫೇವರೆಟ್‌ ಕ್ರೀಡಾಪಟುಗಳಲ್ಲಿ ಒಬ್ಬರಾದ ಮೆಸ್ಸಿ ಆಡಲು ಸಜ್ಜಾಗುತ್ತಿದ್ದಾರೆ. ಅರ್ಜೆಂಟೀನಾ ತಂಡವು ಮುಂದಿನ ವರ್ಷ ಕೇರಳದಲ್ಲಿ ಫುಟ್ಬಾಲ್‌ ಪಂದ್ಯ ಆಡುತ್ತಿದೆ ಎಂದು ಕೇರಳ ಕ್ರೀಡಾ ಸಚಿವ ವಿ ಅಬ್ದುರ್ರಹಿಮಾನ್ ಬಹಿರಂಗಪಡಿಸಿದ್ದಾರೆ.

ಕೇರಳ ರಾಜ್ಯ ಸರ್ಕಾರದ ಸಂಪೂರ್ಣ ಮೇಲ್ವಿಚಾರಣೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಪಂದ್ಯವನ್ನು ನಡೆಸಲಾಗುವುದು ಎಂದು ಸಚಿವರು ಹೇಳಿದ್ದಾರೆ. ಐತಿಹಾಸಿಕ ಪಂದ್ಯ ಆಯೋಜಿಸಲು ಕೇರಳದ ಸಾಮರ್ಥ್ಯದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
icon

(1 / 6)

ಕೇರಳ ರಾಜ್ಯ ಸರ್ಕಾರದ ಸಂಪೂರ್ಣ ಮೇಲ್ವಿಚಾರಣೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಪಂದ್ಯವನ್ನು ನಡೆಸಲಾಗುವುದು ಎಂದು ಸಚಿವರು ಹೇಳಿದ್ದಾರೆ. ಐತಿಹಾಸಿಕ ಪಂದ್ಯ ಆಯೋಜಿಸಲು ಕೇರಳದ ಸಾಮರ್ಥ್ಯದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.(AFP)

"ಈ ಉನ್ನತ ಮಟ್ಟದ ಫುಟ್ಬಾಲ್ ಪಂದ್ಯಾವಳಿಯನ್ನು ಆಯೋಜಿಸಲು ಎಲ್ಲಾ ಆರ್ಥಿಕ ಸಹಾಯವನ್ನು ರಾಜ್ಯದ ಉದ್ಯಮಿಗಳುಗಳು ಒದಗಿಸುತ್ತಾರೆ" ಎಂದು ಸಚಿವರು ಹೇಳಿದ್ದಾರೆ.
icon

(2 / 6)

"ಈ ಉನ್ನತ ಮಟ್ಟದ ಫುಟ್ಬಾಲ್ ಪಂದ್ಯಾವಳಿಯನ್ನು ಆಯೋಜಿಸಲು ಎಲ್ಲಾ ಆರ್ಥಿಕ ಸಹಾಯವನ್ನು ರಾಜ್ಯದ ಉದ್ಯಮಿಗಳುಗಳು ಒದಗಿಸುತ್ತಾರೆ" ಎಂದು ಸಚಿವರು ಹೇಳಿದ್ದಾರೆ.(AP)

ಮೆಸ್ಸಿ ಕೊನೆಯ ಬಾರಿಗೆ 2011ರಲ್ಲಿ ಭಾರತಕ್ಕೆ ಬಂದಿದ್ದರು. ಆಗ ಅರ್ಜೆಂಟೀನಾ ಮತ್ತು ವೆನೆಜುವೆಲಾ ತಂಡಗಳ ನಡುವೆ ಅಂತಾರಾಷ್ಟ್ರೀಯ ಸ್ನೇಹಪರ ಪಂದ್ಯ ನಡೆದಿತ್ತು. ಭಾರತೀಯ ಅಭಿಮಾನಿಗಳ ಮುಂದೆ ನಡೆದಿದ್ದ ಪಂದ್ಯವು ಯಾವುದೇ ಗೋಲುಗಳಿಲ್ಲದೆ ಡ್ರಾಗೊಂಡಿತ್ತು.
icon

(3 / 6)

ಮೆಸ್ಸಿ ಕೊನೆಯ ಬಾರಿಗೆ 2011ರಲ್ಲಿ ಭಾರತಕ್ಕೆ ಬಂದಿದ್ದರು. ಆಗ ಅರ್ಜೆಂಟೀನಾ ಮತ್ತು ವೆನೆಜುವೆಲಾ ತಂಡಗಳ ನಡುವೆ ಅಂತಾರಾಷ್ಟ್ರೀಯ ಸ್ನೇಹಪರ ಪಂದ್ಯ ನಡೆದಿತ್ತು. ಭಾರತೀಯ ಅಭಿಮಾನಿಗಳ ಮುಂದೆ ನಡೆದಿದ್ದ ಪಂದ್ಯವು ಯಾವುದೇ ಗೋಲುಗಳಿಲ್ಲದೆ ಡ್ರಾಗೊಂಡಿತ್ತು.(AFP)

ಭಾರತವೆಂದರೆ ಮೊದಲು ನೆನಪಾಗುವುದೇ ಕ್ರಿಕೆಟ್‌. ಆದರೆ, ದೇಶದಲ್ಲಿ ಫುಟ್ಬಾಲ್‌ ಅಭಿಮಾನಿಗಳ ಸಂಖ್ಯೆ ಕೂಡಾ ದೊಡ್ಡಿದಿದೆ. ಅದರ್ಲೂ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡದ ಫ್ಯಾನ್ಸ್‌ ಹೆಚ್ಚು. ಜಾಗತಿಕ ಫುಟ್ಬಾಲ್ ಐಕಾನ್ ಲಿಯೋನೆಲ್ ಮೆಸ್ಸಿ, ಸಾಂಪ್ರದಾಯಿಕವಾಗಿ ಕ್ರಿಕೆಟ್ ಪ್ರಾಬಲ್ಯ ಹೊಂದಿರುವ ಭಾರತದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. 
icon

(4 / 6)

ಭಾರತವೆಂದರೆ ಮೊದಲು ನೆನಪಾಗುವುದೇ ಕ್ರಿಕೆಟ್‌. ಆದರೆ, ದೇಶದಲ್ಲಿ ಫುಟ್ಬಾಲ್‌ ಅಭಿಮಾನಿಗಳ ಸಂಖ್ಯೆ ಕೂಡಾ ದೊಡ್ಡಿದಿದೆ. ಅದರ್ಲೂ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡದ ಫ್ಯಾನ್ಸ್‌ ಹೆಚ್ಚು. ಜಾಗತಿಕ ಫುಟ್ಬಾಲ್ ಐಕಾನ್ ಲಿಯೋನೆಲ್ ಮೆಸ್ಸಿ, ಸಾಂಪ್ರದಾಯಿಕವಾಗಿ ಕ್ರಿಕೆಟ್ ಪ್ರಾಬಲ್ಯ ಹೊಂದಿರುವ ಭಾರತದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. (AFP)

ಭಾರತಲ್ಲೂ ಕೇರಳದಲ್ಲಿ ಮೆಸ್ಸಿ ಬಗೆಗಿನ ಅಭಿಮಾನ, ಉನ್ಮಾದ ಅಪಾರವಾದುದು. ಕೇರಳದಲ್ಲಿ ಫುಟ್ಬಾಲ್ ಆಟವು ಜನರ ಹೃದಯದಲ್ಲಿ ಬಹಳ ಹಿಂದಿನಿಂದಲೂ ವಿಶೇಷ ಸ್ಥಾನವನ್ನು ಹೊಂದಿದೆ.
icon

(5 / 6)

ಭಾರತಲ್ಲೂ ಕೇರಳದಲ್ಲಿ ಮೆಸ್ಸಿ ಬಗೆಗಿನ ಅಭಿಮಾನ, ಉನ್ಮಾದ ಅಪಾರವಾದುದು. ಕೇರಳದಲ್ಲಿ ಫುಟ್ಬಾಲ್ ಆಟವು ಜನರ ಹೃದಯದಲ್ಲಿ ಬಹಳ ಹಿಂದಿನಿಂದಲೂ ವಿಶೇಷ ಸ್ಥಾನವನ್ನು ಹೊಂದಿದೆ.(AFP)

ಲೊಯೋನೆಲ್‌ ಮೆಸ್ಸಿ 2022ರಲ್ಲಿ ಅರ್ಜೆಂಟೀನಾ ತಂಡವನ್ನು ಫಿಫಾ ವಿಶ್ವಕಪ್ ಪ್ರಶಸ್ತಿಯತ್ತ ಮುನ್ನಡೆಸಿದರು. ಇದು ಅವರ ವೃತ್ತಿಜೀವನದ ಅತ್ಯುನ್ನತ ಟ್ರೋಫಿಯಾಗಿದೆ.
icon

(6 / 6)

ಲೊಯೋನೆಲ್‌ ಮೆಸ್ಸಿ 2022ರಲ್ಲಿ ಅರ್ಜೆಂಟೀನಾ ತಂಡವನ್ನು ಫಿಫಾ ವಿಶ್ವಕಪ್ ಪ್ರಶಸ್ತಿಯತ್ತ ಮುನ್ನಡೆಸಿದರು. ಇದು ಅವರ ವೃತ್ತಿಜೀವನದ ಅತ್ಯುನ್ನತ ಟ್ರೋಫಿಯಾಗಿದೆ.(AFP)


ಇತರ ಗ್ಯಾಲರಿಗಳು