ಶಿಕ್ಷಕರ ದಿನಾಚರಣೆಯಂದು ಕೊಡಬಹುದಾದ ಬೆಸ್ಟ್ ಗಿಫ್ಟ್‌ಗಳಿವು; ಈ ಉಡುಗೊರೆ ನೀಡುವ ಮೂಲಕ ಬದುಕು ರೂಪಿಸಿದ ಗುರುಗಳನ್ನು ಗೌರವಿಸಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಶಿಕ್ಷಕರ ದಿನಾಚರಣೆಯಂದು ಕೊಡಬಹುದಾದ ಬೆಸ್ಟ್ ಗಿಫ್ಟ್‌ಗಳಿವು; ಈ ಉಡುಗೊರೆ ನೀಡುವ ಮೂಲಕ ಬದುಕು ರೂಪಿಸಿದ ಗುರುಗಳನ್ನು ಗೌರವಿಸಿ

ಶಿಕ್ಷಕರ ದಿನಾಚರಣೆಯಂದು ಕೊಡಬಹುದಾದ ಬೆಸ್ಟ್ ಗಿಫ್ಟ್‌ಗಳಿವು; ಈ ಉಡುಗೊರೆ ನೀಡುವ ಮೂಲಕ ಬದುಕು ರೂಪಿಸಿದ ಗುರುಗಳನ್ನು ಗೌರವಿಸಿ

  • ಪ್ರತಿ ವಿದ್ಯಾರ್ಥಿಯ ಬದುಕನ್ನು ತಿದ್ದಿ, ತೀಡಿ, ಉಜ್ವಲವಾಗಿಸುವ ಕಲೆಗಾರ ಶಿಕ್ಷಕ. ಶಿಕ್ಷಕ ಎಂದರೆ ಖಂಡಿತ ಸಾಮಾನ್ಯ ವ್ಯಕ್ತಿಯಲ್ಲ. ನಾವೀಗ ಏನಾಗಿ ನಿಂತಿದ್ದೇವೆ ಅದಕ್ಕೆ ನಮ್ಮ ಶಿಕ್ಷಕರೇ ಕಾರಣ. ಅಂತಹ ಮಹಾನ್ ವ್ಯಕ್ತಿಗೆ ಶಿಕ್ಷಕರ ದಿನಾಚರಣೆಯಂದು ವಿಶೇಷವಾದ ವಿಶೇಷವಾದ ಉಡುಗೊರೆ ನೀಡಬೇಕು ಅಂತಿದ್ರೆ ಈ ಐಡಿಯಾಗಳು ನಿಮಗೆ ಇಷ್ಟವಾಗಬಹುದು ನೋಡಿ.

ಸೆಪ್ಟೆಂಬರ್ 5 ಡಾ. ಸರ್ವಪಲ್ಲಿ ರಾಧಾಕೃಷ್ಣ ಅವರ ಜನ್ಮದಿನ, ಭಾರತದಲ್ಲಿ ಈ ದಿನವನ್ನು ಶಿಕ್ಷಕರ ದಿನ ಎಂದು ಆಚರಿಸಲಾಗುತ್ತದೆ. ಪ್ರತಿ ವಿದ್ಯಾರ್ಥಿಗಳ ಬದುಕನ್ನು ಹಸನುಗೊಳಿಸುವ ಶಿಕ್ಷಕರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ನಮ್ಮ ಬದುಕಿನಲ್ಲಿ ಮಹತ್ವದ ಸ್ಥಾನ ಪಡೆದಿರುವ ಶಿಕ್ಷಕರಿಗೆ ವಿಶೇಷ ಉಡುಗೊರೆ ನೀಡಬೇಕು ಅಂತಿದ್ರೆ ನಿಮಗಾಗಿ ಇಲ್ಲಿದೆ ಒಂದಿಷ್ಟು ಐಡಿಯಾಗಳು.
icon

(1 / 9)

ಸೆಪ್ಟೆಂಬರ್ 5 ಡಾ. ಸರ್ವಪಲ್ಲಿ ರಾಧಾಕೃಷ್ಣ ಅವರ ಜನ್ಮದಿನ, ಭಾರತದಲ್ಲಿ ಈ ದಿನವನ್ನು ಶಿಕ್ಷಕರ ದಿನ ಎಂದು ಆಚರಿಸಲಾಗುತ್ತದೆ. ಪ್ರತಿ ವಿದ್ಯಾರ್ಥಿಗಳ ಬದುಕನ್ನು ಹಸನುಗೊಳಿಸುವ ಶಿಕ್ಷಕರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ನಮ್ಮ ಬದುಕಿನಲ್ಲಿ ಮಹತ್ವದ ಸ್ಥಾನ ಪಡೆದಿರುವ ಶಿಕ್ಷಕರಿಗೆ ವಿಶೇಷ ಉಡುಗೊರೆ ನೀಡಬೇಕು ಅಂತಿದ್ರೆ ನಿಮಗಾಗಿ ಇಲ್ಲಿದೆ ಒಂದಿಷ್ಟು ಐಡಿಯಾಗಳು.(PC: Canva)

ಪುಸ್ತಕಗಳು: ಶಿಕ್ಷಕರ ದಿನಾಚರಣೆಯಂದು ಶಿಕ್ಷಕರಿಗೆ ನೀವು ಬೆಸ್ಟ್ ಗಿಫ್ಟ್ ನೀಡಬೇಕು ಅಂತಿದ್ರೆ ಪುಸ್ತಕಕ್ಕಿಂತ ಉತ್ತಮ ಗಿಫ್ಟ್ ಇನ್ನೊಂದಿಲ್ಲ. ನಿಮ್ಮ ಶಿಕ್ಷಕರ ನೆಚ್ಚಿನ ಲೇಖಕರ ಒಂದಿಷ್ಟು ಪುಸ್ತಕಗಳನ್ನು ಉಡುಗೊರೆಯಾಗಿ ನೀಡಬಹುದು. ಇಲ್ಲ ಎಂದಾದರೆ ನಿಮ್ಮ ಶಿಕ್ಷರ ಅಥವಾ ಶಿಕ್ಷಕಿ ಯಾವ ವಿಷಯ ಪಾಠ ಮಾಡುತ್ತಾರೆ ಅದಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಕೊಡಬಹುದು. 
icon

(2 / 9)

ಪುಸ್ತಕಗಳು: ಶಿಕ್ಷಕರ ದಿನಾಚರಣೆಯಂದು ಶಿಕ್ಷಕರಿಗೆ ನೀವು ಬೆಸ್ಟ್ ಗಿಫ್ಟ್ ನೀಡಬೇಕು ಅಂತಿದ್ರೆ ಪುಸ್ತಕಕ್ಕಿಂತ ಉತ್ತಮ ಗಿಫ್ಟ್ ಇನ್ನೊಂದಿಲ್ಲ. ನಿಮ್ಮ ಶಿಕ್ಷಕರ ನೆಚ್ಚಿನ ಲೇಖಕರ ಒಂದಿಷ್ಟು ಪುಸ್ತಕಗಳನ್ನು ಉಡುಗೊರೆಯಾಗಿ ನೀಡಬಹುದು. ಇಲ್ಲ ಎಂದಾದರೆ ನಿಮ್ಮ ಶಿಕ್ಷರ ಅಥವಾ ಶಿಕ್ಷಕಿ ಯಾವ ವಿಷಯ ಪಾಠ ಮಾಡುತ್ತಾರೆ ಅದಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಕೊಡಬಹುದು. (PC: Canva)

ಪೆನ್‌ಸೆಟ್‌ ಹಾಗೂ ಪೆನ್‌ ಸ್ಟ್ಯಾಂಡ್‌: ಶಿಕ್ಷಕರು ಹೆಚ್ಚು ಬಳಸುವ ವಸ್ತುಗಳಲ್ಲಿ ಪೆನ್‌ ಕೂಡ ಒಂದು. ಶಿಕ್ಷಕರ ದಿನಾಚರಣೆಗೆ ಮೌಲ್ಯಯುತ ದುಬಾರಿ ಬೆಲೆಯ ಪೆನ್‌ ಗಿಫ್ಟ್ ಮಾಡಬಹುದು. ಇಲ್ಲ ಎಂದಾದ್ರೆ ಒಂದಿಷ್ಟು ಪೆನ್‌ ಸೆಟ್‌ಗಳನ್ನು ಉಡುಗೊರೆ ರೂಪದಲ್ಲಿ ನೀಡಬಹುದು. ಇದರೊಂದಿಗೆ ಪೆನ್‌ಸ್ಟ್ಯಾಂಡ್ ಕೂಡ ಶಿಕ್ಷಕರಿಗೆ ಹೆಚ್ಚು ಬಳಕೆಗೆ ಬರುತ್ತದೆ.
icon

(3 / 9)

ಪೆನ್‌ಸೆಟ್‌ ಹಾಗೂ ಪೆನ್‌ ಸ್ಟ್ಯಾಂಡ್‌: ಶಿಕ್ಷಕರು ಹೆಚ್ಚು ಬಳಸುವ ವಸ್ತುಗಳಲ್ಲಿ ಪೆನ್‌ ಕೂಡ ಒಂದು. ಶಿಕ್ಷಕರ ದಿನಾಚರಣೆಗೆ ಮೌಲ್ಯಯುತ ದುಬಾರಿ ಬೆಲೆಯ ಪೆನ್‌ ಗಿಫ್ಟ್ ಮಾಡಬಹುದು. ಇಲ್ಲ ಎಂದಾದ್ರೆ ಒಂದಿಷ್ಟು ಪೆನ್‌ ಸೆಟ್‌ಗಳನ್ನು ಉಡುಗೊರೆ ರೂಪದಲ್ಲಿ ನೀಡಬಹುದು. ಇದರೊಂದಿಗೆ ಪೆನ್‌ಸ್ಟ್ಯಾಂಡ್ ಕೂಡ ಶಿಕ್ಷಕರಿಗೆ ಹೆಚ್ಚು ಬಳಕೆಗೆ ಬರುತ್ತದೆ.(PC: Canva)

ಹೂಗುಚ್ಛ: ಶಿಕ್ಷಕರು ಎಂದರೆ ಗೌರವಾನ್ವಿತ ಸ್ಥಾನದಲ್ಲಿರುವವರು. ಶಿಕ್ಷಕರ ದಿನಾಚರಣೆಯಂದು ವಿವಿಧ ಬಣ್ಣದ ಹೂಗಳಿರುವ ಹೂಗುಚ್ಛವನ್ನು ನೀಡುವ ಮೂಲಕ ಶಿಕ್ಷಕರನ್ನು ಗೌರವಿಸಬಹುದು 
icon

(4 / 9)

ಹೂಗುಚ್ಛ: ಶಿಕ್ಷಕರು ಎಂದರೆ ಗೌರವಾನ್ವಿತ ಸ್ಥಾನದಲ್ಲಿರುವವರು. ಶಿಕ್ಷಕರ ದಿನಾಚರಣೆಯಂದು ವಿವಿಧ ಬಣ್ಣದ ಹೂಗಳಿರುವ ಹೂಗುಚ್ಛವನ್ನು ನೀಡುವ ಮೂಲಕ ಶಿಕ್ಷಕರನ್ನು ಗೌರವಿಸಬಹುದು (PC: HT)

ಸ್ಪೆಷಲ್ ಗಿಫ್ಟ್ ಬಾಕ್ಸ್: ಶಿಕ್ಷಕರಿಗಾಗಿ ನೀವೇ ನಿಮ್ಮ ಸ್ಟೈಲ್‌ನಲ್ಲಿ ವಿಶೇಷವಾದ ಗಿಫ್ಟ್ ಬಾಕ್ಸ್ ತಯಾರಿಸಬಹುದು. ಅದರಲ್ಲಿ ಒಂದಿಷ್ಟು ಚಾಕೊಲೇಟ್ಸ್, ಸ್ನ್ಯಾಕ್ಸ್‌ಗಳನ್ನು ಹಾಕಬಹುದು ಅಥವಾ ಅವರ ಆಸಕ್ತಿ ತಿಳಿದುಕೊಂಡು ಅಂಥದ್ದೇ ವಸ್ತುವನ್ನ ಉಡುಗೊರೆಯಾಗಿ ನೀಡಬಹುದು.
icon

(5 / 9)

ಸ್ಪೆಷಲ್ ಗಿಫ್ಟ್ ಬಾಕ್ಸ್: ಶಿಕ್ಷಕರಿಗಾಗಿ ನೀವೇ ನಿಮ್ಮ ಸ್ಟೈಲ್‌ನಲ್ಲಿ ವಿಶೇಷವಾದ ಗಿಫ್ಟ್ ಬಾಕ್ಸ್ ತಯಾರಿಸಬಹುದು. ಅದರಲ್ಲಿ ಒಂದಿಷ್ಟು ಚಾಕೊಲೇಟ್ಸ್, ಸ್ನ್ಯಾಕ್ಸ್‌ಗಳನ್ನು ಹಾಕಬಹುದು ಅಥವಾ ಅವರ ಆಸಕ್ತಿ ತಿಳಿದುಕೊಂಡು ಅಂಥದ್ದೇ ವಸ್ತುವನ್ನ ಉಡುಗೊರೆಯಾಗಿ ನೀಡಬಹುದು.(PC: Canva)

ಗಿಫ್ಟ್‌ ಕಾರ್ಡ್‌: ಕೆಲವೊಮ್ಮೆ ನಾವು ಕೊಡುವ ಗಿಫ್ಟ್ ಶಿಕ್ಷಕರಿಗೆ ಇಷ್ಟವಾಗದೇ ಇರಬಹುದು ಎಂದು ಅಳುಕಿದ್ದರೆ ಗಿಫ್ಟ್ ಕಾರ್ಡ್ ನೀಡಿ. ಇದರಿಂದ ಅವರು ಅವರಿಷ್ಟದ ಉಡುಗೊರೆ ಖರೀದಿಸುತ್ತಾರೆ. ನಿಮಗೂ ಗಿಫ್ಟ್ ನೀಡಿದ ಖುಷಿ ಇರುತ್ತದೆ. 
icon

(6 / 9)

ಗಿಫ್ಟ್‌ ಕಾರ್ಡ್‌: ಕೆಲವೊಮ್ಮೆ ನಾವು ಕೊಡುವ ಗಿಫ್ಟ್ ಶಿಕ್ಷಕರಿಗೆ ಇಷ್ಟವಾಗದೇ ಇರಬಹುದು ಎಂದು ಅಳುಕಿದ್ದರೆ ಗಿಫ್ಟ್ ಕಾರ್ಡ್ ನೀಡಿ. ಇದರಿಂದ ಅವರು ಅವರಿಷ್ಟದ ಉಡುಗೊರೆ ಖರೀದಿಸುತ್ತಾರೆ. ನಿಮಗೂ ಗಿಫ್ಟ್ ನೀಡಿದ ಖುಷಿ ಇರುತ್ತದೆ. (PC: Canva)

ಶಾಲೆಯಲ್ಲಿ ಬಳಕೆಗೆ ಬರುವ ವಸ್ತು: ಬಹುತೇಕ ಶಿಕ್ಷಕರು ಶಾಲೆಯನ್ನು ಮನೆಯಂತೆ ಪ್ರೀತಿಸುತ್ತಾರೆ. ಹಾಗಾಗಿ ನೀವು ಶಿಕ್ಷಕರ ದಿನಾಚರಣೆಯಂದು ಶಾಲೆಗೆ ಅವಶ್ಯವಿರುವ ವಸ್ತು ಯಾವುದು ಎಂದು ಪರಿಗಣಿಸಿ ಅದನ್ನು ನೀಡುವ ಮೂಲಕ ಶಿಕ್ಷಕರನ್ನು ಖುಷಿ ಪಡಿಸಬಹುದು.
icon

(7 / 9)

ಶಾಲೆಯಲ್ಲಿ ಬಳಕೆಗೆ ಬರುವ ವಸ್ತು: ಬಹುತೇಕ ಶಿಕ್ಷಕರು ಶಾಲೆಯನ್ನು ಮನೆಯಂತೆ ಪ್ರೀತಿಸುತ್ತಾರೆ. ಹಾಗಾಗಿ ನೀವು ಶಿಕ್ಷಕರ ದಿನಾಚರಣೆಯಂದು ಶಾಲೆಗೆ ಅವಶ್ಯವಿರುವ ವಸ್ತು ಯಾವುದು ಎಂದು ಪರಿಗಣಿಸಿ ಅದನ್ನು ನೀಡುವ ಮೂಲಕ ಶಿಕ್ಷಕರನ್ನು ಖುಷಿ ಪಡಿಸಬಹುದು.(PC: Canva)

ಪತ್ರ: ಶಿಕ್ಷಕರ ದಿನಾಚರಣೆಯಂದು ಶಿಕ್ಷಕರಿಗೆ ಅತ್ಯಮೂಲ್ಯ ಉಡುಗೊರೆ ಕೊಡಬೇಕು ಅಂತಿದ್ರೆ ನಿಮ್ಮ ಕೈಯಾರೆ ನೀವು ಒಂದು ಪತ್ರ ಬರೆದು ಕೊಡಬಹುದು. ನಿಮ್ಮ ನೆಚ್ಚಿನ ಶಿಕ್ಷಕ ಅಥವಾ ಶಿಕ್ಷಕಿಯ  ಬಗ್ಗೆ ನಿಮ್ಮ ಮನದ ಮಾತಿಗೆ ಅಕ್ಷರರೂಪ ಕೊಡಿ. ಈ ಗಿಫ್ಟ್ ಅವರಿಗೆ ಖಂಡಿತ ಮೌಲ್ಯಯುತ ಅನ್ನಿಸುತ್ತದೆ. 
icon

(8 / 9)

ಪತ್ರ: ಶಿಕ್ಷಕರ ದಿನಾಚರಣೆಯಂದು ಶಿಕ್ಷಕರಿಗೆ ಅತ್ಯಮೂಲ್ಯ ಉಡುಗೊರೆ ಕೊಡಬೇಕು ಅಂತಿದ್ರೆ ನಿಮ್ಮ ಕೈಯಾರೆ ನೀವು ಒಂದು ಪತ್ರ ಬರೆದು ಕೊಡಬಹುದು. ನಿಮ್ಮ ನೆಚ್ಚಿನ ಶಿಕ್ಷಕ ಅಥವಾ ಶಿಕ್ಷಕಿಯ  ಬಗ್ಗೆ ನಿಮ್ಮ ಮನದ ಮಾತಿಗೆ ಅಕ್ಷರರೂಪ ಕೊಡಿ. ಈ ಗಿಫ್ಟ್ ಅವರಿಗೆ ಖಂಡಿತ ಮೌಲ್ಯಯುತ ಅನ್ನಿಸುತ್ತದೆ. (PC: Canva)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(9 / 9)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 


ಇತರ ಗ್ಯಾಲರಿಗಳು