ಮೊದಲ ಬಾರಿಗೆ ಕಾರು ಖರೀದಿ ಯೋಚನೆಯೇ; ನೀವು ಕೊಡುವ ಹಣಕ್ಕೆ ಯೋಗ್ಯವಾದ ಟಾಪ್ 5 ಭಾರತದ ಕಾರುಗಳಿವು
- ನಾವು ಕೊಡುವ ಹಣದ ಮೌಲ್ಯಕ್ಕೆ ತಕ್ಕನಾಗಿ ಸೂಕ್ತ ಕಾರು ಸಿಗಬೇಕೆಂದರೆ, ಕೆಲವೊಂದು ಅಂಶಗಳು ಪೂರೈಸಬೇಕು. ವೆಚ್ಚ ಪರಿಣಾಮಕಾರಿತ್ವ, ಉತ್ಪನ್ನದ ಗುಣಮಟ್ಟ, ಖರೀದಿ ನಂತರದ ಸರ್ವಿಸ್, ಮಾಲೀಕತ್ವದ ವೆಚ್ಚ, ಮರುಮಾರಾಟ ಮೌಲ್ಯ ಹೀಗೆ ಹಲವು ಅಂಶಗಳನ್ನು ಅವಲಂಬಿಸಿರುತ್ತದೆ. ನೀವು ಮೊದಲ ಬಾರಿಗೆ ಕಾರು ಖರೀದಿಸುವವರಾಗಿದ್ದರೆ, ಪರಿಗಣಿಸಬೇಕಾದ ಟಾಪ್ ಕಾರುಗಳು ಇಲ್ಲಿವೆ.
- ನಾವು ಕೊಡುವ ಹಣದ ಮೌಲ್ಯಕ್ಕೆ ತಕ್ಕನಾಗಿ ಸೂಕ್ತ ಕಾರು ಸಿಗಬೇಕೆಂದರೆ, ಕೆಲವೊಂದು ಅಂಶಗಳು ಪೂರೈಸಬೇಕು. ವೆಚ್ಚ ಪರಿಣಾಮಕಾರಿತ್ವ, ಉತ್ಪನ್ನದ ಗುಣಮಟ್ಟ, ಖರೀದಿ ನಂತರದ ಸರ್ವಿಸ್, ಮಾಲೀಕತ್ವದ ವೆಚ್ಚ, ಮರುಮಾರಾಟ ಮೌಲ್ಯ ಹೀಗೆ ಹಲವು ಅಂಶಗಳನ್ನು ಅವಲಂಬಿಸಿರುತ್ತದೆ. ನೀವು ಮೊದಲ ಬಾರಿಗೆ ಕಾರು ಖರೀದಿಸುವವರಾಗಿದ್ದರೆ, ಪರಿಗಣಿಸಬೇಕಾದ ಟಾಪ್ ಕಾರುಗಳು ಇಲ್ಲಿವೆ.
(1 / 7)
ಕಾರುಗಳು ಕೇವಲ ಐಷಾರಾಮಿ ಜೀವನ ನಡೆಸುವವರ ಸ್ವತ್ತಲ್ಲ. ಬಡ ಹಾಗೂ ಮಧ್ಯಮ ವರ್ಗದವರು ಕೂಡಾ ಕಾರು ಖರೀದಿ ಮಾಡುತ್ತಾರೆ. ಕಳೆದ ಎರಡು ವರ್ಷಗಳಿಂದ ಹಲವು ವಾಹನ ತಯಾರಕ ಕಂಪನಿಗಳು ಮೊದಲ ಬಾರಿಗೆ ಕಾರು ಖರೀದಿಸುವವರ ಸಂಖ್ಯೆಯಲ್ಲಿ ಹೆಚ್ಚಳವನ್ನು ಕಂಡಿದೆ. ಈ ಗ್ರಾಹಕರಲ್ಲಿ ಹೆಚ್ಚಿನವರು ಯುವಕರು. ಮೊದಲ ಬಾರಿಗೆ ಕಾರು ಖರೀದಿಸುವವರು ವಾಹನವನ್ನು ಖರೀದಿಸುವಾಗ, ಆ ಉತ್ಪನ್ನವು ತಾವು ಕೊಡುವ ಹಣಕ್ಕೆ ತಕ್ಕ ಮೌಲ್ಯವನ್ನು ನಿರೀಕ್ಷಿಸುತ್ತಾರೆ.
(2 / 7)
ಕಾರು ಖರೀದಿಸುವಾಗ, ವಿಶೇಷವಾಗಿ ಗ್ರಾಹಕರು ಮೊದಲ ಬಾರಿಗೆ ಖರೀದಿಸುವವರಾಗಿದ್ದರೆ, ಅವರ ಖರೀದಿ ನಿರ್ಧಾರದಲ್ಲಿ ವಿವಿಧ ಅಂಶಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಹಣಕ್ಕೆ ತಕ್ಕ ಮೌಲ್ಯ ಸಿಗಬೇಕು ಎಂಬುದು ಎಲ್ಲರ ನಿರೀಕ್ಷೆ. ಈ ಅಂಶವು ವೆಚ್ಚ ಪರಿಣಾಮಕಾರಿತ್ವ, ಉತ್ಪನ್ನದ ಗುಣಮಟ್ಟ, ಮಾರಾಟದ ನಂತರದ ಸರ್ವಿಸ್, ಮಾಲೀಕತ್ವದ ವೆಚ್ಚ, ಮರುಮಾರಾಟ ಮೌಲ್ಯ ಮುಂತಾದ ಅನೇಕ ಅಂಶಗಳನ್ನು ಅವಲಂಬಿಸಿರುತ್ತದೆ.
(3 / 7)
ಅಗ್ಗದ ಕಾರು ಎಂದು ಕರೆಯಲಾಗಿದ್ದರೂ, ಮಾರುತಿ ಸುಜುಕಿ ಆಲ್ಟೋ ಕೆ10 ಮೊದಲ ಬಾರಿಗೆ ಖರೀದಿಸುವವರಿಗೆ ಬಹಳ ಉಪಯುಕ್ತ ಕಾರು. ಹಗುರವಾದ ಎಂಟ್ರಿ ಲೆವೆಲ್ ಹ್ಯಾಚ್ ಬ್ಯಾಕ್, 1.0-ಲೀಟರ್ ಪೆಪ್ಪಿ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಸಾಕಷ್ಟು ಕಾರ್ಯಕ್ಷಮತೆ ಜೊತೆಗೆ ಮಿತವಾಗಿ ಇಂಧನ ಹೀರುತ್ತದೆ. ಇದರ ಎಕ್ಸ್ ಶೋರೂಂ ಬೆಲೆ 3.99 ಲಕ್ಷ ರೂ.ಗಳಿಂದ ಆರಂಭವಾಗಿ 5.96 ಲಕ್ಷ ರೂ.ಗಳವರೆಗೆ ಇದೆ. ಮೊದಲ ಬಾರಿಗೆ ಕಾರು ಖರೀದಿಸುವವರಿಗೆ ಹಣಕ್ಕೆ ತಕ್ಕ ಮೌಲ್ಯವನ್ನು ನೀಡುತ್ತದೆ.
(4 / 7)
ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಕೂಡಾ ಹಣಕ್ಕೆ ಮೌಲ್ಯ ಕೊಡುವ ಕಾರು. ಇದು ಎಸ್‌ಯುವಿ ತರಹದ ಹೈ ರೈಡಿಂಗ್ ನಿಲುವನ್ನು ಹೊಂದಿರುವ ಸಣ್ಣ ಹ್ಯಾಚ್ಬ್ಯಾಕ್ ಆಗಿದೆ. ಕನನಿಬಿಡ ಸ್ಥಳಗಳಲ್ಲಿ ಪಾರ್ಕಿಂಗ್ ಅನ್ನು ಸುಲಭಗೊಳಿಸುತ್ತದೆ. ಸೆಡಾನ್‌ಗಳಿಗೆ ಹೋಲಿಸಿದರೆ ಹೈ-ರೈಡಿಂಗ್ ಸ್ಟ್ಯಾಂಡ್ ರಸ್ತೆಯಲ್ಲಿ ಉತ್ತಮ ನೋಟವನ್ನು ನೀಡುತ್ತದೆ. ಕೈಗೆಟುಕುವ ಬೆಲೆಯ ಕಾರು 1.0-ಲೀಟರ್ ಕೆ10ಸಿ ಪೆಟ್ರೋಲ್ ಎಂಜಿನ್ ಹೊಂದಿದೆ. ಪೆಟ್ರೋಲ್-ಸಿಎನ್ ಜಿ ಬೈ-ಫ್ಯೂಯಲ್ ಆಯ್ಕೆಯ ಲಭ್ಯತೆಯು ಹೆಚ್ಚು ವೆಚ್ಚದಾಯಕವಾಗಿದೆ. ಐದು-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಜೊತೆಗೆ ಎಎಂಟಿ ಲಭ್ಯತೆಯು ಮೊದಲ ಬಾರಿಗೆ ಕಾರು ಖರೀದಿಸುವವರಿಗೆ ಈ ಮಾದರಿಯ ಮತ್ತೊಂದು ವೆಚ್ಚ ಪರಿಣಾಮಕಾರಿ ಕಾರು ಆಗಿದೆ.
(5 / 7)
ಮಾರುತಿ ಸುಜುಕಿ ಸ್ವಿಫ್ಟ್ ಮೊದಲ ಬಾರಿಗೆ ಕಾರು ಖರೀದಿಸುವವರಿಗೆ ಉತ್ತಮ ಆಯ್ಕೆಯಾಗಿದೆ. ಈ ಹ್ಯಾಚ್ ಬ್ಯಾಕ್ 1.2-ಲೀಟರ್ ಮೂರು ಸಿಲಿಂಡರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ, ಇದು ಮ್ಯಾನುವಲ್ ಮತ್ತು ಎಎಂಟಿ ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ ಲಭ್ಯವಿದೆ. ವ್ಯಾಪಕ ಶ್ರೇಣಿಯ ವೈಶಿಷ್ಟ್ಯಗಳು, ಹೆಚ್ಚಿನ ಮರುಮಾರಾಟ ಮೌಲ್ಯ ಮತ್ತು ಪ್ರಾಯೋಗಿಕತೆ ಈ ಹ್ಯಾಚ್ ಬ್ಯಾಕ್ ಅನ್ನು ವೆಚ್ಚ ಪರಿಣಾಮಕಾರಿ ಉತ್ಪನ್ನವನ್ನಾಗಿ ಮಾಡುತ್ತದೆ.
(6 / 7)
ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್, ಕೊಡು ಹಣಕ್ಕೆ ತಕ್ಕ ಮೌಲ್ಯದ ಭಾರತದ ಮತ್ತೊಂದು ಕಾರು. ಹಲವಾರು ವೈಶಿಷ್ಟ್ಯಗಳು ಇದರಲ್ಲಿದೆ. ಪೆಟ್ರೋಲ್ ಮತ್ತು ಪೆಟ್ರೋಲ್-ಸಿಎನ್‌ಜಿ ಬೈ-ಫ್ಯೂಯಲ್ ಆಯ್ಕೆಗಳಲ್ಲಿ ಲಭ್ಯವಿರುವ ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಹೊಸ ತಲೆಮಾರಿನ ಖರೀದಿದಾರರು ಮತ್ತು ಮೊದಲ ಬಾರಿಗೆ ಕಾರು ಖರೀದಿಸುವವರಲ್ಲಿ ಜನಪ್ರಿಯ ಕಾರು. ಗ್ರ್ಯಾಂಡ್ ಐ10 ನಿಯೋಸ್ 5-ಸ್ಪೀಡ್ ಮ್ಯಾನುವಲ್ ಮತ್ತು ಎಎಂಟಿ ಗೇರ್ ಬಾಕ್ಸ್ ಆಯ್ಕೆಗಳಲ್ಲಿ ಲಭ್ಯವಿದೆ.
(7 / 7)
ಟಾಟಾ ಟಿಯಾಗೊ ಗ್ಲೋಬಲ್ ಎನ್ಸಿಎಪಿ ಫೋರ್-ಸ್ಟಾರ್ ರೇಟಿಂಗ್‌ನೊಂದಿಗೆ ಭಾರತದ ಅತ್ಯಂತ ಕೈಗೆಟುಕುವ ಹಾಗೂ ಸುರಕ್ಷಿತ ಕಾರುಗಳಲ್ಲಿ ಒಂದಾಗಿದೆ. ಇದು 1.2-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರುವ ಉತ್ತಮ ಕಾರು. ಹಣಕ್ಕೆ ತಕ್ಕ ಮೌಲ್ಯ ಕೊಡುತ್ತದೆ. ಹೆಚ್ಚಿನ ಸುರಕ್ಷತಾ ರೇಟಿಂಗ್ ಹೊಂದಿರುವ ಕಾರು ಹೆದ್ದಾರಿಗಳಲ್ಲಿಯೂ ಓಡಿಸಲು ಉತ್ತಮ. ಪೆಟ್ರೋಲ್-ಸಿಎನ್‌ಜಿ ಬೈ-ಫ್ಯೂಯಲ್ ಪವರ್ ಟ್ರೇನ್, ಎಎಂಟಿ ಗೇರ್ ಬಾಕ್ಸ್ ಮತ್ತು ಅತ್ಯಂತ ಆಸಕ್ತಿದಾಯಕವಾಗಿ ಸಿಎನ್‌ಜಿ-ಎಎಂಟಿ ತಂತ್ರಜ್ಞಾನದ ಲಭ್ಯತೆಯು ಕಾರಿನ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.
ಇತರ ಗ್ಯಾಲರಿಗಳು