ಕೊನೆಗೂ ಅಪೇಕ್ಷಾ- ಪಾರ್ಥ ಮದುವೆಯಾದ್ರು; ಲುಂಗಿ ಉಟ್ಕೊಂಡು ಥ್ರಿಲ್ಲಿಂಗ್‌ ಫೈಟಿಂಗ್‌ ಮಾಡಿದ್ರು ಡುಮ್ಮ ಸರ್‌ - ಅಮೃತಧಾರೆ ಇಂದಿನ ಸಂಚಿಕೆ-televison news amruthadhare serial today episode finally partha weds apeksha dumma sir thriller fighting with goons ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕೊನೆಗೂ ಅಪೇಕ್ಷಾ- ಪಾರ್ಥ ಮದುವೆಯಾದ್ರು; ಲುಂಗಿ ಉಟ್ಕೊಂಡು ಥ್ರಿಲ್ಲಿಂಗ್‌ ಫೈಟಿಂಗ್‌ ಮಾಡಿದ್ರು ಡುಮ್ಮ ಸರ್‌ - ಅಮೃತಧಾರೆ ಇಂದಿನ ಸಂಚಿಕೆ

ಕೊನೆಗೂ ಅಪೇಕ್ಷಾ- ಪಾರ್ಥ ಮದುವೆಯಾದ್ರು; ಲುಂಗಿ ಉಟ್ಕೊಂಡು ಥ್ರಿಲ್ಲಿಂಗ್‌ ಫೈಟಿಂಗ್‌ ಮಾಡಿದ್ರು ಡುಮ್ಮ ಸರ್‌ - ಅಮೃತಧಾರೆ ಇಂದಿನ ಸಂಚಿಕೆ

  • Amruthadhaare serial Today Episode: ಝೀ ಕನ್ನಡ ವಾಹಿನಿಯು ಅಮೃತಧಾರೆ ಸೀರಿಯಲ್‌ನ ಇಂದಿನ ಸಂಚಿಕೆಯ ಪ್ರಮೋ ಬಿಡುಗಡೆ ಮಾಡಿದೆ. ಇಂದಿನ ಸಂಚಿಕೆಯಲ್ಲಿ ಸಖತ್‌ ಫೈಟಿಂಗ್‌ ಕಾಣಬಹುದು. ವಿಶೇಷವಾಗಿ ಡುಮ್ಮ ಸರ್‌ ಎಲ್ಲಾ ರೌಡಿಗಳನ್ನು ಚಚ್ಚಿ ಬಿಸಾಕುತ್ತಾರೆ. ಗೌತಮ್‌ ಫೈಟಿಂಗ್‌ಗೆ ಜೈದೇವ್‌ ಓಡಿ ಹೋಗುತ್ತಾನೆ.  ಪಾರ್ಥ ಮತ್ತು ಅಪೇಕ್ಷಾರ ಮದುವೆಯೂ ನಡೆಯುತ್ತದೆ.

Amruthadhaare serial Today Episode:  ಝೀ ಕನ್ನಡ ವಾಹಿನಿಯು ಅಮೃತಧಾರೆ ಸೀರಿಯಲ್‌ನ ಇಂದಿನ ಸಂಚಿಕೆ ಸೀರಿಯಲ್‌ ಪ್ರೇಮಿಗಳಿಗೆ ಥ್ರಿಲ್ಲಿಂಗ್‌ ಅನುಭವ ನೀಡಬಹುದು. ಅಬ್ಬಬ್ಬ... ನಮ್ಮ ಡುಮ್ಮ ಸರ್‌ ಏನ್‌ ಫೈಟಿಂಗ್‌ ಮಾಡಿದ್ದಾರೆ ಅನ್ತಿರಾ. ಬಿಳಿ ಪಂಚೆ ಉಟ್ಕೊಂಡು ರೌಡಿಗಳನ್ನೆಲ್ಲ ಉಡೀಸ್‌ ಮಾಡಿದ್ದಾರೆ. ಕೈಗೆ ಸಿಕ್ಕ ದೊಣ್ಣೆಯಲ್ಲೇ ವಿಲನ್‌ಗಳನ್ನು ಚಚ್ಚಿದ್ದಾರೆ. ಇಂದಿನ ಸಂಚಿಕೆಯಲ್ಲಿ ಏನೆಲ್ಲ ನಡೆಯಲಿದೆ ಎಂದು ವಾಹಿನಿಯು ಬಿಡುಗಡೆ ಮಾಡಿರುವ ಪ್ರಮೋದಲ್ಲಿ ಜಾಹೀರಾಗಿದೆ. 
icon

(1 / 7)

ಮೊನ್ನೆಯಿಂದ ಅಮೃತಧಾರೆ ಸೀರಿಯಲ್‌ನಲ್ಲಿ ಜೀವನ್‌ ಮತ್ತು ಆನಂದ್‌ನ ಬಿಟ್ಟು ಮತ್ತೆಲ್ಲರೂ ಹೀರೋಗಳಂತೆ ಫೈಟಿಂಗ್‌ ಮಾಡುತ್ತಿದ್ದಾರೆ. ರೌಡಿಗಳಿಂದ ತಪ್ಪಿಸಿಕೊಂಡು ಓಡಿ ಹೋಗುವಾಗ ಪಾರ್ಥ ಎಲ್ಲಾ ರೌಡಿಗಳಿಗೆ ಹೊಡೆದು ಓಡುತ್ತಿದ್ದ. ಇದಾದ ಬಳಿಕ ಜೈದೇವ್‌ ಫೈಟಿಂಗ್‌ ಮಾಡಿದ್ದ. ಇವ್ನನ್ನು ಬಿಡಿ, ವಿಲನ್‌ ರೋಲ್‌, ಫೈಟಿಂಗ್‌ ಮಾಡಿ ಅಭ್ಯಾಸವಾಗಿದೆ. ಆದ್ರೆ ಇಂದಿನ ಎಪಿಸೋಡ್‌ನಲ್ಲಿ ಡುಮ್ಮ ಸರ್‌ನ ಸಖತ್‌ ಫೈಟಿಂಗ್‌ ಕಣ್ತುಂಬಿಕೊಳ್ಳಬಹುದು. 
icon

(2 / 7)

ಇವೆಲ್ಲದ್ದಕ್ಕೂ ಕಾರಣವಾಗಿರುವುದು ಶಕುಂತಲಾದೇವಿ ಷಡ್ಯಂತ್ರ. ಪಾರ್ಥ ಮತ್ತು ಅಪೇಕ್ಷಾರ ಮದುವೆ ನಾನು ಹೇಳಿದಂತೆ ಆಗಬೇಕೆಂದುಕೊಂಡಿದ್ದಳು. ಆದರೆ, ಅಪೇಕ್ಷಾಳ ಅಪ್ಪ ಒಪ್ಪದೆ ಇರುವುದರಿಂದ ಭೂಮಿಕಾ ಈ ಮದುವೆ ಬೇಡ ಅಂದಿದ್ರು. ಹೀಗಿದ್ರೂ ಇವರ ಮದುವೆ ನಡೆಯಲೇಬೇಕು ಎಂದು ಶಕುಂತಲಾ ದೇವಿ ಯೋಚಿಸುತ್ತಾರೆ. 
icon

(3 / 7)

ಜೀವನ್‌ ಬೆಂಬಲ ವಾಪಸ್‌ ತೆಗೆದುಕೊಂಡ್ರೂ ಶಕುಂತಲಾದೇವಿ ಇವರಿಬ್ಬರಿಗೆ ಮಾಗಡಿ ಸಮೀಪದ ಶಿವನ ದೇವಾಲಯದಲ್ಲಿ ಮದುವೆಯಾಗಲು ಸೂಚಿಸುತ್ತಾರೆ. ಇದೇ ಸಮಯದಲ್ಲಿ ಇದನ್ನು ಸಹಿಸದ ಜೈದೇವ್‌ ಇವರಿಬ್ಬರನ್ನು ಸಾಯಿಸಲು ಮುಂದಾಗ್ತಾನೆ. ಈ ಸಂದರ್ಭದಲ್ಲಿ ಗೌತಮ್‌ ಎಂಟ್ರಿ ನೀಡುತ್ತಾರೆ.  
icon

(4 / 7)

ಆದರೆ, ಗೌತಮ್‌ಗೆ ತನ್ನ ಮುಂದೆ ಇರುವ ವ್ಯಕ್ತಿ ಜೈದೇವ್‌ ಎಂದು ತಿಳಿಯುದಿಲ್ಲ. ಎಲ್ಲರಿಗೂ ಹೊಡೆಯುತ್ತಾರೆ. ಆದರೆ, ಜೈದೇವ್‌ ಮುಖ ನೋಡುವ ಮುನ್ನವೇ ಓಡಿ ಹೋಗುತ್ತಾನೆ. ಹೀಗಾಗಿ ಈ ಸಂಚಿಕೆಯಲ್ಲೂ ಇದನ್ನೆಲ್ಲ ಮಾಡ್ತಾ ಇರುವುದು ಜೈದೇವ್‌ ಎಂಬ ಸಂಗತಿ ಗೌತಮ್‌ಗೆ ತಿಳಿಯುವುದಿಲ್ಲ. ತಿಳಿದರೆ ಅಮೃತಧಾರೆ ಸೀರಿಯಲ್‌ ಬೇಗ ಮುಗಿಸಬೇಕಾಗುತ್ತದೆ.
icon

(5 / 7)

ಇನ್ನೊಂದೆಡೆ ಆರ್ಚಕರು ಅಪೇಕ್ಷಾ ಮತ್ತು ಪಾರ್ಥನ ಮದುವೆ ಮಾಡಿ ಮುಗಿಸ್ತಾರೆ. ಫೈಟಿಂಗ್‌ ಮುಗಿಸಿ ದೇಗುಲದ ಒಳಕ್ಕೆ ಆನಂದ್‌ ಮತ್ತು ಗೌತಮ್‌ ಬಂದಾಗ ಇವರಿಬ್ಬರ ವಿವಾಹವಾಗಿರುತ್ತದೆ. ಇವರಿಬ್ಬರ ಮದುವೆ ಕೊನೆಗೂ ನಡೆದಿದೆ. ಇನ್ನು ಮುಂದೆ ಇವರು ಯಾರ ಮನೆಯಲ್ಲಿ  ಸಂಸಾರ ನಡೆಸುತ್ತಾರೆ. ಇವರಿಗೆ ಮನೆಯಲ್ಲಿ ಯಾವ ರೀತಿಯ ಸ್ವಾಗತ ದೊರಕುತ್ತದೆ ಎನ್ನುವ ಕುತೂಹಲವೂ ಇದೆ. 
icon

(6 / 7)

ಅಮೃತಧಾರೆ ಮಾತ್ರವಲ್ಲ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದಲ್ಲಿ ಬೃಂದಾವನ, ಸೀತಾರಾಮ ಮದುವೆ ಮತ್ತು ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ ಇಂದೇನಾಗಲಿದೆ ಎಂಬ ವಿವರ, ನಿನ್ನೆಯ ಎಪಿಸೋಡ್‌ ಕಥೆಗಳು ಸೇರಿದಂತೆ ಕಿರುತೆರೆ ಜಗತ್ತಿನ ಸೀರಿಯಲ್‌, ರಿಯಾಲಿಟಿ ಶೋ, ಕಲಾವಿದರ ಫೋಟೋಗಳು ಸೇರಿದಂತೆ ಹಲವು ಮಾಹಿತಿಗಳನ್ನು ನೀವು ಪಡೆಯಬಹುದು. 
icon

(7 / 7)

ಇತರ ಗ್ಯಾಲರಿಗಳು