ಮಜಾ ಭಾರತದ ಪ್ರಿಯಾಂಕ ಕಾಮತ್ಗೆ ಮದುವೆ ಸಂಭ್ರಮ; ಇಲ್ಲಿದೆ ಗಿಚ್ಚಿ ಗಿಲಿಗಿಲಿ ಚೆಲುವೆಯ ಶುಭ ವಿವಾಹ ಸಂಭ್ರಮದ ಚಿತ್ರಗಳು
- Priyanka Kamath weds Amith Nayak: ಕನ್ನಡ ಟೆಲಿವಿಷನ್ ಶೋಗಳಾದ ಮಜಾ ಭಾರತ, ಗಿಚ್ಚಿ ಗಿಲಿಗಿಲಿ ಶೋಗಳಲ್ಲಿ ಪ್ರೇಕ್ಷಕರನ್ನು ಮನರಂಜಿಸಿದ್ದ ಪ್ರಿಯಾಂಕ ಕಾಮತ್ ಮದುವೆ ಸಂಭ್ರಮದಲ್ಲಿದ್ದಾರೆ. ಅನಾರೋಗ್ಯ ಕಾರಣದಿಂದ ಬದುಕಿನಲ್ಲಿ ನಾನಾ ಸವಾಲುಗಳನ್ನು ಎದುರಿಸಿದ್ದರು. ಇಂದು ಇವರ ವಿವಾಹ ಸಮಾರಂಭದ ಕಾರ್ಯಕ್ರಮಗಳು ನಡೆಯುತ್ತಿವೆ.
- Priyanka Kamath weds Amith Nayak: ಕನ್ನಡ ಟೆಲಿವಿಷನ್ ಶೋಗಳಾದ ಮಜಾ ಭಾರತ, ಗಿಚ್ಚಿ ಗಿಲಿಗಿಲಿ ಶೋಗಳಲ್ಲಿ ಪ್ರೇಕ್ಷಕರನ್ನು ಮನರಂಜಿಸಿದ್ದ ಪ್ರಿಯಾಂಕ ಕಾಮತ್ ಮದುವೆ ಸಂಭ್ರಮದಲ್ಲಿದ್ದಾರೆ. ಅನಾರೋಗ್ಯ ಕಾರಣದಿಂದ ಬದುಕಿನಲ್ಲಿ ನಾನಾ ಸವಾಲುಗಳನ್ನು ಎದುರಿಸಿದ್ದರು. ಇಂದು ಇವರ ವಿವಾಹ ಸಮಾರಂಭದ ಕಾರ್ಯಕ್ರಮಗಳು ನಡೆಯುತ್ತಿವೆ.
(1 / 8)
Priyanka Kamath wedding photos: ಕನ್ನಡ ಟೆಲಿವಿಷನ್ ಶೋಗಳಾದ ಮಜಾ ಭಾರತ, ಗಿಚ್ಚಿ ಗಿಲಿಗಿಲಿ ಶೋಗಳಲ್ಲಿ ಪ್ರೇಕ್ಷಕರನ್ನು ಮನರಂಜಿಸಿದ್ದ ಪ್ರಿಯಾಂಕ ಕಾಮತ್ ಮದುವೆ ಸಂಭ್ರಮದಲ್ಲಿದ್ದಾರೆ. ಇಂದು ಇವರ ವಿವಾಹ ಸಮಾರಂಭದ ಕಾರ್ಯಕ್ರಮಗಳು ನಡೆಯುತ್ತಿವೆ.
(2 / 8)
ಈಗಾಗಲೇ ಯೂಟ್ಯೂಬ್ನಲ್ಲಿ ಪ್ರಿಯಾಂಕ ಕಾಮತ್ ವೆಡ್ಸ್ ಅಮಿತ್ ನಾಯಕ್ ಲೈವ್ ಪ್ರಸಾರವಾಗುತ್ತಿದೆ. ಇನ್ಸ್ಟಾಗ್ರಾಂನಲ್ಲಿ ವೆಡ್ಡಿಂಗ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇವರ ವಿವಾಹ ಸಮಾರಂಭಕ್ಕೆ ಎಲ್ಲರೂ ಅಭಿನಂದನೆಗಳನ್ನು ಹೇಳುತ್ತಿದ್ದಾರೆ.
(3 / 8)
ಈ ವರ್ಷದ ಆರಂಭದಲ್ಲಿ ಪುತ್ತೂರಿನಲ್ಲಿ ಪ್ರಿಯಾಂಕ ಕಾಮತ್ ಮತ್ತು ಅಮಿತ್ ನಾಯಕ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ, ಆರೋಗ್ಯ ತೊಂದರೆಯಿಂದಾಗಿ ಇವರು ಡಿಸೆಂಬರ್ನಲ್ಲಿ ವಿವಾಹವಾಗಲು ನಿರ್ಧರಿಸಿದ್ದರು.
(4 / 8)
ನನ್ನ ಬದುಕಿನಲ್ಲಿ ಎಲ್ಲವೂ ಚೆನ್ನಾಗಿತ್ತು. ಇಂತಹ ಸಂದರ್ಭದಲ್ಲಿ ನಡೆಯಲು, ಕುಳಿತುಕೊಳ್ಳಲು ತೊಂದರೆಯಾಗುವಂತಹ ಸಮಸ್ಯೆ ಆರಂಭವಾಯಿತು. ಡಾಕ್ಟರ್ ಈ ಸಂದರ್ಭದಲ್ಲಿ ಆಪರೇಷನ್ ಮಾಡಬೇಕೆಂದು ಹೇಳಿದ್ದರು. ಇದಕ್ಕೂ ಮೊದಲು ನನಗೆ ಎಂಗೇಜ್ಮೆಂಟ್ ಆಗಿತ್ತು ಎಂದು ಅವರು ಈ ಹಿಂದೆ ವಿಡಿಯೋದಲ್ಲಿ ಹೇಳಿಕೊಂಡಿದ್ದರು.
(5 / 8)
ಈ ಸಂದರ್ಭದಲ್ಲಿ ನನಗೆ ಅಮಿತ್ ನೆರವಿಗೆ ನಿಂತರು. ನನ್ನ ಎಲ್ಲಾ ಸೇವೆಗಳನ್ನು ಮಾಡಿದರು. ಎಂಟು ತಿಂಗಳ ಕಾಲ ನನ್ನನ್ನು ಪ್ರೀತಿಯಿಂದ ನೋಡಿಕೊಂಡ. ನನಗೆ ಆತ ಐ ಲವ್ ಯು ಎಂದು ಒಮ್ಮೆಯೂ ಹೇಳಲಿಲ್ಲ. ಆದರೆ, ಆತ ತನ್ನ ಕೆಲಸದ ಮೂಲಕ ಪ್ರೀತಿ ತೋರಿದ ಎಂದು ಪ್ರಿಯಾಂಕ ಕಾಮತ್ ಈ ಹಿಂದೆ ಹೇಳಿಕೊಂಡಿದ್ದರು.
(6 / 8)
ಈ ನಡುವೆ ಅಮಿತ್ ಮತ್ತು ಪ್ರಿಯಾಂಕ ವಿವಿಧ ಕಡೆ ಪ್ರವಾಸ ಹೋಗುತ್ತಿದ್ದರು. ಈ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದರು.
ಇತರ ಗ್ಯಾಲರಿಗಳು