ಆಸ್ಟ್ರೇಲಿಯಾ ಓಪನ್ ಐತಿಹಾಸಿಕ ಗೆಲುವು; 80 ಸಾವಿರದಿಂದ 98 ಲಕ್ಷ ರೂಪಾಯಿಗೇರಿದ ಸುಮಿತ್ ಬ್ಯಾಂಕ್ ಬ್ಯಾಲೆನ್ಸ್
- Australian Open 2024: ಕೆಲವೇ ತಿಂಗಳುಗಳ ಹಿಂದೆ ಭಾರತದ ನಂಬರ್ ವನ್ ಟೆನಿಸ್ ಆಟಗಾರ ಸುಮಿತ್ ನಗಾಲ್ ಅವರ ಆರ್ಥಿಕ ಸ್ಥಿತಿಯ ಕತೆಯು ಇಂಟರ್ನೆಟ್‌ನಲ್ಲಿ ಭಾರಿ ಸದ್ದು ಮಾಡಿತ್ತು. ಭಾರತದ ನಂ.1 ಶ್ರೇಯಾಂಕದ ಆಟಗಾರನಾಗಿದ್ದರೂ, ತನ್ನ ಕೋಚ್‌ಗೆ ಹಣ ನೀಡಿ ತರಬೇತಿ ಮುಂದುವರಿಸಲು ಹೆಣಗಾಡುತ್ತಿದ್ದ ಆಟಗಾರ, ಒಂದು ಗೆಲುವಿನೊಂದಿಗೆ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ.
- Australian Open 2024: ಕೆಲವೇ ತಿಂಗಳುಗಳ ಹಿಂದೆ ಭಾರತದ ನಂಬರ್ ವನ್ ಟೆನಿಸ್ ಆಟಗಾರ ಸುಮಿತ್ ನಗಾಲ್ ಅವರ ಆರ್ಥಿಕ ಸ್ಥಿತಿಯ ಕತೆಯು ಇಂಟರ್ನೆಟ್‌ನಲ್ಲಿ ಭಾರಿ ಸದ್ದು ಮಾಡಿತ್ತು. ಭಾರತದ ನಂ.1 ಶ್ರೇಯಾಂಕದ ಆಟಗಾರನಾಗಿದ್ದರೂ, ತನ್ನ ಕೋಚ್‌ಗೆ ಹಣ ನೀಡಿ ತರಬೇತಿ ಮುಂದುವರಿಸಲು ಹೆಣಗಾಡುತ್ತಿದ್ದ ಆಟಗಾರ, ಒಂದು ಗೆಲುವಿನೊಂದಿಗೆ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ.
(1 / 8)
ಆಸ್ಟ್ರೇಲಿಯನ್ ಓಪನ್ 2024ರ ಮೊದಲ ಸುತ್ತಿನಲ್ಲಿ ವಿಶ್ವದ 27ನೇ ಶ್ರೇಯಾಂಕದ ಆಟಗಾರ ಅಲೆಕ್ಸಾಂಡರ್ ಬುಬ್ಲಿಕ್ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿದ ಸುಮಿತ್ ನಗಾಲ್ ವಿಶ್ವದಾಖಲೆ ನಿರ್ಮಿಸಿದ್ದಾರೆ. ಆಸ್ಟ್ರೇಲಿಯನ್ ಓಪನ್‌ನಲ್ಲಿ ಇದೇ ಮೊದಲ ಬಾರಿಗೆ ಎರಡನೇ ಸುತ್ತಿಗೆ ಲಗ್ಗೆ ಹಾಕಿ ಮತ್ತಷ್ಟು ಮುನ್ನಡೆಯುವ ಸಿದ್ಧತೆಯಲ್ಲಿದ್ದಾರೆ.
(2 / 8)
ಕಜಕಿಸ್ತಾನದ ಎದುರಾಳಿ ಬುಬ್ಲಿಕ್ ವಿರುದ್ಧ 6-4, 6-2, 7-6 [7-5]ರ ನೇರ ಸೆಟ್‌ಗಳಿಂದ ಗೆದ್ದ ಸುಮಿತ್ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಜಾಗತಿಕ ಟೆನ್ನಿಸ್ ಶ್ರೇಯಾಂಕದಲ್ಲಿ 137ನೇ ಸ್ಥಾನದಲ್ಲಿರುವ ಸುಮಿತ್, ಶ್ರೇಯಾಂಕದಲ್ಲಿ ತಮಗಿಂತ ನೂರಕ್ಕೂ ಅಧಿಕ ಸ್ಥಾನ ಮೇಲಿರುವ ಆಟಗಾರನ್ನು ಮಣಿಸಿದ್ದಾರೆ. ಆ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ.(AFP)
(3 / 8)
ಕೆಲ ತಿಂಗಳುಗಳ ಹಿಂದೆ ತನ್ನ ಆರ್ಥಿಕ ಸಂಕಷ್ಟದ ಕುರಿತು ಹೇಳಿಕೊಂಡಿದ್ದ ಸುಮಿತ್, ತಾನು ವಿವಿಧ ಟೂರ್ನಮೆಂಟ್‌ಗಳಲ್ಲಿ ಆಡಿ ಗಳಿಸಿದ ಹಣವೆಲ್ಲ ತನ್ನ ಕೋಚಿಂಗ್‌ಗೆ ಸಾಲುತ್ತಿಲ್ಲ ಎಂದಿದ್ದರು. ಅದ್ಧೂರಿ ATP ಟೂರ್‌ನಲ್ಲಿ ಆಡಲು, ನಗಾಲ್ ಅವರು ತಮ್ಮಲ್ಲಿರುವ ಎಲ್ಲಾ ಹಣವನ್ನು ವಿನಿಯೋಗಿಸಿದ್ದಾರೆ. ಈವರೆಗೆ ಗೆದ್ದ ಬಹುಮಾನದ ಹಣ, IOCL ನಿಂದ ಪಡೆಯುವ ಸಂಬಳ ಮತ್ತು ಮಹಾ ಟೆನಿಸ್ ಫೌಂಡೇಶನ್‌ನಿಂದ ಪಡೆಯುವ ನೆರವನ್ನು ಕೂಡಾ ಎಟಿಪಿ ಟೂರ್‌ಗಾಗಿ ಖರ್ಚು ಮಾಡಿದ್ದಾರೆ. ಆ ಬಳಿಕ ತನ್ನ ಬ್ಯಾಂಕ್ ಖಾತೆಯಲ್ಲಿ ಕೇವಲ 80000 ರೂಪಾಯಿ ಮಾತ್ರ ಉಳಿದಿದೆ ಎಂದು ಅವರು ಹೇಳಿದ್ದರು. ದೇಶದ ನಂಬರ್ ವನ್ ಆಟಗಾರನಾಗಿದ್ದರೂ ಪ್ರಾಯೋಜಕರಿಲ್ಲದೆ ಕಷ್ಟ ಅನುಭವಿಸಿದರು.
(4 / 8)
ಸದ್ಯ ಪ್ರತಿಷ್ಠಿತ ಆಸ್ಟ್ರೇಲಿಯನ್ ಓಪನ್‌ನಲ್ಲಿ ಮೊದಲ ಸುತ್ತಿನ ಗೆಲುವು ಸುಮಿತ್ ಭರವಸೆ ಹಿಗ್ಗಿಸಿದೆ. ಅರ್ಹತಾ ಸುತ್ತಿನಲ್ಲಿ ಆಡಿ ಗೆಲ್ಲಬೇಕಿದ್ದ ಪಂದ್ಯವನ್ನು ಗೆದ್ದು ಕನಿಷ್ಠ 31,250 ಆಸ್ಟ್ರೇಲಿಯಾನ್ ಡಾಲರ್ ಬಹುಮಾನದ ಮೊತ್ತ ಖಚಿತಪಡಿಸಿಕೊಂಡಿದ್ದರು. ಆ ಬಳಿಕ ಮೊದಲ ಅರ್ಹತಾ ಪಂದ್ಯ ಗೆದ್ದರೆ, ಅದು 44,100 ಡಾಲರ್‌ಗೆ ಏರಿಕೆಯಾಗುತ್ತದೆ. ಮತ್ತೊಂದು ಗೆಲುವು ಪಡೆದರೆ 65,000 ಡಾಲರ್ ಗಳಿಸಲು ಸಾಧ್ಯವಾಗುತ್ತದೆ. ಈಗ ಸುಮಿತಿ ಈ ಹಂತ ಮೀರಿ ಗೆದ್ದಿದ್ದಾರೆ.
(5 / 8)
ಇದೀಗ ಆಸ್ಟ್ರೇಲಿಯನ್ ಓಪನ್ 2024ರ ಮುಖ್ಯ ಸುತ್ತುಗಳಿಗೆ ಪ್ರವೇಶಿಸುವುದಕ್ಕೂ ಮುನ್ನ ಮೂರು ಕಠಿಣ ಪಂದ್ಯಗಳನ್ನು ಗೆದ್ದ ಸುಮಿತ್ ಅವರಿಗೆ ಕನಿಷ್ಠ 120,000 ಡಾಲರ್ (65.82 ಲಕ್ಷ ರೂಪಾಯಿ) ಬಹುಮಾನದ ಹಣ ಖಚಿತವಾಗಿದೆ. ಒಂದು ವೇಳೆ ಅವರು ಆರಂಭಿಕ ಸುತ್ತಿನಲ್ಲಿ ಅಲೆಕ್ಸಾಂಡರ್ ಬುಬ್ಲಿಕ್ ಎದುರು ಸೋತಿದ್ದರೂ ಅವರಿಗೆ ಆ ಮೊತ್ತ ಖಚಿತವಾಗಿತ್ತು.
(6 / 8)
ಐತಿಹಾಸಿಕ ಸಾಧನೆ ಸಾಧನೆಯೊಂದಿಗೆ ಎರಡನೇ ಸುತ್ತಿಗೆ ಪ್ರವೇಶಿಸಿದ ನಗಾಲ್ ಅವರಿಗೆ ಇದೀಗ 180,000 ಆಸ್ಟ್ರೇಲಿಯನ್ ಡಾಲರ್ (98 ಲಕ್ಷ ರೂಪಾಯಿ) ಬಹುಮಾನದ ಹಣ ಖಚಿತವಾಗಿದೆ. ಮುಂದಿನ ಸುತ್ತು ಸೋತರೂ ಅವರಿಗೆ ಈ ಮೊತ್ತ ಸಿಗಲಿದೆ. ಅಲ್ಲಿ ಗೆದ್ದರೆ ಮೊತ್ತ ಇನ್ನಷ್ಟು ಹೆಚ್ಚಲಿದೆ.(AFP)
(7 / 8)
ಪುರುಷರ ಸಿಂಗಲ್ಸ್‌ನ ಎರಡನೇ ಸುತ್ತಿನಲ್ಲಿ ಸುಮಿತ್ ಅವರು ಚೀನಾದ ಜುಂಚೆಂಗ್ ಶಾಂಗ್ ಅವರನ್ನು ಎದುರಿಸಲಿದ್ದಾರೆ. ಅಲ್ಲಿ ಗೆದ್ದರೆ ಕನಿಷ್ಠ 255,000 ಡಾಲರ್ (1.39 ಕೋಟಿ ರೂಪಾಯಿ)ಬಹುಮಾನ ಖಚಿತವಾಗುತ್ತದೆ. (AFP)
ಇತರ ಗ್ಯಾಲರಿಗಳು