ಅರ್ಜುನ ಪ್ರಶಸ್ತಿ ಪಡೆಯುವುದು ನನ್ನ ಕನನಸಾಗಿತ್ತು; ವೇಗಿ ಮೊಹಮ್ಮದ್ ಶಮಿ ಮನದಾಳದ ಮಾತು
- Mohammed Shami: ಅರ್ಜುನ ಪ್ರಶಸ್ತಿ ಪಡೆಯುವುದೇ ಆಟಗಾರರ ಜೀವನದ ಕನಸು. ನಾನು ಈ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಕ್ಕೆ ನನಗೆ ಸಂತೋಷವಾಗಿದೆ ಎಂದು ಮೊಹಮ್ಮದ್ ಶಮಿ ಹೇಳಿದ್ದಾರೆ.
- Mohammed Shami: ಅರ್ಜುನ ಪ್ರಶಸ್ತಿ ಪಡೆಯುವುದೇ ಆಟಗಾರರ ಜೀವನದ ಕನಸು. ನಾನು ಈ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಕ್ಕೆ ನನಗೆ ಸಂತೋಷವಾಗಿದೆ ಎಂದು ಮೊಹಮ್ಮದ್ ಶಮಿ ಹೇಳಿದ್ದಾರೆ.
(1 / 8)
ಅರ್ಜುನ ಪ್ರಶಸ್ತಿಗೆ ಭಾಜನರಾಗಿರುವ ಭಾರತದ ಸ್ಟಾರ್ ವೇಗಿ ಮೊಹಮ್ಮದ್ ಶಮಿ, ಈ ಪ್ರಶಸ್ತಿ ಪಡೆಯುವುದು ನನ್ನ ಜೀವನದ ಕನಸು ಎಂದು ಹೇಳಿದ್ದಾರೆ. ಅರ್ಜುನ ಪ್ರಶಸ್ತಿಯನ್ನು ಭಾರತದ 2ನೇ ಅತ್ಯುನ್ನತ ಅಥ್ಲೆಟಿಕ್ ಗೌರವ.(ANI)
(2 / 8)
ಕ್ರೀಡೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ, ನಾಯಕತ್ವ, ಕ್ರೀಡಾ ಮನೋಭಾವ ತೋರಿದ ಮತ್ತು ಶಿಸ್ತಿನ ಪ್ರಜ್ಞೆಯನ್ನು ಹೊಂದಿರುವ ಆಟಗಾರರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. (ICC Twitter)
(3 / 8)
ಈ ಗೌರವಕ್ಕೆ ಸಂತಸ ವ್ಯಕ್ತಪಡಿಸಿದ ಶಮಿ, ಎಷ್ಟೋ ಮಂದಿಗೆ ಹಲವು ವರ್ಷಗಳ ಪರಿಶ್ರಮ ಇದ್ದರೂ ಈ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ. ಆದರೆ ನಾನು ಈ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಕ್ಕೆ ನನಗೆ ಸಂತೋಷವಾಗಿದೆ ಎಂದು ಹೇಳಿದ್ದಾರೆ.(REUTERS)
(4 / 8)
ಈ ಪ್ರಶಸ್ತಿ ಪಡೆಯುವುದೇ ಆಟಗಾರರ ಜೀವನದ ಕನಸು. ನಾನು ಈ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಕ್ಕೆ ನನಗೆ ಸಂತೋಷವಾಗಿದೆ. ಈ ಪ್ರಶಸ್ತಿಯನ್ನು ಪಡೆಯುವುದು ನನಗೆ ಕನಸಿನಂತಿದೆ ಎಂದು ಮೊಹಮ್ಮದ್ ಶಮಿ ಹೇಳಿದ್ದಾರೆ.(REUTERS)
(5 / 8)
ಏಕೆಂದರೆ ನನ್ನ ಜೀವದಲ್ಲಿ ಈ ಪ್ರಶಸ್ತಿ ಪಡೆದ ಅನೇಕರನ್ನು ನೋಡಿದ್ದೇನೆ. ನಾನು ಪಡೆಯಬೇಕೆಂಬ ಕನಸು ಕಾಡುತ್ತಿತ್ತು. ಈಗ ನನಗೂ ಸಿಕ್ಕಿರುವುದು ಸಂತಸ ನೀಡಿದೆ ಎಂದು ಕ್ರಿಕೆಟಿಗ ಎಎನ್‌ಐಗೆ ತಿಳಿಸಿದ್ದಾರೆ.(PTI)
(6 / 8)
33 ವರ್ಷದ ಶಮಿ, ವರ್ಷವಿಡೀ ಅದ್ಭುತ ಪ್ರದರ್ಶನ ನೀಡಿದರು. ಅದರಲ್ಲೂ ಮೊಹಮ್ಮದ್ ಶಮಿ ಅವರು ಏಕದಿನ ವಿಶ್ವಕಪ್‌ನಲ್ಲಿ ಧೂಳೆಬ್ಬಿಸಿದರು. 7 ಇನ್ನಿಂಗ್ಸ್‌ಗಳಿಂದ 24 ವಿಕೆಟ್ ಪಡೆದು ಅತ್ಯಧಿಕ ವಿಕೆಟ್ ಟೇಕರ್ ಆಗಿ ಹೊರಹೊಮ್ಮಿದರು.(PTI)
(7 / 8)
ಸದ್ಯ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಮೊಹಮ್ಮದ್ ಶಮಿ ಅವರು ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳಿಗೆ ಅಲಭ್ಯರಾಗುವುದು ಅನುಮಾನ ಎಂದು ಹೇಳಲಾಗುತ್ತಿದೆ. ಈಗಾಗಲೇ ಅವರು ಸೌತ್ ಆಫ್ರಿಕಾ ಟೆಸ್ಟ್ ಸರಣಿಯನ್ನು ಮಿಸ್ ಮಾಡಿಕೊಂಡಿದ್ದಾರೆ.(ICC Twitter)
ಇತರ ಗ್ಯಾಲರಿಗಳು