Devil OTT: ಒಟಿಟಿಗೆ ಬಂತು ತೆಲುಗಿನ ಡೆವಿಲ್ ಸಿನಿಮಾ; ಯಾವ ವೇದಿಕೆ? ಇಲ್ಲಿದೆ ಮಾಹಿತಿ
- Devil OTT: ತೆಲುಗಿನಲ್ಲಿ ಕಳೆದ ವರ್ಷವಷ್ಟೇ ತೆರೆಕಂಡಿದ್ದ ಡೆವಿಲ್ ಸಿನಿಮಾ ಈಗ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಕಲ್ಯಾಣ್ ರಾಮ್ ಅಭಿನಯದ ಈ ಪಿಡಿಯಾಡಿಕ್ ಆಕ್ಷನ್ ಡ್ರಾಮಾ ಸಿನಿಮಾ ತೆಲುಗು ಹಾಗೂ ತಮಿಳಿನಲ್ಲಿ ಸ್ಟ್ರೀಮ್ ಆಗುತ್ತಿದೆ. ಯಾವ ಒಟಿಟಿಯಲ್ಲಿ ಈ ಸಿನಿಮಾ ನೋಡಬಹುದು? ಇಲ್ಲಿದೆ ಮಾಹಿತಿ.

(1 / 5)
'ಡೆವಿಲ್; ದಿ ಬ್ರಿಟಿಷ್ ಸೀಕ್ರೆಟ್ ಏಜೆಂಟ್' ಚಿತ್ರವು ಶೀರ್ಷಿಕೆಯಿಂದಲೇ ಕುತೂಹಲ ಮೂಡಿಸಿತ್ತು. ಟೀಸರ್ ಮತ್ತು ಟ್ರೇಲರ್ ಬಳಿಕ ಚಿತ್ರದ ಮೇಲೆ ಅಪಾರ ನಿರೀಕ್ಷೆ ಮೂಡಿತ್ತು. ಅದರಂತೆ ಡಿಸೆಂಬರ್ ಸಿನಿಮಾ ಡಿಸೆಂಬರ್ 29 ರಂದು ಚಿತ್ರಮಂದಿರಕ್ಕೆ ಆಗಮಿಸಿತ್ತು. ಪಾಸಿಟಿವ್ ಪ್ರತಿಕ್ರಿಯೆ ಪಡೆದರೂ, ಕೇವಲ 15 ದಿನಗಳಿಗೆ ಸಿನಿಮಾ ಒಟಿಟಿಗೆ ಎಂಟ್ರಿಕೊಟ್ಟಿದೆ.
(2 / 5)
ಅಂದಹಾಗೆ ಡೆವಿಲ್ ಸಿನಿಮಾ ಇಂದಿನಿಂದ (ಜನವರಿ 14) ಅಮೆಜಾನ್ ಪ್ರೈಮ್ ವೀಡಿಯೊ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್‌ಗೆ ಲಭ್ಯವಿದೆ. ಈ ಸಿನಿಮಾವನ್ನು ಮೂಲ ತೆಲುಗು ಮತ್ತು ತಮಿಳಿನಲ್ಲಿ ವೀಕ್ಷೀಸಬಹುದು.
(3 / 5)
ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ಎರಡು ವಾರಕ್ಕೆ, ಡೆವಿಲ್ ಸಿನಿಮಾ ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಈ ಚಿತ್ರದಲ್ಲಿ ಕಲ್ಯಾಣ್ ರಾಮ್‌ಗೆ ಜೋಡಿಯಾಗಿ ಸಂಯುಕ್ತಾ ಮೆನನ್ ನಾಯಕಿಯಾಗಿದ್ದಾರೆ.
(4 / 5)
ಕೊಲೆಯ ರಹಸ್ಯ, ಆಪರೇಷನ್ ಟೈಗರ್ ಹಂಟ್ ಸುತ್ತ ಇಡೀ ಸಿನಿಮಾ ಸುತ್ತುತ್ತದೆ. ಬ್ರಿಟಿಷರ ಆಳ್ವಿಕೆಯ ಹಿನ್ನಲೆಯಲ್ಲಿಯೂ ಈ ಚಿತ್ರ ತೆರೆದುಕೊಳ್ಳುತ್ತದೆ. ಅಭಿಷೇಕ್ ನಾಮಾ ಈ ಚಿತ್ರವನ್ನು ನಿರ್ದೇಶಿಸುವುದರ ಜತೆಗೆ ನಿರ್ಮಾಣವನ್ನೂ ಮಾಡಿದ್ದಾರೆ.
ಇತರ ಗ್ಯಾಲರಿಗಳು