Keerthy Suresh: ನೀಲಿ ಬಣ್ಣದ ಬ್ಲೇಜರ್ ಡ್ರೆಸ್‌ನಲ್ಲಿ ಮಹಾನಟಿ ಕೀರ್ತಿ ಸೌಂದರ್ಯ ಅನಾವರಣ; ಡ್ರೆಸ್ ಬೆಲೆ ಕೇಳಿದ್ರೆ ಅಚ್ಚರಿ ಪಡ್ತೀರಾ
ಮುದ್ದು ಮುಖ, ಅರಳು ಕಂಗಳು, ತೊಂಡೆ ಹಣ್ಣಿನಂಥ ತುಟಿ, ದಾಳಿಂಬೆ ಕಾಳಿನಂತಹ ಹಲ್ಲುಗಳು ಈ ವರ್ಣನೆ ಮಹಾನಟಿ ಕೀರ್ತಿ ಸುರೇಶ್‌ಗೆ ಅತಿಯೋಶಕ್ತಿಯಲ್ಲ. ಸದಾ ಸ್ಟೈಲಿಶ್ ಉಡುಪುಗಳ ಮೂಲಕ ಗಮನ ಸೆಳೆಯುವ ಈ ಬೆಡಗಿ ಇದೀಗ ಆಕಾಶನೀಲಿ ಬಣ್ಣದ ಬ್ಲೇಜರ್ ಡ್ರೆಸ್‌ನಲ್ಲಿ ಮಿಂಚಿದ್ದಾರೆ.
(1 / 7)
ಕಳೆದ ಶನಿವಾರ ದಕ್ಷಿಣ ಭಾರತದ ಖ್ಯಾತ ನಟಿ ಕೀರ್ತಿ ಸುರೇಶ್ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಹೊಸ ಫೋಟೊಗಳ ಗುಚ್ಛವನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ರಸದೌತಣ ನೀಡಿದ್ದರು. ನೀಲಿ ಬಣ್ಣದ ಹಾರ್ಟ್ ಇಮೋಜಿಯೊಂದಿಗೆ ಫೋಟೊಗಳನ್ನು ಹಂಚಿಕೊಂಡಿದ್ದರು. (Instagram/@keerthysureshofficial)
(2 / 7)
ಮಿಶ್ರು ಬ್ರಾಂಡ್‌ನ ಆಕಾಶ ನೀಲಿ ಬಣ್ಣದ ಬ್ಲೇಜರ್ ಡ್ರೆಸ್ ಧರಿಸಿದ್ದ ಕೀರ್ತಿಯ ಅಂದ ಇನ್ನಷ್ಟು ಅರಳಿತ್ತು. ಈ ಡ್ರೆಸ್‌ನ ಬೆಲೆ ಕೇಳಿದ್ರೆ ನೀವು ಮೂಗಿನ ಮೇಲೆ ಬೆರಳಿರಿಸುವುದು ಖಂಡಿತ. ಅಂದ ಹಾಗೆ ಈ ಡ್ರೆಸ್‌ನ ಬೆಲೆ 78,700 ರೂ. (Instagram/@keerthysureshofficial)
(3 / 7)
ಸಾಂಪ್ರದಾಯಿಕ, ಪಾಶ್ಚಾತ್ಯ ಯಾವುದೇ ರೀತಿ ಉಡುಪಿನಲ್ಲೂ ಕೀರ್ತಿಯ ಸೌಂದರ್ಯ ಇಮ್ಮಡಿಯಾಗುವುದರಲ್ಲಿ ಎರಡು ಮಾತಿಲ್ಲ. ಸೀರೆ, ಜೀನ್ಸ್, ಸೂಟ್ ಎಲ್ಲದರಲ್ಲೂ ಆಕೆಯ ಅಂದ ದ್ವಿಗುಣಗೊಳ್ಳುತ್ತದೆ. ನಗುವಿನಲ್ಲೇ ಕೊಲ್ಲುವ ಈ ಬೆಡಗಿಗೆ ಈ ನೀಲಿ ಬಣ್ಣದ ಡ್ರೆಸ್ ಇನ್ನಷ್ಟು ಮುದ್ದಾಗಿ ಕಾಣುತ್ತಿತ್ತು. (Instagram/@keerthysureshofficial)
(4 / 7)
ಅರ್ಗಾಂಝಾ ಬಟ್ಟೆಯಲ್ಲಿ ವಿನ್ಯಾಸಗೊಳಿಸಲಾದ ಈ ಉಡುಪಿಗೆ ಲ್ಯಾಪಲ್ ಕಾಲರ್ ಅಳವಡಿಸಲಾಗಿದೆ. ಡ್ರೆಸ್‌ನ ಮೇಲೆ ಅಲ್ಲಲ್ಲಿ ಹೂವಿನ ಚಿತ್ತಾರವಿದೆ. ಆಕ್ಕೆ ಈ ಬ್ಲೇಜರ್‌ಗೆ ಹೊಂದಿಕೆಯಾಗುವ ಚಾಂದೇರಿ ಟಾಪ್, ಪ್ಯಾಂಟ್ ಧರಿಸಿದ್ದರು. (Instagram/@keerthysureshofficial)
(5 / 7)
ಸೆಲೆಬ್ರಿಟಿ ಫ್ಯಾಶನ್ ಸ್ಟೈಲಿಸ್ಟ್ ರಶ್ಮಿ ಅಂಗಾರ ವಶಿಷ್ಟ್ ಅವರು ಕೀರ್ತಿಯ ಈ ಲುಕ್‌ಗೆ ಸಹಾಯ ಮಾಡಿದ್ದರು. ಸಿಲ್ವರ್ ಸ್ಟಡ್‌ನ ಕಿವಿಯೋಲೆ, ಅದೇ ರೀತಿಯ ಬ್ರಾಸ್ಲೈಟ್ ಧರಿಸಿ ಸರಳ ಮೇಕಪ್ ಮಾಡಿಕೊಂಡಿದ್ದಾರೆ ಕೀರ್ತಿ. (Instagram/@keerthysureshofficial)
(6 / 7)
ಮೇಕಪ್ ಕಲಾವಿದೆ ಅನಿಘಾ ಜೈನ್ ಸಲಹೆಯಂತೆ ನ್ಯೂಡ್ ಐಶಾಡೋ, ರೆಪ್ಪೆಯ ಕೂದಲುಗಳಿಗೆ ಮಸ್ಕರಾ, ಐಲೈನರ್, ಬೆರಿ ಬಣ್ಣದ ಲಿಪ್‌ಸ್ಟಿಕ್ ಹಚ್ಚಿದ್ದರು. (Instagram/@keerthysureshofficial)
ಇತರ ಗ್ಯಾಲರಿಗಳು