ಹೆಣ್ಣು ಮಕ್ಕಳೊಂದಿಗೆ ತಿರುಪತಿಗೆ ತೆರಳಿದ ಪವನ್‌ ಕಲ್ಯಾಣ್‌; ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡ ಆದ್ಯ ಕೊನಿಡೇಲ, ಪೌಲಿನಾ ಅಂಜನಿ-tollywood news andhra dcm pawan kalyan visited tirupati with his daughters aadya konidela polina anjani rsm ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಹೆಣ್ಣು ಮಕ್ಕಳೊಂದಿಗೆ ತಿರುಪತಿಗೆ ತೆರಳಿದ ಪವನ್‌ ಕಲ್ಯಾಣ್‌; ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡ ಆದ್ಯ ಕೊನಿಡೇಲ, ಪೌಲಿನಾ ಅಂಜನಿ

ಹೆಣ್ಣು ಮಕ್ಕಳೊಂದಿಗೆ ತಿರುಪತಿಗೆ ತೆರಳಿದ ಪವನ್‌ ಕಲ್ಯಾಣ್‌; ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡ ಆದ್ಯ ಕೊನಿಡೇಲ, ಪೌಲಿನಾ ಅಂಜನಿ

ಆಂಧ್ರಪ್ರದೇಶದಲ್ಲಿ ತಿರುಪತಿ ಲಡ್ಡು ಪ್ರಸಾದ ವಿವಾದ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ. ಇದರಿಂದ ದೇವಸ್ಥಾನ ಶುದ್ಧೀಕರಣಕ್ಕಾಗಿ ತೆಲುಗು ನಟ, ಆಂಧ್ರ ಪ್ರದೇಶ ಡಿಸಿಎಂ ಪವನ್‌ ಕಲ್ಯಾಣ್‌ ಪವನ್‌ ಕಲ್ಯಾಣ್‌ 11 ದಿನಗಳ ದೀಕ್ಷೆ ಪಡೆದಿದ್ದಾರೆ. 

ಪವನ್‌ ಕಲ್ಯಾಣ್‌ ಇಂದು ಕಾಲ್ನಡಿಗೆಯಲ್ಲಿ ತಿರುಪತಿಗೆ ತೆರಳಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಜೊತೆಗೆ ಇಬ್ಬರು ಪುತ್ರಿಯರೂ ದೇವರ ದರ್ಶನ ಪಡೆದಿದ್ದಾರೆ. 
icon

(1 / 8)

ಪವನ್‌ ಕಲ್ಯಾಣ್‌ ಇಂದು ಕಾಲ್ನಡಿಗೆಯಲ್ಲಿ ತಿರುಪತಿಗೆ ತೆರಳಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಜೊತೆಗೆ ಇಬ್ಬರು ಪುತ್ರಿಯರೂ ದೇವರ ದರ್ಶನ ಪಡೆದಿದ್ದಾರೆ. (PC: janasenaparty Instagram)

ಆದ್ಯಾ, ಪವನ್‌ ಕಲ್ಯಾನ್‌ ಎರಡನೇ ಪತ್ನಿ ರೇಣು ದೇಸಾಯಿ ಪುತ್ರಿ, ಪಲಿನಾ ಅಂಜನಿ, ಪವನ್‌ ಕಲ್ಯಾಣ್‌ ಮೂರನೇ ಪತ್ನಿ ಅನ್ನಾ ಲೆಜ್ನೆವಾ ಅವರ ಪುತ್ರಿ. 
icon

(2 / 8)

ಅನ್ನಾ ಲೆಜ್ನೆವಾ ಕ್ರೈಸ್ತ ಸಮುದಾಯಕ್ಕೆ ಸೇರಿರುವುದರಿಂದ ತಿರುಪತಿಗೆ ತೆರಳುವ ಮುನ್ನ ಮಗಳು ಪಲಿನಾ ಅಂಜನಿ ಟಿಟಿಡಿ ದಾಖಲೆಗಳಿಗೆ ಸಹಿ ಮಾಡಿದ್ದಾರೆ. 
icon

(3 / 8)

 ದಾಖಲೆಗಳಿಗೆ ಸಹಿ ಹಾಕುವ ಮೂಲಕ, ನನಗೆ ತಿರುಪತಿ ವೆಂಕಟೇಶ್ವರನ ಮೇಲೆ ನಂಬಿಕೆ ಇದೆ ಎಂದು ಪಲಿನಾ ಅಂಜನಿ ಘೋಷಿಸಿದ್ದಾರೆ. 
icon

(4 / 8)

ತಂದೆಯೊಂದಿಗೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿರುವ ಆದ್ಯಾ, ಪಲಿನಾ ಇದೇ ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಇಬ್ಬರ ತಾಯಂದಿರು ಬೇರೆ ಬೇರೆ ಆದರೂ ನೋಡಲು ಒಂದೇ ರೀತಿ ಕಾಣುತ್ತಿದ್ದಾರೆ ಎಂದು ಜನರು ಕಾಮೆಂಟ್‌ ಮಾಡುತ್ತಿದ್ದಾರೆ. 
icon

(5 / 8)

ಪವನ್‌ ಕಲ್ಯಾಣ್‌ ನೋಡಲು ತಿರುಪತಿಯ ಎರಡೂ ರಸ್ತೆಗಳಲ್ಲಿ ಅಭಿಮಾನಿಗಳು ಕಾಯುತ್ತಿದ್ದರು. ತಮ್ಮನ್ನು ಮಾತನಾಡಿಸಿದ ಅಭಿಮಾನಿಗಳಿಗೆ ಪವನ್‌ ಕಲ್ಯಾಣ್‌ ಕೈ ಮುಗಿಯುತ್ತಾ ಮುಂದೆ ತೆರಳುತ್ತಿದ್ದರು. 
icon

(6 / 8)

ಮೆಟ್ಟಿಲುಗಳನ್ನು ಹತ್ತಿ ಪವನ್‌ ಕಲ್ಯಾನ್‌ ವೆಂಕಟೇಶ್ವರನ ದರ್ಶನ ಪಡೆದರು. ದಾರಿ ಮಧ್ಯದಲ್ಲಿ ಸಿಕ್ಕ ನಲ್ಲಿಯಲ್ಲಿ ನೀರು ಕುಡಿದು ದಣಿವು ಆರಿಸಿಕೊಂಡರು. 
icon

(7 / 8)

ಪವನ್‌ ಕಲ್ಯಾಣ್‌ ಫೋಟೋಗಳನ್ನು ಜನಸೇನಾ ಪಾರ್ಟಿ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್‌ ಪೇಜ್‌ನಲ್ಲಿ ಹಂಚಿಕೊಂಡಿದೆ. 
icon

(8 / 8)

ಇತರ ಗ್ಯಾಲರಿಗಳು