Chiranjeevi: ಚಿರಂಜೀವಿ ಸುರೇಖಾ ಲವ್‌ ಸ್ಟೋರಿ; ಸಹನಟನ ಮೇಲಿನ ವಿಶ್ವಾಸಕ್ಕೆ ಅವರ ಮಗಳನ್ನೇ ಮದುವೆ ಆದ ಮೆಗಾಸ್ಟಾರ್‌
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Chiranjeevi: ಚಿರಂಜೀವಿ ಸುರೇಖಾ ಲವ್‌ ಸ್ಟೋರಿ; ಸಹನಟನ ಮೇಲಿನ ವಿಶ್ವಾಸಕ್ಕೆ ಅವರ ಮಗಳನ್ನೇ ಮದುವೆ ಆದ ಮೆಗಾಸ್ಟಾರ್‌

Chiranjeevi: ಚಿರಂಜೀವಿ ಸುರೇಖಾ ಲವ್‌ ಸ್ಟೋರಿ; ಸಹನಟನ ಮೇಲಿನ ವಿಶ್ವಾಸಕ್ಕೆ ಅವರ ಮಗಳನ್ನೇ ಮದುವೆ ಆದ ಮೆಗಾಸ್ಟಾರ್‌

Chiranjeevi Surekha Love Story: ಮೆಗಾಸ್ಟಾರ್‌ ಚಿರಂಜೀವಿ, ಆಂಧ್ರದ ಪುಟ್ಟ ಹಳ್ಳಿಯೊಂದರಲ್ಲಿ ಹುಟ್ಟಿ ಈಗ ತೆಲುಗು ಚಿತ್ರರಂಗದಲ್ಲಿ ಸ್ಟಾರ್‌ ನಟನಾಗಿ ಮೆರೆಯುತ್ತಿರುವ ಪ್ರತಿಭೆ. ಲಕ್ಷಾಂತರ ಅಭಿಮಾನಿಗಳಿಂದ ಮೆಗಾಸ್ಟಾರ್‌ ಎಂದು ಕರೆಸಿಕೊಳ್ಳುತ್ತಿರುವ ನಟ.

1978 ರಲ್ಲಿ ಪ್ರಾಣಂ ಖರೀದು ಚಿತ್ರದ ಮೂಲಕ ಮೆಗಾಸ್ಟಾರ್‌ ಚಿತ್ರರಂಗಕ್ಕೆ ಬಂದರು. ಅಲ್ಲಿಂದ ಇದುವರೆಗೂ ಆತ ತಿರುಗಿ ನೋಡಿದ್ದಿಲ್ಲ. ಚಿರಂಜೀವಿ ಮುಟ್ಟಿದ್ದೆಲ್ಲವೂ ಚಿನ್ನವಾಯ್ತು. 
icon

(1 / 13)

1978 ರಲ್ಲಿ ಪ್ರಾಣಂ ಖರೀದು ಚಿತ್ರದ ಮೂಲಕ ಮೆಗಾಸ್ಟಾರ್‌ ಚಿತ್ರರಂಗಕ್ಕೆ ಬಂದರು. ಅಲ್ಲಿಂದ ಇದುವರೆಗೂ ಆತ ತಿರುಗಿ ನೋಡಿದ್ದಿಲ್ಲ. ಚಿರಂಜೀವಿ ಮುಟ್ಟಿದ್ದೆಲ್ಲವೂ ಚಿನ್ನವಾಯ್ತು. (PC: Chiranjeevi Konidela Facebook Page)

ಚಿರಂಜೀವಿ, ಚಿತ್ರರಂಗದಲ್ಲಿ ಸಕ್ಸಸ್‌ ಆಗಲು ಅವರ ತಂದೆ, ತಾಯಿ, ಸ್ನೇಹಿತರ ಜೊತೆಗೆ ಪತ್ನಿ ಸುರೇಖಾ ಪ್ರೋತ್ಸಾಹ, ಬೆಂಬಲ ಕೂಡಾ ಸಾಕಷ್ಟಿದೆ. ಚಿರಂಜೀವಿ ಹಾಗೂ ಸುರೇಖಾ ಇಬ್ಬರದ್ದೂ ಲವ್‌ ಕಮ್‌ ಅರೇಂಜ್‌ ಮ್ಯಾರೇಜ್‌. 1980ರಲ್ಲಿ ಇಬ್ಬರೂ ಮದುವೆ ಆದರು.  
icon

(2 / 13)

ಸುರೇಖಾ, ತೆಲುಗು ಹಾಸ್ಯ ನಟ ಅಲ್ಲು ರಾಮಲಿಂಗಯ್ಯ ಪುತ್ರಿ. ಮಗಳನ್ನು ಐಎಎಸ್‌ ಅಧಿಕಾರಿಗೆ ಕೊಟ್ಟು ಮದುವೆ ಮಾಡಬೇಕೆಂದು ಅಲ್ಲು ರಾಮಲಿಂಗಯ್ಯ ಅವರಿಗೆ ಬಹಳ ಆಸೆ ಇತ್ತು. ಆದರೆ ಅವರ ಆ ಮನಸ್ಸನ್ನು ಬದಲಿಸಿದ್ದು ಚಿರಂಜೀವಿ ಅವರ ವ್ಯಕ್ತಿತ್ವ. 
icon

(3 / 13)

ಚಿರಂಜೀವಿ ಹಾಗೂ ಅಲ್ಲು ರಾಮಲಿಂಗಯ್ಯ, ಮನವೂರಿ ಪಾಂಡವುಲು ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ. ಮೊದಲ ಬಾರಿ ಚಿರಂಜೀವಿ ಸುರೇಖಾ ಭೇಟಿ ಆದಾಗ, ಮೆಗಾಸ್ಟಾರ್‌ ಕೇವಲ 3 ಸಿನಿಮಾಗಳಲ್ಲಿ ಮಾತ್ರ ನಟಿಸಿದ್ದರು. 
icon

(4 / 13)

ಒಮ್ಮೆ ಚಿರಂಜೀವಿ, ಶೂಟಿಂಗ್‌ ಮುಗಿಸಿ ಮನೆಗೆ ಹೋಗುವಾಗ ಬಿಕಾಂ ಸ್ನೇಹಿತರೊಬ್ಬರು ಎದುರಾಗಿದ್ದಾರೆ. ಆತ ಅಲ್ಲು ರಾಮಲಿಂಗಯ್ಯ ಅವರ ಸಂಬಂಧಿಯಾಗಿದ್ದು ಕೆಲಸದ ನಿಮಿತ್ತ ಅವರ ಮನೆಗೆ ಹೋಗುವವರಿದ್ದರು. ಅಲ್ಲು ರಾಮಲಿಂಗಯ್ಯ ಮನೆ ಬಳಿ ಇಳಿದ ಆತ, ಚಿರಂಜೀವಿಯನ್ನೂ ಒಳಗೆ ಬರುವಂತೆ ಆಹ್ವಾನಿಸಿದ್ದಾರೆ. ನಂತರವಷ್ಟೇ, ಅದು ತಮ್ಮ ಸಹನಟನ ಮನೆ ಎಂದು ಚಿರಂಜೀವಿಗೆ ತಿಳಿದದ್ದು. 
icon

(5 / 13)

ಆ ವೇಳೆ ಅಲ್ಲು ರಾಮಲಿಂಗಯ್ಯ ಮನೆಯಲ್ಲಿ ಇರಲಿಲ್ಲ. ಸ್ವತ: ಸುರೇಖಾ ಕಾಫಿ ಮಾಡಿ, ಅದನ್ನು ಮನೆಗೆ ಬಂದ ಅತಿಥಿಗಳಿಗೆ ಕೊಡುವಂತೆ ಕೆಲಸದವರಿಗೆ ಹೇಳಿದ್ದಾರೆ. ಆದರೆ ಆ ಸಮಯದಲ್ಲಿ ಇಬ್ಬರೂ ಒಬ್ಬರನೊಬ್ಬರು ನೋಡಿರಲಿಲ್ಲ. ನಂತರ ಕಾರ್ಯಕ್ರಮವೊಂದರಲ್ಲಿ ಇಬ್ಬರಿಗೂ ಭೇಟಿ ಆಗುವ ಅವಕಾಶ ದೊರೆತಿದೆ.  
icon

(6 / 13)

ಅಂದು ನಮ್ಮ ಮನೆಗೆ ಬಂದಿದ್ದು ಇದೇ ವ್ಯಕ್ತಿ ಎಂದು ಸುರೇಖಾ ಅವರಿಗೆ ತಿಳಿದಿದೆ. ಚಿರಂಜೀವಿ ಅವರ ಕಣ್ಣುಗಳನ್ನು ನೋಡುತ್ತಲೇ ಸುರೇಖಾಗೆ ಅವರ ಮೇಲೆ ಲವ್‌ ಆಗಿದೆ. ಚಿತ್ರರಂಗದ ಸ್ನೇಹಿತರು ಅಲ್ಲು ರಾಮಲಿಂಗಯ್ಯ ಬಳಿ, ಮಗಳಿಗೆ ಆತನಿಗೆ ಕೊಟ್ಟು ಮದುವೆ ಮಾಡುವಂತೆ ಕೇಳಿದ್ದಾರೆ. 
icon

(7 / 13)

 ಐಎಎಸ್‌ ಅಳಿಯನ ಕನಸು ಕಂಡಿದ್ದ ಅಲ್ಲು ರಾಮಲಿಂಗಯ್ಯ, ಚಿರಂಜೀವಿ ವ್ಯಕ್ತಿತ್ವದ ಬಗ್ಗೆ ವಿಚಾರಿಸುವಂತೆ ಪರಿಚಯದವರಿಗೆ ಹೇಳಿದ್ದಾರೆ. ಅಲ್ಲು ಅರವಿಂದ್‌ (ಸುರೇಖಾ ಅಣ್ಣ, ಅಲ್ಲು ಅರ್ಜುನ್‌ ತಂದೆ) ಚಿತ್ರರಂಗ ಹಾಗೂ ಚಿರಂಜೀವಿಗೆ ಆತ್ಮೀಯರಾಗಿದ್ದವರ ಬಳಿ ವಿಚಾರಿಸಿ ಕೊನೆಗೆ, ಆತನಿಗೆ ಸುರೇಖಾ ಕೊಟ್ಟು ಮದುವೆ ಮಾಡಬಹುದೆಂದು ತಂದೆ ಬಳಿ ಹೇಳಿದ್ದಾರೆ.  
icon

(8 / 13)

ಆದರೆ ಚಿರಂಜೀವಿಗೆ ಮಾತ್ರ ಆ ವಯಸ್ಸಿಗೆ ಮದುವೆ ಆಗಲು ಇಷ್ಟವಿರಲಿಲ್ಲವಂತೆ. ಚಿತ್ರರಂಗದಲ್ಲಿ ಸಾಧಿಸಬೇಕಾಗಿದ್ದು ಸಾಕಷ್ಟಿದೆ, ಈಗಲೇ ಮದುವೆ ಬೇಡ ಎಂದಿದ್ದಾರೆ. ಆದರೆ ನಂತರ ಸುರೇಖಾ ತಮ್ಮ ಸಹನಟ ಅಲ್ಲು ರಾಮಲಿಂಗಯ್ಯ ಪುತ್ರಿ ಎಂದು ತಿಳಿದು ಮದುವೆಗೆ ಒಪ್ಪಿದ್ದಾರೆ. 
icon

(9 / 13)

 20, ಫೆಬ್ರವರಿ 1981 ರಂದು ಚಿರಂಜೀವಿ ಹಾಗೂ ಸುರೇಖಾ ಮದುವೆ ಅದ್ದೂರಿಯಾಗಿ ಜರುಗಿದೆ. ಚಿತ್ರರಂಗದ ಅನೇಕ ಗಣ್ಯರು ಈ ಮದುವೆಗೆ ಸಾಕ್ಷಿಯಾಗಿದ್ದರು.  ಚಿರಂಜೀವಿ ಹಾಗೂ ಸುರೇಖಾ ದಾಂಪತ್ಯಕ್ಕೆ 42 ವರ್ಷಗಳು ಕಳೆದಿವೆ. ಅಂದಿನಿಂದ ಇದುವರೆಗೂ ಈ ಜೋಡಿ ಅದೇ ಪ್ರೀತಿ, ವಿಶ್ವಾಸದಿಂದ ಇದ್ದಾರೆ. 
icon

(10 / 13)

ತಂದೆ ಚಿರಂಜೀವಿ ತಾಯಿ ಸುರೇಖಾ ಜೊತೆ ಪುಟ್ಟ ರಾಮ್‌ ಚರಣ್‌
icon

(11 / 13)

ತಂದೆ ಚಿರಂಜೀವಿ ತಾಯಿ ಸುರೇಖಾ ಜೊತೆ ಪುಟ್ಟ ರಾಮ್‌ ಚರಣ್‌

ತಾಯಿ ಅಂಜನಾ ದೇವಿ ಪತ್ನಿ ಸುರೇಖಾ ಜೊತೆ ಮೆಗಾಸ್ಟಾರ್‌ ಚಿರಂಜೀವಿ. 
icon

(12 / 13)

ತಾಯಿ ಅಂಜನಾ ದೇವಿ ಪತ್ನಿ ಸುರೇಖಾ ಜೊತೆ ಮೆಗಾಸ್ಟಾರ್‌ ಚಿರಂಜೀವಿ. 

ಚಿರಂಜೀವಿ-ಸುರೇಖಾ ಜೀವನದ ಮೂರು ಮುತ್ತುಗಳು. ರಾಮ್‌ ಚರಣ್‌, ಶ್ರೀಜಾ ಕೊನಿಡೇಲಾ, ಸುಷ್ಮಿತಾ ಕೊನಿಡೇಲಾ
icon

(13 / 13)

ಇತರ ಗ್ಯಾಲರಿಗಳು