Naga Chaitanya: ನನ್ನ ಹೆಸರು ಬೇರೊಬ್ಬ ನಟಿ ಜೊತೆ ಕೇಳಿ ಬಂದಾಗ ಡಿವೋರ್ಸ್ ವಿಚಾರಕ್ಕಿಂತಲೂ ನೋವಾಯ್ತು; ಟಾಲಿವುಡ್ ನಟ ನಾಗಚೈತನ್ಯ
ಏಳು ವರ್ಷಗಳ ಕಾಲ ಪ್ರೀತಿಸಿ ಮದುವೆ ಆದ ನಾಗಚೈತನ್ಯ ಹಾಗೂ ಸಮಂತಾ 4 ವರ್ಷಗಳಲ್ಲೇ ದೂರಾಗಿದ್ದು ತಿಳಿದೇ ಇದೆ.
(1 / 9)
ಇಬ್ಬರೂ ಬೇರೆ ಆಗಿದ್ದು ಏಕೆ ಎಂದು ನಿಖರ ಕಾರಣ ಹೇಳದಿದ್ದರೂ ಕೆಲವೊಂದು ಸಂದರ್ಶನಗಳಲ್ಲಿ ಇಬ್ಬರೂ ಪರೋಕ್ಷವಾಗಿ ವಿಚ್ಛೇದನದ ಬಗ್ಗೆ ಮಾತನಾಡಿದ್ದಾರೆ.
(2 / 9)
ನಾಗಚೈತನ್ಯ ಸದ್ಯಕ್ಕೆ ಕಸ್ಟಡಿ ಚಿತ್ರದ ಪ್ರಚಾರದಲ್ಲಿ ಬ್ಯುಸಿ ಇದ್ದಾರೆ. ಈ ಸಮಯದಲ್ಲಿ ಅವರು ಯೂಟ್ಯೂಬ್ ಒಂದಕ್ಕೆ ಸಂದರ್ಶನ ನೀಡಿದ್ದು ಆಗಲೂ ತಮ್ಮ ಡಿವೋರ್ಸ್ ಬಗ್ಗೆ ಮಾತನಾಡಿದ್ದಾರೆ.
(3 / 9)
ಸಮಂತಾ ಹಾಗೂ ನಾಗಚೈತನ್ಯ ಇಬ್ಬರಿಗೂ ಏ ಮಾಯಮ್ ಚೇಸಾವೆ ಸಿನಿಮಾ ಮೂಲಕ ಪರಿಚಯವಾಯ್ತು. ಆ ಪರಿಚಯ ಪ್ರೀತಿಗೆ ತಿರುಗಿ 7 ವರ್ಷಗಳ ಕಾಲ ಪ್ರೀತಿಯಲ್ಲಿದ್ದರು.
(4 / 9)
2017 ರಲ್ಲಿ ನಾಗಚೈತನ್ಯ, ಹಿಂದೂ ಹಾಗೂ ಕ್ರೈಸ್ತ ಸಂಪ್ರದಾಯದಂತೆ ಸಮಂತಾ ಕೈ ಹಿಡಿದರು. ಇದ್ದರೆ ಈ ಜೋಡಿಯಂತೆ ಇರಬೇಕು ಎಂದು ಎಲ್ಲರೂ ಅಂದುಕೊಳ್ಳುತ್ತಿರುವಂತೆ 4 ವರ್ಷಗಳಿಗೆ ಈ ಜೋಡಿ ತಮ್ಮ ಸಂಬಂಧವನ್ನು ಕೊನೆ ಮಾಡಿತು.
(5 / 9)
2021 ಅಕ್ಟೋಬರ್ನಲ್ಲಿ ಈ ಜೋಡಿ ವಿಚ್ಛೇದನ ಘೋಷಿಸಿದರು. ಈ ಸುದ್ದಿ ತಿಳಿಯುತ್ತಿದ್ದಂತೆ ಇಬ್ಬರ ಅಭಿಮಾನಿಗಳಿಗೂ ಶಾಕ್ ಆಗಿದ್ದು ಸುಳ್ಳಲ್ಲ.
(6 / 9)
ಡಿವೋರ್ಸ್ ನಂತರ ನಾಗಚೈತನ್ಯ ಅಭಿಮಾನಿಗಳು ಸಮಂತಾ ಕಡೆ ಬೆರಳು ತೋರಿಸಿದರು. ಆದರೆ ಸಮಂತಾ ಏನೂ ಮಾತನಾಡದೆ ಮೌನದಿಂದ ಇದ್ದರು.
(7 / 9)
ಈ ನಡುವೆ ನಾಗಚೈತನ್ಯ ಹೆಸರು ನಟಿ ಶೋಭಿತಾ ಧುಲಿಪಾಲ ಜೊತೆ ಕೇಳಿಬಂತು. ನಾಗ ಚೈತನ್ಯ ಹಾಗೂ ಶೋಭಿತಾ ಇಬ್ಬರೂ ಡೇಟಿಂಗ್ನಲ್ಲಿದ್ದು ಮದುವೆಯಾಗುವ ಪ್ಲ್ಯಾನ್ ಮಾಡಿದ್ದಾರೆ ಎಂಬು ಸುದ್ದಿ ಇಂದಿಗೂ ಹರಿದಾಡುತ್ತಿದೆ.
(8 / 9)
ಕಸ್ಟಡಿ ಚಿತ್ರದ ಸಂದರ್ಶನದ ವೇಳೆ ಈ ರೂಮರ್ಗಳಿಗೆ ಪ್ರತಿಕ್ರಿಯಿಸಿರುವ ನಾಗಚೈತನ್ಯ, , ಬೇರೆ ನಟಿಯೊಂದಿಗೆ ನನ್ನ ಹೆಸರು ಕೇಳಿಬಂದಾಗ ಡಿವೋರ್ಸ್ಗಿಂತಲೂ ಬಹಳ ನೋವಾಯ್ತು ಎಂದು ಪ್ರತಿಕ್ರಿಯಿಸಿದ್ದಾರೆ.
ಇತರ ಗ್ಯಾಲರಿಗಳು