Darling Movie: ಶೃಂಗೇರಿಯ ನಭಾ ನಟೇಶ್ ನಟನೆಯ ಡಾರ್ಲಿಂಗ್ ಸಿನಿಮಾ ನಾಳೆ ಬಿಡುಗಡೆ; ಐ ಲವ್ ಯು ರಾಘವ್ ಎಂದವಳು ಹೀಗೆ ಮಾಡೋದ?
- Nabha Natesh Darling Movie: ಕನ್ನಡದಲ್ಲಿ ವಜ್ರಕಾಯ, ಲೀ, ಸಾಹೇಬ ಸಿನಿಮಾಗಳಲ್ಲಿ ನಟಿಸಿ ಟಾಲಿವುಡ್ ಪ್ರವೇಶಿಸಿದ್ದ ಪ್ರತಿಭಾನ್ವಿತ ನಟಿ ನಭಾ ನಟೇಶ್ಗೆ ಇದು ಪರೀಕ್ಷೆಯ ಕಾಲ. ಸುಮಾರು ಎರಡೂವರೆ ವರ್ಷಗಳ ಗ್ಯಾಪ್ ಬಳಿಕ ಡಾರ್ಲಿಂಗ್ ಸಿನಿಮಾ ರಿಲೀಸ್ ಆಗುತ್ತಿದೆ. ಡಾರ್ಲಿಂಗ್ ಸಿನಿಮಾ ನಾಳೆ ಅಂದರೆ ಜುಲೈ 19ರಂದು ರಿಲೀಸ್ ಆಗುತ್ತಿದೆ.
- Nabha Natesh Darling Movie: ಕನ್ನಡದಲ್ಲಿ ವಜ್ರಕಾಯ, ಲೀ, ಸಾಹೇಬ ಸಿನಿಮಾಗಳಲ್ಲಿ ನಟಿಸಿ ಟಾಲಿವುಡ್ ಪ್ರವೇಶಿಸಿದ್ದ ಪ್ರತಿಭಾನ್ವಿತ ನಟಿ ನಭಾ ನಟೇಶ್ಗೆ ಇದು ಪರೀಕ್ಷೆಯ ಕಾಲ. ಸುಮಾರು ಎರಡೂವರೆ ವರ್ಷಗಳ ಗ್ಯಾಪ್ ಬಳಿಕ ಡಾರ್ಲಿಂಗ್ ಸಿನಿಮಾ ರಿಲೀಸ್ ಆಗುತ್ತಿದೆ. ಡಾರ್ಲಿಂಗ್ ಸಿನಿಮಾ ನಾಳೆ ಅಂದರೆ ಜುಲೈ 19ರಂದು ರಿಲೀಸ್ ಆಗುತ್ತಿದೆ.
(2 / 9)
ಪ್ರಿಯಾದರ್ಶಿ ನಾಯಕ ನಟನಾಗಿ ನಟಿಸಿರುವ ಡಾರ್ಲಿಂಗ್ ಸಿನಿಮಾದಲ್ಲಿ ನಭಾ ನಟೇಶ್ ವೈವಿಧ್ಯಮಯ ಪಾತ್ರದಲ್ಲಿ ನಟಿಸಿದ್ದಾರೆ. ಒಂದು ಬಾರಿ ಲವರ್ ಗರ್ಲ್ ರೀತಿ ಕಾಣಿಸಿಕೊಂಡರೆ, ಇನ್ನೊಂದು ಬಾರಿ ಲೇಡಿ ರಾಂಬೋ ರೀತಿ ಫೈಟಿಂಗ್ ಮಾಡ್ತಾರೆ. ನಾಳೆ ಬಿಡುಗಡೆಯಾಗುವ ಡಾರ್ಲಿಂಗ್ ಸಿನಿಮಾ ನಿರೀಕ್ಷೆ ಹೆಚ್ಚಿಸಿದೆ.
(3 / 9)
ಡಾರ್ಲಿಂಗ್ ಸಿನಿಮಾದಲ್ಲಿ ಪ್ರಿಯಾದರ್ಶಿ ಪುಳಿಕೊಂಡ, ನಭಾ ನಟೇಶ್, ಅನನ್ಯ ನಾಗಲ್ಲ, ಬ್ರಹ್ಮಾನಂದಂ, ಮುರುಳಿಧರ್ ಗೌಡ ಮುಂತಾದವರು ನಟಿಸಿದ್ದಾರೆ. ಟೂರಿಸ್ಟ್ ಆಫೀಸ್ನಲ್ಲಿ ಕೆಲಸ ಮಾಡುತ್ತಿದ್ದ ರಾಘವ್ ಪ್ಯಾರಿಸ್ನಲ್ಲಿ ಹನಿಮೂನ್ ಮಾಡಬೇಕೆಂದುಕೊಂಡು ಮದುವೆಯಾಗುವ ಮುನ್ನವೇ ಹಣ ಉಳಿತಾಯ ಮಾಡಿರುತ್ತಾನೆ. ಆಕಸ್ಮಿಕವಾಗಿ ಆತನಿಗೆ ಆನಂದಿ ಸಿಗುತ್ತಾಳೆ. ಬಳಿಕ ಏನು ಸವಾಲುಗಳು ಉಂಟಾಗುತ್ತವೆ? ಅದೇ ಈ ಡಾರ್ಲಿಂಗ್ ಸಿನಿಮಾದ ಕಥೆ.
(4 / 9)
ಐ ಲವ್ ಯು ರಾಘವ್ ಎಂದು ರಾಘವ್ನ ಮದುವೆಯಾದ ಆನಂದಿ ಬಳಿಕ ದೆವ್ವ ಮೆಟ್ಟಿಕೊಂಡವಳ ರೀತಿ ಫೈಟ್ ಮಾಡುತ್ತಾಳೆ. ಅಲ್ಲಿಂದ ರಾಘವ್ ಬದುಕು ಬೇರೆ ರೀತಿಯಾಗುತ್ತದೆ. ಕಾಮಿಡಿ ಸಿನಿಮಾವಾದ ಈ ಡಾರ್ಲಿಂಗ್ ಮೂಲಕ ನಭಾ ನಟೇಶ್ ಮತ್ತೆ ಚಿತ್ರರಂಗಕ್ಕೆ ಹಿಂತುರುಗಿದ್ದಾರೆ.
(5 / 9)
ನಭಾ ನಟೇಶ್ ಸಿನಿಮಾ ರಿಲೀಸ್ ಆಗದೆ ಕೆಲವು ವರ್ಷಗಳೇ ಆಗಿವೆ. 2021ರಲ್ಲಿ ಮ್ಯಾಸ್ಟ್ರೋ ಎಂಬ ಒಟಿಟಿ ಸಿನಿಮಾದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು.
(6 / 9)
ಒಂದರ ಮೇಲೆ ಒಂದರಂತೆ ಸಿನಿಮಾ ಆಫರ್ಗಳನ್ನು ಪಡೆಯುತ್ತಿದ್ದ, ಉತ್ತುಂಗ ಸ್ಥಿತಿಯಲ್ಲಿದ್ದ ನಭಾ ನಟೇಶ್ಗೆ ಒಂದು ಬ್ರೇಕ್ ಅಥವಾ ಹಿನ್ನೆಡೆ ನೀಡಿದ್ದು ಒಂದು ಅಪಘಾತ. 2021ರ ಸೆಪ್ಟೆಂಬರ್ ತಿಂಗಳಲ್ಲಿ ರೆಸ್ಟ್ ರೂಂನಲ್ಲಿ ಬಿದ್ದು ಎಡ ತೋಳಿಗೆ ತೀವ್ರ ಗಾಯವಾಗಿತ್ತು.
(7 / 9)
ತಕ್ಷಣ ಆಸ್ಪತ್ರೆಗೆ ಹೋದಾಗ ಈಕೆಯ ತೋಳಲ್ಲಿ ಹಲವು ಸಣ್ಣ ಸಣ್ಣ ಮುರಿತಗಳು ಇರುವುದು ಪತ್ತೆಯಾಗಿತ್ತು. ಡಾಕ್ಟರ್ ಸಲಹೆ ಮೇರೆಗೆ ಸರ್ಜರಿ ಮಾಡಿಕೊಂಡಿದ್ದರು. ಎಲ್ಲ ಸರಿಯಾಯ್ತು ಎಂದುಕೊಂಡು ಪ್ರತಿದಿನದ ದಿನಚರಿಯಂತೆ ತೂಕ ಎತ್ತಲು ಹೋದಾಗ ಮತ್ತೆ ನೋವು ಕಾಣಿಸಿಕೊಂಡಿತ್ತು. ಡಾಕ್ಟರ್ಗೆ ತೋರಿಸಿದಾಗ ಮತ್ತೆ ಸರ್ಜರಿ ಮಾಡಬೇಕಂದ್ರು.
(8 / 9)
ಮೂರು ತಿಂಗಳ ಬಳಿಕ ಎರಡನೇ ಸರ್ಜರಿ ಮಾಡಲಾಯಿತು. ಆರು ತಿಂಗಳು ಬೆಡ್ರೆಸ್ಟ್ನಲ್ಲಿಯೇ ಇರಬೇಕಾಯಿತು. ದೇಹ ದುರ್ಬಲವಾಗಿತ್ತು. ಹೆಚ್ಚು ಹೊತ್ತು ನಿಲ್ಲಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ.
ಇತರ ಗ್ಯಾಲರಿಗಳು