ಕನ್ನಡ ಸುದ್ದಿ  /  Photo Gallery  /  Tollywood News Ram Charan Teja And Janhvi Kapoor Starrer Rc16 Movie Launched With Grand Pooja Muhurtha Photos Here Mnk

RC 16: ಅದ್ಧೂರಿಯಾಗಿ ನೆರವೇರಿದ ರಾಮ್‌ ಚರಣ್‌- ಜಾನ್ವಿ ಕಪೂರ್‌ ಹೊಸ ಸಿನಿಮಾ ಮುಹೂರ್ತ; ಮಗನ ಚಿತ್ರಕ್ಕೆ ಚಿರು ಕ್ಲಾಪ್‌ PHOTOS

  • RC16 Launch: ಟಾಲಿವುಡ್‌ ನಟ ರಾಮ್ ಚರಣ್ ಮತ್ತು ನಿರ್ದೇಶಕ ಬುಚ್ಚಿ ಬಾಬು ಜೋಡಿಯ RC16 ಚಿತ್ರದ ಮುಹೂರ್ತ, ಇಂದು (ಮಾ. 20) ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ನೆರವೇರಿದೆ. ಬಾಲಿವುಡ್‌ ನಟಿ ಜಾನ್ವಿ ಕಪೂರ್‌ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದು, ಚಿತ್ರದ ಮೊದಲ ದೃಶ್ಯಕ್ಕೆ ಚಿರಂಜೀವಿ ಕ್ಲಾಪ್‌ ಮಾಡಿದ್ದಾರೆ. ಇಲ್ಲಿದೆ ಆ ಚಿತ್ರದ ಮುಹೂರ್ತದ ಫೋಟೋಗಳ ಝಲಕ್‌.

ಮೆಗಾ ಪವರ್ ಸ್ಟಾರ್ ರಾಮ್ ಚರಣ್ ತೇಜ್ ಅವರು ಉಪ್ಪೇನಾ ಸಿನಿಮಾ ಖ್ಯಾತಿಯ ಬುಚ್ಚಿ ಬಾಬು ನಿರ್ದೇಶನದ  ಸ್ಪೋರ್ಟ್ಸ್ ಡ್ರಾಮಾ ಚಿತ್ರ (ಆರ್ ಸಿ 16) ಚಿತ್ರದ ಮೂಲಕ ಒಂದಾಗಿದ್ದಾರೆ. ಚಿತ್ರದ ಪೂಜಾ ಸಮಾರಂಭ  ಇಂದು (ಮಾ. 20) ಹೈದರಾಬಾದ್ ನಲ್ಲಿ ಅದ್ದೂರಿಯಾಗಿ ನಡೆಯಿತು. 
icon

(1 / 6)

ಹಿರಿಯ ನಟ ಮತ್ತು ರಾಮ್ ಚರಣ್ ಅವರ ತಂದೆ ಮೆಗಾಸ್ಟಾರ್ ಚಿರಂಜೀವಿ, 'ಆರ್ ಸಿ 16' ಚಿತ್ರದ ಮುಹೂರ್ತ ಶಾಟ್‌ಗೆ ಕ್ಲಾಪ್‌ ಮಾಡಿದರು. ನಾಯಕಿ ಜಾನ್ವಿ ಕಪೂರ್ ಮೊದಲ ಶಾಟ್‌ಗೆ ರಾಮ್ ಚರಣ್ ಕ್ಲಾಪ್‌ ಮಾಡಿದ್ದು ವಿಶೇಷವಾಗಿತ್ತು. . 
icon

(2 / 6)

ಆಸ್ಕರ್ ಪ್ರಶಸ್ತಿ ವಿಜೇತ ಮತ್ತು ಸ್ಟಾರ್ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಆರ್ ಸಿ 16 ಚಿತ್ರಕ್ಕೆ ಸಂಗೀತ ಸಂಯೋಜಿಸಲಿದ್ದಾರೆ. ಮುಹೂರ್ತ ಸಮಾರಂಭಕ್ಕೂ ರೆಹಮಾನ್‌ ಆಗಮಿಸಿದ್ದರು. 
icon

(3 / 6)

ಬಾಲಿವುಡ್ ನಟಿ ಜಾನ್ವಿ ಕಪೂರ್, ರಾಮ್ ಚರಣ್‌ಗೆ  ಜೋಡಿಯಾಗಿದ್ದಾರೆ. ಈ ಇಬ್ಬರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. 
icon

(4 / 6)

ಸ್ಟಾರ್ ನಿರ್ದೇಶಕರಾದ ಶಂಕರ್ ಮತ್ತು ಸುಕುಮಾರ್, ನಿರ್ಮಾಪಕರಾದ ಅಲ್ಲು ಅರವಿಂದ್ ಮತ್ತು ಬೋನಿ ಕಪೂರ್ ಪೂಜಾ ಸಮಾರಂಭದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದರು. 
icon

(5 / 6)

ಆರ್ ಸಿ 16 ಚಿತ್ರವನ್ನು ವೃದ್ಧಿ ಸಿನೆಮಾಸ್ ಬ್ಯಾನರ್ ಅಡಿಯಲ್ಲಿ ಸತೀಶ್ ಕಿಲಾರು ನಿರ್ಮಿಸುತ್ತಿದ್ದಾರೆ. ಮೈತ್ರಿ ಮೂವೀಸ್ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ನವೀನ್ ಮತ್ತು ರವಿಶಂಕರ್ ಇದನ್ನು ಪ್ರಸ್ತುತಪಡಿಸುತ್ತಿದ್ದಾರೆ. ಶಂಕರ್ ನಿರ್ದೇಶನದ ರಾಮ್ ಚರಣ್ ಅವರ ಗೇಮ್ ಚೇಂಜರ್ ಪೂರ್ಣಗೊಂಡ ನಂತರ ಆರ್ ಸಿ 16  ಚಿತ್ರೀಕರಣ ಪ್ರಾರಂಭವಾಗಲಿದೆ. 
icon

(6 / 6)

ಇತರ ಗ್ಯಾಲರಿಗಳು