ಲೋಕಸಭಾ ಚುನಾವಣೆ; ತುಮಕೂರು ಕ್ಷೇತ್ರದಲ್ಲಿ ಸಿದ್ಧಗಂಗಾ ಸ್ವಾಮೀಜಿ, ಗೃಹ ಸಚಿವ ಜಿ ಪರಮೇಶ್ವರ್ ಮತ್ತು ಇತರರಿಂದ ಮತದಾನ - ಫೋಟೋಸ್
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಲೋಕಸಭಾ ಚುನಾವಣೆ; ತುಮಕೂರು ಕ್ಷೇತ್ರದಲ್ಲಿ ಸಿದ್ಧಗಂಗಾ ಸ್ವಾಮೀಜಿ, ಗೃಹ ಸಚಿವ ಜಿ ಪರಮೇಶ್ವರ್ ಮತ್ತು ಇತರರಿಂದ ಮತದಾನ - ಫೋಟೋಸ್

ಲೋಕಸಭಾ ಚುನಾವಣೆ; ತುಮಕೂರು ಕ್ಷೇತ್ರದಲ್ಲಿ ಸಿದ್ಧಗಂಗಾ ಸ್ವಾಮೀಜಿ, ಗೃಹ ಸಚಿವ ಜಿ ಪರಮೇಶ್ವರ್ ಮತ್ತು ಇತರರಿಂದ ಮತದಾನ - ಫೋಟೋಸ್

ಲೋಕಸಭಾ ಚುನಾವಣೆ ಭಾಗವಾಗಿ ತುಮಕೂರು ಲೋಕಸಭೆ ಕ್ಷೇತ್ರದಲ್ಲಿ ಬೆಳಗ್ಗೆ 7 ಗಂಟೆಗೆ ಮತದಾನ ಶುರುವಾಗಿದ್ದು, ಇದುವರೆಗೆ ಹಲವರು ಮತದಾನ ಮಾಡಿದ್ದಾರೆ. ಇವರಲ್ಲಿ ಗಣ್ಯರೂ ಇದ್ದು, ಈ ಪೈಕಿ ಸಿದ್ಧಗಂಗಾ ಸ್ವಾಮೀಜಿ, ಗೃಹ ಸಚಿವ ಜಿ ಪರಮೇಶ್ವರ್ ಮತ್ತು ಇತರ ಫೋಟೋಸ್ ಇಲ್ಲಿವೆ. (ವರದಿ- ಈಶ್ವರ್, ತುಮಕೂರು)

ತುಮಕೂರಿನ ಸಿದ್ದಗಂಗಾ ಮಠದಲ್ಲಿ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ತಮ್ಮ ಮತದಾನದ ಹಕ್ಕು ಚಾಲಾಯಿಸಿದ್ದಾರೆ, ಇಲ್ಲಿನ ಶಾಲೆಯೊಂದರಲ್ಲಿ ತೆರೆದಿದ್ದ ಮತಗಟ್ಟೆಗೆ ತೆರಳಿ ಮತದಾನ ಮಾಡಿದ ಅವರು, ಎಲ್ಲರೂ ತಪ್ಪದೆ ತಮ್ಮ ಹಕ್ಕು ಚಲಾಯಿಸುವುದು ಪ್ರತಿಯೊಬ್ಬರ ಜವಾಬ್ದರಿ, ತಪ್ಪದೆ ಎಲ್ಲರು ಮತದಾನ ಮಾಡಿ ಎಂದು ಕರೆ ನೀಡಿದರು.
icon

(1 / 5)

ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಪತ್ನಿ ಸಮೇತರಾಗಿ ಬಂದು ಮತದಾನ ಮಾಡಿದ್ದಾರೆ., ತುಮಕೂರು ಹೊರ ವಲಯದ ಗೊಲ್ಲಹಳ್ಳಿಯ ತಮ್ಮ ಮನೆ ಎದುರಿನ ಶಾಲೆಯ ಮತಗಟ್ಟೆಗೆ ತೆರಳಿ ತಮ್ಮ ಹಕ್ಕು ಚಲಾಯಿಸಿದ್ದಾರೆ, ಪ್ರತಿಯೊಬ್ಬರು ಮತದಾನ ಮಾಡಬೇಕು. ಅದು ಎಲ್ಲರ ಕರ್ತವ್ಯ ಎಂದು ಅವರು ಹೇಳಿದರು. 
icon

(2 / 5)

ಸಂಸದ ಜಿ.ಎಸ್.ಬಸವರಾಜು ಕೂಡ ತಮ್ಮ ಹಕ್ಕು ಚಲಾಯಿಸಿದ್ದಾರೆ, ತುಮಕೂರು ನಗರದ ಗಾಂಧಿನಗರದಲ್ಲಿರುವ ಶಾಲೆಯ ಮತಗಟ್ಟೆಗೆ ಪತ್ನಿ ಸಮೇತ ತೆರಳಿ ಮತದಾನ ಮಾಡಿದರು.
icon

(3 / 5)

ಚಿಕ್ಕಪೇಟೆಯಲ್ಲಿರು ಹಿರೇಮಠಾಧ್ಯಕ್ಷ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಸಹ ತಮ್ಮ ಹಕ್ಕು ಚಲಾಯಿಸಿದರು, ಚಿಕ್ಕಪೇಟೆಯ ಶಾಲೆಯ  ಮತಗಟ್ಟೆಗೆ ತೆರಳಿ ಮತದಾನ ಮಾಡಿದರು, ಪ್ರಜಾ ಪ್ರಭುತ್ವದ ದೊಡ್ಡ ಹಬ್ಬದಲ್ಲಿ ಭಾಗವಹಿಸುವುದೇ ಖುಷಿ, ಎಲ್ಲರೂ ಮಿಸ್ ಮಾಡದೆ ಮತದಾನ ಮಾಡಿ ಎಂದರು.
icon

(4 / 5)

ಅನೇಕ ಮತಗಟ್ಟೆಗಳಲ್ಲಿ ಯುವಜನರೂ ಕಂಡುಬಂದ್ದಿದ್ದು, ಈ ಪೈಕಿ ಯುವತಿಯೊಬ್ಬರು ಮತದಾನ ಮಾಡಿದ ಬಳಿಕ ಸಂಭ್ರಮ ಹಂಚಿಕೊಂಡದ್ದು ಹೀಗೆ. 
icon

(5 / 5)

ಇತರ ಗ್ಯಾಲರಿಗಳು