ಕಾಂಗ್ರೆಸ್ ಬಿಡಲಿಕ್ಕೆ ಯಾವುದೇ ಕಾರಣಗಳಿಲ್ಲ, ಬಿಜೆಪಿ ನನ್ನ ಮನೆ, ವಾಪಸ್ ಬಂದಿದ್ದೇನೆ: ಜಗದೀಶ್ ಶೆಟ್ಟರ್
- ಭಾರತೀಯ ಜನತಾ ಪಾರ್ಟಿ 34 ವರ್ಷಗಳಿಂದ ನಾನು ಸಂಘಟನೆ ಮಾಡಿದಂತಹ ಮನೆ, ಹಾಗಾಗಿ ಮತ್ತೆ ನಮ್ಮ ಮನೆಗೆ ವಾಪಸ್ಸಾಗಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ. (ವರದಿ: ಈಶ್ವರ್ ಎಂ)
- ಭಾರತೀಯ ಜನತಾ ಪಾರ್ಟಿ 34 ವರ್ಷಗಳಿಂದ ನಾನು ಸಂಘಟನೆ ಮಾಡಿದಂತಹ ಮನೆ, ಹಾಗಾಗಿ ಮತ್ತೆ ನಮ್ಮ ಮನೆಗೆ ವಾಪಸ್ಸಾಗಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ. (ವರದಿ: ಈಶ್ವರ್ ಎಂ)
(1 / 6)
ತುಮಕೂರು ನಗರದ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದು, ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದರು.
(2 / 6)
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶೆಟ್ಟರ್, ಸದ್ಯ ನಾನು ನಮ್ಮ ಮನೆಗೆ ವಾಪಸ್ ಬಂದಿದ್ದೇನೆ. ಭಾರತೀಯ ಜನತಾ ಪಾರ್ಟಿ 34 ವರ್ಷಗಳಿಂದ ನಾನು ಸಂಘಟನೆ ಮಾಡಿದಂತಹ ಮನೆ, ಹಾಗಾಗಿ ಮತ್ತೆ ನಮ್ಮ ಮನೆಗೆ ವಾಪಸ್ಸಾಗಿದ್ದೇನೆ. ರಾಜ್ಯ ಬಿಜೆಪಿ ಪಕ್ಷದ ಎಲ್ಲಾ ಪ್ರಮುಖ ನಾಯಕರು ನನ್ನ ಮರು ಸೇರ್ಪಡೆಗೆ ಬಹಳ ಆತ್ಮೀಯತೆ ತೋರಿಸಿದ್ದಾರೆ ಎಂದರು.
(3 / 6)
ಕಳೆದ ಐದಾರು ತಿಂಗಳಿನಿಂದ ಬಿಜೆಪಿ ಪಕ್ಷಕ್ಕೆ ಮರಳುವಂತೆ ಪಕ್ಷದ ಕಾರ್ಯಕರ್ತರು, ಮುಖಂಡರು, ರಾಜ್ಯ ನಾಯಕರು ಹಾಗೂ ರಾಷ್ಟ್ರ ನಾಯಕರ ಒತ್ತಡ ಇತ್ತು. ಕಾರ್ಯಕರ್ತರ ಅಭಿಲಾಷೆ, ಭಾವನೆಗಳಿಗೆ ಸ್ಪಂದಿಸಿ ಮತ್ತೆ ಪಕ್ಷಕ್ಕೆ ಮರು ಸೇರ್ಪಡೆಯಾಗಿದ್ದೇನೆ ಎಂದು ಹೇಳಿದರು.
(4 / 6)
ನಾನು ಪಕ್ಷದ ವರಿಷ್ಠರೊಂದಿಗೆ ಸಮಾಲೋಚನೆ ನಡೆಸಿ ಮರು ಸೇರ್ಪಡೆಯಾಗಿದ್ದೇನೆ. ಪಕ್ಷದ ಸೇರ್ಪಡೆ ಸಂದರ್ಭದಲ್ಲಿ ಯಾವುದೇ ರೀತಿಯ ಬೇಡಿಕೆ, ಷರತ್ತನ್ನು ವರಿಷ್ಠರ ಮುಂದಿಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು. ನರೇಂದ್ರ ಮೋದಿಯವರು 10 ವರ್ಷ ಪ್ರಧಾನಿಯಾಗಿ ದೇಶವನ್ನು ಸುಭದ್ರಗೊಳಿಸಿದ್ದಾರೆ, ಮತ್ತೆ ಅವರೇ ಪ್ರಧಾನಿಯಾಗಬೇಕು ಎಂಬ ಆಶಯವೂ ನಮ್ಮದಾಗಿದೆ ಎಂದರು.
(5 / 6)
ಕಾಂಗ್ರೆಸ್ ಪಕ್ಷದ ನಾಯಕರು ನನ್ನನ್ನು ಅತ್ಯಂತ ಗೌರವಯುತವಾಗಿ ನಡೆಸಿಕೊಂಡಿದ್ದಾರೆ, ಸೂಕ್ತ ಸ್ಥಾನಮಾನ ಸಹ ನೀಡಿದ್ದರು. ಕಾಂಗ್ರೆಸ್ ಪಕ್ಷ ಬಿಡಲಿಕ್ಕೆ ಯಾವುದೇ ರೀತಿಯ ಕಾರಣಗಳಿಲ್ಲ. ಕಾಂಗ್ರೆಸ್ ನಾಯಕರಿಗೆ ಧನ್ಯವಾದ ಹೇಳುತ್ತೇನೆ ಎಂದ ಅವರು ಬಿಜೆಪಿ ಪಕ್ಷದ ಕಾರ್ಯಕರ್ತರ ಭಾವನೆಗಳಿಗೆ ಸ್ಪಂದಿಸಿ ಮರು ಸೇರ್ಪಡೆಯಾಗಿದ್ದೇನೆ ಎಂದರು.
ಇತರ ಗ್ಯಾಲರಿಗಳು