Ramanagar News: ಹೇಮಾವತಿ ನೀರಿಗಾಗಿ ಈಗ ತುಮಕೂರು ರಾಮನಗರದ ಜಟಾಪಟಿ, ಗದ್ದಲಕ್ಕೆ ಕಾರಣವೇನು photos
- ಹಾಸನ( Hassan) ಹಾಗೂ ತುಮಕೂರು( Tumkur) ನಡುವೆ ಹಿಂದೆ ಹೇಮಾವತಿ ನೀರು( Hemavati Water) ಹಂಚಿಕೆ ವಿಚಾರದಲ್ಲಿ ಜಗಳವಿತ್ತು. ಈಗ ತುಮಕೂರು ಹಾಗೂ ರಾಮನಗರ( Ramanagar) ಜಿಲ್ಲೆಯ ನಡುವೆ ಗದ್ದಲ ಜೋರಿದೆ. ತುಮಕೂರು ಜಿಲ್ಲೆಯಲ್ಲಿ ಪ್ರತಿಭಟನೆಗಳೂ ಜೋರಾಗಿವೆ. ಇದರ ಚಿತ್ರನೋಟ ಇಲ್ಲಿದೆ.
- ಹಾಸನ( Hassan) ಹಾಗೂ ತುಮಕೂರು( Tumkur) ನಡುವೆ ಹಿಂದೆ ಹೇಮಾವತಿ ನೀರು( Hemavati Water) ಹಂಚಿಕೆ ವಿಚಾರದಲ್ಲಿ ಜಗಳವಿತ್ತು. ಈಗ ತುಮಕೂರು ಹಾಗೂ ರಾಮನಗರ( Ramanagar) ಜಿಲ್ಲೆಯ ನಡುವೆ ಗದ್ದಲ ಜೋರಿದೆ. ತುಮಕೂರು ಜಿಲ್ಲೆಯಲ್ಲಿ ಪ್ರತಿಭಟನೆಗಳೂ ಜೋರಾಗಿವೆ. ಇದರ ಚಿತ್ರನೋಟ ಇಲ್ಲಿದೆ.
(1 / 6)
ತುಮಕೂರು: ಜಿಲ್ಲೆಯ ಕುಡಿಯುವ ನೀರಿನ ಜೀವನಾಡಿಯಾಗಿರುವ ಹೇಮಾವತಿ ನಾಲೆಗೆ ಪ್ರತ್ಯೇಕ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಮೂಲಕ ಮಾಗಡಿ ಹಾಗೂ ರಾಮನಗರಕ್ಕೆ ನೀರು ಕೊಂಡೊಯ್ಯಲು ಕೈಗೊಂಡಿರುವ ಯೋಜನೆ ವಿರೋಧಿಸಿ ಭಾರೀ ಪ್ರತಿಭಟನೆ ನಡೆದಿವೆ.
(2 / 6)
ಹೇಮಾವತಿಯಿಂದ ತುಮಕೂರು ಜಿಲ್ಲೆಗೆ 24.5 ಟಿಎಂಸಿ ನೀರು ಹಂಚಿಕೆ ಮಾಡಲಾಗಿದೆ, ಹಂಚಿಕೆ ಮಾಡಿರುವಷ್ಟು ನೀರು ಜಿಲ್ಲೆಗೆ ಯಾವ ವರ್ಷವೂ ಹರಿದು ಬಂದಿಲ್ಲ, ಜಿಲ್ಲೆಗೆ ಹಂಚಿಕೆ ಮಾಡಿರುವ ನೀರಿನಲ್ಲೇ ಮಾಗಡಿ ಹಾಗೂ ರಾಮನಗರ ತಾಲೂಕಿಗೆ ನೀರು ತೆಗೆದುಕೊಂಡು ಹೋಗುತ್ತಿರುವದಕ್ಕೆ ಬಲವಾದ ವಿರೋಧ ವ್ಯಕ್ತವಾಗಿದೆ.
(3 / 6)
ಪೈಪ್ ಲೈನ್ ಮೂಲಕ ಮಾಗಡಿ, ರಾಮನಗರಕ್ಕೆ 843.71 ಎಂಸಿಎಫ್‌ಟಿ ನೀರು ತೆಗೆದುಕೊಂಡು ಹೋಗುವುದರಿಂದ ತುಮಕೂರು ಜಿಲ್ಲೆಯ ಜನರಿಗೆ ಅನ್ಯಾಯವಾಗಲಿದೆ, ಯಾವುದೇ ಕಾರಣಕ್ಕೂ ಜಿಲ್ಲೆಯಿಂದ ಹೇಮಾವತಿ ನೀರು ತೆಗೆದುಕೊಂಡು ಹೋಗಲು ಬಿಡುವುದಿಲ್ಲ ಎನ್ನುವುದು ತುಮಕೂರು ಜಿಲ್ಲೆಯವರ ವಾದ.
(4 / 6)
ಹೇಮಾವತಿ ಶಾಖಾ ನಾಲೆಯ 70ನೇ ಕಿ.ಮೀ. ಸ್ಥಳವಾದ ಗುಬ್ಬಿ ತಾಲ್ಲೂಕಿ ಡಿ.ರಾಂಪುರ ಬಳಿ ಕಾಮಗಾರಿ ನಡೆಯುತ್ತಿದ್ದು ಇಲ್ಲಿಯೇ ಪ್ರತಿಭಟನೆ ನಡೆದಿದ್ದರಿಂದ ಭಾರೀ ಭದ್ರತೆಯನ್ನು ಹಾಕಲಾಗಿದೆ.
(5 / 6)
ತುಮಕೂರು ಹೇಮಾವತಿ ಶಾಖಾ ನಾಲೆಯ 70ನೇ ಕಿ.ಮೀ. ಸ್ಥಳವಾದ ಡಿ.ರಾಂಪುರದ ಬಳಿ ತುರುವೇಕೆರೆ, ತಿಪಟೂರು, ಗುಬ್ಬಿ, ತುಮಕೂರು ಗ್ರಾಮಾಂತರ, ತುಮಕೂರು ನಗರದ ನೂರಾರು ಸಂಖ್ಯೆಯಲ್ಲಿ ರೈತರು, ಹೋರಾಟಗಾರರು, ಮಠಾಧಿಶರು ಕೂಡ ಪ್ರತಿಭಟಿಸಿ ಕಾಮಗಾರಿ ಸ್ಥಗಿತಗೊಳಿಸುವಂತೆ ಆಗ್ರಹಿಸಿದರು.
ಇತರ ಗ್ಯಾಲರಿಗಳು