Tumkur Dasara 2024: ತುಮಕೂರು ದಸರಾದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳು; ಆಕರ್ಷಿಸಿದ ವಸ್ತು ಪ್ರದರ್ಶನ, ಮಲ್ಲಕಂಬ ಸಾಹಸ
- ತುಮಕೂರು ಜಿಲ್ಲಾಡಳಿತ ಮೊದಲ ಬಾರಿಗೆ ಆಯೋಜಿಸಿದ್ದ ಹತ್ತು ದಿನಗಳ ದಸರಾ ಕಾರ್ಯಕ್ರಮಗಳು ಜನರನ್ನು ಆಕರ್ಷಿಸಿದವು. ಈ ಬಾರಿ ಆಯೋಜನಗೊಂಡ ನಾನಾ ಚಟುವಟಿಕೆಗಳ ಚಿತ್ರಣ ಇಲ್ಲಿದೆ.
- ತುಮಕೂರು ಜಿಲ್ಲಾಡಳಿತ ಮೊದಲ ಬಾರಿಗೆ ಆಯೋಜಿಸಿದ್ದ ಹತ್ತು ದಿನಗಳ ದಸರಾ ಕಾರ್ಯಕ್ರಮಗಳು ಜನರನ್ನು ಆಕರ್ಷಿಸಿದವು. ಈ ಬಾರಿ ಆಯೋಜನಗೊಂಡ ನಾನಾ ಚಟುವಟಿಕೆಗಳ ಚಿತ್ರಣ ಇಲ್ಲಿದೆ.
(1 / 9)
ತುಮಕೂರು ದಸರಾದಲ್ಲಿ ಈ ಬಾರಿ ಎಚ್ ಎಎಲ್ ಉತ್ಪಾದಿಸುವ ವಿವಿಧ ಬಗೆಯ ಹೆಲಿಕಾಪ್ಟರ್‌ಗಳ ಪ್ರದರ್ಶನ ವಿಶೇಷವಾಗಿತ್ತು.,
(2 / 9)
ತುಮಕೂರು ದಸರಾ ಅಂಗವಾಗಿ ಅಲಂಕರಿಸಿದ್ದ ದೇವಿ ವಿಗ್ರಹಕ್ಕೆ ಕೇಂದ್ರ ಸಚಿವ ವಿ.ಸೋಮಣ್ಣ ದಂಪತಿ ಪೂಜೆ ಸಲ್ಲಿಸಿದರು.
(3 / 9)
ತುಮಕೂರು ದಸರಾ ಭಾಗವಾಗಿ ಆಯೋಜನೆಗೊಂಡ ವಸ್ತು ಪ್ರದರ್ಶನದಲ್ಲಿ ವಿವಿಧ ಉಪಗ್ರಹಗಳ ಮಾದರಿಯ ಮಾಹಿತಿಯನ್ನು ತಜ್ಞರು ವಿವರಿಸಿದರು.
(4 / 9)
ತುಮಕೂರು ದಸರಾ ಸಮಿತಿಯ ನವರಾತ್ರಿ ಉತ್ಸವದಲ್ಲಿ ಯೋಗ ಪ್ರದರ್ಶನ ಹಾಗೂ ಮಲ್ಲಕಂಬದ ಪ್ರದರ್ಶನ ದಿನದ ವಿಶೇಷ ಆಕರ್ಷಣೆಯಾಗಿತ್ತು. ಬೆಂಗಳೂರಿನ ವಿವೇಕಾನಂದ ಕೇಂದ್ರ ವಿದ್ಯಾಲಯದ ಯೋಗ ಗುರು ಪರಪ್ಪನವರ ಶಿಷ್ಯರಾದ ನುರಿತ ವಿದ್ಯಾರ್ಥಿಗಳು ಮಲ್ಲಕಂಬದ ಮೇಲೆ ಯೋಗ ಪ್ರದರ್ಶನ ನೀಡಿ ವೀಕ್ಷಕರಲ್ಲಿ ರೋಮಾಂಚನ ಉಂಟು ಮಾಡಿದರು.
(5 / 9)
ತುಮಕೂರು ದಸರಾ ಭಾಗವಾಘಿ ಕ್ರೀಡಾ ದಸರಾ ಮ್ಯಾರಥಾನ್ ಅನ್ನು ಹಮ್ಮಿಕೊಳ್ಳಲಾಗಿತ್ತು. ಹಲವಾರು ಭಾಗಗಳಿಂದ ಬಂದಿದ್ದ ಓಟಗಾರರು ಉತ್ಸಾಹದಿಂದ ಭಾಗಿಯಾದರು. ಸಚಿವ ಜಿ.ಪರಮೇಶ್ವರ್ ಮ್ಯಾರಥಾನ್‌ಗೆ ಚಾಲನೆ ನೀಡಿದರು.
(6 / 9)
ತುಮಕೂರು ದಸರಾದಲ್ಲಿ ವಿಂಟೇಜ್ ಕಾರುಗಳ ಪ್ರದರ್ಶನ ವಿಶೇಷವಾಗಿತ್ತು. ನೂರಾರು ವರ್ಷಗಳ ಹಳೆಯದಾದ ಕಾರುಗಳನ್ನು ವೀಕ್ಷಿಸಿ ಜನ ಖುಷಿಪಟ್ಟರು.
(7 / 9)
ತುಮಕೂರು ದಸರಾ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಚಿಣ್ಣರ ಕಾರ್ಯಕ್ರಮದಲ್ಲಿ ಎಳೆಯ ಮಕ್ಕಳೂ ಸೇರಿ ಪುಟಾಣಿಗಳು ಖುಷಿಯಿಂದಲೇ ಭಾಗಿಯಾದರು,
ಇತರ ಗ್ಯಾಲರಿಗಳು