Facebook Post: ಬದುಕು ಅರಸಿ ಪಟ್ಟಣಕ್ಕೆ ಹೋದ ಜನ, ಭಣಗುಡುತ್ತಿರುವ ಹಳ್ಳಿಗಳು; ರಂಗಸ್ವಾಮಿ ಮೂಕನಹಳ್ಳಿ ಫೇಸ್‌ಬುಕ್‌ ಪೋಸ್ಟ್‌
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Facebook Post: ಬದುಕು ಅರಸಿ ಪಟ್ಟಣಕ್ಕೆ ಹೋದ ಜನ, ಭಣಗುಡುತ್ತಿರುವ ಹಳ್ಳಿಗಳು; ರಂಗಸ್ವಾಮಿ ಮೂಕನಹಳ್ಳಿ ಫೇಸ್‌ಬುಕ್‌ ಪೋಸ್ಟ್‌

Facebook Post: ಬದುಕು ಅರಸಿ ಪಟ್ಟಣಕ್ಕೆ ಹೋದ ಜನ, ಭಣಗುಡುತ್ತಿರುವ ಹಳ್ಳಿಗಳು; ರಂಗಸ್ವಾಮಿ ಮೂಕನಹಳ್ಳಿ ಫೇಸ್‌ಬುಕ್‌ ಪೋಸ್ಟ್‌

ಕೆಟ್ಟು ಪಟ್ಟಣ ಸೇರು ಎಂಬ ಮಾತಿದೆ. ಆದರೆ ಅತಿ ಆಸೆಯಿಂದ ಹಳ್ಳಿಯ ಸುಂದರ ಬದುಕನ್ನು ಬಿಟ್ಟು ಪಟ್ಟಣ ಸೇರೋದು ಎಷ್ಟು ಸರಿ. ಈಗಂತೂ ಕೆಲವರು ಹಣ ಮಾಡಬೇಕು ಎಂಬ ಆಸೆಯಿಂದ ಹಳ್ಳಿ ಬಿಟ್ಟು ಸಿಟಿ ಸೇರುತ್ತಿದ್ದಾರೆ. ಆದರೆ ಅಲ್ಲಿ ಸೂರಿಗೂ ಪರದಾಡುವಂತ ಪರಿಸ್ಥಿತಿ ನಿರ್ಮಣವಾಗಿದೆ. 

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸಾಹಿತಿ ರಂಗಸ್ವಾಮಿ ಮೂಕನಹಳ್ಳಿಯವರು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಳ್ಳಿಯ ಈಗಿನ ಚಿತ್ರಣವನ್ನು ಹಂಚಿಕೊಂಡಿದ್ದಾರೆ. 
icon

(1 / 7)

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸಾಹಿತಿ ರಂಗಸ್ವಾಮಿ ಮೂಕನಹಳ್ಳಿಯವರು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಳ್ಳಿಯ ಈಗಿನ ಚಿತ್ರಣವನ್ನು ಹಂಚಿಕೊಂಡಿದ್ದಾರೆ. (PC: Rangaswamy Mookanahalli)

ಎಲ್ಲರೂ ಬದುಕು ಅರಸಿ ಪಟ್ಟಣಕ್ಕೆ ಹೊದುದರ ಫಲಿತಾಂಶ. ಹಳ್ಳಿ ಹಾಳು ಬಿದ್ದಿದೆ ಭಣಗುಡುತ್ತಿದೆ ಎಂದು ರಂಗಸ್ವಾಮಿ ಮೂಕನಹಳ್ಳಿ ಬೇಸರದಿಂದ ಬರೆದುಕೊಂಡಿದ್ದಾರೆ.  
icon

(2 / 7)

ರಂಗಸ್ವಾಮಿ ಮೂಕನಹಳ್ಳಿ ಅವರ ಪೋಸ್ಟ್‌ಗೆ ನೆಟಿಜನ್ಸ್‌ ಕೂಡಾ ಕಾಮೆಂಟ್‌ ಮಾಡಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಎಲ್ಲ ಹಳ್ಳಿಗಳ ಕತೆ ಇದೇ. ಪಟ್ಟಣಕ್ಕೆ ಅಂಟಿಕೊಂಡು ಐದಾರು ಕಿಲೋಮೀಟರ್ ದೂರದಲ್ಲಿ ಇರೋ ಹಳ್ಳಿಗಳು ಇನ್ನೂ ಜೀವಂತಿಕೆ ಉಳಿಸಿಕೊಂಡಿದೆ ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ. 
icon

(3 / 7)

ಉದ್ಯೋಗ ಅರಸಿ ಪಟ್ಟಣ ಸೇರಿದ್ದು ತಪ್ಪಲ್ಲ, ಆದ್ರೆ ತಾವು ಬೆಳೆದ ಮನೆಮಠ, ತಂದೆ ತಾಯಿಯರು ಕಷ್ಟ ಪಟ್ಟು ಮಾಡಿದ ಆಸ್ತಿಯನ್ನು ಮಾರಿ, ನಗರದಲ್ಲಿ ಅಂಗೈ ಅಗಲದ ಜಾಗಕ್ಕೆ ಲಕ್ಷಗಟ್ಟಲೆ ಹಣ ತೆತ್ತು EMI ಭರಿಸುವ ರೀತಿ , ಸರಿ ಇಲ್ಲ ಅನ್ನಿಸುತ್ತೆ. ಹಳ್ಳಿಯಲ್ಲಿರುವ ಮನೆ ಆಸ್ತಿಗಳನ್ನು ನವೀಕರಣ ಮಾಡಿ, ನಿವೃತ್ತಿ ನಂತರ ಹಿಂದಿರುಗಿ ಹೋಗುವ ಧ್ಯೇಯ ಇರಬೇಕು ಎಂದು ಸೂರ್ಯಕಲಾ ಎಂಬ ಯೂಸರ್‌ ಕಾಮೆಂಟ್‌ ಮಾಡಿದ್ದಾರೆ. 
icon

(4 / 7)

ಸರ್, ಹಳ್ಳಿಗರು ಹಳ್ಳಿಯಲ್ಲಿ ಇದ್ದುಕೊಂಡು ಅವರು ಆರ್ಥಿಕ ಚಟುವಟಿಕೆಗಳ ಮೂಲಕ ಹಣ ಸಂಪಾದಿಸಿ ಹಳ್ಳಿಗಳೇ ಆರ್ಥಿಕ ಕೇಂದ್ರಗಳಾಗುವ ಅವಕಾಶಗಳ ಕುರಿತು ವಿವರವಾಗಿ ಹಣ ಕ್ಲಾಸು ಬರೆಯಿರಿ ಎಂದು ಯೂಸರ್‌ ಒಬ್ಬರು ಮನವಿ ಮಾಡಿದ್ದಾರೆ. 
icon

(5 / 7)

ನಾವೇ ತಾನೇ ಜವಾಬ್ದಾರಿ ಹೊರಬೇಕು.ನಂಗೂ ನಿಮಗೂ ಇನ್ನೊಬ್ಬರಿಗೂ ಎಲ್ಲರಿಗೂ ಕೃಷಿ ಬೇಡ ಹಳ್ಳಿ ಬೇಡ ಹಣ ಬೇಕು ಐಷಾರಾಮಿ ಜೀವನ ನಡೆಸಲು ದುಡ್ಡು ಬೇಕು.ಬಾವಿ ,ಕೆರೆ ಕಟ್ಟೆ ನೀರು ಬೇಡ ಮಿನರಲ್ ವಾಟರ್ ಬೇಕು ಫ್ರೆಶ್ ಹಣ್ಣು ತರಕಾರಿ ಬೇಕು ಅದನ್ನು ಬೆಳೆಯೋದು ಬೇಡ ಎಂದು ಭವಾನಿ ಉಪಾಧ್ಯಾಯ ಬೇಸರದಿಂದ ಬರೆದುಕೊಂಡಿದ್ದಾರೆ. 
icon

(6 / 7)

ಅರ್ಬನ್ ಮೈಗ್ರೇಷನ್ ಹೆಚ್ಚಾಗಲು ಸರಕಾರದ ಧೋರಣೆ, ಕೃಷಿ ಪ್ರಧಾನ ರಾಷ್ಟ್ರದಲ್ಲಿ ಕೃಷಿಗೆ, ಕೃಷಿಕರಿಗೆ ತೋರಿದ ಅಸಡ್ಡೆ, ಅನಾದರ, ಬೆಳೆದ ಬೆಳೆಗೆ ತಕ್ಕ ಬೆಲೇಯಿಲ್ಲದ, ಕಾರ್ಮಿಕರ ಕೊರತೆ ಇತ್ಯಾದಿ ಮೂಲ ಕಾರಣ. ಇದರ ಪರಿಣಾಮ ಇನ್ನೆದು ಹತ್ತು ವರ್ಷಗಳಲ್ಲಿ ಭೀಕರ ಆಹಾರ ಕೊರತೆ ಎದುರಿಸಲಿದೆ ಎಂದು ಪದ್ಮರಾಜ್‌ ಪ್ರತಿಕ್ರಿಯಿಸಿದ್ದಾರೆ. 
icon

(7 / 7)

ಇತರ ಗ್ಯಾಲರಿಗಳು