Virat Kohli: ಆಸ್ಟ್ರೇಲಿಯಾ ವಿರುದ್ಧ ವಿರಾಟ್ ಕೊಹ್ಲಿ ಮತ್ತೊಂದು ಸೆಂಚುರಿ; ಆದರಿದು ಬ್ಯಾಟ್ನಿಂದ ಬಂದದ್ದಲ್ಲ!
- Virat Kohli Record: ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೂರನೇ ಟೆಸ್ಟ್ ಪಂದ್ಯವನ್ನು ಆಡಲು ಗಬ್ಬಾ ಮೈದಾನಕ್ಕೆ ಕಾಲಿಟ್ಟ ಕೂಡಲೇ ವಿರಾಟ್ ಕೊಹ್ಲಿ ವಿಶೇಷ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
- Virat Kohli Record: ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೂರನೇ ಟೆಸ್ಟ್ ಪಂದ್ಯವನ್ನು ಆಡಲು ಗಬ್ಬಾ ಮೈದಾನಕ್ಕೆ ಕಾಲಿಟ್ಟ ಕೂಡಲೇ ವಿರಾಟ್ ಕೊಹ್ಲಿ ವಿಶೇಷ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
(1 / 6)
ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯ 3ನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮೈದಾನಕ್ಕಿಳಿದ ಕೂಡಲೇ ವಿಶೇಷ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಈ ನಿಟ್ಟಿನಲ್ಲಿ, ಕೊಹ್ಲಿ ಅಪರೂಪದ ಶತಕವೊಂದನ್ನು ಗಳಿಸಿದ್ದಾರೆ.
(2 / 6)
ಗಬ್ಬಾದಲ್ಲಿ ಮೈದಾನಕ್ಕಿಳಿದ ಕೂಡಲೇ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಕೊಹ್ಲಿ ಶತಕ ಪೂರೈಸಿದ್ದಾರೆ. ಆದರೆ ಇದು ಬ್ಯಾಟ್ನಿಂದ ಬಂದ ಶತಕವಲ್ಲ. ಆಸ್ಟ್ರೇಲಿಯಾ ವಿರುದ್ಧವೇ ಕಣಕ್ಕಿಳಿದ 100ನೇ ಅಂತಾರಾಷ್ಟ್ರೀಯ (ಟೆಸ್ಟ್, ಏಕದಿನ ಮತ್ತು ಟಿ20 ಪಂದ್ಯ) ಪಂದ್ಯವಾಗಿದೆ.
(3 / 6)
ಇದು ಆಸ್ಟ್ರೇಲಿಯಾ ವಿರುದ್ಧ ವಿರಾಟ್ರ 28ನೇ ಟೆಸ್ಟ್ ಪಂದ್ಯವಾಗಿದೆ. ಇಂಗ್ಲೆಂಡ್ ವಿರುದ್ಧವೂ 28 ಟೆಸ್ಟ್ ಪಂದ್ಯಗಳಲ್ಲೇ ಕೊಹ್ಲಿ ಕಣಕ್ಕಿಳಿದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಈವರೆಗೂ ಆಡಿದ 27 ಟೆಸ್ಟ್ ಪಂದ್ಯಗಳ 48 ಇನ್ನಿಂಗ್ಸ್ಗಳಲ್ಲಿ 9 ಶತಕ, 5 ಅರ್ಧಶತಕ ಸಹಿತ 2165 ರನ್ ಗಳಿಸಿದ್ದಾರೆ.
(4 / 6)
ಕೊಹ್ಲಿ ತಮ್ಮ ವೃತ್ತಿಜೀವನದಲ್ಲಿ ಆಸ್ಟ್ರೇಲಿಯಾ ವಿರುದ್ಧ 49 ಏಕದಿನ ಪಂದ್ಯಗಳ ಪೈಕಿ 47 ಇನ್ನಿಂಗ್ಸ್ಗಳಲ್ಲಿ ಕಣಕ್ಕಿಳಿದಿದ್ದಾರೆ. 8 ಶತಕ ಮತ್ತು 14 ಅರ್ಧಶತಕ ಸಹಿತ 2367 ರನ್ ಗಳಿಸಿದ್ದಾರೆ.
(5 / 6)
ಟಿ20 ಕ್ರಿಕೆಟ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ 23 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಕೊಹ್ಲಿ 8 ಅರ್ಧಶತಕ ಸಹಿತ 794 ರನ್ ಗಳಿಸಿದ್ದಾರೆ.
ಇತರ ಗ್ಯಾಲರಿಗಳು