Lakshmi Baramma Serial: ಅಮ್ಮನ ನೆನಪುಗಳನ್ನು ಸುಟ್ಟು ಬೂದಿ ಮಾಡಿದ ವೈಷ್ಣವ್; ಕಾವೇರಿ ಬದಲು ಈಗ ಲಕ್ಷ್ಮೀ ಮಡಿಲು
ಕನ್ನಡ ಸುದ್ದಿ  /  ಮನರಂಜನೆ  /  Lakshmi Baramma Serial: ಅಮ್ಮನ ನೆನಪುಗಳನ್ನು ಸುಟ್ಟು ಬೂದಿ ಮಾಡಿದ ವೈಷ್ಣವ್; ಕಾವೇರಿ ಬದಲು ಈಗ ಲಕ್ಷ್ಮೀ ಮಡಿಲು

Lakshmi Baramma Serial: ಅಮ್ಮನ ನೆನಪುಗಳನ್ನು ಸುಟ್ಟು ಬೂದಿ ಮಾಡಿದ ವೈಷ್ಣವ್; ಕಾವೇರಿ ಬದಲು ಈಗ ಲಕ್ಷ್ಮೀ ಮಡಿಲು

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ಜೈಲು ಸೇರಿದ್ದಾಳೆ. ಅಮ್ಮನ ನೆನಪೇ ಬೇಡ ಎಂದು ವೈಷ್ಣವ್ ಹೇಳುತ್ತಿದ್ದಾನೆ. ಅಷ್ಟೇ ಅಲ್ಲ ಅವಳ ಎಲ್ಲ ಸಾಮಗ್ರಿಗಳನ್ನು ತಂದು ಸುಟ್ಟು ಹಾಕಿದ್ದಾನೆ. ಅವನಿಗೆ ಅದ್ಯಾವುದೂ ನೆಮ್ಮದಿ ನೀಡುತ್ತಿಲ್ಲ.

 ಅಮ್ಮನ ನೆನಪುಗಳನ್ನು ಸುಟ್ಟು ಬೂದಿ ಮಾಡಿದ ವೈಷ್ಣವ್
ಅಮ್ಮನ ನೆನಪುಗಳನ್ನು ಸುಟ್ಟು ಬೂದಿ ಮಾಡಿದ ವೈಷ್ಣವ್

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ತನಗೆ ಮೋಸ ಮಾಡಿದ್ದಾಳೆ. ಹೆತ್ತ ತಾಯಿನೇ ಸ್ವಂತ ಮಗನಿಗೆ ಮೋಸ ಮಾಡಬಹುದು ಎಂದು ನನಗೆ ಈಗ ಗೊತ್ತಾಗಿದೆ ಎಂದು ವೈಷ್ಣವ್ ನೋವುಣ್ಣುತ್ತಿದ್ದಾನೆ. ಈ ಸಂದರ್ಭದಲ್ಲಿ ಲಕ್ಷ್ಮೀ ಕೂಡ ಅವನ ಜೊತೆಗೇ ಇದ್ದಾಳೆ. ಕೋರ್ಟ್‌ನಿಂದ ಮನೆಗೆ ಹೋದ ವೈಷ್ಣವ್‌ಗೆ ನೆಮ್ಮದಿಯೇ ಇಲ್ಲ. ಇಷ್ಟು ದಿನ ನಾನು ನಂಬಿದ್ದ ನನ್ನ ತಾಯಿಯೇ ಕೊಲೆಗಾತಿ ಎಂದು ಅವನಿಗೆ ತುಂಬಾ ನೋವಾಗುತ್ತಿದೆ. ತನ್ನ ಮನೆಯಲ್ಲಿ ಅಮ್ಮನ ನೆನಪು ಕೂಡ ಇರಬಾರದು ಎಂದು ಅವನಿಗೆ ಅನಿಸಿದೆ.

ಅಮ್ಮನ ನೆನಪೂ ಇರಬಾರು ಎಂದೆನಿಸಿದೆ ಎಂದರೆ ಎಷ್ಟು ಕಾಡಿರಬಹುದು ಎಂದು ಎಲ್ಲರಿಗೂ ಅನಿಸುತ್ತಿದೆ. ಲಕ್ಷ್ಮೀ ತುಂಬಾ ಬೇಸರ ಮಾಡಿಕೊಂಡಿದ್ದಾಳೆ. ಗಂಡನ ವರ್ತನೆ, ಅವನ ಬೇಸರ ನೋಡಿ ಅವಳಿಗೂ ಅಳು ಬರುತ್ತಿದೆ. ಇನ್ನು ಮನೆಯವರೆಲ್ಲ ವೈಷ್ಣವ್ ಕಷ್ಟವನ್ನು ನೋಡಲಾಗದೇ ಬೇಸರ ಮಾಡಿಕೊಂಡಿದ್ದಾರೆ. ಇನ್ನು ತನ್ನ ಕೋಣೆಯಲ್ಲೇ ವೈಷ್ಣವ್ ಅಮ್ಮನ ಸೀರೆ ಒಂದಷ್ಟು ಮೆಡಲ್ ಎಲ್ಲವನ್ನೂ ತಂದು ಸುಟ್ಟು ಹಾಕುತ್ತಾನೆ.

ಅಮ್ಮನ ನೆನಪಿಗೆ ಬೆಂಕಿ ಇಟ್ಟ ವೈಷ್ಣವ್

ಅವನು ಅದನ್ನೆಲ್ಲ ಏನು ಮಾಡಲು ರಾಶಿ ಹಾಕಿದ್ದಾನೆ ಎಂದು ಮೊದಲು ಯಾರಿಗೂ ಅರ್ಥ ಆಗುವುದಿಲ್ಲ. ಆ ನಂತರ ಅದಕ್ಕೆ ಬೆಂಕಿ ಹಾಕುತ್ತಾನೆ. ಅದನ್ನು ನೋಡಿ ಅಜ್ಜಿ, ವಿಧಿ ಎಲ್ಲರೂ ಕೊರಗುತ್ತಾರೆ. ಅದೆಲ್ಲವೂ ಸುಟ್ಟು ಭಸ್ಮವಾಗುವವರೆಗೂ ಅವನು ಮಾತ್ರ ಅಲ್ಲೇ ಕುಳಿತುಕೊಂಡಿರುತ್ತಾನೆ. ಅವನ ಪಕ್ಕದಲ್ಲಿ ಲಕ್ಷ್ಮೀ ಕುಳಿತಿರುತ್ತಾಳೆ. ಅವಳ ಹತ್ತಿರ ನಾನು ನಿಮ್ಮ ಮಡಿಲಲ್ಲಿ ಮಲಗಿಕೊಳ್ಳಲಾ? ಎಂದು ಪ್ರಶ್ನೆ ಮಾಡುತ್ತಾನೆ. ನಂತರ ಅವಳು ಒಪ್ಪಿಗೆ ಕೊಟ್ಟಮೇಲೆ ಅವಳ ಕಾಲಮೇಲೆ ಮಲಗುತ್ತಾನೆ.

ಲಕ್ಷ್ಮೀ ತಾನು ಹಾಕಿಕೊಂಡ ಕನ್ನಡಕವನ್ನು ತೆಗೆದಿಲ್ಲ. ಆದರೆ ಯಾಕೆ ಇನ್ನೂ ಅವಳು ಕನ್ನಡಕ ತೆಗೆದಿಲ್ಲ ಎಂಬ ಪ್ರಶ್ನೆ ವೀಕ್ಷಕರಲ್ಲಿ ಮೂಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಚರ್ಚೆ ಕೂಡ ಆಗಿದೆ. ಬೆಂಕಿ ತಾಗಿ ಕಣ್ಣಿಗೆ ಹಾನಿಯಾಗಿದೆ ಎಂದು ಈ ಹಿಂದೆ ಕಾರಣ ಕೊಟ್ಟಿದ್ದರು.

ಲಕ್ಷ್ಮೀ ಬಾರಮ್ಮ ಧಾರಾವಾಹಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿತ್ತು. ಪ್ರತಿದಿನ ರಾತ್ರಿ 7:30ಕ್ಕೆ ಈ ಧಾರಾವಾಹಿ ಪ್ರಸಾರವಾಗುತ್ತದೆ. ಮೊದಲು ಒಂದಾಗಿದ್ದ ಭಾಗ್ಯಲಕ್ಷ್ಮೀ ಮತ್ತು ಲಕ್ಷ್ಮೀ ಬಾರಮ್ಮ ಈಗ ಎರಡು ಬೇರೆ ಬೇರೆ ಧಾರಾವಾಹಿಗಳಾಗಿ ಯಶಸ್ವಿಯಾಗಿದೆ. ಟಿಆರ್‌ಪಿ ರೇಟಿಂಗ್ಸ್‌ನಲ್ಲೂ ಈ ಧಾರಾವಾಹಿ ಮುಂದಿದೆ.

ಲಕ್ಷ್ಮೀ ಬಾರಮ್ಮ ಪಾತ್ರವರ್ಗ

ವೈಷ್ಣವ್ ಪಾತ್ರದಲ್ಲಿ ಶಮಂತ್‌ ಗೌಡ (ಬ್ರೋ ಗೌಡ)

ಕೀರ್ತಿ ಪಾತ್ರದಲ್ಲಿ ತನ್ವಿ ರಾವ್‌

ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್‌

ಕಾವೇರಿ ಪಾತ್ರದಲ್ಲಿ ಸುಷ್ಮಾ ನಾಣಯ್ಯ

ಸುಪ್ರಿತಾ ಪಾತ್ರದಲ್ಲಿ ರಜನಿ ಪ್ರವೀಣ್ ಅಭಿನಯಿಸುತ್ತಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಎಲ್ಲಾ ಎಪಿಸೋಡ್‌ಗಳ ಕಥೆಯನ್ನು ಇಲ್ಲಿ ಓದಬಹುದು.

Whats_app_banner