ಮೈಸೂರು ದಸರಾ ವಸ್ತು ಪ್ರದರ್ಶನಕ್ಕೆ ಬನ್ನಿ; ಕಾವೇರಿ ನದಿ ತೀರದ ಜಲಾಶಯಗಳು, ಜಲಪಾತಗಳನ್ನುಕಲೆಯಲ್ಲಿ ಕಣ್ತುಂಬಿಕೊಳ್ಳಿ
ಮೈಸೂರಿನ ಈ ಬಾರಿಯ ದಸರಾ ವಸ್ತು ಪ್ರದರ್ಶನ ಹಲವು ವೈಶಿಷ್ಟ್ಯಗಳ ಸಂಗಮ. ಅದರಲ್ಲೂ ಕಾವೇರಿ ನೀರಾವರಿ ನಿಗಮವು ರೂಪಿಸಿರುವ ಜಲಾಶಯ, ಜಲಪಾತಗಳ ಮಳಿಗೆಯಂತೂ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಅದರ ಚಿತ್ರ ನೋಟ ಇಲ್ಲಿದೆ.
(1 / 9)
ಮೈಸೂರಿನಲ್ಲಿರುವ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರವು ದಸರಾ ವಸ್ತುಪ್ರದರ್ಶನವನ್ನು ಆಯೋಜಿಸಿದ್ದು ಇದರಲ್ಲಿ ಕಾವೇರಿ ನೀರಾವರಿನಿಗಮದ ಮಳಿಗೆ ಗಮನ ಸೆಳೆಯುತ್ತಿದೆ.
(3 / 9)
ಜಲಸಂಪನ್ಮೂಲ ಇಲಾಖೆಯ ಅಡಿಯಲ್ಲಿ ಅಂದಿನ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನಿರ್ಮಿಸಿದ ಕೆಆರ್‌ಎಸ್ ಜಲಾಶಯದ ನೆನಪಿನಲ್ಲಿ ಅವರ ಪ್ರತಿಮೆ ಅಳವಡಿಸಲಾಗಿದೆ.
(4 / 9)
ಮಳಿಗೆಯ ಒಳ ಹೊಕ್ಕರೆ ಕೃಷ್ಣರಾಜ ಸಾಗರ ಜಲಾಶಯದ ವಿಶಾಲ ನೋಟ ಗಮನ ಸೆಳಯುತ್ತದೆ. ಅದರಲ್ಲೂ ನೀರು ಹರಿಯುವ ಸನ್ನಿವೇಶ ಮನಮೋಹಕವಾಗಿದೆ.
(5 / 9)
ಕಾವೇರಿ ನದಿ ತೀರದ ಪ್ರಮುಖ ಜಲಾಶಯಗಳಲ್ಲಿ ಒಂದಾದ ಕೃಷ್ಣರಾಜಸಾಗರದ ನೋಟವನ್ನು ಕಲೆಯ ಮೂಲಕ ಮಳಿಗೆಯಲ್ಲಿ ಕಟ್ಟಿಕೊಡಲಾಗಿದೆ.
(6 / 9)
ಕಾವೇರಿ ನೀರಾವರಿ ನಿಗಮ ವ್ಯಾಪ್ತಿಯ ಕಬಿನಿ ಜಲಾಶಯ ಕೂಡ ಪ್ರಮುಖವಾದದ್ದು. ಬೇಗನೇ ತುಂಬುವ ಈ ಜಲಾಶಯವೂ ಮಳಿಗೆಯಲ್ಲಿ ಒಡ ಮೂಡಿದೆ.
(7 / 9)
ಕಾವೇರಿ ನದಿಯು ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ಗಗನ ಚುಕ್ಕಿ ಹಾಗೂ ಭರ ಚುಕ್ಕಿ ಜಲಪಾತವಾಗಿ ರೂಪುಗೊಂಡಿದ್ದು. ಇದರ ಚಿತ್ರಣವನ್ನೂ ಇಲ್ಲಿ ನೋಡಬಹುದು.
(8 / 9)
ಮಂಡ್ಯ ಜಿಲ್ಲೆ ಕೆಆರ್‌ಎಸ್ ನ ಈ ಜಲಾಶಯವನ್ನು ವೀಕ್ಷಿಸಲು ಆಗಮಿಸುವವರು, ಕೃಷಿ ನಂಬಿ ಬದುಕುತ್ತಿರುವವರನ್ನು ಆಧರಿಸಿ ಮಳಿಗೆಯನ್ನು ರೂಪಿಸಲಾಗಿದೆ.
ಇತರ ಗ್ಯಾಲರಿಗಳು