Weekend getaways; ಬೆಂಗಳೂರು ಸುತ್ತಮುತ್ತ ವಾರಾಂತ್ಯದ ರಜೆಯಲ್ಲಿ ತೆರಳಬಹುದಾದ 7 ಜನಪ್ರಿಯ ಚಾರಣ ತಾಣಗಳಿವು
Trekking Spots Near Me; ಸುದೀರ್ಘ ವಾರಾಂತ್ಯ ರಜೆ ಸಿಕ್ಕಿದಾಗ ಬೆಂಗಳೂರಲ್ಲೇ ಇದ್ದು ಏನು ಮಾಡೋದು ಅಂತ ಆಲೋಚಿಸುತ್ತಿದ್ದೀರಾ? ದೂರ ಪ್ರವಾಸದ ಯೋಚನೆ ಇಲ್ಲಾ ಅಂದ್ರೆ, ವಾರಾಂತ್ಯದ ರಜೆಯಲ್ಲಿ ಬೆಂಗಳೂರು ಸುತ್ತಮುತ್ತ ತೆರಳಬಹುದಾದ 7 ಜನಪ್ರಿಯ ಚಾರಣ ತಾಣಗಳ ವಿವರ ಇಲ್ಲಿದೆ.
(1 / 8)
ನಮ್ಮ ಕರ್ನಾಟಕದ ರಾಜಧಾನಿ ಬೆಂಗಳೂರು ಎಲ್ಲ ರೀತಿಯಲ್ಲೂ ಶ್ರೀಮಂತವಾದುದು. ಸುತ್ತಮುತ್ತ ಚಾರಿತ್ರಿಕ ಪ್ರದೇಶಗಳಿವೆ., ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವಂತಹ ಪ್ರಕೃತಿ ರಮ್ಯ ತಾಣಗಳಿವೆ. ವಾರಾಂತ್ಯದ ಚಾರಣಕ್ಕೆ ಹೇಳಿ ಮಾಡಿಸಿದ ಹತ್ತಾರು ಬೆಟ್ಟಗಳಿವೆ. ಈ ಪೈಕಿ ಆಯ್ದ ಏಳು ಚಾರಣ ತಾಣಗಳ ಕಿರು ಪರಿಚಯ ಇಲ್ಲಿದೆ.(@KarnatakaWorld)
(2 / 8)
ಮಾಕಳಿ ದುರ್ಗ - ಬೆಂಗಳೂರು ನಗರದಿಂದ 60 ಕಿ.ಮೀ. ದೂರದಲ್ಲಿದೆ. ದೊಡ್ಡಬಳ್ಳಾಪುರ ತಾಲೂಕು ಕೇಂದ್ರದಿಂದ 18 ಕಿ.ಮೀ. ದೂರ. ಘಾಟಿ ಸುಬ್ರಹ್ಮಣ್ಯ ದೇವಸ್ಥಾನಕ್ಕೂ ಹತ್ತಿರ (6.4 ಕಿ.ಮೀ.). ಚಾರಣಕ್ಕೆ ಹೇಳಿ ಮಾಡಿಸಿದ ಬೆಟ್ಟ. ಸಮುದ್ರಮಟ್ಟದಿಂದ 4432 ಅಡಿ ಎತ್ತರದ ಬೆಟ್ಟ ಇದು. ವಾರಾಂತ್ಯದ ಪ್ರವಾಸಕ್ಕೂ ಬೆಸ್ಟ್.(@KarnatakaWorld)
(3 / 8)
ರಾಮದೇವರ ಬೆಟ್ಟ, ರಾಮನಗರ - ಬೆಂಗಳೂರು ನಗರದಿಂದ 50 ಕಿ.ಮೀ., ರಾಮನಗರದಿಂದ 3 ಕಿ.ಮೀ. ದೂರದಲ್ಲಿದೆ. ಟ್ಟದ ತಳದಲ್ಲಿ ವಾಹನವನ್ನು ನಿಲ್ಲಿಸಿ ಬೆಟ್ಟ ಏರಬೇಕು. ಬಾಲಿವುಡ್ ಸಿನಿಮಾ ಶೋಲೆ ಚಿತ್ರೀಕರಣ ಇದೇ ಬೆಟ್ಟದಲ್ಲಾಗಿತ್ತು. ಇದು ಕೂಡ ಚಾರಣಕ್ಕೆ ಬೆಸ್ಟ್. ಆದರೆ ಸಂಜೆ 5.30 ನಂತರ ಬೆಟ್ಟ ಏರುವಂತಿಲ್ಲ. (@KarnatakaWorld)
(4 / 8)
ಸಾವನದುರ್ಗ - ರಾಮನಗರ ಜಿಲ್ಲೆಯಲ್ಲಿ ಚಾರಣಕ್ಕೆ ಹೇಳಿ ಮಾಡಿಸಿದ ಇನ್ನೊಂದು ಬೆಟ್ಟ. ಇದು ಬೆಂಗಳೂರಿನಿಂದ 48 ಕಿ.ಮೀ. ಮತ್ತು ರಾಮನಗರದಿಂದ 30 ಕಿ.ಮೀ. ದೂರದಲ್ಲಿದೆ. ಏಷ್ಯಾದ ಅತಿದೊಡ್ಡ ಏಕಶಿಲೆಯ ಬೆಟ್ಟಗಳಲ್ಲಿ ಒಂದು. 1226 ಮೀಟರ್ ಎತ್ತರದ ಬೆಟ್ಟದ ಬುಡದಲ್ಲಿ ಸವಂಡಿ ವೀರಭದ್ರಸ್ವಾಮಿ, ನರಸಿಂಹಸ್ವಾಮಿ ದೇವಸ್ಥಾನಗಳಿವೆ.ಕಪ್ಪು ಬೆಟ್ಟ, ಬಿಳಿ ಬೆಟ್ಟಗಳಿಂದ ರೂಪುಗೊಂಡ ಬೆಟ್ಟ ಇದು. (@KarnatakaWorld)
(5 / 8)
ದೇವರಾಯನ ದುರ್ಗ - ತುಮಕೂರು ಜಿಲ್ಲೆಯ ಸಣ್ಣ ಗಿರಿಧಾಮ ಇದು. ಚಿಕ್ಕ ಚಾರಣದ ಹಾದಿಯೂ ಹೌದು. ಈ ಬೆಟ್ಟ ಬೆಂಗಳೂರಿನಿಂದ 70 ಕಿ.ಮೀ. ಮತ್ತು ತುಮಕೂರು ನಗರದಿಂದ 15 ಕಿ.ಮೀ. ದೂರದಲ್ಲಿದೆ. ಇದು ಐತಿಹಾಸಿಕ ಬೆಟ್ಟವಾಗಿದ್ದು, ಅಲ್ಲಿ ಹರಿದ್ವರ್ಣಗಳ ನಡುವೆ ವಿಷ್ಣು ದೇಗುಲಗಳೂ ಇವೆ. (@KarnatakaWorld)
(6 / 8)
ಕೈವಾರ ಬೆಟ್ಟ - ಚಿಕ್ಕಬಳ್ಳಾಪುರದ ಕೈವಾರ ಬೆಟ್ಟ ಚಾರಣಿಗರ ಮತ್ತೊಂದು ಪ್ರಿಯತಾಣ. ಇದಕ್ಕೆ ಐತಿಹಾಸಿಕ ಹಿನ್ನೆಲೆಯೂ ಇದೆ. ಪುರಾಣ ಕಥೆಗಳ ನಂಟೂ ಇದೆ. ಇದು ಬೆಂಗಳೂರಿನಿಂದ 65 ಕಿ.ಮೀ. ದೂರದಲ್ಲಿದೆ. (@KarnatakaWorld)
(7 / 8)
ಸ್ಕಂದಗಿರಿ - ಚಿಕ್ಕಬಳ್ಳಾಪುರದಲ್ಲಿರುವ ಮತ್ತೊಂದು ಚಾರಣ ತಾಣ. ಇದನ್ನು ಕಲವರ ದುರ್ಗ ಎಂದೂ ಕರೆಯುತ್ತಾರೆ. ಈ ಬೆಟ್ಟ ಬೆಂಗಳೂರಿನಿಂದ 70 ಕಿ.ಮೀ. ದೂರದಲ್ಲಿದೆ. ಬೆಟ್ಟದ ಎತ್ತರ 1350 ಮೀಟರ್. ಪಾಪಾಗ್ನಿ ದೇವಾಲಯದ ಬುಡದಿಂದ 8 ಕಿ.ಮೀ. ಚಾರಣ ಶುರುವಾಗುತ್ತದೆ. ಇದು ಚಾರಣಿಗರಿಗೆ ಉತ್ತಮ ಅನುಭವ ನೀಡುವ ತಾಣ.(@KarnatakaWorld)
ಇತರ ಗ್ಯಾಲರಿಗಳು