ಮದುವೆಯಾದ ಮರು ದಿನವೇ ಡಿವೋರ್ಸ್ ಕೇಳೋದಲ್ಲ; ವಿವಾಹವಾದ ಎಷ್ಟು ದಿನಗಳ ನಂತರ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಬಹುದು?
- Divorce: ಇತ್ತೀಚೆಗೆ ವಿಚ್ಛೇದನ ಪ್ರಕರಣಗಳು ಹೆಚ್ಚಾಗುತ್ತಿವೆ. ಹಾಗಾದರೆ, ಮದುವೆಯಾದ ಎಷ್ಟು ದಿನಗಳ ನಂತರ ದಂಪತಿಗಳು ಅರ್ಜಿ ಸಲ್ಲಿಸಬಹುದು? ಇಲ್ಲಿದೆ ನೋಡಿ ವಿವರ.
- Divorce: ಇತ್ತೀಚೆಗೆ ವಿಚ್ಛೇದನ ಪ್ರಕರಣಗಳು ಹೆಚ್ಚಾಗುತ್ತಿವೆ. ಹಾಗಾದರೆ, ಮದುವೆಯಾದ ಎಷ್ಟು ದಿನಗಳ ನಂತರ ದಂಪತಿಗಳು ಅರ್ಜಿ ಸಲ್ಲಿಸಬಹುದು? ಇಲ್ಲಿದೆ ನೋಡಿ ವಿವರ.
(1 / 6)
ಭಾರತದಲ್ಲಿ ವಿಚ್ಛೇದನ ಎಂಬುದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೌಟುಂಬಿಕ, ಅಕ್ರಮ ಸಂಬಂಧ, ಕ್ರೌರ್ಯ, ಮೋಸ, ಹೊಂದಾಣಿಕೆ ಸಮಸ್ಯೆ ಸೇರಿದಂತೆ ಹಲವಾರು ಕಾರಣಗಳಿಂದ ದಂಪತಿಗಳು ಡಿವೋರ್ಸ್ ಪಡೆಯುತ್ತಿದ್ದಾರೆ.
(2 / 6)
ಇತ್ತೀಚಿನ ಪೀಳಿಗೆಯವರು ದಾಂಪತ್ಯ ಜೀವನದಲ್ಲಿ ಸಣ್ಣಪುಟ್ಟ ಜಗಳಗಳಿಗೂ ಡಿವೋರ್ಸ್ ಪಡೆಯುವುದು ಹೆಚ್ಚಾಗಿದೆ. ಅದರಲ್ಲೂ ಹೆಚ್ಚಾಗಿ ಹೊಂದಾಣಿಕೆಯ ಸಮಸ್ಯೆಯಿಂದಾಗಿ ಡಿವೋರ್ಸ್ ಪ್ರಕರಣಗಳು ಏರುತ್ತಿರುವುದು ಬೇಸರದ ಸಂಗತಿ.
(3 / 6)
ಎಷ್ಟೋ ಪ್ರಕರಣಗಳಲ್ಲಿ ಮದುವೆಯಾದ ಮಾರನೇ ದಿನವೇ ಡಿವೋರ್ಸ್ ಎಂದು ಕೇಳೋ ಅಂತ ಘಟನೆಗಳು ನಡೆದಿವೆ. ಹಾಗಾದರೆ, ಅನಿಸಿದಾಗೆಲ್ಲಾ ವಿಚ್ಛೇದನಾ ಪಡೆಯಬಹುದಾ? ಬೇರೆಯಾಗುವುದು ಅಷ್ಟು ಸುಲಭವೇ?
(4 / 6)
ಹಾಗಿದ್ದರೆ, ವಿಚ್ಛೇದನ ಪಡೆಯಲು ಮದುವೆಯಾದ ಎಷ್ಟು ದಿನಗಳ ನಂತರ ನಾವು ಅರ್ಜಿ ಸಲ್ಲಿಸಬೇಕು ಎಂಬುದನ್ನು ತಿಳಿಯೋಣ. ಮದುವೆಯಾದ 6 ತಿಂಗಳವರೆಗೂ ವಿಚ್ಛೇದನಾ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಇದಕ್ಕೂ ಮೊದಲು 1 ವರ್ಷವಿತ್ತು.
(5 / 6)
ಹಿಂದೂ ವಿವಾಹ ಕಾಯ್ದೆ-1955ರ ಸೆಕ್ಷನ್ 14ರಡಿ ವಿಚ್ಛೇದನದ ಅರ್ಜಿ ಸಲ್ಲಿಸಲು ಕನಿಷ್ಠ ಒಂದು ವರ್ಷ ಕಾಯಬೇಕಿತ್ತು. ಆದರೆ ಈ ಕಾಯ್ದೆಗೆ ತಿದ್ಧುಪಡಿ ಬಂದ ನಂತರ ಅದೇ ಕಾಯ್ದೆಯ ಸೆಕ್ಷನ್ 13ಬಿ ಅಡಿಯಲ್ಲಿ 6 ತಿಂಗಳ ನಂತರವೇ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಬೇಕು.
ಇತರ ಗ್ಯಾಲರಿಗಳು