ಅಬ್ಬಬ್ಬಾ ಯೂಟ್ಯೂಬ್‌ನಿಂದ ಇಷ್ಟು ಗಳಿಕೆಯೇ? ಹ್ಯಾಕರ್‌ಗಳ ಕೆಂಗಣ್ಣಿಗೆ ಗುರಿಯಾದ ರಣವೀರ್‌ ಸಂಪತ್ತಿನ ವಿವರ, ಪ್ರಧಾನಿ ಮೋದಿ ಭೇಷ್‌ ಅಂದಿದ್ರು!-who is ranveer allahbadia whose channel hacked by hackers beer biceps net worth education achivements deatils pcp ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅಬ್ಬಬ್ಬಾ ಯೂಟ್ಯೂಬ್‌ನಿಂದ ಇಷ್ಟು ಗಳಿಕೆಯೇ? ಹ್ಯಾಕರ್‌ಗಳ ಕೆಂಗಣ್ಣಿಗೆ ಗುರಿಯಾದ ರಣವೀರ್‌ ಸಂಪತ್ತಿನ ವಿವರ, ಪ್ರಧಾನಿ ಮೋದಿ ಭೇಷ್‌ ಅಂದಿದ್ರು!

ಅಬ್ಬಬ್ಬಾ ಯೂಟ್ಯೂಬ್‌ನಿಂದ ಇಷ್ಟು ಗಳಿಕೆಯೇ? ಹ್ಯಾಕರ್‌ಗಳ ಕೆಂಗಣ್ಣಿಗೆ ಗುರಿಯಾದ ರಣವೀರ್‌ ಸಂಪತ್ತಿನ ವಿವರ, ಪ್ರಧಾನಿ ಮೋದಿ ಭೇಷ್‌ ಅಂದಿದ್ರು!

  • Ranveer Allahbadia Net worth: ಜನಪ್ರಿಯ ಯೂಟ್ಯೂಬರ್‌ ರಣವೀರ್‌ ಅಲ್ಲಾಬಾಡಿಯಾರ BeerBiceps ಯೂಟ್ಯೂಬ್‌ ಚಾನೆಲ್‌ ಹ್ಯಾಕರ್‌ಗಳ ದಾಳಿಗೆ ತುತ್ತಾಗಿದೆ. ಇವರು ಕಷ್ಟಪಟ್ಟು ರಚಿಸಿದ ನೂರಾರು ವಿಡಿಯೋಗಳನ್ನು ಹ್ಯಾಕರ್‌ಗಳು ಡಿಲೀಟ್‌ ಮಾಡಿದ್ದಾರೆ. ರಣವೀರ್‌ ಅಲ್ಲಾಬಾಡಿಯಾರ ಯೂಟ್ಯೂಬ್‌ ಸಂಪಾದನೆ, ನಿವ್ವಳ ಸಂಪತ್ತು, ಶಿಕ್ಷಣ ಸೇರಿದಂತೆ ಜೀವನಚರಿತ್ರೆ ಇಲ್ಲಿದೆ.

Ranveer Allahbadia  Net worth: ಯೂಟ್ಯೂಬರ್‌ ರಣವೀರ್ ಅಲ್ಲಾಬಾಡಿಯಾ ಅವರ ಯೂಟ್ಯೂಬ್‌ ಚಾನೆಲ್‌ಗಳನ್ನು ಹ್ಯಾಕರ್‌ಗಳು ಹ್ಯಾಕ್‌ ಮಾಡಿದ್ದು, ಇವರು ಕಷ್ಟಪಟ್ಟು ರಚಿಸಿದ ಕಂಟೆಂಟ್‌ಗಳನ್ನು ಡಿಲೀಟ್‌ ಮಾಡಿದ್ದಾರೆ. ಇವರು ಯೂಟ್ಯೂಬ್‌ನಿಂದಲೇ ವರ್ಷಕ್ಕೆ ಹಲವು ಕೋಟಿ ರೂಪಾಯಿ ಸಂಪಾದನೆ ಮಾಡುತ್ತಿದ್ದರು. ವರದಿಗಳ ಪ್ರಕಾರ ಇವರು ತಿಂಗಳಿಗೆ 35 ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಿದ್ದರು. ಅಂದರೆ, ಆನ್‌ಲೈನ್‌ ಕಂಟೆಂಟ್‌, ಯೂಟ್ಯೂಬ್‌ ಚಾನೆಲ್‌ಗಳು, ಬ್ರ್ಯಾಂಡ್‌ ಪ್ರಮೋಷನ್‌, ಇನ್‌ಫ್ಲೂಯೆನ್ಸರ್‌ ಮಾರುಕಟ್ಟೆಯಿಂದ ಇವರ ಸಂಪಾದನೆ ವರ್ಷಕ್ಕೆ 4 ಕೋಟಿಯಷ್ಟಿತ್ತು. 
icon

(1 / 8)

ಯೂಟ್ಯೂಬ್‌ ಚಾನೆಲ್‌ ಮೂಲಕ ಫೇಮಸ್‌:  ಭಾರತದ ಜನಪ್ರಿಯ ಯೂಟ್ಯೂಬರ್‌  ರಣವೀರ್‌ ಅಲ್ಲಾಬಾಡಿಯಾ ತನ್ನ 22ನೇ ವಯಸ್ಸಿನಲ್ಲಿ ಯೂಟ್ಯೂಬ್‌ನಲ್ಲಿ ಕಂಟೆಂಟ್‌ ರಚನೆ ಆರಂಭಿಸಿದ್ದರು. ಬೀರ್‌ಬೈಸೆಪ್ಸ್‌ ಎಂಬ ಯೂಟ್ಯೂಬ್‌ ಚಾನೆಲ್‌ ಮೂಲಕ ಕರಿಯರ್‌ ಆರಂಭಿಸಿದ್ದರು. ಇವರು ಒಟ್ಟು 7 ಯೂಟ್ಯೂಬ್‌ ಚಾನೆಲ್‌ಗಳನ್ನು ಹೊಂದಿದ್ದಾರೆ.  ಬೀರ್‌ ಬೈಸೆಪ್ಸ್‌ ಚಾನೆಲ್‌ನಲ್ಲಿ 12 ದಶಲಕ್ಷ ಚಂದಾದಾರರನ್ನು ಹೊಂದಿದ್ದರು. 
icon

(2 / 8)

ನರೇಂದ್ರ ಮೋದಿ ಭೇಷ್‌ ಅಂದಿದ್ರು: ಈ ವರ್ಷ ನರೇಂದ್ರ ಮೋದಿ ಕೈಯಿಂದ ನ್ಯಾಷನಲ್‌ ಕ್ರಿಯೆಟರ್ಸ್‌ ಅವಾರ್ಡ್‌ ಪಡೆದುಕೊಂಡಿದ್ದರು. ಈ ಸಮಯದಲ್ಲಿ ಮೋದಿ ಜತೆ ತಮಾಷೆಯಾಗಿ ಚಾಟ್‌ ಮಾಡಿದ್ದರು. ನೀವು ಯಾಕೆ ನನ್ನ ಫಾಲೋ ಮಾಡ್ತಾ ಇಲ್ಲ ಎಂದು ಮೋದಿಯ ಬಳಿ ತಮಾಷೆಯಾಗಿ ಕೇಳಿದ್ದರು. ಇವರ ಡಿಜಿಟಲ್‌ ಕಂಟೆಂಟ್‌ ಸಾಧನೆಗೆ ನರೇಂದ್ರ ಮೋದಿ ಭೇಷ್‌ ಎಂದಿದ್ದರು.
icon

(3 / 8)

ರಣವೀರ್‌ ಅವರು "ದಿ ರಣವೀರ್‌ ಶೋ" ಎಂಬ ಪಾಡ್‌ಕಾಸ್ಟ್‌ ನಡೆಸುತ್ತಿದ್ದರು. ಇವರು ಮಾಂಕೆ ಎಂಟರ್‌ಟೇನ್‌ಮೆಂಟ್‌ನ ಸಹ ಸ್ಥಾಪಕರು. ಇದು ಜನಪ್ರಿಯ ಟ್ಯಾಲೆಂಟ್‌ ಮ್ಯಾನೇಜ್‌ಮೆಂಟ್‌ ಮತ್ತು ಇನ್‌ಫ್ಲೂಯೆನ್ಸರ್‌ ಮಾರ್ಕೆಟಿಂಗ್‌ ಏಜೆನ್ಸಿಯಾಗಿದೆ. ವರದಿಗಳ ಪ್ರಕಾರ ಇವರ ನಿವ್ವಳ ಸಂಪತ್ತು 58 ಕೋಟಿ ರೂಪಾಯಿ. ಹಲವು ವರದಿಗಳು ಇವರ ಯೂಟ್ಯೂಬ್‌ ಆದಾಯದ ಕುರಿತು ಮಾಹಿತಿ ನೀಡಿವೆ. ರಣವೀರ್‌ ಅಲ್ಲಾಬಾಡಿಯಾ ಅವರು ತನ್ನ ಬೀರ್‌ಬೈಸೆಪ್ಸ್‌ ಮತ್ತು ಇತರೆ ಚಾನೆಲ್‌ಗಳ ಮೂಲ ತಿಂಗಳಿಗೆ 35 ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಾರೆ ಎಂದು ತಿಳಿಸಿವೆ. 
icon

(4 / 8)

ಇದರೊಂದಿಗೆ ಇವರು ಹಲವು ಬ್ರ್ಯಾಂಡ್‌ ಪ್ರಮೋಷನ್‌ಗಳನ್ನೂ ಮಾಡುತ್ತಾರೆ. ಇವರ ಇತರೆ ಆದಾಯಗಳ ಕುರಿತು ಮಾಹಿತಿ ಲಭ್ಯವಿಲ್ಲ. ಯೂಟ್ಯೂಬ್‌ನ ಸಂಪಾದನೆಯೇ ಇಷ್ಟೊಂದು ಇರುವಾಗ ತನ್ನ ಏಜೆನ್ಸಿ ಹಾಗೂ ಇತರೆ ವ್ಯವಹಾರಗಳ ಮೂಲಕವೂ ಹಲವು ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಿರಬಹುದು ಎನ್ನಲಾಗಿದೆ. 
icon

(5 / 8)

ಇವರು ಮುಂಬೈನಲ್ಲಿ 1993ರ ಜೂನ್‌ 2ರಂದು ಜನಿಸಿದರು. ಮುಂಬೈನ ಧೀರುಭಾಯಿ ಅಂಬಾನಿ ಇಂಟರ್‌ನ್ಯಾಷನಲ್‌ ಸ್ಕೂಲ್‌ನ ಹಳೆ ವಿದ್ಯಾರ್ಥಿ. ದ್ವಾರಕದಾಸ್‌ ಜೀವನ್‌ಲಾಲ್‌ ಶಾಂಘ್ವಿ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ನಲ್ಲಿ ಎಲೆಕ್ಟ್ರಾನಿಕ್ಸ್‌ ಆಂಡ್‌ ಟೆಲಿಕಮ್ಯುನಿಕೇಷನ್‌ನಲ್ಲಿ ಎಂಜಿನಿಯರಿಂಗ್‌ ಪದವಿ ಪಡೆದಿದ್ದಾರೆ. 2022ರಲ್ಲಿ ಫೋರ್ಬ್ಸ್‌ ನಿಯತಕಾಲಿಕೆಯ ಏಷ್ಯಾದ 30 ವರ್ಷದೊಳಗಿನ ಸಾಧಕರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. 
icon

(6 / 8)

ಈಗ ಯಾಕೆ ಸುದ್ದಿಯಲ್ಲಿದ್ದಾರೆ?:  ಯೂಟ್ಯೂಬರ್‌ ರಣವೀರ್ ಅಲ್ಲಾಬಾಡಿಯಾ ಇತ್ತೀಚಿನ ಸೈಬರ್‌ ದಾಳಿಯ ಬಲಿಪಶುವಾಗಿದ್ದಾರೆ. ತನ್ನ ಯೂಟ್ಯೂಬ್‌ ಚಾನೆಲ್‌ಗಳು ಹ್ಯಾಕ್‌ ಆಗಿರುವುದಾಗಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ.
icon

(7 / 8)

ಇವರು ಪ್ರಮುಖವಾಗಿ BeerBiceps ಎಂಬ ಯೂಟ್ಯೂಬ್‌ ಚಾನೆಲ್‌ ನಡೆಸುತ್ತಿದ್ದರು. ಈ ಚಾನೆಲ್‌ನ ಹೆಸರನ್ನು ಹ್ಯಾಕರ್‌ಗಳು @Elon.trump.tesla_live2024 ಮತ್ತು ಇವರ ಪರ್ಸನಲ್‌ ಚಾನೆಲ್‌ ಹೆಸರನ್ನು @Tesla.event.trump_2024 ಎಂದು ಬದಲಾಯಿಸಿದ್ದಾರೆ. ಇಷ್ಟು ಮಾತ್ರವಲ್ಲದೆ ಇವರು ಇಲ್ಲಿಯವರೆಗೆ ಮಾಡಿರುವ ಬಹುತೇಕ ಸಂದರ್ಶನಗಳು ಮತ್ತು ಪಾಡ್‌ಕಾಸ್ಟ್‌ ವಿಡಿಯೋಗಳನ್ನು ಹ್ಯಾಕರ್‌ಗಳು ಡಿಲೀಟ್‌ ಮಾಡಿದ್ದಾರೆ. 
icon

(8 / 8)

ಇವರು ಪ್ರಮುಖವಾಗಿ BeerBiceps ಎಂಬ ಯೂಟ್ಯೂಬ್‌ ಚಾನೆಲ್‌ ನಡೆಸುತ್ತಿದ್ದರು. ಈ ಚಾನೆಲ್‌ನ ಹೆಸರನ್ನು ಹ್ಯಾಕರ್‌ಗಳು @Elon.trump.tesla_live2024 ಮತ್ತು ಇವರ ಪರ್ಸನಲ್‌ ಚಾನೆಲ್‌ ಹೆಸರನ್ನು @Tesla.event.trump_2024 ಎಂದು ಬದಲಾಯಿಸಿದ್ದಾರೆ. ಇಷ್ಟು ಮಾತ್ರವಲ್ಲದೆ ಇವರು ಇಲ್ಲಿಯವರೆಗೆ ಮಾಡಿರುವ ಬಹುತೇಕ ಸಂದರ್ಶನಗಳು ಮತ್ತು ಪಾಡ್‌ಕಾಸ್ಟ್‌ ವಿಡಿಯೋಗಳನ್ನು ಹ್ಯಾಕರ್‌ಗಳು ಡಿಲೀಟ್‌ ಮಾಡಿದ್ದಾರೆ. (social media)

ಇತರ ಗ್ಯಾಲರಿಗಳು