Women Health Tips: ಹೆಣ್ಣುಮಕ್ಕಳನ್ನು ಹೆಚ್ಚು ಕಾಡುತ್ತಿರುವ ಮೈಗ್ರೇನ್? ಇವೂ ಕಾರಣಗಳಿರಬಹುದು
- Migraine in Women: ಇತ್ತೀಚೆಗೆ ಹೆಣ್ಣುಮಕ್ಕಳನ್ನು ಮೈಗ್ರೇನ್ ಸಮಸ್ಯೆ ಹೆಚ್ಚು ಬಾಧಿಸುತ್ತಿದೆ. ಮಹಿಳೆಯರು ಮೈಗ್ರೇನ್‌ನಿಂದ ಬಳಲುವುದಕ್ಕೆ ಹಲವು ಕಾರಣಗಳಿವೆ.
- Migraine in Women: ಇತ್ತೀಚೆಗೆ ಹೆಣ್ಣುಮಕ್ಕಳನ್ನು ಮೈಗ್ರೇನ್ ಸಮಸ್ಯೆ ಹೆಚ್ಚು ಬಾಧಿಸುತ್ತಿದೆ. ಮಹಿಳೆಯರು ಮೈಗ್ರೇನ್‌ನಿಂದ ಬಳಲುವುದಕ್ಕೆ ಹಲವು ಕಾರಣಗಳಿವೆ.
(1 / 6)
ಮೈಗ್ರೇನ್ ಸಾಮಾನ್ಯ ತಲೆನೋವಿಗಿಂತ ಭಿನ್ನವಾಗಿದೆ. ಇದು ಹುಡುಗಿಯರಲ್ಲಿ ಹೆಚ್ಚಾಗಿ ಕಾಣಿಸುತ್ತದೆ. ಮೈಗ್ರೇನ್ ಉಂಟಾಗಲು ನಿಖರವಾದ ಕಾರಣ ತಿಳಿದಿಲ್ಲವಾದರೂ ಈ ಕೆಲವೊಂದು ಅಂಶಗಳು ಈ ತಲೆನೋವಿಗೆ ಕಾರಣವಾಗಬಹುದು ಎನ್ನುತ್ತಾರೆ ತಜ್ಞರು.
(2 / 6)
ಪ್ರೌಢಾವಸ್ಥೆಯ ಸಮಸ್ಯೆ: ಪ್ರೌಢಾವಸ್ಥೆಯಲ್ಲಿ ಮೈಗ್ರೇನ್ ಸಮಸ್ಯೆ ಉಂಟಾಗುತ್ತದೆ. ಈ ಅವಧಿಯಲ್ಲಿ ಹಲವು ರೀತಿಯ ದೈಹಿಕ ಬದಲಾಗಳಾಗುತ್ತವೆ. ಅಷ್ಟೇ ಅಲ್ಲ, ಈ ಸಮಯದಲ್ಲಿ ಹಾರ್ಮೋನ್ ಮಟ್ಟವೂ ಏರುಪೇರಾಗುತ್ತದೆ. ಆದ್ದರಿಂದ ಮೈಗ್ರೇನ್ ಕಾಡುವುದು ಸಾಮಾನ್ಯ.
(3 / 6)
ಹಾರ್ಮೋನ್ ಸಮಸ್ಯೆಗಳು: ತಜ್ಞರ ಪ್ರಕಾರ ಮೈಗ್ರೇನ್‌ಗೆ ಹಾರ್ಮೋನ್‌ಗಳೂ ಕಾರಣ. ಮಹಿಳೆಯರಲ್ಲಿನ ಪ್ರಮುಖ ಹಾರ್ಮೋನುಗಳಾದ ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟೆರಾನ್ ಸ್ರವಿಕೆಯಲ್ಲಿ ವ್ಯತ್ಯಾಸವಾದಾಗ ಈ ತಲೆನೋವು ಕಾಣಿಸಬಹುದು. ವೈದ್ಯರ ಪ್ರಕಾರ, ಈಸ್ಟ್ರೊಜೆನ್ ಪ್ರಮಾಣದಲ್ಲಿ ಏರಿಳಿತವಾದಾಗ ಈ ಸಮಸ್ಯೆ ಉಲ್ಬಣಿಸುತ್ತದೆ.
(4 / 6)
ಋತುಚಕ್ರ: ಹೆಣ್ಣುಮಕ್ಕಳಿಗೆ ಋತುಚಕ್ರ ಮತ್ತೊಂದು ದೊಡ್ಡ ಸಮಸ್ಯೆಯಾಗಿದೆ. ಈ ಅವಧಿಯಲ್ಲಿ ಹಾರ್ಮೋನ್ ಮಟ್ಟದಲ್ಲಿ ಸಾಕಷ್ಟು ಏರುಪೇರಾಗುತ್ತದೆ. ಆದ್ದರಿಂದ, ಹಲವರಿಗೆ ಮುಟ್ಟಿನ ದಿನದ ಆರಂಭಕ್ಕೂ ಮೊದಲು ಮೈಗ್ರೇನ್ ತಲೆನೋವು ಹೆಚ್ಚಾಗುತ್ತದೆ. ಮುಟ್ಟಿನ ನಂತರ ಈ ನೋವು ಕಡಿಮೆಯಾಗುತ್ತದೆ.
(5 / 6)
ಲೈಂಗಿಕ ಅತೃಪ್ತಿ: ಲೈಂಗಿಕ ಅತೃಪ್ತಿಯ ಕಾರಣದಿಂದಲೂ ಮೈಗ್ರೇನ್ ಸಮಸ್ಯೆ ಕಾಣಿಸಬಹುದು. ಕಾಂಡೋಮ್ ಕಂಪನಿ ಡ್ಯೂರೆಕ್ಸ್ ಇಂಡಿಯಾ ಇತ್ತೀಚಿನ ಸಮೀಕ್ಷೆಯಲ್ಲಿ ಇದನ್ನು ಹೇಳಿದೆ. ಮದುವೆಯ ನಂತರ ಲೈಂಗಿಕ ಜೀವನ ಸುಖವಾಗಿರದಿದ್ದರೆ ಮೈಗ್ರೇನ್ ಸಮಸ್ಯೆ ಹೆಚ್ಚಾಗಬಹುದು. ಭಾರತದಲ್ಲಿ ಶೇ 72ರಷ್ಟು ಮಹಿಳೆಯರು ಅತೃಪ್ತ ಲೈಂಗಿಕ ಜೀವನವನ್ನು ಹೊಂದಿದ್ದಾರೆ.
ಇತರ ಗ್ಯಾಲರಿಗಳು