ಆರಂಭಿಕ ಪಂದ್ಯದಲ್ಲೇ ನ್ಯೂಜಿಲೆಂಡ್ ವಿರುದ್ಧ ಮುಗ್ಗರಿಸಿದ ಭಾರತ; ಉಳಿದ ಮೂರು ಪಂದ್ಯ ಗೆದ್ದರಷ್ಟೇ ಸೆಮಿಫೈನಲ್ ಆಸೆ ಜೀವಂತ
- ICC Womens T20 World Cup 2024: ಮಹಿಳಾ ಟಿ20 ವಿಶ್ವಕಪ್ 2024 ಅಭಿಯಾನದ ಆರಂಭಿಕ ಪಂದ್ಯದಲ್ಲೇ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ ಹೀನಾಯ ಸೋಲು ಕಂಡಿದೆ. ಆದರೆ ಉಳಿದ ಮೂರು ಪಂದ್ಯಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ.
- ICC Womens T20 World Cup 2024: ಮಹಿಳಾ ಟಿ20 ವಿಶ್ವಕಪ್ 2024 ಅಭಿಯಾನದ ಆರಂಭಿಕ ಪಂದ್ಯದಲ್ಲೇ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ ಹೀನಾಯ ಸೋಲು ಕಂಡಿದೆ. ಆದರೆ ಉಳಿದ ಮೂರು ಪಂದ್ಯಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ.
(1 / 5)
ದುಬೈನಲ್ಲಿ ಅಕ್ಟೋಬರ್ 4ರ ಶುಕ್ರವಾರ ನಡೆದ ಮಹಿಳಾ ಟಿ 20 ವಿಶ್ವಕಪ್ 2024ರ ತನ್ನ ಆರಂಭಿಕ ಪಂದ್ಯದಲ್ಲಿ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ 58 ರನ್ಗಳ ಹೀನಾಯ ಸೋಲನುಭವಿಸಿತು.(AP)
(2 / 5)
ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್ 4 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿತು. 161 ರನ್ಗಳ ಗುರಿ ಬೆನ್ನತ್ತಿದ ಭಾರತ 19 ಓವರ್ಗಳಲ್ಲಿ 102 ರನ್ಗಳಿಗೆ ಆಲೌಟ್ ಆಯಿತು.(AP)
(3 / 5)
ನ್ಯೂಜಿಲೆಂಡ್ ಉತ್ತಮ ಪ್ರದರ್ಶನ ನೀಡಿತು. ಸೋಫಿ ಡಿವೈನ್ 57 ರನ್ ಸಿಡಿಸಿ ಗಮನ ಸೆಳೆದರು. ಆ ಮೂಲಕ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಲು ನೆರವಾದರು. ಭಾರತದ ಪರ ರೇಣುಕಾ ಸಿಂಗ್ 2 ವಿಕೆಟ್ ಪಡೆದು ಮಿಂಚಿದರು.(AP)
(4 / 5)
ಭಾರತ ತಂಡವು ಬ್ಯಾಟಿಂಗ್ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿತು. ಸ್ಮೃತಿ ಮಂಧಾನ, ಹರ್ಮನ್, ಶಫಾಲಿ, ಜೆಮಿಮಾ, ರಿಚಾ ಸೇರಿದಂತೆ ಎಲ್ಲರೂ ಸಹ ವೈಫಲ್ಯ ಅನುಭವಿಸಿದರು. ಹರ್ಮನ್ 15 ರನ್ ಗಳಿಸಿದ್ದೇ ಗರಿಷ್ಠ ಸ್ಕೋರ್ ಆಗಿದೆ.(AP)
ಇತರ ಗ್ಯಾಲರಿಗಳು