Mayank Agarwal: ವಾಯುಪಡೆಯ ಪೈಲೆಟ್​ ಆಗುವ ಕನಸು ಕಂಡಿದ್ದೆ; ಮನದಾಳದ ಮಾತು ಬಿಚ್ಚಿಟ್ಟ ಕನ್ನಡಿಗ ಮಯಾಂಕ್​ ಅಗರ್​ವಾಲ್​​
ಕನ್ನಡ ಸುದ್ದಿ  /  ಕ್ರೀಡೆ  /  Mayank Agarwal: ವಾಯುಪಡೆಯ ಪೈಲೆಟ್​ ಆಗುವ ಕನಸು ಕಂಡಿದ್ದೆ; ಮನದಾಳದ ಮಾತು ಬಿಚ್ಚಿಟ್ಟ ಕನ್ನಡಿಗ ಮಯಾಂಕ್​ ಅಗರ್​ವಾಲ್​​

Mayank Agarwal: ವಾಯುಪಡೆಯ ಪೈಲೆಟ್​ ಆಗುವ ಕನಸು ಕಂಡಿದ್ದೆ; ಮನದಾಳದ ಮಾತು ಬಿಚ್ಚಿಟ್ಟ ಕನ್ನಡಿಗ ಮಯಾಂಕ್​ ಅಗರ್​ವಾಲ್​​

ಟೀಮ್‌ ಇಂಡಿಯಾದ ಅತ್ಯಂತ ಶಿಕ್ಷಿತ ಕ್ರಿಕೆಟಿಗರ ಪೈಕಿ ಮಯಾಂಕ್‌ ಅಗರ್​​ವಾಲ್​​ ಕೂಡ ಒಬ್ಬರು. ಏರ್‌ಫೋರ್ಸ್‌ ಪೈಲಟ್‌ ಆಗುವುದರ ಕನಸು ಕಂಡಿದ್ದರಂತೆ. ಹೀಗೆ ಹಲವು ವಿಷಯಗಳ ಕುರಿತು ಮನ ಬಿಚ್ಚಿ ಮಾತನಾಡಿದ್ದಾರೆ ಕನ್ನಡಿಗ.

ಮಯಾಂಕ್‌ ಅಗರ್​​ವಾಲ್
ಮಯಾಂಕ್‌ ಅಗರ್​​ವಾಲ್

ಸನ್​ರೈಸರ್ಸ್​ ಹೈದರಾಬಾದ್ (Sunrisers Hyderabad) ತಂಡದ ಆರಂಭಿಕ ಆಟಗಾರ ಮಯಾಂಕ್​ ಅಗರ್​ವಾಲ್​ (Mayank Agarwal), ಆರೆಂಜ್​ ಆರ್ಮಿ ಪರ ಹೆಚ್ಚು ರನ್​ ಕಲೆ ಹಾಕಿದ ಆಟಗಾರ ಎನಿಸಿದ್ದಾರೆ. ಪ್ರಸಕ್ತ ಐಪಿಎಲ್​ನಲ್ಲಿ ಎಸ್​ಆರ್​​ಎಚ್​ ಅತ್ಯಂತ ಕಳಪೆ ಪ್ರದರ್ಶನ ನೀಡುತ್ತಿದ್ದರೂ, ಮಯಾಂಕ್​ ಪ್ರದರ್ಶನ ಗಮನ ಸೆಳೆಯುತ್ತಿದೆ. ಇತ್ತೀಚೆಗೆ SRH​ ಫ್ರಾಂಚೈಸಿ ಯೂಟ್ಯೂಟ್​ ಚಾನೆಲ್​​ನಲ್ಲಿ ನೀಡಿದ ಸಂದರ್ಶನದಲ್ಲಿ ತನ್ನ ಕನಸು ಏನು ಎಂಬುದನ್ನು ಬಿಚ್ಚಿಟ್ಟಿದ್ದಾರೆ.

ತಮ್ಮ ಅಧಿಕೃತ ಯುಟ್ಯೂಬ್ ಚಾನೆಲ್‌ನಲ್ಲಿ SRH ಹಂಚಿಕೊಂಡ ವಿಡಿಯೋದಲ್ಲಿ 32 ವರ್ಷದ ಮಯಾಂಕ್​, ತಮ್ಮ ನೆಚ್ಚಿನ ಚಟುವಟಿಕೆಗಳು, ಪ್ರಯಾಣದ ಯೋಜನೆಗಳು ಸೇರಿ ಪ್ರಮುಖ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ನನಗೆ ಪ್ರಯಾಣ ಮಾಡುವುದು ತುಂಬಾ ಇಷ್ಟ. ನನ್ನ ಕನಸುಗಳ ಪಟ್ಟಿ ಸಿದ್ಧಪಡಿಸಿದರೆ, ಅದಕ್ಕೆ ಅಗ್ರಸ್ಥಾನ. ನಾವು ಮುಂದೆ ಎಲ್ಲಿಗೆ ಹೋಗಬಹುದು ಮತ್ತು ಏನು ಮಾಡಬಹುದು ಎಂದೆಲ್ಲಾ ಪ್ಲಾನ್​ ಮಾಡುತ್ತೇನೆ ಎಂದು ಹೇಳಿದ್ದಾರೆ.

ನಾನು ಕುಟುಂಬ ಸದಸ್ಯರ ಜೊತೆಯಲ್ಲಿ ಹೆಚ್ಚು ಸಮಯ ಕಳೆಯಲು ಇಷ್ಟಪಡುತ್ತೇನೆ. ಹಾಗಾಗಿ ಮನೆಯಲ್ಲೇ ಇರುತ್ತೇನೆ. ಈ ವೇಳೆ ಒಂದೋ ನಾವು ಕುಟುಂಬ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತೇವೆ. ಕೆಲವೊಮ್ಮೆ ನಾವು ಕಾರ್ಡ್‌ಗಳನ್ನು ಆಡುತ್ತೇವೆ. ರಾತ್ರೋ ರಾತ್ರಿ ಊಟಕ್ಕೆ ಹೋಗಲು ಇಷ್ಟಪಡುತ್ತೇವೆ ಎಂದು ಮಯಾಂಕ್ ಹೇಳಿದ್ದಾರೆ.

ವಾಯುಪಡೆಯ ಪೈಲಟ್ ಆಗುವ ಕನಸು ಹೊಂದಿರುವುದಾಗಿಯೂ ಕರ್ನಾಟಕ ಬ್ಯಾಟರ್​ ಹೇಳಿದ್ದಾರೆ. ಈ ಬಗ್ಗೆ ಉತ್ತಮ ಅಧ್ಯಯನ ಕೂಡ ಮಾಡಿರುವುದಾಗಿ ತಳಿಸಿದ್ದಾರೆ. ಬಾಲ್ಯದಲ್ಲಿ ನಾನು ವಿಮಾನಗಳು ಮತ್ತು ಅವುಗಳ ಬಗ್ಗೆ ತುಂಬಾ ಆಕರ್ಷಿತನಾಗಿದ್ದೆ. ವಿಮಾನಗಳನ್ನು ನೋಡಲು ಸಾಧ್ಯವಾಗದಿದ್ದರೂ ಅವುಗಳನ್ನು ಗುರುತಿಸುತ್ತಿದ್ದೆ. ಆಕಾಶದಲ್ಲಿ ವಿಮಾನಗಳು ಹೋಗುತ್ತಿದ್ದಾಗ ನೋಡಿ ಖುಷಿಪಡುತ್ತಿದ್ದೆ. ಯಾವಾಗಲೂ ವಾಯುಪಡೆಯ ಪೈಲಟ್ ಆಗಬೇಕೆಂದು ಬಯಸಿದ್ದೆ. ಅದು ನನ್ನ ಕನಸಾಗಿತ್ತು ಎಂದಿದ್ದಾರೆ ಆರಂಭಿಕ ಆಟಗಾರ.

ಓದಿನಲ್ಲಿ ನಾನು ತುಂಬಾ ಮುಂದಿದ್ದೆ. ನನ್ನ ತಾಯಿ ನನ್ನನ್ನು ಸದಾ ಬೆಂಬಲಿಸುತ್ತಿದ್ದಳು. ಆದರೆ, ನನ್ನ ಹೆಂಡತಿ ಹಾಗಲ್ಲ, ಆಕೆ ನನ್ನ ಸದಾ ಕಾಲು ಎಳೆಯುತ್ತಿದ್ದಳು ಎಂದು ನಕ್ಕಿದರು ಮಯಾಂಕ್​. 10 ನೇ ತರಗತಿಯಲ್ಲಿ ಶೇ. 80 ಅಂಕ ಗಳಿಸಿದ್ದೇನೆ. ಪದವಿಯಲ್ಲೂ ಅದ್ಭುತವಾಗಿ ಓದುತ್ತಿದ್ದೆ ಎಂದು ತಿಳಿಸಿದ್ದಾರೆ.

ತನ್ನ ಹೆಂಡತಿಯ ಬಗ್ಗೆ ಮಾತನಾಡಿದ ಮಯಾಂಕ್, ತನ್ನ ಆರಂಭಿಕ ಕ್ರಿಕೆಟ್ ದಿನಗಳಲ್ಲಿ ಸಾಕಷ್ಟು ಬೆಂಬಲ ನೀಡಿದಳು. ಮೊದಲು ಅಭ್ಯಾಸ ಮುಗಿಸಿದ ನಂತರವೇ ಭೇಟಿ ಎಂದು ಹೇಳುತ್ತಿದ್ದಳು. ನೀವು ಹೆಚ್ಚು ಕ್ರಿಕೆಟ್​ನತ್ತ ಗಮನಹರಿಸಿ. ನನ್ನನ್ನು ಭೇಟಿಯಾಗುವ ಸಲುವಾಗಿ ಅಭ್ಯಾಸ ಅಥವಾ ಯಾವುದನ್ನೂ ತಪ್ಪಿಸಿಕೊಳ್ಳಬೇಕಾಗಿಲ್ಲ ಎಂದು ತುಂಬಾ ಪ್ರೋತ್ಸಾಹಿಸುತ್ತಿದ್ದಳು ಎಂದು ಹೇಳಿದ್ದಾರೆ ಮಯಾಂಕ್​. ಐಪಿಎಲ್​ನಲ್ಲಿ ಈವರೆಗೂ 7 ಪಂದ್ಯಗಳಲ್ಲಿ ಮಯಾಂಕ್​ 164 ರನ್​ ಗಳಿಸಿದ್ದಾರೆ. 111.56ರ ಸ್ಟ್ರೈಕ್​ರೇಟ್​ ಮತ್ತು 23.43ರ ಸರಾಸರಿಯಲ್ಲಿ ರನ್​ ಗಳಿಸಿದ್ದಾರೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.