Washington Sundar: ಸತತ ಸೋಲಿನಿಂದ ಕಂಗೆಟ್ಟಿರುವ ಸನ್ರೈಸರ್ಸ್ ಹೈದರಾಬಾದ್ಗೆ ಮತ್ತೆ ಆಘಾತ; ಸ್ಟಾರ್ ಆಲ್ರೌಂಡರ್ ಐಪಿಎಲ್ನಿಂದ ಔಟ್
ಮಂಡಿರಜ್ಜು ಗಾಯದ ಕಾರಣದಿಂದ ಸನ್ರೈಸರ್ಸ್ ಹೈದರಾಬಾದ್ ತಂಡದ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ (Washington Sundar), 16ನೇ ಆವೃತ್ತಿಯ ಐಪಿಎಲ್ನಿಂದ ಹೊರ ಬಿದ್ದಿದ್ದಾರೆ. ಈ ಬಗ್ಗೆ ಫ್ರಾಂಚೈಸಿ ಖಚಿತಪಡಿಸಿದೆ.
16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (IPL 2023) ಇಂಜುರಿ ಕಾಟ ಮತ್ತೆ ಶುರುವಾಗಿದೆ. ಪ್ರಮುಖ ಆಟಗಾರರೇ ಗಾಯದ ಸಮಸ್ಯೆ ಕಾರಣ ತಂಡಗಳಿಗೆ ದೂರವಾಗಿದ್ದಾರೆ. ಈಗ ಮತ್ತೊಬ್ಬ ಪ್ರಮುಖ ಆಟಗಾರ ಇಂಜುರಿ ಸಮಸ್ಯೆ ಸಿಲುಕಿದ್ದಾರೆ. ಈಗಾಗಲೇ ಸತತ ಸೋಲಿನ ನೋವಿನಿಂದ ಬಳಲುತ್ತಿರುವ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ (Sunrisers Hyderabad) ಗಾಯವು ಬರೆ ಎಳೆದಿದೆ.
ಸನ್ರೈಸರ್ಸ್ ಹೈದರಾಬಾದ್ ತಂಡ ಟೂರ್ನಿಯಲ್ಲಿ ಅತ್ಯಂತ ನಿರಾಶಾದಾಯಕ ಪ್ರದರ್ಶನ ತೋರುತ್ತಿದೆ. ಘಟಾನುಘಟಿ ಆಟಗಾರರೇ ತಂಡದಲ್ಲಿದ್ದರೂ ಅತ್ಯಂತ ಕೆಟ್ಟ ಪ್ರದರ್ಶನ ತೋರುತ್ತಿದ್ದಾರೆ. ಈಗಾಗಲೇ ಆಡಿರುವ 7 ಪಂದ್ಯಗಳಲ್ಲಿ 2ರಲ್ಲಿ ಗೆದ್ದಿರುವ ಆರೆಂಜ್ ಆರ್ಮಿಗೆ ಮತ್ತೊಂದು ಆಘಾತ ಎದುರಾಗಿದೆ. ಆಲ್ರೌಂಡರ್ ವಾಷಿಂಗ್ಟನ್ ಸುಂದರ್ (Washington Sundar) ಮಂಡಿರಜ್ಜು (Hamstring Injury) ಇಂಜುರಿಗೆ ತುತ್ತಾಗಿದ್ದಾರೆ.
ಸುಂದರ್ ಗಾಯಗೊಂಡಿರುವ ಹಿನ್ನೆಲೆ ಟೂರ್ನಿಯಿಂದ ಹೊರ ಬಿದ್ದಿದ್ದಾರೆ. ಈ ಬಗ್ಗೆ ಫ್ರಾಂಚೈಸಿ ಟ್ವೀಟ್ ಮಾಡಿದ್ದು, ಮಂಡಿರಜ್ಜು ಗಾಯದ ಸಮಸ್ಯೆಗೆ ಒಳಗಾಗಿರುವ ವಾಷಿಂಗ್ಟನ್ ಸುಂದರ್ ಉಳಿದ ಟೂರ್ನಿಯಿಂದ ಹೊರ ಬಿದ್ದಿದ್ದಾರೆ ಎಂದು ಖಚಿತಪಡಿಸಿದೆ. ಇದರೊಂದಿಗೆ ಸತತ ಸೋಲುಗಳಿಂದ ಕಂಗೆಟ್ಟಿರುವ ಹೈದರಾಬಾದ್ಗೆ ಮತ್ತೊಂದು ಆಘಾತವಾಗಿದೆ.
ಇನ್ನು ವಾಷಿಂಗ್ಟನ್ ಸುಂದರ್ ಮೊದಲಾರ್ಧ ಟೂರ್ನಿಯಲ್ಲಿ ತಂಡದಲ್ಲಿ ಅವಕಾಶ ಪಡೆದಿದ್ದರು. ಆದರೆ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಬ್ಯಾಟಿಂಗ್ - ಬೌಲಿಂಗ್ ಎರಡರಲ್ಲೂ ವಿಫಲರಾಗಿದ್ದಾರೆ. ಆದರೆ ಡೆಲ್ಲಿ ಕ್ಯಾಪಿಟಲ್ಸ್ ಎದುರಿನ ಪಂದ್ಯದಲ್ಲಿ ಮಾತ್ರ ಅತ್ಯದ್ಭುತ ಬೌಲಿಂಗ್ ಪ್ರದರ್ಶಿಸಿದ್ದರು. 4 ಓವರ್ಗಳಲ್ಲಿ 28 ರನ್ ಬಿಟ್ಟುಕೊಟ್ಟು ಪ್ರಮುಖ 3 ವಿಕೆಟ್ ಪಡೆದಿದ್ದರು. ಬ್ಯಾಟಿಂಗ್ನಲ್ಲೂ ಅಲ್ಪ ಕಾಣಿಕೆ ನೀಡಿದ್ದರು. 15 ಎಸೆತಗಳಲ್ಲಿ ಅಜೇಯ 24 ರನ್ ಚಚ್ಚಿದ್ದರು.
ಪ್ರಸಕ್ತ ಆವೃತ್ತಿಯಲ್ಲಿ 7 ಪಂದ್ಯಗಳನ್ನಾಡಿರುವ ವಾಷಿಂಗ್ಟನ್ ಸುಂದರ್, ಗಳಿಸಿದ್ದು ಮಾತ್ರ 60 ರನ್. ಬೌಲಿಂಗ್ನಲ್ಲಿ 3 ವಿಕೆಟ್ ಮಾತ್ರ ಪಡೆದಿದ್ದಾರೆ. ಆದರೆ ಅವರ ಪ್ರದರ್ಶನ ಟೀಮ್ ಮ್ಯಾನೇಜ್ಮೆಂಟ್ ಅಸಮಾಧಾನಕ್ಕೆ ಒಳಗಾಗಿದೆ. ಇನ್ನು ತಂಡದ ಕೋಚ್ ಬ್ರಿಯಾನ್ ಲಾರಾ ಅವರ ಮಾತುಗಳಲ್ಲೂ ಇದೇ ಅರ್ಥ ಬರುತ್ತಿದೆ. ಸುಂದರ್ ಅವರು ಅದ್ಭುತ ಆಲ್ರೌಂಡರ್ ಆಗಬೇಕೆಂಬುದು ನಮ್ಮ ಇಚ್ಛೆ. ಅಂತಹ ಪ್ರದರ್ಶನಕ್ಕಾಗಿ ನಾವು ಕಾಯುತ್ತಿದ್ದೇವೆ ಎಂದು ಹೇಳಿದ್ದರು.
ಎಸ್ಆರ್ಎಚ್ ನೀರಸ ಪ್ರದರ್ಶನ
ಸನ್ರೈಸರ್ಸ್ ಹೈದರಾಬಾದ್ ಅತ್ಯಂತ ನಿರಾಸೆ ಮೂಡಿಸಿದೆ. ತಂಡದಲ್ಲಿ ಘಟಾನುಘಟಿ ಆಟಗಾರರ ದಂಡೇ ಇದ್ದರೂ, ಅವರಿಂದ ನಿರೀಕ್ಷಿತ ಪ್ರದರ್ಶನ ಹೊರ ಬರುತ್ತಿಲ್ಲ. ಅದರಲ್ಲೂ ತಂಡದಲ್ಲಿರುವ ಬಲಿಷ್ಠ ಆಟಗಾರರನ್ನು ಕಂಡು ಟೂರ್ನಿ ಆರಂಭಕ್ಕೂ ಮುನ್ನ ಕಪ್ ಗೆಲ್ಲುವ ಫೇವರಿಟ್ ಎನ್ನಲಾಗಿತ್ತು. ಆದರೀಗ ಆಡಿದ 7 ಪಂದ್ಯಗಳಲ್ಲಿ 2ರಲ್ಲಿ ಗೆದ್ದು ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.
ಇಂದಿನ ಪ್ರಮುಖ ಕ್ರೀಡಾ ಸುದ್ದಿ
Dodda Ganesh: ಯಾವಾಗಲೂ ಶಹಬಾಜ್, ಲೋಮ್ರೋರ್ಗೆ ಅವಕಾಶ ಕೊಡ್ತೀರಾ, ಕನ್ನಡಿಗ ಮನೋಜ್ ಭಾಂಡಗೆಗೆ ಚಾನ್ಸ್ ಕೊಡ್ರಪ್ಪಾ; ದೊಡ್ಡ ಗಣೇಶ್ ಕೆಂಡ
ಆರ್ಸಿಬಿ ಮ್ಯಾನೇಜ್ಮೆಂಟ್ ವಿರುದ್ಧ ಟೀಮ್ ಇಂಡಿಯಾ ಹಾಗೂ ಕರ್ನಾಟಕದ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ಕಿಡಿಕಾರಿದ್ದಾರೆ. ಆಡಿದವರನ್ನೇ ಆಡಿಸುತ್ತಿರುವ ಹಾಗೂ ಗೇಮ್ ಪ್ಲಾನ್ಸ್ ಬಗ್ಗೆ ಆಕ್ರೋಶ ಹೊರ ಹಾಕಿದ್ದಾರೆ. ಇದರ ಜೊತೆಗೆ ಕನ್ನಡಿಗ ಮನೋಜ್ ಭಾಂಡಗೆ ಅವರಿಗೆ ಅವಕಾಶ ನೀಡದಿರುವುದರ ಕುರಿತು ಕೆಂಡಕಾರಿದ್ದಾರೆ. ಪ್ರತಿ ಪಂದ್ಯಕ್ಕೂ ಸರಣಿ ಟ್ವೀಟ್ಗಳ ಮೂಲಕ ಆರ್ಸಿಬಿ ಮ್ಯಾನೇಜ್ಮೆಂಟ್ಗೆ ಪ್ರಶ್ನೆ ಮಾಡಿದ್ದಾರೆ. ಈ ಕುರಿತ ಸಂಪೂರ್ಣ ಸುದ್ದಿಗಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.
ವಿಭಾಗ