Kannada News  /  Sports  /  Cricket News Another Milestone For Kohli 250 Million Followers On Instagram Virat Joins The Ranks Of Ronaldo Messi Prs
ವಿರಾಟ್​ ಕೊಹ್ಲಿ
ವಿರಾಟ್​ ಕೊಹ್ಲಿ

Virat Kohli: ವಿರಾಟ್ ಮತ್ತೊಂದು ಮೈಲಿಗಲ್ಲು; ಇನ್​ಸ್ಟಾಗ್ರಾಂನಲ್ಲಿ 250 ಮಿಲಿಯನ್​ ಫಾಲೋವರ್ಸ್​; ರೊನಾಲ್ಡೋ, ಮೆಸ್ಸಿ ಸಾಲಿಗೆ ಸೇರಿದ ಕೊಹ್ಲಿ

25 May 2023, 21:50 ISTPrasanna Kumar P N
25 May 2023, 21:50 IST

ವಿರಾಟ್​ ಕೊಹ್ಲಿ (Virat Kohli) ಏನೇ ಮಾಡಿದರೂ, ಅದು ದಾಖಲೆನೇ. ಐಪಿಎಲ್​​ನಲ್ಲಿ (IPL 2023) ಶತಕ ಸಿಡಿಸಿ ಹೊಸ ಮೈಲಿಗಲ್ಲು ನಿರ್ಮಿಸಿರುವ ಕೊಹ್ಲಿ, ಈಗ ಮತ್ತೊಂದು ದಾಖಲೆ ಬರೆದಿದ್ದಾರೆ. ಆದರೆ, ಈ ದಾಖಲೆ ಬಂದಿರುವುದು ಮೈದಾನದಲ್ಲಲ್ಲ. ಅಷ್ಟಕ್ಕೂ ಕಿಂಗ್​ ಕೊಹ್ಲಿಯ ನೂತನ ದಾಖಲೆ ಏನು? ಈ ವರದಿ ಓದಿ.

ವಿರಾಟ್ ಕೊಹ್ಲಿ (Virat Kohli).. ಕ್ರಿಕೆಟ್​ ಜಗತ್ತಿನ ಏಕೈಕ ಬ್ಯಾಟಿಂಗ್ ಕಿಂಗ್​. ಪ್ರಸ್ತುತ ಪೀಳಿಗೆಯಲ್ಲಿ ಅರ್ಧಶತಕ, ಶತಕ, ರನ್​.. ಹೀಗೆ ಯಾವುದೇ ವಿಭಾಗ ತೆಗೆದುಕೊಂಡರೂ ಕೊಹ್ಲಿಯೇ ನಂಬರ್​ವನ್​. ಪಂದ್ಯ ಪಂದ್ಯದಲ್ಲೂ ವಿರಾಟ್​, ಒಂದಲ್ಲ ಒಂದು ದಾಖಲೆ ಬರೆಯುತ್ತಲೇ ಇರುತ್ತಾರೆ. ಇಷ್ಟು ದಿನ ಐಪಿಎಲ್​ನಲ್ಲಿ (IPL 2023) ರನ್​ಗಳ ಜಾತ್ರೆ ಸೃಷ್ಟಿಸಿದ ಕೊಹ್ಲಿ, ಆಫ್​ ದಿ ಫೀಲ್ಡ್​​ನಲ್ಲೂ ದಾಖಲೆ ಸೃಷ್ಟಿಸಿದ್ದಾರೆ. ಇದು ಯಾರಿಂದಲೂ ಸಾಧ್ಯವಾಗದ ಅಸಾಮಾನ್ಯ ದಾಖಲೆ ಬರೆದಿದ್ದಾರೆ.

ಕ್ರಿಕೆಟ್ ಮೇಲಿರುವ ಪ್ರೀತಿ, ಅಭಿಮಾನ, ಪ್ಯಾಶನ್, ಡೆಡಿಕೇಷನ್ ಕೊಹ್ಲಿ ಅವರನ್ನು ದೊಡ್ಡ ಸೂಪರ್ ಸ್ಟಾರ್​ ಮಾಡಿದೆ. ಫಾರ್ಮ್​ನಲ್ಲಿ ಇರಲಿ, ಬಿಡಲಿ, ಆನ್​ಫೀಲ್ಡ್​​ನಲ್ಲಿ ಕೊಹ್ಲಿ ಆಕ್ರಮಣಕಾರಿ ಮನೋಭಾವ ಮಾತ್ರ, ಕೊಂಚವೂ ಕುಗ್ಗಿಲ್ಲ. ಇದೇ ಕೋಟ್ಯಂತರ ಅಭಿಮಾನಿಗಳನ್ನು ಗಳಿಸಲು ಕಾರಣ. ಪ್ರಸ್ತುತ ಕ್ರಿಕೆಟ್​ ಜಗತ್ತಿನಲ್ಲಿ ಕೊಹ್ಲಿಗಿರುವಷ್ಟು ಫ್ಯಾನ್ಸ್, ಯಾವ ಕ್ರಿಕೆಟರ್​ಗೂ ಇಲ್ಲ. ಅಚ್ಚರಿ ಅಂದರೆ ಈ ವಿಷಯದಲ್ಲಿ ಕೊಹ್ಲಿಯನ್ನು ಟಚ್​ ಮಾಡೋಕು.

ಇನ್​​ಸ್ಟಾಗ್ರಾಂನಲ್ಲಿ ಕೊಹ್ಲಿಗೆ 250 ಫಾಲೋವರ್ಸ್!

ಕ್ರಿಕೆಟ್​ ದುನಿಯಾಗೆ ಮಾತ್ರವಲ್ಲ, ಸೋಷಿಯಲ್ ಮೀಡಿಯಾದಲ್ಲೂ ಕೊಹ್ಲಿಯೇ ಕಿಂಗ್ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಇನ್​​ಸ್ಟಾಗ್ರಾಂನಲ್ಲಿ 250 ಮಿಲಿಯನ್ ಫಾಲೋವರ್ಸ್ (250 million followers in Instagram) ದಾಟಿದ್ದಾರೆ. ಅಂದರೆ 25 ಕೋಟಿಗೂ ಅಧಿಕ ಫಾಲೋವರ್ಸ್​ ಅನ್ನು ಕೊಹ್ಲಿ ಸಂಪಾದಿಸಿದ್ದಾರೆ. ಆ ಮೂಲಕ ಜಾಲತಾಣದಲ್ಲಿ ದಾಖಲೆಗಳನ್ನು ಛಿದ್ರಗೊಳಿಸಿದ್ದಾರೆ.

ಈ ದಾಖಲೆ ಬರೆದ ವಿಶ್ವದ ಮೊದಲ ಕ್ರಿಕೆಟರ್

ಈ ದಾಖಲೆಗೆ ಪಾತ್ರರಾದ ವಿಶ್ವದ ಮೊದಲ ಹಾಗೂ ಏಕೈಕ ಕ್ರಿಕೆಟರ್​ ಅನ್ನೋ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಜೊತೆಗೆ ಏಷ್ಯಾ ಖಂಡದಲ್ಲೇ ಸಿನಿಮಾ, ರಾಜಕೀಯ, ಕ್ರೀಡೆ.. ಹೀಗೆ ಯಾವ ವಿಭಾಗದಲ್ಲೂ ಯಾರೂ ಇಷ್ಟು ಫಾಲೋವರ್ಸ್​ ಹೊಂದಿಲ್ಲ. 250 ಮಿಲಿಯನ್​ ಫಾಲೋವರ್ಸ್​ ಹೊಂದಿರುವ ಮೊದಲ ಏಷ್ಯನ್​ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ರೋನಾಲ್ಡೋ, ಮೆಸ್ಸಿ ನಂತರ ಕೊಹ್ಲಿಗೆ ಸ್ಥಾನ

ಒಟ್ಟಾರೆ ಕ್ರೀಡಾ ಜಗತ್ತಿನಲ್ಲೂ ಅಧಿಕ ಫಾಲೋವರ್ಸ್​​ ಹೊಂದಿರುವ ಪಟ್ಟಿಯಲ್ಲೂ ಕೊಹ್ಲಿಯೇ ಕಿಂಗ್​. 250 ಮಿಲಿಯನ್​ ಫಾಲೋವರ್ಸ್​ ಪೂರ್ಣಗೊಳಿಸಿರುವ ಕೊಹ್ಲಿ, ಈಗ 300 ಮಿಲಿಯನ್ ಮೇಲೆ ಕಣ್ಣಿಟ್ಟಿದ್ದಾರೆ. ಈ ದಾಖಲೆ ಬರೆದ ವಿಶ್ವದ ಮೂರನೇ ಕ್ರೀಡಾಪಟು ಎನಿಸಿದ್ದಾರೆ.

ಮೊದಲ ಸ್ಥಾನದಲ್ಲಿರುವ ಕ್ರೀಡಾಪಟು ಫುಟ್​ಬಾಲ್​ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ (Cristiano Ronaldo), 585 ಮಿಲಿಯನ್​ ಫಾಲೋವರ್ಸ್​ ಹೊಂದಿದ್ದಾರೆ. 500ಕ್ಕೂ ಹೆಚ್ಚು ಮಿಲಿಯನ್​ ಹೊಂದಿರುವ ಏಕೈಕ ವ್ಯಕ್ತಿ. 2ನೇ ಸ್ಥಾನದಲ್ಲಿರುವ ಲಿಯೋನೆಲ್​ ಮೆಸ್ಸಿ (Lionel Messi), 461 ಮಿಲಿಯನ್​ ಹಿಂಬಾಲಕರನ್ನು ಪಡೆದಿದ್ದಾರೆ.

ಕ್ರಿಕೆಟ್​​ 12 ದೇಶಗಳಿಗೆ ಸೀಮಿತ

ಫುಟ್​ಬಾಲ್ ಆಟಗಾರರು ಇಷ್ಟರಮಟ್ಟಿಗೆ ಫಾಲೋವರ್ಸ್​ ಹೊಂದಲು ಕಾರಣವಿದೆ. ಫುಟ್​​ಬಾಲ್​ ಜಾಗತಿಕ ಕ್ರೀಡೆಯಾಗಿದೆ. ಜಗತ್ತಿನ ಮೂಲೆ ಮೂಲೆಗೂ ಆಟದ ಕುರಿತು ಪರಿಚಯ ಇದೆ. ಆದರೆ ಕ್ರಿಕೆಟ್​ ಅನ್ನು 10 ರಿಂದ 12 ದೇಶಗಳಲ್ಲಿ ಮಾತ್ರ ಆಡುತ್ತಾರೆ. ಹಾಗಾಗಿ ಕೊಹ್ಲಿಯ ಈ ಮೈಲಿಗಲ್ಲು ಅವರಿಗೆ ಸಿಕ್ಕ ದೊಡ್ಡ ಗೌರವ.

ಭಾರತ ತಂಡದ ಮಾಜಿ ನಾಯಕ ಭವಿಷ್ಯದಲ್ಲಿ ಇನ್ನೂ ಹಲವು ದಾಖಲೆಗಳನ್ನು ಬರೆಯುವ ನಿರೀಕ್ಷೆಯಿದೆ. ಜಾಹೀರಾತು ಪ್ರಚಾರಕ್ಕೆ ಸಂಬಂಧಿಸಿ ಅವರು ಅತಿ ಹೆಚ್ಚು ಸಂಭಾವನೆ ಪಡೆಯುವ ಸೆಲೆಬ್ರಿಟಿಗಳಲ್ಲಿ ಒಬ್ಬರು. 2012ರಲ್ಲಿ ಏಕದಿನ ತಂಡದ ಉಪನಾಯಕನಾಗಿ ನೇಮಕಗೊಂಡ ನಂತರ ಅವರ ಸ್ಥಾನಮಾನ ಬೆಳೆಯಿತು. ಆ ಬಳಿಕ ಹಿಂತಿರುಗಿ ನೋಡಲೇ ಇಲ್ಲ.

2014/15ರಲ್ಲಿ ಟೀಮ್​ ಇಂಡಿಯಾ ಟೆಸ್ಟ್​ ತಂಡದ ನಾಯಕನಾಗಿ ಪಟ್ಟ ಅಲಂಕರಿಸಿದರು. 2017ರಲ್ಲಿ ಎಲ್ಲಾ ಫಾರ್ಮೆಟ್​ಗಳ ನಾಯಕನಾದರು. 2021/22ರಲ್ಲಿ ಟಿ20 ಮತ್ತು ಟೆಸ್ಟ್​ ತಂಡದ ನಾಯಕ ಸ್ಥಾನದಿಂದ ಕೆಳಗಿಳಿದರು. ಅದೇ ಋತುವಿನಲ್ಲಿ ಏಕದಿನ ತಂಡದ ನಾಯಕತ್ವದ ಸ್ಥಾನದಿಂದ ವಜಾಗೊಳಿಸಲಾಯಿತು.

ಐಪಿಎಲ್​ನಲ್ಲಿ ಬ್ಯಾಕ್​ ಟು ಬ್ಯಾಕ್​ ಶತಕ

ಪ್ರಸಕ್ತ ಐಪಿಎಲ್​ನಲ್ಲೂ ವಿರಾಟ್​ ಕೊಹ್ಲಿ ದಾಖಲೆಗಳ ಸುರಿಮಳೆಗೈದಿದ್ದಾರೆ. ಬ್ಯಾಕ್​ ಟು ಬ್ಯಾಕ್ ಶತಕ ಸಿಡಿಸಿ ಗಮನ ಸೆಳೆದಿದ್ದಾರೆ. ಆಡಿರುವ 14 ಪಂದ್ಯಗಳಲ್ಲಿ 639 ರನ್​ ಗಳಿಸಿದರು. 6 ಅರ್ಧಶತಕ, 2 ಶತಕಗಳನ್ನು ಸಿಡಿಸಿದರು. ಬ್ಯಾಟ್​​ನಿಂದಲೇ ಅಲ್ಲದೆ, ಸೋಷಿಯಲ್​ ಮೀಡಿಯಾದಲ್ಲೂ ಕೊಹ್ಲಿಯೇ ಕಿಂಗ್​. ಆ ಮೂಲಕ ನಾನೇ ಬೇರೆ, ನನ್ನ ರೇಂಜೇ ಬೇರೆ ಎನ್ನುತ್ತಿದ್ದಾರೆ.

ಇನ್​ಸ್ಟಾ ಪೋಸ್ಟ್​ ಬೆಲೆ 8.69 ಕೋಟಿ!

ಕೊಹ್ಲಿ ಕಳೆದ ವರ್ಷ ಇನ್​ಸ್ಟಾಗ್ರಾಂನಿಂದಲೇ 302 ಕೋಟಿ ಗಳಿಸಿದ್ದಾರೆ. ಕೊಹ್ಲಿ ಈವರೆಗೂ ತಮ್ಮ ಇನ್​ಸ್ಟಾ ಖಾತೆಯಲ್ಲಿ 1601 ಪೋಸ್ಟ್​ ಹಾಕಿದ್ದಾರೆ. ವಿರಾಟ್ ಇನ್​ಸ್ಟಾದಲ್ಲಿ ಹಾಕುವ ಒಂದೇ ಒಂದು ಬೆಲೆ 8.69 ಕೋಟಿ.