Bhawna Kohli: ವಿರಾಟ್ ಪ್ರತಿ ಹೆಜ್ಜೆಯಲ್ಲೂ ಬೆಂಗಾವಲಾಗಿದ್ದ ಭಾವನಾ ಕೊಹ್ಲಿ; ತಂದೆಯಂತೆ ಸಾಕಿ ಸಲುಹಿದ ಸಹೋದರಿ ಬಗ್ಗೆ ನಿಮಗೆಷ್ಟು ಗೊತ್ತು
Bhawna Kohli: ವಿರಾಟ್ ಕೊಹ್ಲಿ ಇಷ್ಟೆಲ್ಲಾ ಹೆಸರು, ಸಾಧನೆ, ಸಂಪಾದನೆ, ಯಶಸ್ಸಿಗೆ ಆ ಒಬ್ಬ ವ್ಯಕ್ತಿಯೇ ಕಾರಣ. ಅವರೇ ಸೂಪರ್ ಸ್ಟಾರ್ ಆಟಗಾರನ ಅಕ್ಕ ಅಕ್ಕ ಭಾವನಾ ಕೊಹ್ಲಿ ಧಿಂಗ್ರಾ. ಅವರ ಬಗ್ಗೆ ಈ ವರದಿಯಲ್ಲಿ ತಿಳಿಯೋಣ.
ವಿರಾಟ್ ಕೊಹ್ಲಿ (Virat Kohli) ಒಬ್ಬ ಸೂಪರ್ ಸ್ಟಾರ್ ಆಟಗಾರ. ಕ್ರಿಕೆಟ್ ಮೈದಾನದಲ್ಲಿ ನಿರ್ಮಿಸಿರುವ ನೂರಾರು ದಾಖಲೆಗಳು ಅವರ ಹೆಸರಿನಲ್ಲಿವೆ. ವಿಶ್ವಾದ್ಯಂತ ಅಭಿಮಾನಿಗಳ ದಂಡಿದೆ. ನೇಮ್-ಫೇಮ್ ಎಲ್ಲವೂ ಆತನ ಕಾಲಡಿ ಇದೆ. ಭಾರತ ಕ್ರಿಕೆಟ್ ತಂಡ, ಐಪಿಎಲ್ ಲೀಗ್ ನಲ್ಲಿ ಕೋಟಿ ಕೋಟಿ ಪಡೆಯುತ್ತಾರೆ. ಜಾಹೀರಾತು ಕಂಪನಿಗಳು ಅವರ ಮನೆಯ ಮುಂದೆ ಕ್ಯೂ ನಿಂತಿವೆ. 1040 ಕೋಟಿ ರೂಪಾಯಿಗೆ ಒಡೆಯ ವಿರಾಟ್ ಕೊಹ್ಲಿ. ಕ್ರೀಡಾಲೋಕದಲ್ಲಿ ಅದೆಷ್ಟೋ ದಿಗ್ಗಜರ ಪಟ್ಟಿಯಲ್ಲಿ ಕೊಹ್ಲಿಯೂ ಒಬ್ಬರು ಎಂಬುದು ವಿಶೇಷ.
ಆದರೆ, ಕೊಹ್ಲಿ ಇಷ್ಟೆಲ್ಲಾ ಹೆಸರು, ಸಾಧನೆ, ಸಂಪಾದನೆ, ಯಶಸ್ಸಿಗೆ ಆ ಒಬ್ಬ ವ್ಯಕ್ತಿಯೇ ಕಾರಣ. ಅವರೇ ಸೂಪರ್ ಸ್ಟಾರ್ ಆಟಗಾರನ ಅಕ್ಕ. ವಿರಾಟ್ ಆಗಾಗ್ಗೆ ತಮ್ಮ ಆಟ ಅಥವಾ ಅವರ ಪತ್ನಿ ಅನುಷ್ಕಾ ಶರ್ಮಾ ಮತ್ತು ಮಗಳು ವಮಿಕಾ ಕುರಿತು ಹೆಡ್ಲೈನ್ಗೆ ತರುತ್ತಾರೆ. ಅವರು ಸಾಕಷ್ಟು ಬೆಂಬಲ ನೀಡುತ್ತಾರೆ ಎನ್ನುತ್ತಾರೆ. ಆದಾಗ್ಯೂ, ಕಿಂಗ್ ಕೊಹ್ಲಿ ಕುಟುಂಬದ ಬಗ್ಗೆ, ವಿಶೇಷವಾಗಿ ಅವರ ಸಹೋದರಿಯ ಬಗ್ಗೆ ನಮಗೆ ಹೆಚ್ಚು ತಿಳಿದಿಲ್ಲ. ಇಂದು ನಾವು ಕೊಹ್ಲಿ ಯಶಸ್ಸಿಗೆ ಕಾರಣರಾದ ಅಕ್ಕ ಭಾವನಾ ಕೊಹ್ಲಿ ಧಿಂಗ್ರಾ (Bhawna Kohli Dhingra) ಬಗ್ಗೆ ತಿಳಿಯೋಣ.
ಶಾಲಾ ದಿನಗಳಿಂದಲೂ ಕೊಹ್ಲಿಗೆ ಬೆಂಬಲ
ಭಾವನಾ ಕೊಹ್ಲಿ ಧಿಂಗ್ರಾ ವಿರಾಟ್ರ ಅಕ್ಕ. ವರದಿಗಳ ಪ್ರಕಾರ, ಕೊಹ್ಲಿಯ ಆರಂಭಿಕ ವರ್ಷಗಳಲ್ಲಿ ಭಾವನಾ ಪ್ರಮುಖ ಪ್ರಭಾವ ಬೀರಿದ್ದಾರೆ. ಕ್ರಿಕೆಟ್‌ನಲ್ಲಿ ಅಪಾರ ಆಸಕ್ತಿ ಹೊಂದಿದ್ದ ವಿರಾಟ್ಗೆ ಬೆಂಬಲಕ್ಕೆ ಯಾವಾಗಲೂ ನಿಂತರು. ತಮ್ಮ ಶಾಲಾ ದಿನಗಳಿಂದಲೂ ಅಕ್ಕನೇ ಫುಲ್ ಸಪೋರ್ಟ್ ಮಾಡುತ್ತಿದ್ದರು. ಭಾವನಾ ಹಂಸರಾಜ್ ಮಾಡೆಲ್ ಸ್ಕೂಲ್‌ನಲ್ಲಿ ಶಾಲಾ ಶಿಕ್ಷಣ ಪಡೆದಿದ್ದಾರೆ. ದೆಹಲಿಯ ದೌಲತ್ ರಾಮ್ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ಭಾವನಾ ಅವರು, ಸಂಜಯ್ ಧಿಂಗ್ರಾ ಅವರನ್ನು ವಿವಾಹವಾದರು. ಸದ್ಯ ಈ ದಂಪತಿಗೆ ಮೆಹಕ್ ಮತ್ತು ಆಯುಷ್ ಇಬ್ಬರು ಮಕ್ಕಳಿದ್ದಾರೆ. ಸಂಜಯ್ ಧಿಂಗ್ರಾ ವೃತ್ತಿಯಲ್ಲಿ ಉದ್ಯಮಿ.
ಅಕ್ಕನ ಇನ್ಸ್ಟಾದಲ್ಲಿವೆ ಕೊಹ್ಲಿ ಅಪರೂಪದ ಫೋಟೋಗಳು
ವರದಿಗಳ ಪ್ರಕಾರ ಭಾವನಾ, ವಿರಾಟ್ ಕೊಹ್ಲಿಯ ಬ್ರ್ಯಾಂಡ್ 'ಒನ್ 8 ಸೆಲೆಕ್ಟ್'ನ ಪ್ರಮುಖ ಸದಸ್ಯರಾಗಿದ್ದಾರೆ. ಭಾವನಾ ಅವರು ಅತ್ತಿಗೆ ಅನುಷ್ಕಾ ಶರ್ಮಾ ಅವರೊಂದಿಗೆ ಉತ್ತಮ ಸಂಬಂಧವನ್ನು ಹಂಚಿಕೊಂಡಿದ್ದಾರೆ. ಭಾವನಾ ಮದುವೆಯ ನಂತರ ಅನುಷ್ಕಾ ಅವರನ್ನು ಅಧಿಕೃತವಾಗಿ ಕುಟುಂಬಕ್ಕೆ ಸ್ವಾಗತಿಸಿದ್ದರು. ಅನುಷ್ಕಾ ನಮ್ಮ ಕುಟುಂಬಕ್ಕೆ ಸುಸ್ವಾಗತ ಎಂದು ಹೇಳಿದ್ದರು.
ಭಾವನಾ ಕೊಹ್ಲಿ ಆಗಾಗ್ಗೆ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಕೊಹ್ಲಿ ಕುಟುಂಬದ ಕೆಲವು ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ವಿರಾಟ್ ಜೊತೆಗಿನ ಬಾಲ್ಯದ ಹಿಂದಿನ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಪುಟ್ಟ ವಿರಾಟ್ ತನ್ನ ಹುಟ್ಟುಹಬ್ಬದ ಕೇಕ್ ಕತ್ತರಿಸುವುದರಿಂದ ಹಿಡಿದು ಕ್ರಿಕೆಟಿಗನಾಗುವವರೆಗೂ ಅಪರೂಪದ ಫೋಟೋಗಳನ್ನು ಭಾವನಾ ಇನ್ಸ್ಟಾಗ್ರಾಂನಲ್ಲಿ ಕಾಣಬಹುದು. ಆ ಮೂಲಕ ತನ್ನ ಸಹೋದರ ಮೇಲಿರುವ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.
ಅಪ್ಪ ಸತ್ತಾಗ ಅಕ್ಕನೇ ಎಲ್ಲವೂ ಆಗಿದ್ದರು
ಕಳೆದ 15 ವರ್ಷಗಳ ಹಿಂದೆ ನಿಧನರಾಗಿರುವ ತನ್ನ ತಂದೆಯನ್ನು ಕೊಹ್ಲಿ ಆಗಾಗ್ಗೆ ಭಾವುಕರಾಗುತ್ತಾರೆ. ಟೀಮ್ ಇಂಡಿಯಾ ಮಾಜಿ ನಾಯಕ 2006ರಲ್ಲಿ ತಮ್ಮ ತಂದೆ ಪ್ರೇಮ್ ಕೊಹ್ಲಿ ಅವರನ್ನು ಕಳೆದುಕೊಂಡಿದ್ದರು. ಕರ್ನಾಟಕದ ವಿರುದ್ಧ ಬೆಂಗಳೂರಿನಲ್ಲಿ ರಣಜಿ ಪಂದ್ಯ ಆಡುತ್ತಿದ್ದಾಗ 2006 ಡಿಸೆಂಬರ್ 18ರಂದು ಕೊಹ್ಲಿ ತಂದೆ ನಿಧನರಾಗಿದ್ದರು. ಆದರೆ, ತಂದೆಯನ್ನು ಕಳೆದುಕೊಂಡಿದ್ದ ಕೊಹ್ಲಿಗೆ, ನೆರವಾಗಿದ್ದೇ ಅವರ ಅಕ್ಕ ಭಾವನಾ. ಹಣಕಾಸಿನ ನೆರವಿನಿಂದ ಪ್ರತಿ ಹೆಜ್ಜೆ ಹೆಜ್ಜೆಗೂ ಕೊಹ್ಲಿಗೆ ಬೆಂಬಲ ನೀಡಿದ್ದರು. ಕೈ ಹಿಡಿದು ನಡೆಸಿದರು. ಆತನ ಬೆಳವಣಿಗೆಗೆ ಆಕೆ ಎಲ್ಲವನ್ನೂ ತ್ಯಾಗ ಮಾಡಿದ ಮಹಾತಾಯಿ. ಇಂದು ಕೋಟ್ಯಂತರ ಅಭಿಮಾನಿಗಳ ಆರಾಧ್ಯ ದೈವನಾಗಿದ್ದಾರೆ ಎಂದರೆ ಅದಕ್ಕೆ ಕಾರಣ ಅಕ್ಕ ಭಾವನಾ. ಕೊಹ್ಲಿ ಎಷ್ಟೋ ಸಲ ಈ ಬಗ್ಗೆ ಹೇಳಿದ್ದಾರೆ ನನ್ನ ಅಕ್ಕ, ನನ್ನ ತಂದೆಯಂತೆ ನೋಡಿಕೊಂಡರು ಎಂದು.