R Ashwin: ಡಬ್ಲ್ಯುಟಿಸಿ ಫೈನಲ್​​ನಲ್ಲಿ ಭಾರತ ಸೋಲಿಗೆ ಕಾರಣ ಬಹಿರಂಗಪಡಿಸಿದ ಅಶ್ವಿನ್; ಧೋನಿಯನ್ನು ಉಲ್ಲೇಖಿಸಿದ ಆಫ್ ಸ್ಪಿನ್ನರ್​
ಕನ್ನಡ ಸುದ್ದಿ  /  ಕ್ರೀಡೆ  /  R Ashwin: ಡಬ್ಲ್ಯುಟಿಸಿ ಫೈನಲ್​​ನಲ್ಲಿ ಭಾರತ ಸೋಲಿಗೆ ಕಾರಣ ಬಹಿರಂಗಪಡಿಸಿದ ಅಶ್ವಿನ್; ಧೋನಿಯನ್ನು ಉಲ್ಲೇಖಿಸಿದ ಆಫ್ ಸ್ಪಿನ್ನರ್​

R Ashwin: ಡಬ್ಲ್ಯುಟಿಸಿ ಫೈನಲ್​​ನಲ್ಲಿ ಭಾರತ ಸೋಲಿಗೆ ಕಾರಣ ಬಹಿರಂಗಪಡಿಸಿದ ಅಶ್ವಿನ್; ಧೋನಿಯನ್ನು ಉಲ್ಲೇಖಿಸಿದ ಆಫ್ ಸ್ಪಿನ್ನರ್​

R Ashwin: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದಲ್ಲಿ (WTC Final 2013) ಟೀಮ್​ ಇಂಡಿಯಾ (Team India) ಹೀನಾಯ ಸೋಲಿಗೆ ಪ್ರಮುಖ ಕಾರಣ ಏನೆಂಬುದನ್ನು ರವಿಚಂದ್ರನ್​ ಅಶ್ವಿನ್ ಬಹಿರಂಗಪಡಿಸಿದ್ದಾರೆ.

ಡಬ್ಲ್ಯುಟಿಸಿ ಫೈನಲ್​​ನಲ್ಲಿ ಭಾರತ ಸೋಲಿಗೆ ಕಾರಣ ಬಹಿರಂಗಪಡಿಸಿದ ಅಶ್ವಿನ್
ಡಬ್ಲ್ಯುಟಿಸಿ ಫೈನಲ್​​ನಲ್ಲಿ ಭಾರತ ಸೋಲಿಗೆ ಕಾರಣ ಬಹಿರಂಗಪಡಿಸಿದ ಅಶ್ವಿನ್

ಜೂನ್ 7ರಂದು ಲಂಡನ್​​ನ ಓವಲ್​​ ಮೈದಾನದಲ್ಲಿ ನಡೆದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದಲ್ಲಿ (WTC Final 2013) ಟೀಮ್​ ಇಂಡಿಯಾ (Team India) ಹೀನಾಯ ಸೋಲಿಗೆ ಶರಣಾಯಿತು. ಆಸ್ಟ್ರೇಲಿಯಾ (Australia) ವಿರುದ್ಧ ಸೋತು ಸತತ ಎರಡನೇ ಬಾರಿಯೂ ಚಾಂಪಿಯನ್​​​ ಆಗುವಲ್ಲಿ ವಿಫಲವಾಯಿತು. ಪಂದ್ಯ ಮುಗಿದು ಎರಡು ವಾರವಾದರೂ ಈ ಸೋಲಿನ ಕುರಿತ ಚರ್ಚೆಗಳು ನಿಂತಿಲ್ಲ.

ಆದರೆ ಹೆಚ್ಚು ಚರ್ಚೆಯಾಗಿದ್ದು ಮಾತ್ರ ರವಿಚಂದ್ರನ್ ಅಶ್ವಿನ್ (Ravichandran Ashwin)​ ಅವರನ್ನು ತಂಡಕ್ಕೆ ಆಯ್ಕೆ ಮಾಡದಿರುವುದರ ಬಗ್ಗೆ. ರೋಹಿತ್​ ಶರ್ಮಾ (Rohit Sharma) ನಿರ್ಧಾರಕ್ಕೆ ಈಗಲೂ ಟೀಕೆ ವ್ಯಕ್ತವಾಗುತ್ತಿದೆ. ಅಶ್ವಿನ್​ರನ್ನು ತಂಡಕ್ಕೆ ಆಯ್ಕೆ ಮಾಡಿದ್ದರೆ, ಭಾರತ ಡಬ್ಲ್ಯುಟಿಸಿ ಫೈನಲ್ ಗೆಲ್ಲುತ್ತಿತ್ತು ಎನ್ನುವುದು ಕೆಲವರ ವಾದ. ಇನ್ನೂ ಕೆಲವರು ರೋಹಿತ್​ ಕಳಪೆ ನಾಯಕತ್ವದಿಂದ ಪಂದ್ಯ ಸೋಲಿಗೆ ಕಾರಣವಾಯಿತು ಎನ್ನುತ್ತಿದ್ದಾರೆ. ಜೊತೆಗೆ ಟಾಸ್​ ನಿರ್ಧಾರವು ತಂಡದ ಚಿತ್ರಣ ಬದಲಿಸಿತು.

ಸೋಲಿಗೆ ಕಾರಣ ಬಹಿರಂಗಪಡಿಸಿದ ಅಶ್ವಿನ್

ಇದೀಗ ರವಿಚಂದ್ರನ್​ ಅಶ್ವಿನ್, ತಂಡದ ಸೋಲಿಗೆ ಪ್ರಮುಖ ಕಾರಣ ಏನೆಂಬುದನ್ನು ಬಹಿರಂಗಪಡಿಸಿದ್ದಾರೆ. ಹಾಗೆ ಆಸ್ಟ್ರೇಲಿಯಾ ಗೆಲುವು ಹೇಗೆ ಸಾಧ್ಯವಾಯಿತು ಎಂಬುದನ್ನು ವಿವರವಾಗಿ ಹೇಳಿದ್ದಾರೆ. ತನ್ನ ಯೂಟ್ಯೂಟ್ ಚಾನೆಲ್​ನಲ್ಲಿ ಮಾತನಾಡಿರುವ ಅಶ್ವಿನ್, ಮೊದಲಿಗೆ ಆಸ್ಟ್ರೇಲಿಯಾ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಬಳಿಕ ಮಾತನಾಡಿದ ಆಫ್​ಸ್ಪಿನ್ನರ್​​, ಆಸ್ಟ್ರೇಲಿಯಾ ಪ್ರಶಸ್ತಿ ಗೆಲ್ಲಲು ಅರ್ಹವಾಗಿತ್ತು. ಇಂಗ್ಲೆಂಡ್​​ನಲ್ಲಿ ಆಸಿಸ್​ ತಂಡಕ್ಕೆ ಲಾಭದಾಯಕ ಅಂಶಗಳು ಇದ್ದವು ಎಂದು ಹೇಳಿದ್ದಾರೆ.

ಆಸಿಸ್​ಗೆ ಎಲ್ಲವೂ ಅನುಕೂಲವಾಗಿತ್ತು

ಅದಕ್ಕೆ ಪ್ರಮುಖ ಕಾರಣ ಎಂದರೆ, ಆಸಿಸ್ ಕೆಲ ಆಟಗಾರರು ಇಂಗ್ಲೆಂಡ್​ನಲ್ಲಿ ಕೌಂಟಿ ಆಡಿದ್ದಾರೆ. ಮೊದಲ ಆವೃತ್ತಿಯ ಡಬ್ಲ್ಯುಟಿಸಿ ಫೈನಲ್​ನಲ್ಲಿ ಆಸಿಸ್​​ ಫೈನಲ್​ಗೇರುವ ಅವಕಾಶವನ್ನು ಕಡಿಮೆ ಅಂತರದಲ್ಲಿ ಕೈಚೆಲ್ಲಿತ್ತು. ಟೀಮ್ ಇಂಡಿಯಾದಂತೆ ಆಸ್ಟ್ರೇಲಿಯಾ ಕೂಡ ಅದ್ಭುತ ಪ್ರದರ್ಶನ ತೋರುತ್ತಾ ಬಂದಿದೆ. ಪಿಚ್​, ಬೌನ್ಸಿ.. ಹೀಗೆ ಎಲ್ಲವೂ ಅವರ ಇದ್ದವು. ಇದು ಕೂಡ ಆಸಿಸ್​ಗೆ ನೆರವಾಯಿತು. ಏಕೆಂದರೆ, ಆಸಿಸ್​​ನ ಪಿಚ್​ಗಳು ಇಂಗ್ಲೆಂಡ್​ ಪಿಚ್​ಗಳು ಒಂದೇ ಎಂದು ಹೇಳಿದ್ದಾರೆ.

ಧೋನಿ ನೆನೆದ ಅಶ್ವಿನ್

ಇದೇ ವೇಳೆ ಭಾರತದ ಮಾಜಿ ನಾಯಕ ಎಂಎಸ್ ಧೋನಿ (MS Dhoni) ಅವರನ್ನು ನೆನೆದಿದ್ದಾರೆ. ಭಾರತ ತಂಡವು ಕಳೆದ 10 ವರ್ಷಗಳಿಂದ ಐಸಿಸಿ ಟ್ರೋಫಿ ಗೆಲ್ಲಲು ಸಾಧ್ಯವಾಗದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. 2013ರ ಬಳಿಕ ಐಸಿಸಿ ಟ್ರೋಫಿ ಗೆಲ್ಲಲು ಭಾರತ ತಂಡ ವೈಫಲ್ಯ ಅನುಭವಿಸುತ್ತಿರುವುದರ ನೋವು ನಮಗೆಲ್ಲಾ ಗೊತ್ತಿದೆ. ನಮ್ಮ ಭಾರತೀಯ ಅಭಿಮಾನಿಗಳ ನೋವು ತಿಳಿಯುತ್ತಿದೆ ಎಂದು ಹೇಳಿದ್ದಾರೆ.

ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಆ ಆಟಗಾರ ಇರಬೇಕಿತ್ತು? ಇವರನ್ನು ಕೈಬಿಡಬೇಕಿತ್ತು ಎಂಬ ಚರ್ಚೆಗಳು ಜೋರಾಗಿವೆ. ಇವು ಅನಗತ್ಯ ಚರ್ಚೆಗಳು. ರಾತ್ರೋ ರಾತ್ರಿ ಹೈಕ್ವಾಲಿಟಿ ಇರುವ ಆಟಗಾರರನ್ನು ಸಿದ್ಧಪಡಿಸಲು ಸಾಧ್ಯವಿಲ್ಲ ಎಂದ ಅವರು, ಎಂಎಸ್ ಧೋನಿ ಬಗ್ಗೆಯೂ ಚರ್ಚೆಯಾಗುತ್ತಿರುವ ಬಗ್ಗೆ ತಿಳಿಸಿದರು. ಜೊತೆಗೆ ಧೋನಿ ನಾಯಕತ್ವವನ್ನು ಗುಣಗಾನ ಮಾಡಿದ ಅಶ್ವಿನ್, ಕ್ಯಾಪ್ಟನ್ಸಿಯಲ್ಲಿ ಹೇಗೆ ಯಶಸ್ಸು ಕಂಡರು ಎಂಬುದನ್ನು ವಿವರಿಸಿದ್ದಾರೆ.

ಆಟಗಾರರಿಗೆ ಭದ್ರತೆ ಬೇಕು

ಅವರು ತಂಡವನ್ನು ಸರಳವಾಗಿ ಇರುವ ತಂಡವನ್ನು ಕಟ್ಟುತ್ತಿದ್ದರು ಎಂದು ಹೇಳಿದ್ದಾರೆ. ಧೋನಿ ಅವರ ಕ್ಯಾಪ್ಟನ್ಸಿಯಲ್ಲಿ ನಾನು ಸಹ ಆಡಿದ್ದೇನೆ. ಧೋನಿ ಏನಿದ್ದರೂ ಕೇವಲ 15 ಆಟಗಾರರ ತಂಡವನ್ನಷ್ಟೇ ಆಯ್ಕೆ ಮಾಡುತ್ತಿದ್ದರು. ಅದೇ ತಂಡ ವರ್ಷಪೂರ್ತಿ ಆಡುತ್ತಿತ್ತು. ಅಂತಹ ವಾತಾವರಣ ಈಗಲೂ ಬೇಕಿದೆ. ಆಟಗಾರರಿಗೆ ಮುಂದೆ ನಾವು ಆಡುತ್ತೇವೆ ಎಂಬ ಭದ್ರತೆಯೂ ಬೇಕಿದೆ. ಅಂತಹ ತಂಡವನ್ನು ಕಟ್ಟಬೇಕಿದೆ ಎಂದು ಅಶ್ವಿನ್​ ತಮ್ಮ ಅನಿಸಿಕೆಯನ್ನು ಹೊರ ಹಾಕಿದ್ದಾರೆ. ಸದ್ಯ ಭಾರತ ತಂಡವು ಕೊನೆಯದಾಗಿ 2013ರಲ್ಲಿ ಐಸಿಸಿ ಟ್ರೋಫಿ ಗೆದ್ದಿತ್ತು. ಧೋನಿ ನಾಯಕತ್ವದಲ್ಲಿ ಅಂದು ಇಂಗ್ಲೆಂಡ್​​ನಲ್ಲೇ ಚಾಂಪಿಯನ್​ ಆಗಿತ್ತು.

Whats_app_banner