1900 ರಿಂದ 2020ರ ತನಕ; 120 ವರ್ಷಗಳ ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತ ಗೆದ್ದಿರುವ ಪದಕಗಳೆಷ್ಟು? ವರ್ಷವಾರು ಒಂದು ನೋಟ-from paris 1900 to tokyo 2020 olympic medals list how many medals has india won in 120 years history of olympics prs ,ಕ್ರೀಡೆ ಸುದ್ದಿ
ಕನ್ನಡ ಸುದ್ದಿ  /  ಕ್ರೀಡೆ  /  1900 ರಿಂದ 2020ರ ತನಕ; 120 ವರ್ಷಗಳ ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತ ಗೆದ್ದಿರುವ ಪದಕಗಳೆಷ್ಟು? ವರ್ಷವಾರು ಒಂದು ನೋಟ

1900 ರಿಂದ 2020ರ ತನಕ; 120 ವರ್ಷಗಳ ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತ ಗೆದ್ದಿರುವ ಪದಕಗಳೆಷ್ಟು? ವರ್ಷವಾರು ಒಂದು ನೋಟ

India Olympic Medals List: 1900 ರಿಂದ 2020ರ ತನಕ ಅಂದರೆ 120 ವರ್ಷಗಳ ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತ ಗೆದ್ದಿರುವ ಪದಕಗಳೆಷ್ಟು? ಅವುಗಳ ವರ್ಷವಾರು ಮಾಹಿತಿ ಇಲ್ಲಿದೆ.

1900 ರಿಂದ 2020ರ ತನಕ; 120 ವರ್ಷಗಳ ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತ ಗೆದ್ದಿರುವ ಪದಕಗಳೆಷ್ಟು? ವರ್ಷವಾರು ಒಂದು ನೋಟ
1900 ರಿಂದ 2020ರ ತನಕ; 120 ವರ್ಷಗಳ ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತ ಗೆದ್ದಿರುವ ಪದಕಗಳೆಷ್ಟು? ವರ್ಷವಾರು ಒಂದು ನೋಟ

1900ರ ಪ್ಯಾರಿಸ್ ಒಲಿಂಪಿಕ್​ನಿಂದ ಹಿಡಿದು 2020ರ ಟೋಕಿಯೊ ಒಲಿಂಪಿಕ್ಸ್ (okyo 2020 Olympic) ತನಕ ಅಂದರೆ 120 ವರ್ಷಗಳ ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತದ ಸಾಧನೆ ಹೇಗಿದೆ. ಚೊಚ್ಚಲ ಒಲಿಂಪಿಕ್ಸ್​​ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದು ಏಕೈಕ ಸ್ಪರ್ಧಿಯಾಗಿದ್ದರೂ 2 ಪದಕ ಗೆಲ್ಲುವ ಮೂಲಕ ಗಮನ ಸೆಳೆದಿದ್ದರು. ಅಂದು 1900ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತ ಎರಡು ಬೆಳ್ಳಿ ಗೆದ್ದಿತ್ತು. ನಾರ್ಮನ್ ಪ್ರಿಚರ್ಡ್ ದೇಶದ ಏಕೈಕ ಪ್ರತಿನಿಧಿಯಾಗಿದ್ದರು. 200 ಮೀ ಸ್ಪ್ರಿಂಟ್ ಮತ್ತು 200 ಮೀ ಹರ್ಡರ್ಲ್ಸ್​​ನಲ್ಲಿ 2 ಬೆಳ್ಳಿ ಗೆದ್ದಿದ್ದರು.

ಆದರೆ 2024ರಲ್ಲಿ ಜರುಗುವ ಪ್ಯಾರಿಸ್ ಒಲಿಂಪಿಕ್​ (ಸಮ್ಮರ್​) ಆರಂಭಕ್ಕೆ 2 ತಿಂಗಳಷ್ಟೇ ಬಾಕಿ ಉಳಿದಿದ್ದು, 2024ರ ಜುಲೈ 26 ರಿಂದ 2024ರ ಆಗಸ್ಟ್​ 11 ವರೆಗೂ ಜರುಗಲಿದೆ. ಫ್ರಾನ್ಸ್​ನ ಪ್ಯಾರಿಸ್​ನಲ್ಲಿ ನಡೆಯುವ ಈ ಒಲಿಂಪಿಕ್​ನಲ್ಲಿ 32 ಕ್ರೀಡೆಗಳಲ್ಲಿ 329 ಈವೆಂಟ್​​ಗಳು ನಡೆಯಲಿವೆ. ಭಾರತ ಸೇರಿ ವಿವಿಧ ದೇಶಗಳಿಂದ 10,500 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. 120 ವರ್ಷಗಳ ಇತಿಹಾಸದಲ್ಲಿ ಭಾರತೀಯ ಕ್ರೀಡಾಪಟುಗಳು ಸಾಧನೆ ಹೇಗಿದೆ? ಯಾವ ವರ್ಷ, ಎಷ್ಟು ಪದಕ ಗೆದ್ದಿತ್ತು ಎಂಬುದರ ನೋಟ ಇಲ್ಲಿದೆ.

ಒಟ್ಟು ಪದಕಗಳು

ಭಾರತ ಒಟ್ಟು 35 ಪದಕಗಳನ್ನು ಗೆದ್ದಿದೆ. 10 ಚಿನ್ನ, 9 ಬೆಳ್ಳಿ ಮತ್ತು 16 ಕಂಚಿನ ಪದಕಗಳನ್ನು ಗೆದ್ದಿದೆ.

ಸಮ್ಮರ್ ಒಲಿಂಪಿಕ್ಸ್​​ನಲ್ಲಿ ಭಾರತದ​ ಒಂದು ನೋಟ

  • ಪ್ಯಾರಿಸ್ ಒಲಿಂಪಿಕ್ಸ್ (1900) - 2 ಪದಕ (1 ಕ್ರೀಡಾಪಟು) - 17ನೇ ಸ್ಥಾನ
  • ಆಂಟ್ವರ್ಟ್​ ಒಲಿಂಪಿಕ್ಸ್ (ಬೆಲ್ಜಿಯಂ 1920) - 0 ಪದಕ (ಕ್ರೀಡಾಪಟುಗಳು) -
  • ಪ್ಯಾರಿಸ್ ಒಲಿಂಪಿಕ್ಸ್ (1924) - 0 ಪದಕ (13 ಕ್ರೀಡಾಪಟುಗಳು) -
  • ಆಮ್​ಸ್ಟರ್​ಡಂ ಒಲಿಂಪಿಕ್ಸ್ (1928) - 1 ಪದಕ (22 ಕ್ರೀಡಾಪಟುಗಳು​) - 23ನೇ ಸ್ಥಾನ
  • ಲಾಸ್ ಏಂಜಲಿಸ್ ಒಲಿಂಪಿಕ್ಸ್ (1932) - 1 ಪದಕ (18 ಕ್ರೀಡಾಪಟುಗಳು) - 19ನೇ ಸ್ಥಾನ
  • ಬೆರ್ಲಿನ್ ಒಲಿಂಪಿಕ್ಸ್ (1936) - 1 ಪದಕ (27 ಕ್ರೀಡಾಪಟುಗಳು) - 20ನೇ ಸ್ಥಾನ
  • ಲಂಡನ್ ಒಲಿಂಪಿಕ್ಸ್ (1948) - 1 ಪದಕ (86 ಕ್ರೀಡಾಪಟುಗಳು) - 22ನೇ ಸ್ಥಾನ
  • ಹೆಲ್ಸಿಂಕಿ ಒಲಿಂಪಿಕ್ಸ್ (1952) - 2 ಪದಕ (64 ಕ್ರೀಡಾಪಟುಗಳು) - 26ನೇ ಸ್ಥಾನ
  • ಮೆಲ್ಬೋರ್ನ್​ ಒಲಿಂಪಿಕ್ಸ್ (1956) - 1 ಪದಕ (59 ಕ್ರೀಡಾಪಟುಗಳು) - 24ನೇ ಸ್ಥಾನ
  • ರೋಮ್ ಒಲಿಂಪಿಕ್ಸ್ (1960) - 1 ಪದಕ (ಕ್ರೀಡಾಪಟುಗಳು) - 32ನೇ ಸ್ಥಾನ
  • ಟೋಕಿಯೊ ಒಲಿಂಪಿಕ್ಸ್ (1964) - 1 ಪದಕ (53 ಕ್ರೀಡಾಪಟುಗಳು) - 24ನೇ ಸ್ಥಾನ
  • ಮೆಕ್ಸಿಕೋ ಸಿಟಿ ಒಲಿಂಪಿಕ್ಸ್ (1968) - 1 ಪದಕ (25 ಕ್ರೀಡಾಪಟುಗಳು) - 42ನೇ ಸ್ಥಾನ
  • ಮ್ಯೂನಿಚ್ ಒಲಿಂಪಿಕ್ಸ್ (1972) - 1 ಪದಕ (46 ಕ್ರೀಡಾಪಟುಗಳು) - 43ನೇ ಸ್ಥಾನ
  • ಮಾಂಟ್ರಿಯಲ್ ಒಲಿಂಪಿಕ್ಸ್ (1976) - 0 ಪದಕ (26 ಕ್ರೀಡಾಪಟುಗಳು)
  • ಮಾಸ್ಕೋ ಒಲಿಂಪಿಕ್ಸ್ (1980) - 1 ಪದಕ (52 ಕ್ರೀಡಾಪಟುಗಳು) - 23ನೇ ಸ್ಥಾನ
  • ಲಾಸ್ ಏಂಜಲಿಸ್ ಒಲಿಂಪಿಕ್ಸ್ (1984) - 0 ಪದಕ (47 ಕ್ರೀಡಾಪಟುಗಳು) -
  • ಸಿಯೋಲ್ ಒಲಿಂಪಿಕ್ಸ್ (1988) - 0 ಪದಕ (43 ಕ್ರೀಡಾಪಟುಗಳು) -
  • ಬಾರ್ಸೋಲಿನಾ ಒಲಿಂಪಿಕ್ಸ್ (1992) - 0 ಪದಕ (46 ಕ್ರೀಡಾಪಟುಗಳು) -
  • ಅಟ್ಲಾಂಟಾ ಒಲಿಂಪಿಕ್ಸ್ (1996) - 1 ಪದಕ (40 ಕ್ರೀಡಾಪಟುಗಳು) - 71ನೇ ಸ್ಥಾನ
  • ಸಿಡ್ನಿ ಒಲಿಂಪಿಕ್ಸ್ (2000) - 1 ಪದಕ (44 ಕ್ರೀಡಾಪಟುಗಳು) - 71ನೇ ಸ್ಥಾನ
  • ಅಥೆನ್ಸ್ ಒಲಿಂಪಿಕ್ಸ್ (2004) - 1 ಪದಕ (73 ಕ್ರೀಡಾಪಟುಗಳು) - 65ನೇ ಸ್ಥಾನ
  • ಬೀಜಿಂಗ್ ಒಲಿಂಪಿಕ್ಸ್ (2008) - 3 ಪದಕ (73 ಕ್ರೀಡಾಪಟುಗಳು) - 50ನೇ ಸ್ಥಾನ
  • ಲಂಡನ್ ಒಲಿಂಪಿಕ್ಸ್ (2012) - 6 ಪದಕ (83 ಕ್ರೀಡಾಪಟುಗಳು) - 55ನೇ ಸ್ಥಾನ
  • ರಿಯೋ ಡಿ ಜನೈರೊ ಒಲಿಂಪಿಕ್ಸ್ (2016) - 2 ಪದಕ (117 ಕ್ರೀಡಾಪಟುಗಳು) - 67ನೇ ಸ್ಥಾನ
  • ಟೋಕಿಯೊ ಒಲಿಂಪಿಕ್ಸ್ (2020) - 7 ಪದಕ (126 ಕ್ರೀಡಾಪಟುಗಳು) - 48ನೇ ಸ್ಥಾನ

ಇದನ್ನೂ ಓದಿ: ಟೋಕಿಯೊ ಒಲಿಂಪಿಕ್ಸ್​​ನಲ್ಲಿ 1 ಚಿನ್ನ, 2 ಬೆಳ್ಳಿ, 4 ಕಂಚು ಗೆದ್ದಿದ್ದ ಭಾರತ; ಪದಕ ಪಟ್ಟಿಯಲ್ಲಿ ಎಷ್ಟನೇ ಸ್ಥಾನ ಪಡೆದಿತ್ತು?

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

mysore-dasara_Entry_Point
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.