Paris Olympics 2024: ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತೀಯ ಕ್ರೀಡಾಪಟುಗಳ ಸಂಪೂರ್ಣ ಪಟ್ಟಿ
ಕನ್ನಡ ಸುದ್ದಿ  /  ಕ್ರೀಡೆ  /  Paris Olympics 2024: ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತೀಯ ಕ್ರೀಡಾಪಟುಗಳ ಸಂಪೂರ್ಣ ಪಟ್ಟಿ

Paris Olympics 2024: ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತೀಯ ಕ್ರೀಡಾಪಟುಗಳ ಸಂಪೂರ್ಣ ಪಟ್ಟಿ

ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್ 2024ಗೆ ಕ್ರೀಡಾಪಟುಗಳು ಅಂತಿಮ ಹಂತದ ಸಿದ್ಧತೆ ನಡೆಸುತ್ತಿದ್ದಾರೆ. ಭಾರತದಿಂದ ಜಾಗತಿಕ ಕ್ರೀಡಾಕೂಟಕ್ಕೆ ಅರ್ಹತೆ ಪಡೆದ ಭಾರತೀಯ ಕ್ರೀಡಾಪಟುಗಳ ಸಂಪೂರ್ಣ ಪಟ್ಟಿ ಇಲ್ಲಿದೆ.

ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತೀಯ ಕ್ರೀಡಾಪಟುಗಳ ಸಂಪೂರ್ಣ ಪಟ್ಟಿ
ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತೀಯ ಕ್ರೀಡಾಪಟುಗಳ ಸಂಪೂರ್ಣ ಪಟ್ಟಿ (REUTERS)

ಅದ್ಧೂರಿ ಒಲಿಂಪಿಕ್ಸ್‌ಗೆ ಜಗತ್ತಿನ ಪ್ರೇಮನಗರಿ ಪ್ಯಾರಿಸ್ ಸಜ್ಜಾಗುತ್ತಿದೆ. ಈ ಬಾರಿಯ ಜಾಗತಿಕ ಕ್ರೀಡಾಕೂಟದಲ್ಲಿ ಕಳೆದ ಒಲಿಂಪಿಕ್ಸ್‌ಗಿಂತ ಹೆಚ್ಚಿನ ಪದಕ ಗೆಲ್ಲುವ ನಿರೀಕ್ಷೆಯಲ್ಲಿ ಭಾರತವಿದೆ. ಕೊನೆಯ ಬಾರಿಗೆ ನಡೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ 124 ಕ್ರೀಡಾಪಟುಗಳ ಅತಿದೊಡ್ಡ ತಂಡವನ್ನು ಕಳುಹಿಸಿದ್ದ ಭಾರತವು ಇತಿಹಾಸ ಸೃಷ್ಟಿಸಿತ್ತು. ಒಂದೇ ಆವೃತ್ತಿಯಲ್ಲಿ ಏಳು ಪದಕಗಳನ್ನು ಗಳಿಸಿತ್ತು. ಪುರುಷರ ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ ಐತಿಹಾಸಿಕ ಚಿನ್ನ ಗೆದ್ದಿದ್ದರು. ಇದೀಗ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿಯೂ ಮತ್ತೊಮ್ಮೆ ನೀರಜ್ ಚೋಪ್ರಾ ಮೇಲೆ ಭಾರಿ ನಿರೀಕ್ಷೆಗಳಿವೆ. ಇದೇ ವೇಳೆ ಶೂಟಿಂಗ್,‌ ಕುಸ್ತಿ ಬ್ಯಾಡ್ಮಿಂಟನ್‌ ಸೇರಿ ವಿವಿಧ ಕ್ರೀಡೆಗಳಲ್ಲಿ ಪದಕ ಬೇಟೆ ನಡೆಸುವ ಸಾಧ್ಯತೆಗಳಿವೆ.

ಈ ಬಾರಿಯ ಒಲಿಂಪಿಕ್ಸ್‌ಗಾಗಿ ಫ್ರಾನ್ಸ್‌ಗೆ ಹಾರಲು ಭಾರತದ ಕ್ರೀಡಾಪಟುಗಳು ಸಜ್ಜಾಗಿದ್ದಾರೆ. ಭಾರತೀಯ ತಂಡದ ಮುಖ್ಯ ವೈದ್ಯಕೀಯ ಅಧಿಕಾರಿಯಾಗಿರುವ ಖ್ಯಾತ ಕ್ರೀಡಾ ಔಷಧ ತಜ್ಞ ಡಾ.ದಿನ್ಶಾ ಪರ್ಡಿವಾಲಾ ಅವರು, ಕ್ರೀಡಾಕೂಟಕ್ಕೆ ತೆರಳಲು ಆಟಗಾರರು ಫಿಟ್‌ ಆಗಿದ್ದಾರೆ ಎಂದು ತಿಳಿಸಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತೀಯ ಕ್ರೀಡಾಪಟುಗಳ ಸಂಪೂರ್ಣ ಪಟ್ಟಿ ಇಲ್ಲಿದೆ

ಬಿಲ್ಲುಗಾರಿಕೆ

  • ಧೀರಜ್ ಬೊಮ್ಮದೇವರ: ಪುರುಷರ ತಂಡ
  • ತರುಣ್‌ದೀಪ್ ರೈ: ಪುರುಷರ ತಂಡ
  • ಪ್ರವೀಣ್ ಜಾಧವ್: ಪುರುಷರ ತಂಡ
  • ಭಜನ್ ಕೌರ್: ಮಹಿಳಾ ತಂಡ
  • ದೀಪಿಕಾ ಕುಮಾರಿ: ಮಹಿಳಾ ತಂಡ
  • ಅಂಕಿತಾ ಭಕತ್: ಮಹಿಳಾ ತಂಡ

ಅಥ್ಲೆಟಿಕ್ಸ್

  • ಅಕ್ಷದೀಪ್ ಸಿಂಗ್: ಪುರುಷರ 20 ಕಿಮೀ ಓಟದ ನಡಿಗೆ
  • ವಿಕಾಶ್ ಸಿಂಗ್: ಪುರುಷರ 20 ಕಿಮೀ ಓಟದ ನಡಿಗೆ
  • ಪರಮ್‌ಜೀತ್ ಸಿಂಗ್ ಬಿಶ್ತ್: ಪುರುಷರ 20 ಕಿಮೀ ಓಟದ ನಡಿಗೆ
  • ಪ್ರಿಯಾಂಕಾ ಗೋಸ್ವಾಮಿ: ಮಹಿಳೆಯರ 20 ಕಿ.ಮೀ ಓಟದ ನಡಿಗೆ
  • ಅವಿನಾಶ್ ಸೇಬಲ್: ಪುರುಷರ 3000ಮೀ ಸ್ಟೀಪಲ್‌ಚೇಸ್
  • ಪಾರುಲ್ ಚೌಧರಿ: ಮಹಿಳೆಯರ 3000ಮೀ ಸ್ಟೀಪಲ್ ಚೇಸ್, ಮಹಿಳೆಯರ 5000ಮೀ ಸ್ಟೀಪಲ್ ಚೇಸ್
  • ಜ್ಯೋತಿ ಯರ್ರಾಜಿ: ಮಹಿಳೆಯರ 100ಮೀ ಹರ್ಡಲ್ಸ್
  • ಕಿರಣ್ ಪಹಲ್: ಮಹಿಳೆಯರ 400 ಮೀ
  • ತಜಿಂದರ್‌ಪಾಲ್ ಸಿಂಗ್ ತೂರ್: ಪುರುಷರ ಶಾಟ್‌ಪುಟ್
  • ಅಭಾ ಖತುವಾ: ಮಹಿಳೆಯರ ಶಾಟ್‌ಪುಟ್
  • ನೀರಜ್ ಚೋಪ್ರಾ: ಪುರುಷರ ಜಾವೆಲಿನ್ ಎಸೆತ
  • ಕಿಶೋರ್ ಜೆನಾ: ಪುರುಷರ ಜಾವೆಲಿನ್ ಎಸೆತ
  • ಅಣ್ಣು ರಾಣಿ: ಮಹಿಳೆಯರ ಜಾವೆಲಿನ್ ಎಸೆತ
  • ಸರ್ವೇಶ್ ಕುಶಾರೆ: ಪುರುಷರ ಎತ್ತರ ಜಿಗಿತ
  • ಪ್ರವೀಣ್ ಚಿತ್ರವೆಲ್: ಪುರುಷರ ಟ್ರಿಪಲ್ ಜಂಪ್
  • ಅಬ್ದುಲ್ಲಾ ಅಬೂಬಕರ್: ಪುರುಷರ ಟ್ರಿಪಲ್ ಜಂಪ್
  • ಮುಹಮ್ಮದ್ ಅನಸ್ ಯಾಹಿಯಾ, ಮುಹಮ್ಮದ್ ಅಜ್ಮಲ್, ಅಮೋಜ್ ಜಾಕೋಬ್, ಸಂತೋಷ್ ತಮಿಳರಸನ್ ಮತ್ತು ರಾಜೇಶ್ ರಮೇಶ್: ಪುರುಷರ 4x400 ಮೀ ರಿಲೇ.
  • ಮಿಜೋ ಚಾಕೊ ಕುರಿಯನ್: 4x400ಮೀ ರಿಲೇ ಮತ್ತು 4x400ಮೀ ಮಿಶ್ರ ರಿಲೇ
  • ವಿದ್ಯಾ ರಾಮರಾಜ್, ಜ್ಯೋತಿಕಾ ಶ್ರೀ ದಂಡಿ, ಎಂಆರ್ ಪೂವಮ್ಮ, ಶುಭಾ ವೆಂಕಟೇಶನ್ ಮತ್ತು ಪ್ರಾಚಿ: ಮಹಿಳೆಯರ 4x400 ಮೀ ರಿಲೇ
  • ಪ್ರಾಚಿ: 4x400ಮೀ ಮಿಶ್ರ ರಿಲೇ
  • ಪ್ರಿಯಾಂಕಾ ಗೋಸ್ವಾಮಿ/ಸೂರಜ್ ಪನ್ವಾರ್: ರೇಸ್ ವಾಕ್ ಮಶ್ರ ಮ್ಯಾರಥಾನ್

ಇದನ್ನೂ ಒದಿ | ಪ್ಯಾರಿಸ್ ಒಲಿಂಪಿಕ್ಸ್ 2024: ನೀರಜ್ ಚೋಪ್ರಾ 28 ಸದಸ್ಯರ ಭಾರತೀಯ ಅಥ್ಲೆಟಿಕ್ಸ್ ತಂಡ ಪ್ರಕಟ, ಯಾರಿಗೆಲ್ಲಾ ಸಿಕ್ಕಿದೆ ಅವಕಾಶ?

ಬ್ಯಾಡ್ಮಿಂಟನ್

  • ಎಚ್‌ಎಸ್‌ ಪ್ರಣಯ್: ಪುರುಷರ ಸಿಂಗಲ್ಸ್
  • ಲಕ್ಷ್ಯ ಸೇನ್: ಪುರುಷರ ಸಿಂಗಲ್ಸ್
  • ಪಿವಿ ಸಿಂಧು: ಮಹಿಳೆಯರ ಸಿಂಗಲ್ಸ್
  • ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ: ಪುರುಷರ ಡಬಲ್ಸ್
  • ಅಶ್ವಿನಿ ಪೊನ್ನಪ್ಪ ಮತ್ತು ತನಿಶಾ ಕ್ರಾಸ್ಟೊ: ಮಹಿಳೆಯರ ಡಬಲ್ಸ್

ಬಾಕ್ಸಿಂಗ್

  • ನಿಖತ್ ಜರೀನ್: ಮಹಿಳೆಯರ 50 ಕೆಜಿ
  • ಅಮಿತ್ ಫಂಗಲ್: ಪುರುಷರ 51 ಕೆಜಿ
  • ನಿಶಾಂತ್ ದೇವ್: ಪುರುಷರ 71 ಕೆಜಿ
  • ಪ್ರೀತಿ ಪವಾರ್: ಮಹಿಳೆಯರ 54 ಕೆಜಿ
  • ಲೊವ್ಲಿನಾ ಬೊರ್ಗೊಹೈನ್: ಮಹಿಳೆಯರ 75 ಕೆಜಿ
  • ಜೈಸ್ಮಿನ್ ಲಂಬೋರಿಯಾ: ಮಹಿಳೆಯರ 57 ಕೆಜಿ

ಕುದುರೆ ಸವಾರಿ

ಅನುಷ್ ಅಗರ್ವಾಲಾ: ಡ್ರೆಸ್ಸೇಜ್

ಗಾಲ್ಫ್

  • ಶುಭಂಕರ್ ಶರ್ಮಾ : ಪುರುಷರ ಗಾಲ್ಫ್
  • ಗಗನ್ಜೀತ್ ಭುಲ್ಲರ್ : ಪುರುಷರ ಗಾಲ್ಫ್
  • ಅದಿತಿ ಅಶೋಕ್ ಮಹಿಳಾ ಗಾಲ್ಫ್
  • ದೀಕ್ಷಾ ಡಗಾರ್: ಮಹಿಳಾ ಗಾಲ್ಫ್

ಹಾಕಿ (ಪುರುಷರ ಹಾಕಿ ತಂಡ)

ಪಿಆರ್ ಶ್ರೀಜೇಶ್, ಜರ್ಮನ್‌ಪ್ರೀತ್ ಸಿಂಗ್, ಅಮಿತ್ ರೋಗಿದಾಸ್, ಹರ್ಮನ್‌ಪ್ರೀತ್ ಸಿಂಗ್, ಸುಮಿತ್, ಸಂಜಯ್, ರಾಜ್‌ಕುಮಾರ್ ಪಾಲ್, ಶಂಶೇರ್ ಸಿಂಗ್, ಮನ್‌ಪ್ರೀತ್ ಸಿಂಗ್, ಹಾರ್ದಿಕ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್, ಅಭಿಷೇಕ್, ಸುಖಜೀತ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ, ಮನದೀಪ್ ಸಿಂಗ್, ಗುಜರಾಂತ್ ಸಿಂಗ್.

ಜೂಡೋ

ತುಲಿಕಾ ಮಾನ್: ಮಹಿಳೆಯರ 78 ಕೆ.ಜಿ

ರೋಯಿಂಗ್ (Rowing)

ಬಲರಾಜ್ ಪನ್ವಾರ್: M1x

ನೌಕಾಯಾನ (Sailing)

  • ವಿಷ್ಣು ಸರವಣನ್: ಪುರುಷರ ಒನ್ ಪರ್ಸನ್ ಡಿಂಗಿ
  • ನೇತ್ರಾ ಕುಮನನ್: ಮಹಿಳೆಯರ ಏಕ ವ್ಯಕ್ತಿ ಡಿಂಗಿ

ಶೂಟಿಂಗ್

  • ಪೃಥ್ವಿರಾಜ್ ತೊಂಡೈಮಾನ್: ಪುರುಷರ ಟ್ರ್ಯಾಪ್
  • ರಾಜೇಶ್ವರಿ ಕುಮಾರಿ: ಮಹಿಳೆಯರ ಟ್ರ್ಯಾಪ್
  • ಶ್ರೇಯಸಿ ಸಿಂಗ್: ಮಹಿಳೆಯರ ಟ್ರ್ಯಾಪ್
  • ಅನಂತಜೀತ್ ಸಿಂಗ್ ನರುಕಾ: ಪುರುಷರ ಸ್ಕೀಟ್
  • ರೈಜಾ ಧಿಲ್ಲೋನ್: ಮಹಿಳೆಯರ ಸ್ಕೀಟ್
  • ಮಹೇಶ್ವರಿ ಚೌಹಾಣ್: ಮಹಿಳೆಯರ ಸ್ಕೀಟ್
  • ಅನಂತಜೀತ್ ಸಿಂಗ್ ನರುಕಾ/ಮಹೇಶ್ವರಿ ಚೌಹಾಣ್: ಸ್ಕೀಟ್ ಮಿಶ್ರ ತಂಡ
  • ಸಂದೀಪ್ ಸಿಂಗ್: ಪುರುಷರ 10 ಮೀ ಏರ್ ರೈಫಲ್
  • ಅರ್ಜುನ್ ಬಾಬುಟಾ: ಪುರುಷರ 10 ಮೀ ಏರ್ ರೈಫಲ್
  • ಎಲವೆನಿಲ್ ವಲರಿವನ್: ಮಹಿಳೆಯರ 10 ಮೀ ಏರ್ ರೈಫಲ್
  • ರಮಿತಾ ಜಿಂದಾಲ್: ಮಹಿಳೆಯರ 10 ಮೀ ಏರ್ ರೈಫಲ್
  • ಸ್ವಪ್ನಿಲ್ ಕುಸಾಲೆ: ಪುರುಷರ 50 ಮೀಟರ್ ರೈಫಲ್ 3 ಸ್ಥಾನ
  • ಐಶ್ವರಿ ಪ್ರತಾಪ್ ಸಿಂಗ್ ತೋಮರ್: ಪುರುಷರ 50 ಮೀಟರ್ ರೈಫಲ್ 3 ಸ್ಥಾನ
  • ಸಿಫ್ಟ್ ಕೌರ್ ಸಮ್ರಾ: ಮಹಿಳೆಯರ 50 ಮೀಟರ್ ರೈಫಲ್ 3 ಸ್ಥಾನಗಳು
  • ಅಂಜುಮ್ ಮೌದ್ಗಿಲ್: ಮಹಿಳೆಯರ 50 ಮೀಟರ್ ರೈಫಲ್ 3 ಸ್ಥಾನಗಳು
  • ಸಂದೀಪ್ ಸಿಂಗ್/ಎಲವೆನಿಲ್ ವಲರಿವನ್: 10ಮೀ ಏರ್ ರೈಫಲ್ ಮಿಶ್ರ ತಂಡ
  • ಅರ್ಜುನ್ ಬಾಬುತಾ/ರಮಿತಾ ಜಿಂದಾಲ್: 10ಮೀ ಏರ್ ರೈಫಲ್ ಮಿಶ್ರ ತಂಡ
  • ಅರ್ಜುನ್ ಚೀಮಾ: ಪುರುಷರ 10 ಮೀ ಏರ್ ಪಿಸ್ತೂಲ್
  • ಸರಬ್ಜೋತ್ ಸಿಂಗ್: ಪುರುಷರ 10 ಮೀ ಏರ್ ಪಿಸ್ತೂಲ್
  • ಮನು ಭಾಕರ್: ಮಹಿಳೆಯರ 10 ಮೀ ಏರ್ ಪಿಸ್ತೂಲ್
  • ರಿದಮ್ ಸಾಂಗ್ವಾಮ್: ಮಹಿಳೆಯರ 10 ಮೀ ಏರ್ ಪಿಸ್ತೂಲ್
  • ವಿಜಯವೀರ್ ಸಿಧು: ಪುರುಷರ 25 ಮೀ ರ್ಯಾಪಿಡ್ ಫೈರ್ ಪಿಸ್ತೂಲ್
  • ಅನೀಶ್ ಭನ್ವಾಲಾ: ಪುರುಷರ 25 ಮೀ ರ್ಯಾಪಿಡ್ ಫೈರ್ ಪಿಸ್ತೂಲ್
  • ಮನು ಭಾಕರ್: ಮಹಿಳೆಯರ 25 ಮೀ ಪಿಸ್ತೂಲ್
  • ಇಶಾ ಸಿಂಗ್: ಮಹಿಳೆಯರ 25 ಮೀ ಪಿಸ್ತೂಲ್
  • ಸರಬ್ಜೋತ್ ಸಿಂಗ್/ಮನು ಭಾಕರ್: 10ಮೀ ಏರ್ ಪಿಸ್ತೂಲ್ ಮಿಶ್ರ ತಂಡ
  • ಅರ್ಜುನ್ ಚೀಮಾ/ರಿದಮ್ ಸಾಂಗ್ವಾಮ್: 10 ಮೀ ಏರ್ ಪಿಸ್ತೂಲ್ ಮಿಶ್ರ ತಂಡ

ಈಜು

  • ಧಿನಿಧಿ ದೇಸಿಂಗು: ಮಹಿಳೆಯರ 200 ಮೀ ಫ್ರೀಸ್ಟೈಲ್
  • ಶ್ರೀಹರಿ ನಟರಾಜ್: ಪುರುಷರ 100 ಮೀ ಬ್ಯಾಕ್‌ಸ್ಟ್ರೋಕ್

ಟೇಬಲ್ ಟೆನಿಸ್

  • ಶರತ್ ಕಮಲ್: ಪುರುಷರ ಸಿಂಗಲ್ಸ್ ಮತ್ತು ಪುರುಷರ ತಂಡ
  • ಹರ್ಮೀತ್ ದೇಸಾಯಿ: ಪುರುಷರ ಸಿಂಗಲ್ಸ್ ಮತ್ತು ಪುರುಷರ ತಂಡ
  • ಮಾನವ್ ಠಕ್ಕರ್: ಪುರುಷರ ತಂಡ
  • ಮನಿಕಾ ಬಾತ್ರಾ: ಮಹಿಳೆಯರ ಸಿಂಗಲ್ಸ್ ಮತ್ತು ಮಹಿಳಾ ತಂಡ
  • ಶ್ರೀಜಾ ಅಕುಲಾ: ಮಹಿಳೆಯರ ಸಿಂಗಲ್ಸ್ ಮತ್ತು ಮಹಿಳಾ ತಂಡ
  • ಅರ್ಚನಾ ಕಾಮತ್: ಮಹಿಳಾ ತಂಡ

ಟೆನಿಸ್

  • ಸುಮಿತ್ ನಗಲ್: ಪುರುಷರ ಸಿಂಗಲ್ಸ್
  • ರೋಹನ್ ಬೋಪಣ್ಣ ಮತ್ತು ಶ್ರೀರಾಮ್ ಬಾಲಾಜಿ: ಪುರುಷರ ಡಬಲ್ಸ್

ಭಾರ ಎತ್ತುವಿಕೆ

ಮೀರಾಬಾಯಿ ಚಾನು: ಮಹಿಳೆಯರ 49 ಕೆಜಿ

ಕುಸ್ತಿ

  • ಅಮನ್ ಸೆಹ್ರಾವತ್: ಪುರುಷರ ಫ್ರೀಸ್ಟೈಲ್ 57 ಕೆಜಿ
  • ವಿನೇಶ್ ಫೋಗಟ್: ಮಹಿಳೆಯರ 50 ಕೆಜಿ
  • ಅಂಶು ಮಲಿಕ್: ಮಹಿಳೆಯರ 57 ಕೆಜಿ
  • ನಿಶಾ ದಹಿಯಾ: ಮಹಿಳೆಯರ 68 ಕೆಜಿ
  • ರೀತಿಕಾ ಹೂಡಾ: ಮಹಿಳೆಯರ 76 ಕೆಜಿ
  • ಆಂಟಿಮ್ ಫಂಗಲ್: ಮಹಿಳೆಯರ 53 ಕೆಜಿ

ಇನ್ನಷ್ಟು ಕ್ರೀಡಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ಇದನ್ನೂ ಒದಿ | ಒಲಿಂಪಿಕ್ಸ್ ಇತಿಹಾಸ: ಬರೋಬ್ಬರಿ 187 ದಿನಗಳ ಕಾಲ ನಡೆದಿತ್ತು1908ರ ಒಲಿಂಪಿಕ್ಸ್; ಭಾರತ ಭಾಗವಹಿಸಿತ್ತೇ?

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.