ಕನ್ನಡ ಸುದ್ದಿ  /  ಕ್ರೀಡೆ  /  ಪ್ಯಾರಿಸ್ ಒಲಿಂಪಿಕ್ಸ್ 2024: ನೀರಜ್ ಚೋಪ್ರಾ 28 ಸದಸ್ಯರ ಭಾರತೀಯ ಅಥ್ಲೆಟಿಕ್ಸ್ ತಂಡ ಪ್ರಕಟ, ಯಾರಿಗೆಲ್ಲಾ ಸಿಕ್ಕಿದೆ ಅವಕಾಶ?

ಪ್ಯಾರಿಸ್ ಒಲಿಂಪಿಕ್ಸ್ 2024: ನೀರಜ್ ಚೋಪ್ರಾ 28 ಸದಸ್ಯರ ಭಾರತೀಯ ಅಥ್ಲೆಟಿಕ್ಸ್ ತಂಡ ಪ್ರಕಟ, ಯಾರಿಗೆಲ್ಲಾ ಸಿಕ್ಕಿದೆ ಅವಕಾಶ?

Indias athletics squad for Paris Olympics 2024: 2024 ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ 28 ಸದಸ್ಯರ ಭಾರತೀಯ ಅಥ್ಲೆಟಿಕ್ಸ್ ತಂಡವನ್ನು ಪ್ರಕಟಿಸಿದೆ.

ಪ್ಯಾರಿಸ್ ಒಲಿಂಪಿಕ್ಸ್ 2024: ನೀರಜ್ ಚೋಪ್ರಾ 28 ಸದಸ್ಯರ ಭಾರತೀಯ ಅಥ್ಲೆಟಿಕ್ಸ್ ತಂಡ ಪ್ರಕಟ
ಪ್ಯಾರಿಸ್ ಒಲಿಂಪಿಕ್ಸ್ 2024: ನೀರಜ್ ಚೋಪ್ರಾ 28 ಸದಸ್ಯರ ಭಾರತೀಯ ಅಥ್ಲೆಟಿಕ್ಸ್ ತಂಡ ಪ್ರಕಟ

ಜುಲೈ 26 ರಿಂದ ಪ್ರಾರಂಭವಾಗುವ ಪ್ಯಾರಿಸ್ ಒಲಿಂಪಿಕ್ಸ್-2024​ಗೆ 28 ಸದಸ್ಯರ ಅಥ್ಲೆಟಿಕ್ಸ್ ತಂಡ (Indias athletics squad for Paris Olympics 2024) ಪ್ರಕಟಗೊಂಡಿದೆ. ಈ ಪೈಕಿ ಏಸ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಹೈಲೆಟ್ ಆಗಿದ್ದಾರೆ. ಭಾರತದ ಅಥ್ಲೆಟಿಕ್ಸ್ ತಂಡವು ವಿಶ್ವ ಚಾಂಪಿಯನ್ಸ್ ಮತ್ತು ಟೋಕಿಯೊ ಒಲಿಂಪಿಕ್ಸ್​​ನಲ್ಲಿ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಮತ್ತು ಏಷ್ಯನ್ ಗೇಮ್ಸ್ ವಿಜೇತರಾದ ಅವಿನಾಶ್ ಸೇಬಲ್, ತೇಜಿಂದರ್ಪಾಲ್ ಸಿಂಗ್ ತೂರ್ ಮತ್ತು ಜ್ಯೋತಿ ಯರ್ರಾಜಿ ಸೇರಿದಂತೆ 17 ಪುರುಷರು ಮತ್ತು 11 ಮಹಿಳಾ ತಾರೆಗಳನ್ನು ಒಳಗೊಂಡಿದೆ.

ಪ್ಯಾರಿಸ್ ಒಲಿಂಪಿಕ್ಸ್-2024ಕ್ಕೆ ಭಾರತದ ಅಥ್ಲೆಟಿಕ್ಸ್ ತಂಡ

ಪುರುಷರು: ಅವಿನಾಶ್ ಸೇಬಲ್ (3,000 ಮೀ ಸ್ಟೀಪಲ್ ಚೇಸ್), ನೀರಜ್ ಚೋಪ್ರಾ, ಕಿಶೋರ್ ಕುಮಾರ್ ಜೆನಾ (ಜಾವೆಲಿನ್ ಎಸೆತ), ತೇಜಿಂದರ್ಪಾಲ್ ಸಿಂಗ್ ತೂರ್ (ಶಾಟ್ ಪುಟ್), ಪ್ರವೀಣ್ ಚಿತ್ರವೇಲ್, ಅಬ್ದುಲ್ಲಾ ಅಬೂಬಕರ್ (ಟ್ರಿಪಲ್ ಜಂಪ್), ಅಕ್ಷದೀಪ್ ಸಿಂಗ್, ವಿಕಾಶ್ ಸಿಂಗ್, ಪರಮ್‌ಜೀತ್ ಸಿಂಗ್ ಬಿಶ್ತ್ (20 ಕಿ.ಮೀ. ಓಟದ ನಡಿಗೆ), ಮಹಮ್ಮದ್ ಅನಾಸ್, ಮುಹಮ್ಮದ್ ಅಜ್ಮಲ್, ಅಮೋಜ್ ಜಾಕೋಬ್, ಸಂತೋಷ್ ತಮಿಳರಸನ್, ರಾಜೇಶ್ ರಮೇಶ್ (4x400 ಮೀ ರಿಲೇ), ಮಿಜೋ ಚಾಕೋ ಕುರಿಯನ್ (4x400 ಮೀ ರಿಲೇ), ಸೂರಜ್ ಪನ್ವಾರ್ (ರೇಸ್ ನಡಿಗೆ ಮಿಶ್ರ ಮ್ಯಾರಥಾನ್), ಸರ್ವೇಶ್ ಅನಿಲ್ ಕುಶಾರೆ (ಹೈ ಜಂಪ್).

ಟ್ರೆಂಡಿಂಗ್​ ಸುದ್ದಿ

ಮಹಿಳೆಯರು: ಕಿರಣ್ ಪಹಲ್ (400 ಮೀ), ಪಾರುಲ್ ಚೌಧರಿ (3,000 ಮೀ ಸ್ಟೀಪಲ್ ಚೇಸ್ ಮತ್ತು 5,000 ಮೀ), ಜ್ಯೋತಿ ಯರ್ರಾಜಿ (100 ಮೀ ಹರ್ಡಲ್ಸ್), ಅಣ್ಣು ರಾಣಿ (ಜಾವೆಲಿನ್ ಎಸೆತ), ಅಭಾ ಖತುವಾ (ಶಾಟ್ ಪಟ್), ಜ್ಯೋತಿಕಾ ಶ್ರೀ ದಂಡಿ, ಶುಭಾ ವೆಂಕಟೇಶನ್, ವಿತ್ಯಾ ರಾಮರಾಜ್, ಪೂವಮ್ಮ ಎಂಆರ್ (4x400ಮೀ ರಿಲೇ), ಪ್ರಾಚಿ (4x400ಮೀ), ಪ್ರಿಯಾಂಕಾ ಗೋಸ್ವಾಮಿ (20ಕಿಮೀ ಓಟದ ನಡಿಗೆ/ರೇಸ್ ನಡಿಗೆ ಮಿಶ್ರ ಮ್ಯಾರಥಾನ್).

ಕ್ರೀಡಾಪಟುಗಳೊಂದಿಗೆ ಪ್ರಧಾನಿ ಮೋದಿ ಸಂವಾದ

ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತೀಯ ಕ್ರೀಡಾಪಟುಗಳಿಗೆ ಪ್ರಧಾನಿ ನರೇಂದ್ರ ಮೋದಿ ತಮ್ಮ ನಿವಾಸದಲ್ಲಿ ಆತಿಥ್ಯ ನೀಡಿದರು. ಮೋದಿ ಅವರು ಅಥ್ಲೀಟ್​ಗಳೊಂದಿಗೆ ಸಂವಾದ ನಡೆಸಿದರು. ನಂತರ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವ ಮೂಲಕ ಪ್ಯಾರಿಸ್​​ನಲ್ಲಿ ಭಾರತದ ಯಶಸ್ಸಿನ ಬಗ್ಗೆ ತಮ್ಮ ವಿಶ್ವಾಸ ವ್ಯಕ್ತಪಡಿಸಿದರು. ಪ್ಯಾರಿಸ್ ಒಲಿಂಪಿಕ್ಸ್‌ಗಾಗಿ ಪ್ಯಾರಿಸ್‌ಗೆ ತೆರಳುತ್ತಿರುವ ನಮ್ಮ ಅಥ್ಲೀಟ್​ಗಳೊಂದಿಗೆ ಸಂವಾದ ನಡೆಸಿದೆ ಎಂದು ಪ್ರಧಾನಿ ಮೋದಿ ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. "ನಮ್ಮ ಅಥ್ಲೀಟ್‌ಗಳು ತಮ್ಮ ಅತ್ಯುತ್ತಮ ಕೊಡುಗೆ ನೀಡುತ್ತಾರೆ. ಭಾರತವನ್ನು ಹೆಮ್ಮೆಪಡುವಂತೆ ಮಾಡುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದ್ದಾರೆ.

ಹೊಸ ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ, ಕ್ರೀಡಾ ಖಾತೆ ರಾಜ್ಯ ಸಚಿವ ರಕ್ಷಾ ಖಡ್ಸೆ ಮತ್ತು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ​​ಅಧ್ಯಕ್ಷೆ ಪಿಟಿ ಉಷಾ ಅವರು 120 ಅಥ್ಲೀಟ್‌ಗಳನ್ನು ಒಳಗೊಂಡಿರುವ ಭಾರತೀಯ ತಂಡದೊಂದಿಗೆ ಪಿಎಂ ಹೌಸ್‌ನಲ್ಲಿ ಉಪಸ್ಥಿತರಿದ್ದರು. ಪ್ರಧಾನಿ ಮೋದಿ ಅವರು ಭಾರತದ ಅಗ್ರ ಪದಕದ ಭರವಸೆಯ ನೀರಜ್ ಚೋಪ್ರಾ, ನಿಖತ್ ಜರೀನ್ ಮತ್ತು 2 ಬಾರಿ ಒಲಿಂಪಿಕ್ ಪದಕ ವಿಜೇತ ಶಟ್ಲರ್ ಪಿವಿ ಸಿಂಧು ಅವರೊಂದಿಗೆ ಸಂವಾದ ನಡೆಸಿದರು.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.