ಒಲಿಂಪಿಕ್ಸ್ ಇತಿಹಾಸ: ಬರೋಬ್ಬರಿ 187 ದಿನಗಳ ಕಾಲ ನಡೆದಿತ್ತು1908ರ ಒಲಿಂಪಿಕ್ಸ್; ಭಾರತ ಭಾಗವಹಿಸಿತ್ತೇ?
ಕನ್ನಡ ಸುದ್ದಿ  /  ಕ್ರೀಡೆ  /  ಒಲಿಂಪಿಕ್ಸ್ ಇತಿಹಾಸ: ಬರೋಬ್ಬರಿ 187 ದಿನಗಳ ಕಾಲ ನಡೆದಿತ್ತು1908ರ ಒಲಿಂಪಿಕ್ಸ್; ಭಾರತ ಭಾಗವಹಿಸಿತ್ತೇ?

ಒಲಿಂಪಿಕ್ಸ್ ಇತಿಹಾಸ: ಬರೋಬ್ಬರಿ 187 ದಿನಗಳ ಕಾಲ ನಡೆದಿತ್ತು1908ರ ಒಲಿಂಪಿಕ್ಸ್; ಭಾರತ ಭಾಗವಹಿಸಿತ್ತೇ?

History of Olympics: 1904 ಮತ್ತು 1908ರಲ್ಲಿ ನಡೆದಿದ್ದ ಒಲಿಂಪಿಕ್ಸ್ ಕುರಿತು ಈ ವರದಿಯಲ್ಲಿ ತಿಳಿಯೋಣ. ಕ್ರೀಡಾಕೂಟ ಎಲ್ಲಿ, ಯಾವಾಗ ನಡೆದಿತ್ತು? ಎಷ್ಟು ದೇಶಗಳು ಪಾಲ್ಗೊಂಡಿದ್ದವು, ಎಷ್ಟು ಸ್ಪರ್ಧಿಗಳು ಪಾಲ್ಗೊಂಡಿದ್ದರು, ಯಾವ ದೇಶ ಹೆಚ್ಚು ಪದಕ ಗೆದ್ದಿತ್ತು? ಇಲ್ಲಿದೆ ವಿವರ.

ಒಲಿಂಪಿಕ್ಸ್ ಇತಿಹಾಸ: ಬರೋಬ್ಬರಿ 187 ದಿನಗಳ ಕಾಲ ನಡೆದಿತ್ತು1908ರ ಒಲಿಂಪಿಕ್ಸ್; ಭಾರತ ಭಾಗವಹಿಸಿತ್ತೇ?
ಒಲಿಂಪಿಕ್ಸ್ ಇತಿಹಾಸ: ಬರೋಬ್ಬರಿ 187 ದಿನಗಳ ಕಾಲ ನಡೆದಿತ್ತು1908ರ ಒಲಿಂಪಿಕ್ಸ್; ಭಾರತ ಭಾಗವಹಿಸಿತ್ತೇ?

ಬಹುನಿರೀಕ್ಷಿತ 2024ರ ಪ್ಯಾರಿಸ್ ಒಲಿಂಪಿಕ್ಸ್​ (Olympic Games Paris 2024) ಟೂರ್ನಿಗೆ​ ದಿನಗಣನೆ ಆರಂಭವಾಗಿದೆ. ಜುಲೈ 26ರಿಂದ ಪ್ರಾರಂಭವಾಗುವ ಕ್ರೀಡಾಕೂಟಕ್ಕೆ ಕ್ರೀಡಾಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಭಾರತೀಯ ಕ್ರೀಡಾಪಟುಗಳು ಸಹ ದೇಶಕ್ಕೆ ಪದಕ ಗೆಲ್ಲಲು ಹಾತೊರೆಯುತ್ತಿದ್ದಾರೆ. ಈ ಬಾರಿಗೆ ಒಟ್ಟಾರೆ 10,500 ಆಥ್ಲೀಟ್​​​ಗಳು ಪಾಲ್ಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಒಲಿಂಪಿಕ್ಸ್ ಇತಿಹಾಸವನ್ನೊಮ್ಮೆ ಕೆದಕೋಣ.

1904 ಮತ್ತು 1908ರಲ್ಲಿ ನಡೆದಿದ್ದ ಒಲಿಂಪಿಕ್ಸ್ ಕುರಿತು ಈ ವರದಿಯಲ್ಲಿ ತಿಳಿಯೋಣ. ಕ್ರೀಡಾಕೂಟ ಎಲ್ಲಿ, ಯಾವಾಗ ನಡೆದಿತ್ತು? ಎಷ್ಟು ದೇಶಗಳು ಪಾಲ್ಗೊಂಡಿದ್ದವು, ಎಷ್ಟು ಸ್ಪರ್ಧಿಗಳು ಪಾಲ್ಗೊಂಡಿದ್ದರು, ಯಾವ ದೇಶ ಹೆಚ್ಚು ಪದಕ ಗೆದ್ದಿತ್ತು? 1904ರ ಒಲಿಂಪಿಕ್ಸ್ ಯುರೋಪ್​​ನ ಹೊರಗೆ ನಡೆದಿದ್ದೇಕೆ? 1908ರ ಒಲಿಂಪಿಕ್ಸ್ 187 ದಿನಗಳ ಕಾಲ ನಡೆದಿದ್ದೇಕೆ? ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ನೋಡಿ ಉತ್ತರ.

1904ರ ಒಲಿಂಪಿಕ್ಸ್​

ಅಮೆರಿಕದ ಸೇಂಟ್ ಲೂಯಿಸ್​ನಲ್ಲಿ 1904ರ ಆಗಸ್ಟ್​ 29ರಿಂದ ಸೆಪ್ಟೆಂಬರ್ 3ರ ತನಕ 3ನೇ ಒಲಿಂಪಿಕ್ಸ್ ನಡೆದಿತ್ತು. ಇದು ಯುರೋಪ್​ನಿಂದ ಹೊರಗೆ ನಡೆದಿತ್ತು. ಯುರೋಪ್​ನಿಂದ ಹೊರಗೆ ಜರುಗಿದ ಮೊದಲ ಒಲಿಂಪಿಕ್ಸ್ ಇದಾಗಿತ್ತು. ಆದರೆ, ರಷ್ಯಾ ಮತ್ತು ಜಪಾನ್​ ನಡುವಿನ ಯುದ್ಧದ ಕಾರಣದಿಂದ ಬಹುತೇಕ ಸ್ಫರ್ಧಿಗಳು ಕೂಟದಿಂದ ಹಿಂದೆ ಸರಿದಿದ್ದರು. 16 ಕ್ರೀಡೆಗಳ ಪೈಕಿ 95 ಕ್ರೀಡಾ ವಿಭಾಗಗಲ್ಲಿ ಸ್ಫರ್ಧೆ ನಡೆಯಿತು.

ಒಟ್ಟು 12 ದೇಶಗಳು ಪಾಲ್ಗೊಂಡಿದ್ದ ಈ ಕ್ರೀಡಾಕೂಟದಲ್ಲಿ 6 ಮಹಿಳೆಯರು ಸಹಿತ 648 ಸ್ಪರ್ಧಿಗಳು ಭಾಗವಹಿಸಿದ್ದರು. ಈ ಪೈಕಿ 74 ಮಂದಿ ಮಾತ್ರ ಉತ್ತರ ಅಮೆರಿಕದಿಂದ ಹೊರಗಿನವರಾಗಿದ್ದರು. ಅಗ್ರ ಮೂವರು ವಿಜೇತರಿಗೆ ಚಿನ್ನ, ಬೆಳ್ಳಿ, ಕಂಚಿನ ಪದಕ ನೀಡುವ ಸಂಪ್ರದಾಯ ಈ ಒಲಿಂಪಿಕ್ಸ್​ನಿಂದ ಆರಂಭಗೊಂಡಿತು. ಅಮೆರಿಕ 76 ಚಿನ್ನ ಸಹಿತ 231 ಪದಕ ಗೆದ್ದು ಪ್ರಾಬಲ್ಯ ಸಾಧಿಸಿತು. ಆದರೆ ಈ ಕೂಟದಲ್ಲಿ ಭಾರತ ಭಾಗವಹಿಸಿಲ್ಲ.

1908ರ ಒಲಿಂಪಿಕ್ಸ್​

ಇಂಗ್ಲೆಂಡ್​ನ ಲಂಡನ್​ನಲ್ಲಿ 1908ರ ಏಪ್ರಿಲ್​​ 27ರಿಂದ ಅಕ್ಟೋಬರ್​ 31ರ ತನಕ ನಾಲ್ಕನೇ ಒಲಿಂಪಿಕ್ಸ್​ ನಡೆಯಿತು. ರೋಮ್​ನಲ್ಲಿ ನಿಗದಿಯಾಗಿದ್ದ ಈ ಒಲಿಂಪಿಕ್ಸ್, 1906ರಲ್ಲಿ ವೆಸುನಿಯಸ್​​ ಸ್ಫೋಟಕ್ಕೆ 100ಕ್ಕೂ ಅಧಿಕ ಮಂದಿ ಬಲಿಯಾದರು. ಹೀಗಾಗಿ ಲಂಡನ್​ಗೆ ಸ್ಥಳಾಂತರಗೊಂಡಿತು. ಹೀಗಾಗಿ 187 ದಿನಗಳ (6 ತಿಂಗಳು, 4 ದಿನ) ಕಾಲ ನಡೆದ ಕ್ರೀಡಾಕೂಟ ಅತ್ಯಂತ ಸುದೀರ್ಘ ಆಧುನಿಕ ಎನಿಸಿದೆ. 22 ಕ್ರೀಡೆಗಳ 110 ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. 22 ದೇಶಗಳ 2 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸಿದ್ದರು. ಆತಿಥೇಯ ಬ್ರಿಟನ್ 56 ಚಿನ್ನ ಸಹಿತ 146 ಪದಕ ಗೆದ್ದಿತ್ತು. ಈ ಕೂಟದಲ್ಲಿ ಭಾರತ ಕೂಡ ಭಾಗವಹಿಸಿರಲಿಲ್ಲ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.