ಪ್ಯಾರಿಸ್ ಒಲಿಂಪಿಕ್ಸ್: ಆರ್ಚರಿಯೊಂದಿಗೆ ಭಾರತದ ಅಭಿಯಾನ ಆರಂಭ; ಜುಲೈ 25ರ ವೇಳಾಪಟ್ಟಿ, ಲೈವ್ ಸ್ಟ್ರೀಮಿಂಗ್‌ ವಿವರ
ಕನ್ನಡ ಸುದ್ದಿ  /  ಕ್ರೀಡೆ  /  ಪ್ಯಾರಿಸ್ ಒಲಿಂಪಿಕ್ಸ್: ಆರ್ಚರಿಯೊಂದಿಗೆ ಭಾರತದ ಅಭಿಯಾನ ಆರಂಭ; ಜುಲೈ 25ರ ವೇಳಾಪಟ್ಟಿ, ಲೈವ್ ಸ್ಟ್ರೀಮಿಂಗ್‌ ವಿವರ

ಪ್ಯಾರಿಸ್ ಒಲಿಂಪಿಕ್ಸ್: ಆರ್ಚರಿಯೊಂದಿಗೆ ಭಾರತದ ಅಭಿಯಾನ ಆರಂಭ; ಜುಲೈ 25ರ ವೇಳಾಪಟ್ಟಿ, ಲೈವ್ ಸ್ಟ್ರೀಮಿಂಗ್‌ ವಿವರ

Paris Olympics 2024 July 25th Schedule: ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಜುಲೈ 25ರಂದು ಭಾರತದ ಆಟಗಳ ವೇಳಾಪಟ್ಟಿ, ಲೈವ್ ಸ್ಟ್ರೀಮಿಂಗ್ ವಿವರ ಇಲ್ಲಿದೆ. ಪುರುಷರ ಹಾಗೂ ಮಹಿಳೆಯರ ಆರ್ಚರಿ ರ‍್ಯಾಂಕಿಂಗ್ ಸುತ್ತು ಗುರುವಾರ ನಡೆಯುತ್ತಿದೆ.

ಆರ್ಚರಿಯೊಂದಿಗೆ ಭಾರತದ ಅಭಿಯಾನ ಆರಂಭ; ಜುಲೈ 25ರ ವೇಳಾಪಟ್ಟಿ, ಲೈವ್ ಸ್ಟ್ರೀಮಿಂಗ್‌ ವಿವರ
ಆರ್ಚರಿಯೊಂದಿಗೆ ಭಾರತದ ಅಭಿಯಾನ ಆರಂಭ; ಜುಲೈ 25ರ ವೇಳಾಪಟ್ಟಿ, ಲೈವ್ ಸ್ಟ್ರೀಮಿಂಗ್‌ ವಿವರ (AP, PTI)

ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಜುಲೈ 26ರಂದು ಸಂಜೆ ಅದ್ಧೂರಿ ಚಾಲನೆ ಸಿಗಲಿದೆ. ಆಗಸ್ಟ್ 11ರವರೆಗೆ ಪ್ರೇಮನಗರಿಯಲ್ಲಿ 33ನೇ ಆವೃತ್ತಿಯ ಚತುರ್ವಾರ್ಷಿಕ ಕ್ರೀಡಾಕೂಟ ಕಳೆಗಟ್ಟಲಿದೆ. ಟೂರ್ನಿಯ ಅಧಿಕೃತ ಉದ್ಘಾಟನೆ ಶುಕ್ರವಾರ ನಡೆಯಲಿದ್ದರೂ, ಜುಲೈ 24ರಂದೇ ವಿವಿಧ ಕ್ರೀಡೆಗಳು ಆರಂಭವಾಗಿವೆ. ಕೆಲವೊಂದು ಕ್ರೀಡೆಗಳಲ್ಲಿ ಆಟಗಾರರಿಗೆ ಸುದೀರ್ಘ ವಿಶ್ರಾಂತಿ ಅಗತ್ಯವಿರುವುದರಿಂದ ಕೆಲವೊಂದು ಆಟಗಳನ್ನು ಬೇಗನೆ ಆರಂಭಿಸಲಾಗುತ್ತದೆ. ಈಗಾಗಲೇ ಫುಟ್ಬಾಲ್‌ ಪಂದ್ಯಗಳು ಆರಂಭಗೊಂಡಿವೆ. ಅದರಂತೆಯೇ ಎರಡನೇ ದಿನವಾದ ಇಂದು, ಅಂದರೆ ಜುಲೈ 25ರ ಗುರುವಾರದಂದು ಭಾರತ ದೇಶದ ಆಟಗಾರರು ತಮ್ಮ ಅಭಿಯಾನ ಆರಂಭಿಸಲಿದ್ದಾರೆ. ಹಾಗಿದ್ದರೆ ಇಂದು ನಡೆಯುವ ಕ್ರೀಡೆಗಳು ಯಾವುವು ಎಂಬುದನ್ನು ನೋಡೋಣ.

ಭಾರತದ ಆಟಗಾರರು ಸ್ಪರ್ಧಿಸಲಿರುವ ಮೊದಲ ಈವೆಂಟ್‌ ಬಿಲ್ಲುಗಾರಿಕೆ (ಆರ್ಚರಿ). ಜುಲೈ 25ರ ಗುರುವಾರ ಆರ್ಚರಿ ಈವೆಂಟ್‌ ಆರಂಭವಾಗಲಿದೆ. ಇದರೊಂದಿಗೆ ಪ್ಯಾರಿಸ್‌ ಗೇಮ್ಸ್‌ನಲ್ಲಿ ಭಾರತೀಯರ ಅಭಿಯಾನ ಆರಂಭವಾಗುತ್ತಿದೆ. ಭಾರತದ ಬಿಲ್ಲುಗಾರರಾದ ದೀಪಿಕಾ ಕುಮಾರಿ, ಅಂಕಿತಾ ಭಕತ್, ಭಜನ್ ಕೌರ್, ಬಿ ಧೀರಜ್, ತರುಣ್‌ದೀಪ್ ರೈ ಮತ್ತು ಪ್ರವೀಣ್ ಜಾಧವ್ ಅವರು ವೈಯಕ್ತಿಕ ರ‍್ಯಾಂಕಿಂಗ್ ಸುತ್ತಿನಲ್ಲಿ ಭಾಗವಹಿಸಲಿದ್ದಾರೆ.

ವನಿತೆಯರ ರ‍್ಯಾಂಕಿಂಗ್ ಸುತ್ತು ಮೊದಲಿಗೆ ನಡೆಯಲಿದೆ. ಭಾರತೀಯ ಕಾಲಮಾನದ ಪ್ರಕಾರ ಗುರುವಾರ ಮಧ್ಯಾಹ್ನ 1 ಗಂಟೆಗೆ ವನಿತೆಯರ ರ‍್ಯಾಂಕಿಂಗ್ ಸುತ್ತು ಆರಂಭವಾಗಲಿದೆ. ಆ ಬಳಿಕ ಪುರುಷರ ರ‍್ಯಾಂಕಿಂಗ್ ಸುತ್ತು ಸಂಜೆ 5:45ಕ್ಕೆ ಆರಂಭವಾಗಲಿದೆ. ಈ ಈವೆಂಟ್‌ ಎಸ್ಪ್ಲೇನೇಡ್ ಡೆಸ್ ಇನ್ವಾಲಿಡ್ಸ್‌ನಲ್ಲಿ ನಡೆಯಲಿದೆ.

ಮಹಿಳೆಯರ ವೈಯಕ್ತಿಕ ಶ್ರೇಯಾಂಕದ ಸುತ್ತು

  • ಆರಂಭ ಸಮಯ: ಮಧ್ಯಾಹ್ನ 1 ಗಂಟೆ
  • ಆಟಗಾರ್ತಿಯರು: ದೀಪಿಕಾ ಕುಮಾರಿ, ಅಂಕಿತಾ ಭಕತ್, ಭಜನ್ ಕೌರ್

ಪುರುಷರ ವೈಯಕ್ತಿಕ ಶ್ರೇಯಾಂಕದ ಸುತ್ತು

  • ಆರಂಭ ಸಮಯ: ಸಂಜೆ 5:45 ಗಂಟೆ
  • ಆಟಗಾರರು: ಬಿ ಧೀರಜ್, ತರುಣದೀಪ್ ರೈ, ಪ್ರವೀಣ್ ಜಾಧವ್

ಇದನ್ನೂ ಓದಿ | ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ಪದಕ ಗೆದ್ದ ಭಾರತೀಯರಿವರು; ಅವಿಸ್ಮರಣೀಯ ಗೆಲುವಿನ ಕ್ಷಣದ ಚಿತ್ರಗುಚ್ಛ

ಲೈವ್ ಸ್ಟ್ರೀಮಿಂಗ್ ವಿವರ

ಭಾರತದಲ್ಲಿ ಒಲಿಂಪಿಕ್ಸ್‌ ಕ್ರೀಡಾಕೂಟದ ಈವೆಂಟ್‌ಗಳನ್ನು ಮೊಬೈಲ್‌ ಮೂಲಕ ಜಿಯೋ ಸಿನಿಮಾದಲ್ಲಿ ವೀಕ್ಷಿಸಬಹುದು. ಟಿವಿ ಮೂಲಕ Sports18 ಚಾನೆಲ್‌ನಲ್ಲಿ ವೀಕ್ಷಿಸಬಹುದು.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತೀಯ ಬಿಲ್ಲುಗಾರರ ಪ್ರದರ್ಶನ

2021ರಲ್ಲಿ ನಡೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ನಾಲ್ವರು ಬಿಲ್ಲುಗಾರರು ಆಡಿದ್ದರು. ದೀಪಿಕಾ ಕುಮಾರಿ, ಅತನು ದಾಸ್, ಪ್ರವೀಣ್ ಜಾಧವ್ ಮತ್ತು ತರುಣದೀಪ್ ರೈ ಭಾರತವನ್ನು ಪ್ರತಿನಿಧಿಸಿದ್ದರು. ಇದರಲ್ಲಿ ಪುರುಷರ ವಿಭಾಗವು ಅಗ್ರ 30ರೊಳಗೆ ಎಂಟ್ರಿ ಕೊಡಲು ವಿಫಲರಾದರು. ವನಿತೆಯರ ಪೈಕಿ ದೀಪಿಕಾ ಒಂಬತ್ತನೇ ಶ್ರೇಯಾಂಕ ಪಡೆದರು. ಅವರು ರಿಕರ್ವ್ ಕ್ವಾರ್ಟರ್ ಫೈನಲ್‌ನಲ್ಲಿ ಕೊರಿಯಾದ ಆನ್ ಸ್ಯಾನ್ ವಿರುದ್ಧ ಸೋಲು ಕಂಡರು. ಮಿಶ್ರ ತಂಡ ಸ್ಪರ್ಧೆಯಲ್ಲಿ, ದೀಪಿಕಾ ಮತ್ತು ಪ್ರವೀಣ್ ಜಾಧವ್ ಕ್ವಾರ್ಟರ್ ಫೈನಲ್ ತಲುಪಿದ್ದರು.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.