ಮನು ಭಾಕರ್ ಮತ್ತು ತಾಯಿ ಭೇಟಿಯಾದ ನೀರಜ್ ಚೋಪ್ರಾ; ಇಂಟರ್ನೆಟ್‌ನಲ್ಲಿ ಧೂಳೆಬ್ಬಿಸಿದ ವಿಡಿಯೋ, ನೆಟ್ಟಿಗರ ತುಂಟ ಪ್ರಶ್ನೆ-paris olympics medalist neeraj chopra meets manu bhaker and mother sumedha bhaker video goes viral in social media jra ,ಕ್ರೀಡೆ ಸುದ್ದಿ
ಕನ್ನಡ ಸುದ್ದಿ  /  ಕ್ರೀಡೆ  /  ಮನು ಭಾಕರ್ ಮತ್ತು ತಾಯಿ ಭೇಟಿಯಾದ ನೀರಜ್ ಚೋಪ್ರಾ; ಇಂಟರ್ನೆಟ್‌ನಲ್ಲಿ ಧೂಳೆಬ್ಬಿಸಿದ ವಿಡಿಯೋ, ನೆಟ್ಟಿಗರ ತುಂಟ ಪ್ರಶ್ನೆ

ಮನು ಭಾಕರ್ ಮತ್ತು ತಾಯಿ ಭೇಟಿಯಾದ ನೀರಜ್ ಚೋಪ್ರಾ; ಇಂಟರ್ನೆಟ್‌ನಲ್ಲಿ ಧೂಳೆಬ್ಬಿಸಿದ ವಿಡಿಯೋ, ನೆಟ್ಟಿಗರ ತುಂಟ ಪ್ರಶ್ನೆ

ಒಲಿಂಪಿಕ್ಸ್‌ ಪದಕ ಗೆದ್ದ ಶೂಟರ್ ಮನು ಭಾಕರ್ ಅವರ ತಾಯಿ ಸುಮೇಧಾ ಭಾಕರ್, ನೀರಜ್ ಚೋಪ್ರಾ ಅವರನ್ನು ಭೇಟಿಯಾದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ. ದೃಶ್ಯ ನೋಡಿದ ನೆಟ್ಟಿಗರು ತುಂಟ ಪ್ರಶ್ನೆಗಳನ್ನು ಕೇಳಲು ಶುರು ಮಾಡಿದ್ದಾರೆ.

ಮನು ಭಾಕರ್ ಮತ್ತು ತಾಯಿ ಭೇಟಿಯಾದ ನೀರಜ್ ಚೋಪ್ರಾ; ಇಂಟರ್ನೆಟ್‌ನಲ್ಲಿ ಧೂಳೆಬ್ಬಿಸಿದ ವಿಡಿಯೋ
ಮನು ಭಾಕರ್ ಮತ್ತು ತಾಯಿ ಭೇಟಿಯಾದ ನೀರಜ್ ಚೋಪ್ರಾ; ಇಂಟರ್ನೆಟ್‌ನಲ್ಲಿ ಧೂಳೆಬ್ಬಿಸಿದ ವಿಡಿಯೋ (X/@avinasharyan09)

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದ ನೀರಜ್‌ ಚೋಪ್ರಾ ಹಾಗೂ ಎರಡು ಕಂಚಿನ ಪದಕಗಳನ್ನು ಗೆದ್ದ ಮನು ಭಾಕರ್‌ ಪರಸ್ಪರ ಮಾತನಾಡುತ್ತಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಇದೇ ವೇಳೆ ನೀರಜ್ ಹಾಗೂ ಮನು ಅವರ ತಾಯಿ ಆತ್ಮೀಯವಾಗಿ ಮಾತನಾಡುತ್ತಿರುವ ವಿಡಿಯೋ ಕೂಡಾ ಇಂಟರ್ನೆಟ್‌ನಲ್ಲಿ ಧೂಳೆಬ್ಬಿಸಿದೆ. ಭಾರತದಲ್ಲಿ ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿರುವ ಇಬ್ಬರು ಐಕಾನ್‌ಗಳ ಭೇಟಿಯನ್ನು ನೋಡಿ ನೆಟ್ಟಿಗರು ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ. ಅದರಲ್ಲೂ ನೀರಜ್‌ ಮತ್ತು ಮನು ಪರಸ್ಪರ ಮಾತನಾಡುತ್ತಿದ್ದರೂ, ಒಬ್ಬರು ಇನ್ನೊಬ್ಬರ ಮುಖ ಅಥವಾ ಕಣ್ಣು ನೋಡುತ್ತಿಲ್ಲ. ಹೀಗಾಗಿ ಇಬ್ಬರ ನಡುವೆ ಕ್ರಷ್‌ ಆಗಿದೆ ಎಂದೇ ಚರ್ಚೆಗಳಾಗುತ್ತಿವೆ.

ಇಷ್ಟೇ ಆಗಿದ್ದರೆ, ನೆಟ್ಟಿಗರ ಗೊಂದಲ ತಣ್ಣಗಾಗಬಹುದಿತ್ತು. ಆದರೆ ಮನು ಭಾಕರ್ ಅವರ ತಾಯಿ ಸುಮೇಧಾ ಭಾಕರ್ ಅವರು ನೀರಜ್ ಚೋಪ್ರಾರನ್ನು ಭೇಟಿಯಾದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಮತ್ತೆ ಸದ್ದು ಮಾಡುತ್ತಿದೆ. ಪ್ಯಾರಿಸ್‌ನಲ್ಲಿ ಇಬ್ಬರೂ ಭೇಟಿಯಾಗಿದ್ದು, ಇದರ ತುಣುಕುಗಳು ವೈರಲ್ ಆಗಿವೆ.

ಒಲಿಂಪಿಕ್ ಕ್ರೀಡಾಕೂಟದ ಒಂದೇ ಆವೃತ್ತಿಯಲ್ಲಿ ಎರಡು ಪದಕಗಳನ್ನು ಗೆಲ್ಲುವ ಮೂಲಕ ಶೂಟರ್ ಮನು ಭಾಕರ್ ಇತಿಹಾಸ ಬರೆದರು. ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್‌ ಮತ್ತು 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಸರಬ್ಜೋತ್ ಸಿಂಗ್ ಅವರೊಂದಿಗೂ ಸತತ ಎರಡು ಕಂಚಿನ ಪದಕ ಗೆದ್ದಿದ್ದಾರೆ. ಅತ್ತ, ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದ ನೀರಜ್‌, ಈ ಬಾರಿ ಪ್ಯಾರಿಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.

ಸದ್ಯ, ಚಿನ್ನದ ಹುಡುಗ ಮನು ಭಾಕರ್ ಅವರೊಂದಿಗಿನ ಮಾತನಾಡುವ ತುಣುಕು ಮತ್ತು ಸುಮೇಧಾ ಭಾಕರ್ ಅವರೊಂದಿಗೆ ಮಾತನಾಡುತ್ತಿರುವ ದೃಶ್ಯಗಳು ಅಂತರ್ಜಾಲದಲ್ಲಿ ಬಿರುಗಾಳಿ ಎಬ್ಬಿಸಿದೆ.

ಮದುವೆ ಪಕ್ಕಾ?

ಮನು ಭಾಕರ್ ಅವರ ತಾಯಿ ಸುಮೇಧಾ ಭಾಕರ್, ನೀರಜ್ ಕೈಯನ್ನು ಹಿಡಿದುಕೊಂಡು ಆತ್ಮೀಯವಾಗಿ ಮಾತನಾಡುವುದನ್ನು ನೋಡಬಹುದು. ಎಕ್ಸ್‌ನಲ್ಲಿ ಲಕ್ಷಾಂತರ ಮಂದಿ ಈ ದೃಶ್ಯವನ್ನು ವೀಕ್ಷಿಸಿದ್ದಾರೆ. ನೀರಜ್‌ ಕೈ ಹಿಡಿದು ತಮ್ಮ ತಲೆಯ ಮೇಲೆ ಇರಿಸುವುದನ್ನು ದೃಶ್ಯದಲ್ಲಿ ನೋಡಬಹುದು. ಈ ಆತ್ಮೀಯತೆಗೆ ನೆಟ್ಟಿಗರು ತಮಾಷೆ ಆರರಂಭಿಸಿದ್ದಾರೆ. ಮನು ಅವರು ತಾಯಿ ಚೋಪ್ರಾ ಅವರನ್ನು ತಮ್ಮ ಮಗಳಿಗೆ ಸೂಕ್ತವಾದ ಜೋಡಿ ಎಂದು ಆಯ್ಕೆ ಮಾಡುತ್ತಿದ್ದಾರೆ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.

"ಮದುವೆಯ ಮಾತುಕತೆ ನಡೀತಿದೆ" ಎಂದು ಎಕ್ಸ್ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. "ಭಾರತೀಯ ತಾಯಿ ತನ್ನ ಮಗಳ ಮದುವೆಯ ಬಗ್ಗೆ ಯಶಸ್ವಿ ಹುಡುಗನೊಂದಿಗೆ ಮಾತನಾಡುತ್ತಿದ್ದಾರೆ" ಎಂದು ಇನ್ನೊಬ್ಬರು ದನಿಗೂಡಿಸಿದ್ದಾರೆ.

ಅತ್ತ ಪ್ಯಾರಿಸ್‌ನಲ್ಲಿ ಇಬ್ಬರು ಕ್ರೀಡಾಪಟುಗಳು ಕೂಡಾ ಪರಸ್ಪರ ಮಾತನಾಡುತ್ತಿರುವ ವಿಡಿಯೊ ಎಕ್ಸ್‌ನಲ್ಲಿ ವೈರಲ್‌ ಆಗಿದೆ. ಇಬ್ಬರೂ ಮುಖ ಕೊಟ್ಟು ಅಥವಾ ಕಣ್ಣು ನೋಡಿಕೊಂಡು ಮಾತನಾಡುತ್ತಿಲ್ಲ. ಇಬ್ಬರ ನಡುವೆ ಏನೋ ಒಂದು ಕಂಪನವಿದೆ. ಕ್ರಷ್‌ ಆಗಿರಬಹುದು ಎಂದು ನೆಟ್ಟಿಗರು ಮಾತನಾಡುತ್ತಿದ್ದಾರೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.