ನೀರಜ್ ಚೋಪ್ರಾ ಐಷಾರಾಮಿ ಬಂಗಲೆ ಮೇಲೆ ತ್ರಿವರ್ಣ ಧ್ವಜ; ಚಿನ್ನದ ಹುಡುಗ ದುಬಾರಿ ಕಾರು-ಬೈಕ್‌ಗಳ ಒಡೆಯ -Watch-paris olympics 2024 silver medalist neeraj chopra home tour panipat haryana car collections bikes jra ,ಕ್ರೀಡೆ ಸುದ್ದಿ
ಕನ್ನಡ ಸುದ್ದಿ  /  ಕ್ರೀಡೆ  /  ನೀರಜ್ ಚೋಪ್ರಾ ಐಷಾರಾಮಿ ಬಂಗಲೆ ಮೇಲೆ ತ್ರಿವರ್ಣ ಧ್ವಜ; ಚಿನ್ನದ ಹುಡುಗ ದುಬಾರಿ ಕಾರು-ಬೈಕ್‌ಗಳ ಒಡೆಯ -Watch

ನೀರಜ್ ಚೋಪ್ರಾ ಐಷಾರಾಮಿ ಬಂಗಲೆ ಮೇಲೆ ತ್ರಿವರ್ಣ ಧ್ವಜ; ಚಿನ್ನದ ಹುಡುಗ ದುಬಾರಿ ಕಾರು-ಬೈಕ್‌ಗಳ ಒಡೆಯ -Watch

ನೀರಜ್‌ ಚೋಪ್ರಾ ಹರಿಯಾಣದಲ್ಲಿ ಐಷಾರಾಮಿ ಮನೆ ಹೊಂದಿದ್ದಾರೆ. ಇವರಲ್ಲಿ ದುಬಾರಿ ಕಾರು ಹಾಗೂ ಬೈಕ್‌ಗಳು ಕೂಡಾ ಇವೆ. ಮುದ್ದಾದ ಗೋಲ್ಡನ್‌ ರಿಟ್ರೈವರ್ ನಾಯಿ ಸಾಕುವ ನೀರಜ್, ಅದಕ್ಕೆ ಟೋಕಿಯೊ ಎಂದು ಹೆಸರಿಟ್ಟಿದ್ದಾರೆ.

ನೀರಜ್ ಚೋಪ್ರಾ ಐಷಾರಾಮಿ ಬಂಗಲೆ ಮೇಲೆ ತ್ರಿವರ್ಣ ಧ್ವಜ;
ನೀರಜ್ ಚೋಪ್ರಾ ಐಷಾರಾಮಿ ಬಂಗಲೆ ಮೇಲೆ ತ್ರಿವರ್ಣ ಧ್ವಜ; (Youtube, Instagram)

ಚಿನ್ನದ ಹುಡುಗ ನೀರಜ್ ಚೋಪ್ರಾ, ಪ್ಯಾರಿಸ್ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಚಿನ್ನ ಗೆಲ್ಲಲು ವಿಫಲರಾದರು. ಆದರೆ, ಅಮೂಲ್ಯ ಬೆಳ್ಳಿ ಪದಕವನ್ನು ಗೆಲ್ಲುವಲ್ಲಿ ಜಾವೆಲಿನ್ ಎಸೆತಗಾರ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ನೀರಜ್‌ ಇತಿಹಾಸ ಸೃಷ್ಟಿಸಿದರು. ಸತತ ಎರಡು ಒಲಂಪಿಕ್ ಕ್ರೀಡಾಕೂಟಗಳಲ್ಲಿ ಟ್ರ್ಯಾಕ್ ಮತ್ತು ಫೀಲ್ಡ್ ಪದಕಗಳನ್ನು ಗೆದ್ದ ಭಾರತದ ಮೊದಲ ಮತ್ತು ಏಕೈಕ ಅಥ್ಲೀಟ್ ಎಂಬ ದಾಖಲೆ ಬರೆದರು. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬಂಗಾರ ಸಾಧನೆ ಮಾಡುವ ಮೂಲಕ, ದೇಶದೆಲ್ಲೆಡೆ ನೀರಜ್‌ ಮನೆಮಾತಾಗಿದ್ದಾರೆ. ತಮ್ಮ ಬ್ರಾಂಡ್‌ ಮೌಲ್ಯವನ್ನೂ ಹೆಚ್ಚಿಸಿಕೊಂಡಿರುವ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಈಗಾಗಲೇ ಹಲವು ಪದಕ ಸಾಧನೆ ಮಾಡಿದ್ದಾರೆ.

ನೀರಜ್‌ ಚೋಪ್ರಾ, ಸದ್ಯ ಭಾರತದ ಪ್ರಮುಖ ಕ್ರೀಡಾ ಐಕಾನ್‌ಗಳಲ್ಲಿ ಒಬ್ಬರು. ಹರಿಯಾಣದ ಮಧ್ಯಮ ವರ್ಗದ ಕುಟುಂಬದಿಂದ ಬಂದ ನೀರಜ್‌, ಈಗ ಪಾಣಿಪತ್‌ನಲ್ಲಿ ತಮ್ಮ ಮನೆ ಹೊಂದಿದ್ದಾರೆ. ಐಷಾರಾಮಿ ಮನೆಯನ್ನು ನೀರಜ್‌ ಅವರು ಕಟ್ಟಿಸಿದ್ದು, ಆ ಮನೆ ಹೇಗಿದೆ? ಮನೆಯಲ್ಲಿ ಏನೇನಿದೆ ಎಂಬುದನ್ನು ನೋಡೋಣ.

ಸುದ್ದಿಸಂಸ್ಥೆ ಎನ್‌ಡಿಟಿವಿ ಮಾಡಿರುವ ವಿಡಿಯೋದಲ್ಲಿ, ನೀರಜ್‌ ಅವರ ಮನೆಯನ್ನು ನೋಡಬಹುದು. ದೊಡ್ಡ ಬಂಗಲೆ ಮಾತ್ರವಲ್ಲದೆ, ನೀರಜ್‌ ಹಲವು ಕಾರುಗಳನ್ನು ಕೂಡಾ ಹೊಂದಿದ್ದಾರೆ. ನೀರಜ್‌ ಅವರಿಗೆ ವಾಹನಗಳ ಕ್ರೇಜ್‌ ಕೂಡಾ ಇದೆ. ದುಬಾರಿ ಕಾರುಗಳ ಸಂಗ್ರಹದ ಜೊತೆಗೆ, ಅತ್ಯಾಧುನಿಕ ಬೈಕ್‌ಗಳು ಕೂಡಾ ಅವರ ಬಳಿ ಇದೆ.

ನೀರಜ್ ಚೋಪ್ರಾ ಮನೆಯು ಹರಿಯಾಣದ ಪಾಣಿಪತ್‌ ಬಳಿಯ ಖಂಡ್ರಾದಲ್ಲಿದೆ. ಮೂರು ಅಂತಸ್ತಿನ ಬಂಗಲೆಯೊಂದಿಗೆ ಗಾರ್ಡನ್‌ ಕೂಡಾ ಇದೆ. ಮನೆ ಮೇಲೆ ಭಾರತದ ತ್ರಿವರ್ಣ ಧ್ವಜ ಹಾರಾಡುತ್ತಿದೆ.

ಕಾರು ಹಾಗೂ ಬೈಕ್‌ಗಳ ಕ್ರೇಜ್

ನೀರಜ್‌ ಬಳಿ ಹಲವು ಕಾರುಗಳು ಕೂಡಾ ಇದೆ. ಬರೋಬ್ಬರಿ 2 ಕೋಟಿ ರೂಪಾಯಿ ಬೆಲೆಯ ರೇಂಜ್ ರೋವರ್ ಸ್ಪೋರ್ಟ್, ಅಂದಾಜು 93.52 ಲಕ್ಷ ರೂಪಾಯಿ ಬೆಲೆಬಾಳುವ ಫೋರ್ಡ್ ಮಸ್ಟಾಂಗ್ ಜಿಟಿ. 33 ಲಕ್ಷದಿಂದ 51.44 ಲಕ್ಷದವರೆಗಿನ ಟೊಯೊಟಾ ಫಾರ್ಚುನರ್ ಕೂಡಾ ಇದೆ. ಇದರ ಜೊತೆಗೆ ಸುಮಾರು 11 ಲಕ್ಷ ರೂಪಾಯಿಯ ಹಾರ್ಲೆ ಡೇವಿಡ್ಸನ್ 1200 ರೋಡ್‌ಸ್ಟರ್ ಹಾಗೂ ಬಜಾಜ್ ಪಲ್ಸರ್ 220ಎಫ್ ಬೈಕ್ ಕೂಡಾ ಇದೆ.‌‌

ಟೋಕಿಯೊ ಹೆಸರಿನ ನಾಯಿ

ನೀರಜ್ ಅವರ ಬಳಿ ಗೋಲ್ಡಲ್‌ ರಿಟ್ರೈವರ್ ನಾಯಿ ಇದೆ. ಈ ನಾಯಿಯ ಹೆಸರಿಗೂ, ನೀರಜ್‌ ಅವರ ಮೊದಲ ಒಲಿಂಪಿಕ್ಸ್‌ ಪದಕಕ್ಕೂ ಸಂಬಂಧವಿದೆ. ಅದೇನೆಂದರೆ, ಚಿನ್ನದ ಹುಡುಗ ತಮ್ಮ ಮುದ್ದಿನ ನಾಯಿಗೆ ಟೋಕಿಯೊ ಎಂದು ಹೆಸರಿಟ್ಟಿದ್ದಾರೆ. 2022ರ ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲೇ ನೀರಜ್‌ ಬಂಗಾರದ ಸಾಧನೆ ಮಾಡಿದ್ದರು. ಆ ಚಿನ್ನವು ನೀರಜ್‌ ಅವರ ಜನಪ್ರಿಯತೆ ಹೆಚ್ಚಿಸಿತ್ತು. ಇದಕ್ಕಾಗಿ ತಮ್ಮ ನಾಯಿಗೆ ಜಪಾನ್‌ ರಾಜಧಾನಿ ಟೋಕಿಯೊ ಹೆಸರಿಟ್ಟಿದ್ದಾರೆ.

ನೀರಜ್ ನೆಟ್‌ವರ್ತ್

2024ರಲ್ಲಿ ನೀರಜ್ ಚೋಪ್ರಾ ಅವರ ಅಂದಾಜು ನಿವ್ವಳ ಮೌಲ್ಯವು ಸರಿಸುಮಾರು 37 ಕೋಟಿ ರೂಪಾಯಿ ಎಂದು ಹೇಳಲಾಗಿದೆ. ಅಂತಾರಾಷ್ಟ್ರೀಯ ಸ್ಪರ್ಧೆಗಳು, ಬ್ರಾಂಡ್‌ ಎಂಡೋರ್ಸ್‌ಮೆಂಟ್‌ ಹಾಗೂ ಭಾರತೀಯ ಸೇನೆಯಲ್ಲಿ ಜೂನಿಯರ್ ಕಮಿಷನ್ಡ್ ಆಫೀಸರ್ ಆಗಿ ಅವರು ಸಂಭಾವನೆ ಪಡೆಯುತ್ತಾರೆ. ಅವರು ಮಾಸಿಕ ಆದಾಯ ಸುಮಾರು 30 ಲಕ್ಷ ರೂಪಾಯಿ ಎಂದು ಹೇಳಲಾಗಿದೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.