ಭರತ್‌, ಪವನ್ ಸೆಹ್ರಾವತ್, ಪರ್ದೀಪ್ ನರ್ವಾಲ್ ರಿಟೈನ್‌ ಮಾಡದ ತಂಡಗಳು; ಪಿಕೆಎಲ್‌ ಹರಾಜಿನಲ್ಲಿ ಬಲಿಷ್ಠ ಆಟಗಾರರು-pro kabaddi league bharat pardeep narwal pawan sehrawat not retained as strong players in pkl auction 2024 ,ಕ್ರೀಡೆ ಸುದ್ದಿ
ಕನ್ನಡ ಸುದ್ದಿ  /  ಕ್ರೀಡೆ  /  ಭರತ್‌, ಪವನ್ ಸೆಹ್ರಾವತ್, ಪರ್ದೀಪ್ ನರ್ವಾಲ್ ರಿಟೈನ್‌ ಮಾಡದ ತಂಡಗಳು; ಪಿಕೆಎಲ್‌ ಹರಾಜಿನಲ್ಲಿ ಬಲಿಷ್ಠ ಆಟಗಾರರು

ಭರತ್‌, ಪವನ್ ಸೆಹ್ರಾವತ್, ಪರ್ದೀಪ್ ನರ್ವಾಲ್ ರಿಟೈನ್‌ ಮಾಡದ ತಂಡಗಳು; ಪಿಕೆಎಲ್‌ ಹರಾಜಿನಲ್ಲಿ ಬಲಿಷ್ಠ ಆಟಗಾರರು

ಪಿಕೆಎಲ್ ಫ್ರಾಂಚೈಸಿಗಳು ಹರಾಜಿಗೂ ಮುನ್ನ ಕೆಲವು ಪ್ರಮುಖ ಆಟಗಾರರನ್ನು ಉಳಿಸಿಕೊಂಡಿವೆ. ಆಗಸ್ಟ್ 15 ಮತ್ತು 16ರಂದು ಹರಾಜು ಪ್ರಕ್ರಿಯೆ ನಡೆಯಲಿದ್ದು, ಬಲಿಷ್ಠ ಆಟಗಾರರು ಹರಾಜು ಪಟ್ಟಿಯಲ್ಲಿದ್ದಾರೆ.

ಭರತ್‌, ಪವನ್ ಸೆಹ್ರಾವತ್, ಪರ್ದೀಪ್ ನರ್ವಾಲ್ ರಿಟೈನ್‌ ಮಾಡದ ತಂಡಗಳು
ಭರತ್‌, ಪವನ್ ಸೆಹ್ರಾವತ್, ಪರ್ದೀಪ್ ನರ್ವಾಲ್ ರಿಟೈನ್‌ ಮಾಡದ ತಂಡಗಳು

ಪ್ರೊ ಕಬಡ್ಡಿ ಲೀಗ್ (ಪಿಕೆಎಲ್) 11ನೇ ಆವೃತ್ತಿಯ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಟೂರ್ನಿ ಆರಂಭಕ್ಕೂ ಮುನ್ನ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಆಗಸ್ಟ್ 15 ಮತ್ತು 16ರಂದು ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ಅದಕ್ಕೂ ಮುನ್ನ ವಿವಿಧ ತಂಡಗಳು ತನ್ನ ಬಳಿ ಉಳಿಸಿಕೊಳ್ಳುವ ಆಟಗಾರರನ್ನು ಪ್ರಕಟಿಸಿವೆ. ಬೆಂಗಳೂರು ಬುಲ್ಸ್‌ ಸೇರಿದಂತೆ ಹಲವು ತಂಡಗಳು ಅಚ್ಚರಿಯ ನಿರ್ಧಾರ ಮಾಡಿವೆ. ಒಟ್ಟು 88 ಆಟಗಾರರನ್ನು ತಂಡಗಳು ಉಳಿಸಿಕೊಂಡಿವೆ. ಆದರೆ, ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಪವನ್ ಸೆಹ್ರಾವತ್, ಪರ್ದೀಪ್ ನರ್ವಾಲ್ ಸೇರಿದಂತೆ ಭರತ್‌ ಅವರಂಥ ಬಲಿಷ್ಠ ಅಟಗಾರರನ್ನು ತಂಡಗಳು ಕೈಬಿಟ್ಟಿವೆ. ಇವರು ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ.

ಬೆಂಗಳೂರು ಬುಲ್ಸ್‌ ತಂಡವು ತಂಡದ ಬಲಿಷ್ಠ ರೈಡರ್‌ ಭರತ್‌ ಅವರನ್ನು ಅಚ್ಚರಿಯ ರೀತಿಯಲ್ಲಿ ಕೈಬಿಟ್ಟಿದೆ. ಉಳಿದಂತೆ ರೋಹಿತ್‌ ಕುಮಾರ್‌, ಸೌರಬ್‌ ನಂದಾಲ್ ಅವರನ್ನು ಉಳಿಸಿಕೊಂಡಿದೆ. ಸ್ಟಾರ್‌ ಆಟಗಾರರಾದ ಮಣಿಂದರ್ ಸಿಂಗ್, ಫಝೆಲ್ ಅತ್ರಾಚಲಿ ಮತ್ತು ಮೊಹಮದ್ರೆಜಾ ಶಾದ್ಲೋಯಿ ಚಿಯಾನೆ ಅವರನ್ನು ತಂಡಗಳು ಕೈಬಿಟ್ಟಿವೆ.

ಇದೇ ವೇಳೆ ಸ್ಟಾರ್ ರೈಡರ್‌ಗಳಾದ ಅಶು ಮಲಿಕ್ ಮತ್ತು ನವೀನ್ ಕುಮಾರ್ ಅವರನ್ನು ದಬಾಂಗ್ ಡೆಲ್ಲಿ ಕೆಸಿ ತಂಡ ಉಳಿಸಿಕೊಂಡಿದೆ. 10ನೇ ಆವೃತ್ತಿಯ ಅತ್ಯಂತ ಮೌಲ್ಯಯುತ ಆಟಗಾರ ಪ್ರಶಸ್ತಿ ಪಡೆದ ಅಸ್ಲಂ ಇನಾಮ್ದಾರ್ ಅವರನ್ನು ಪುಣೇರಿ ಪಲ್ಟನ್ ಉಳಿಸಿಕೊಂಡರೆ, ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವು ಸ್ಟಾರ್ ರೈಡರ್ ಅರ್ಜುನ್ ದೇಶ್ವಾಲ್ ಅವರನ್ನು ಉಳಿಸಿಕೊಂಡಿದೆ.

ಎಲೈಟ್ ರಿಟೈನ್ಡ್ ಪ್ಲೇಯರ್ಸ್ ವಿಭಾಗದಲ್ಲಿ 22, ಯುವ ಆಟಗಾರರ ವಿಭಾಗದಲ್ಲಿ 26 ಮತ್ತು ಹೊಸ ಯುವ ಆಟಗಾರರ ವಿಭಾಗದಲ್ಲಿ 40 ಸೇರಿದಂತೆ ಸೇರಿದಂತೆ ಒಟ್ಟು 88 ಆಟಗಾರರನ್ನು ಮೂರು ವಿಭಾಗಗಳಲ್ಲಿ ಉಳಿಸಿಕೊಳ್ಳಲಾಗಿದೆ.

ಆಟಗಾರರ ಹರಾಜು ನಿಯಮಗಳು

ಮುಂದೆ ನಡೆಯಲಿರುವ ಹರಾಜಿನಲ್ಲಿ, ದೇಶೀಯ ಮತ್ತು ವಿದೇಶಿ ಆಟಗಾರರನ್ನು ಎ, ಬಿ, ಸಿ ಮತ್ತು ಡಿ ಎಂದು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗುತ್ತದೆ. ಆಟಗಾರರನ್ನು ಪ್ರತಿ ವಿಭಾಗದಲ್ಲಿ 'ಆಲ್ ರೌಂಡರ್ಸ್', 'ಡಿಫೆಂಡರ್ಸ್' ಮತ್ತು 'ರೈಡರ್ಸ್' ಎಂದು ಉಪವಿಭಜನೆ ಮಾಡಲಾಗುತ್ತದೆ. ಪ್ರತಿ ವಿಭಾಗಕ್ಕೂ ಮೂಲ ಬೆಲೆ ನಿಗದಿಯಾಗಿದೆ. ವರ್ಗ ಎ - 30 ಲಕ್ಷ ರೂಪಾಯಿ, ವರ್ಗ ಬಿ - 20 ಲಕ್ಷ ರೂ., ವರ್ಗ ಸಿ - 13 ಲಕ್ಷ ರೂ., ವರ್ಗ ಡಿ - 9 ಲಕ್ಷ ರೂಪಾಯಿ ಮೂಲ ಬೆಲೆ ನಿಗದಿಯಾಗಿದೆ. ಪ್ರತಿ ಫ್ರಾಂಚೈಸಿಗೆ ಲಭ್ಯವಿರುವ ಒಟ್ಟು ಪರ್ಸ್‌ ಮೊತ್ತ 5 ಕೋಟಿ ರೂಪಾಯಿ. ಇಷ್ಟು ಮೊತ್ತದಲ್ಲೇ ತಂಡಗಳ ಖರೀದಿ ನಡೆಯಬೇಕು.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.