ಧೀರೂಭಾಯಿ ಅಂಬಾನಿ ಸ್ಕೂಲ್‌ನಲ್ಲಿ ರೋಹಿತ್ ಶರ್ಮಾ ಪುತ್ರಿ ಸಮೈರಾ ಕ್ಯೂಟ್ ಡ್ಯಾನ್ಸ್, ಚೆಂದದ ವಿಡಿಯೋ ಇಲ್ಲಿದೆ
Rohit Sharmas daughter Samaira: ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಪುತ್ರಿ ಸಮೈರಾ ಚೆಂದದ ಡ್ಯಾನ್ಸ್ ಮಾಡುವ ಗಮನ ಸೆಳೆದಿದ್ದಾರೆ. ಈ ವಿಡಿಯೋ ಇಲ್ಲಿದೆ.
ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ಅವರು ಪ್ರಸ್ತುತ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಬ್ಯುಸಿಯಾಗಿದ್ದಾರೆ. ನವೆಂಬರ್ 15ರಂದು ಪತ್ನಿ ರಿತಿಕಾ ಸಜ್ದೇಹ್ ಅವರು 2ನೇ ಬಾರಿಗೆ ತಾಯಿಯಾದ ಕಾರಣ ಆರಂಭಿಕ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದರು. ಇದೀಗ ಎರಡು ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, ಉಳಿದ ಪಂದ್ಯಗಳಲ್ಲಿ ವೈಫಲ್ಯ ಮೆಟ್ಟಿ ನಿಲ್ಲಲು ಸಜ್ಜಾಗಿದ್ದಾರೆ. ಸರಣಿ ಗೆಲ್ಲುವ ಗುರಿಯೊಂದಿಗೆ ಭರ್ಜರಿ ಕಸರತ್ತು ನಡೆಸುತ್ತಿರುವ ಹಿಟ್ಮ್ಯಾನ್, ಬ್ಯಾಟಿಂಗ್ನಲ್ಲೂ ಫಾರ್ಮ್ಗೆ ಮರಳಲು ಸಿದ್ದರಾಗುತ್ತಿದ್ದಾರೆ. ಇದರ ನಡುವೆ ರೋಹಿತ್ ಪುತ್ರಿ ಸಮೈರಾ ಕ್ಯೂಟ್ ಡ್ಯಾನ್ಸ್ ಮಾಡಿರುವ ವಿಡಿಯೋ ವೈರಲ್ ಆಗಿದೆ.
ರಿತಿಕಾ ಫುಲ್ ಖುಷ್, ರೋಹಿತ್ ಮಿಸ್
ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರೋಹಿತ್ ಪುತ್ರಿ ಸಮೈರಾ, ತನ್ನ ಸಹಪಾಠಿಗಳ ಜೊತೆಗೆ ನೃತ್ಯ ಪ್ರದರ್ಶಿಸಿದ್ದಾರೆ. ಶಾಹೀದ್ ಕಪೂರ್, ಕೃತಿ ಸನನ್ ಅವರ ನಟನೆಯ ತೇರಿ ಬಾತೋನೆ ಮೇ ಏಸಾ ಉಲ್ಜಾ ಜಿಯಾ ಚಿತ್ರದ ತುಮ್ಸೆ ಕಿರಣ್ ಧೂಪ್ ಕಿ ಎನ್ನುವ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಮಗಳು ಚೆಂದ ಡ್ಯಾನ್ಸ್ ಮಾಡುತ್ತಿದ್ದನ್ನು ಕಂಡು ಅಮ್ಮ ರಿತಿಕಾ ಸಜ್ದೇಹ್ ಫುಲ್ ಖುಷ್ ಆಗಿದ್ದರು. ಸಮೈರಾರ ಪ್ರತಿ ಸ್ಪೆಪ್ಸ್ಗೂ ಚಪ್ಪಾಳೆ ತಟ್ಟುತ್ತಾ ಪ್ರೋತ್ಸಾಹ ತುಂಬುತ್ತಿದ್ದರು. ಅಲ್ಲದೆ, ಫುಲ್ ಖುಷ್ ಆದರು. ಆಸ್ಟ್ರೇಲಿಯಾ ವಿರುದ್ಧ ಸರಣಿ ಆಡುತ್ತಿದ್ದ ಹಿನ್ನೆಲೆ ರೋಹಿತ್ ತನ್ನ ಮಗಳ ಕ್ಯೂಟ್ ಡ್ಯಾನ್ಸ್ ಮಿಸ್ ಮಾಡಿಕೊಂಡರು.
ರಿತಿಕಾ ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್ ತಲುಪಿದ ಕೂಡಲೇ ಪಾಪರಾಜಿಗಳ ಕ್ಯಾಮರಾಗಳು ಆಕೆಯ ಮೇಲೆ ಫೋಕಸ್ ಮಾಡಿದವು. ಆಕೆ ಪೋಸ್ ಕೊಡಲು ನಿಲ್ಲಲಿಲ್ಲ. ಆದರೆ ರಿತಿಕಾ ಸರಳ ಶೈಲಿಯು ಎಲ್ಲರ ಮನ ಗೆದ್ದಿತು. ಶಾಲಾ ವಾರ್ಷಿಕ ದಿನದಂದು ಸರಳವಾಗಿ ಶಾಲೆಗೆ ಆಗಮಿಸಿದ ರಿತಿಕಾ ನಿಜವಾಗಿಯೂ ಆಕರ್ಷಿಸಿದರು. ಸಂಪೂರ್ಣ ಕಪ್ಪು ಬಟ್ಟೆ ಧರಿಸಿದ್ದ ರಿತಿಕಾ, ಶಾಲೆಗೆ ಬಂದ ಕ್ಷಣದಿಂದ ಸ್ಮೈಲ್ ಮಾಡುತ್ತಲೇ ಇದ್ದರು. ಅವರ ಈ ದೃಶ್ಯಗಳು ನೆಟ್ಸ್ನಲ್ಲಿ ಸಖತ್ ವೈರಲ್ ಆಗುತ್ತಿದೆ. ಇನ್ನು ಸಮೈರಾ ನೀಲಿ ಡ್ರೆಸ್ನಲ್ಲಿ ತನ್ನ ಸಹಪಾಠಿಗಳೊಂದಿಗೆ ಹೆಜ್ಜೆ ಹಾಕಿದ್ದು ಇನ್ನಷ್ಟು ಆಕರ್ಷಿಸಿತು.
ಬಿಜಿಟಿಯಲ್ಲಿ ರೋಹಿತ್ ಶರ್ಮಾ
ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಬ್ಯುಸಿಯಾಗಿರುವ ರೋಹಿತ್ ಶರ್ಮಾ ಅವರು ಕೆಟ್ಟ ಫಾರ್ಮ್ನಲ್ಲಿದ್ದಾರೆ. ಆರಂಭಿಕ ಪಂದ್ಯಕ್ಕೆ ಅಲಭ್ಯರಾದರೂ ಎರಡನೇ ಹಾಗೂ ಮೂರನೇ ಟೆಸ್ಟ್ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಅಲ್ಲದೆ, ಕೆಎಲ್ ರಾಹುಲ್ಗೆ ತನ್ನ ಆರಂಭಿಕ ಸ್ಥಾನವನ್ನು ಬಿಟ್ಟುಕೊಟ್ಟು ತಾನು 6ನೇ ಸ್ಥಾನದಲ್ಲಿ ಬ್ಯಾಟ್ ಬೀಸಿ ಗಮನ ಸೆಳೆದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಅವರ ಬ್ಯಾಟ್ ಸದ್ದು ಮಾಡಲಿಲ್ಲ. ಈ ಹಿಂದೆಯೂ ಮಿಡಲ್ ಆರ್ಡರ್ನಲ್ಲಿ ತಾನು ಆಕರ್ಷಿತ ಬ್ಯಾಟಿಂಗ್ ನಡೆಸಿರಲಿಲ್ಲ. ಆಸ್ಟ್ರೇಲಿಯಾ ಪ್ರವಾಸದಲ್ಲಿ ರೋಹಿತ್ ಮೂರು ಇನ್ನಿಂಗ್ಸ್‌ಗಳಲ್ಲಿ 6.33ರ ನಿರಾಶಾದಾಯಕ ಸರಾಸರಿಯೊಂದಿಗೆ ಕೇವಲ 19 ರನ್ ಗಳಿಸಿದ್ದಾರೆ.
ಮತ್ತೆ ಆರಂಭಿಕ ಸ್ಥಾನಕ್ಕೆ ರೋಹಿತ್?
ಪರ್ತ್ ಟೆಸ್ಟ್ನಲ್ಲಿ ಕೆಎಲ್ ರಾಹುಲ್ ಭರ್ಜರಿ ಅರ್ಧಶತಕ ಸಿಡಿಸಿದ್ದ ಕಾರಣ ರೋಹಿತ್ ತನ್ನ ಜಾಗವನ್ನು ತ್ಯಾಗ ಮಾಡಿದ್ದರು. ಆದರೆ ಇದು ತನ್ನ ಆಟದ ಮೇಲೆ ಪರಿಣಾಮ ಬೀರುವಂತೆ ಮಾಡಿತು. ಇದೀಗ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಮರಳಿ ಆರಂಭಿಕ ಸ್ಥಾನ ಪಡೆಯುವ ಲೆಕ್ಕಾಚಾರದಲ್ಲಿದ್ದಾರೆ. ಯಶಸ್ವಿ ಜೈಸ್ವಾಲ್ ಜೊತೆಗೆ ಮತ್ತೆ ಇನ್ನಿಂಗ್ಸ್ ತೆರೆಯಲು ನಿರ್ಧರಿಸಿದ್ದಾರೆ. ಕೆಎಲ್ ರಾಹುಲ್ ಅವರನ್ನು 3ನೇ ಸ್ಥಾನಕ್ಕೆ ತಳ್ಳುವ ಚಿಂತನೆ ಟೀಮ್ ಮ್ಯಾನೇಜ್ಮೆಂಟ್ ನಡೆಸಿದೆ. ರಾಹುಲ್ಗೆ 3ನೇ ಸ್ಥಾನ ಬಿಟ್ಟುಕೊಟ್ಟು ಗಿಲ್ ಅವರನ್ನು ಕೈಬಿಡಲು ಟೀಮ್ ಮ್ಯಾನೇಜ್ಮೆಂಟ್ ನಿರ್ಧರಿಸಿದೆ ಎಂದು ವರದಿಯಾಗಿದೆ. ಹೀಗಾಗಿ ಮೆಲ್ಬೋರ್ನ್ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದಲ್ಲಿ ಕೆಲವು ಬದಲಾವಣೆಯಾಗುವ ನಿರೀಕ್ಷೆ ಇದೆ.