RCB vs DC: ಆರ್​​ಸಿಬಿಗೆ 4 ಪಂದ್ಯ ಸೋತಿರುವ ಡೆಲ್ಲಿ ಸವಾಲು; ಸಂಭಾವ್ಯ ಪ್ಲೇಯಿಂಗ್ XI, ಪಿಚ್‌ ರಿಪೋರ್ಟ್, ಮುಖಾಮುಖಿ ದಾಖಲೆ ಇಲ್ಲಿದೆ!
ಕನ್ನಡ ಸುದ್ದಿ  /  ಕ್ರೀಡೆ  /  Rcb Vs Dc: ಆರ್​​ಸಿಬಿಗೆ 4 ಪಂದ್ಯ ಸೋತಿರುವ ಡೆಲ್ಲಿ ಸವಾಲು; ಸಂಭಾವ್ಯ ಪ್ಲೇಯಿಂಗ್ Xi, ಪಿಚ್‌ ರಿಪೋರ್ಟ್, ಮುಖಾಮುಖಿ ದಾಖಲೆ ಇಲ್ಲಿದೆ!

RCB vs DC: ಆರ್​​ಸಿಬಿಗೆ 4 ಪಂದ್ಯ ಸೋತಿರುವ ಡೆಲ್ಲಿ ಸವಾಲು; ಸಂಭಾವ್ಯ ಪ್ಲೇಯಿಂಗ್ XI, ಪಿಚ್‌ ರಿಪೋರ್ಟ್, ಮುಖಾಮುಖಿ ದಾಖಲೆ ಇಲ್ಲಿದೆ!

RCB vs DC: ಸತತ ನಾಲ್ಕು ಪಂದ್ಯಗಳಲ್ಲಿ ಸೋಲು ಕಂಡಿರುವ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಸವಾಲಿಗೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಸಜ್ಜಾಗಿದೆ. ತವರಿನ ಮೈದಾನದಲ್ಲಿ ಗೆಲುವಿನ ಹಳಿಗೆ ಮರಳಲು ತಯಾರಿ ನಡೆಸಿದೆ. ಮತ್ತೊಂದಡೆ ಗೆಲುವಿನ ಖಾತೆ ತೆರೆಯಲು ಡೆಲ್ಲಿ ರಣ ತಂತ್ರ ರೂಪಿಸಿದೆ.

ಫಾಫ್​ ಡು ಪ್ಲೆಸಿಸ್​​, ಡೇವಿಡ್​ ವಾರ್ನರ್​​​
ಫಾಫ್​ ಡು ಪ್ಲೆಸಿಸ್​​, ಡೇವಿಡ್​ ವಾರ್ನರ್​​​ (Twitter)

ತವರು ಎಂ ಚಿನ್ನಸ್ವಾಮಿ ಮೈದಾನದಲ್ಲಿ ಸೋಲು ಕಂಡಿದ್ದ ರಾಯಲ್​ ಚಾಲೆಂಜರ್ಸ್​ ಬೆಂಗಳೂರಿಗೆ ಇಂದು ಅಗ್ನಿಪರೀಕ್ಷೆ. ಆರಂಭಿಕ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದ ಬಳಿಕ ಎರಡು ಪಂದ್ಯಗಳಲ್ಲಿ ಸೋಲು ಕಂಡಿರುವ ಅತಿಥೇಯ ಆರ್​​ಸಿಬಿ ತಂಡ, ಡೆಲ್ಲಿ ಕ್ಯಾಪಿಟಲ್ಸ್​​ ಸವಾಲಿಗೆ ಸಜ್ಜಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರೆಡ್​ ಆರ್ಮಿ ಗೆಲುವಿನ ಲಯಕ್ಕೆ ಮರಳುವ ನಿರೀಕ್ಷೆಯಲ್ಲಿದೆ.

ಮಧ್ಯಮ ಕ್ರಮಾಂಕ ವಿಫಲ

ಟೂರ್ನಿಯಲ್ಲಿ ಗೆಲುವಿನ ಆರಂಭದ ಬಳಿಕ ಲಯ ಕಳೆದುಕೊಂಡಿರುವ ಆರ್​ಸಿಬಿ, ಪ್ರಸ್ತುತ ಆಡಿರುವ 3 ಪಂದ್ಯಗಳಿಂದ 2 ಅಂಕ ಮಾತ್ರ ಕಲೆ ಹಾಕಿದೆ. ವಿರಾಟ್​​ ಕೊಹ್ಲಿ, ಫಾಫ್​ ಡು ಪ್ಲೆಸಿಸ್​ ಮತ್ತು ಗ್ಲೇನ್​​ ಮ್ಯಾಕ್ಸ್​ವೆಲ್​​​ ಘಟಾನುಘಟಿ ಬ್ಯಾಟರ್​ಗಳನ್ನು ಹೊಂದಿರುವ ರೆಡ್​ ಆರ್ಮಿ ಕಳೆದ ಪಂದ್ಯ ಲಕ್ನೋ ವಿರುದ್ಧ ರನ್​ ಮಳೆ ಸುರಿಸಿದರು. ಆದರೆ ಕೊನೆಯ ಎಸೆತದಲ್ಲಿ ಪಂದ್ಯ ಸೋಲು ಕಂಡಿತು.

ಮ್ಯಾಕ್ಸ್​ವೆಲ್​ ಫಾರ್ಮ್​ಗೆ ಮರಳಿರುವುದು ತಂಡದ ಬಲ ಹೆಚ್ಚಿಸಿದೆ. ಆದರೆ ಈ ಮೂವರು ಬ್ಯಾಟರ್​ಗಳನ್ನು ಹೊರತುಪಡಿಸಿ ಮಧ್ಯಮ ಕ್ರಮಾಂಕದ ಆಟಗಾರರಿಗೆ ಸತ್ವ ಪರೀಕ್ಷೆ ಎದುರಾಗಿದೆ. ಆದರೂ ಗೆಲ್ಲುವ ಫೇವರಿಟ್​ ತಂಡವಾಗಿ ಕಣಕ್ಕಿಳಿಯಲಿದೆ. ಆದರೆ, ಬೌಲಿಂಗ್​ನಲ್ಲಿ ಕಳಪೆ ಪ್ರದರ್ಶನ ನೀಡುತ್ತಿದೆ. ವನಿಂದು ಹಸರಂಗ ತಂಡಕ್ಕೆ ಮರಳಿರುವುದು ಬಲ ದುಪ್ಪಟ್ಟಾಗಿದೆ. ಮೊದಲ ಮೂರು ಪಂದ್ಯಗಳಿಗೆ ಅಲಭ್ಯರಾಗಿದ್ದ ಹಸರಂಗ, ಇಂದು ಕಣಕ್ಕಿಳಿಯುವ ಸಾಧ್ಯತೆ ಇದೆ.

ಡೆಲ್ಲಿಗೆ ಗೆಲ್ಲುವ ಒತ್ತಡ

ಟೂರ್ನಿಯಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲಿ ಸೋಲು ಕಂಡಿರುವ ಕಂಡಿರುವ ಆಸಿಸ್​​ನ ಡೇವಿಡ್​ ವಾರ್ನರ್​​​ ನೇತೃತ್ವದ ಡೆಲ್ಲಿ ಗೆಲ್ಲುವ ಒತ್ತಡದಲ್ಲಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ ಕೊನೆ ಸ್ಥಾನದಲ್ಲಿದೆ. ಸದ್ಯ ಆರ್​​ಸಿಬಿ ವಿರುದ್ಧ ಗೆಲುವು ತೋರಬೇಕಾದರೆ ಸಂಘಟಿತ ಪ್ರದರ್ಶನ ನೀಡುವುದು ಅನಿವಾರ್ಯ. ಅಕ್ಷರ್​ ಪಟೇಲ್​ ಆಲ್​ರೌಂಡ್​ ಆಟವಾಡುತ್ತಿದ್ದರೆ, ಉಳಿದ ಆಟಗಾರರ ಕಳಪೆ ಪ್ರದರ್ಶನ ಹಿನ್ನಡೆಯಾಗುತ್ತಿದೆ.

ಟೂರ್ನಿಯಲ್ಲಿ ಹೆಚ್ಚು ರನ್​ ಕಲೆ ಹಾಕಿದ ಆಟಗಾರರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ವಾರ್ನರ್​ಗೆ ಸೂಕ್ತ ಆರಂಭ ಒದಗಿಸಿಕೊಡುವ ಆಟಗಾರ ಇಲ್ಲದಿರುವುದು ತಲೆ ನೋವಿಗೆ ಕಾರಣವಾಗಿದೆ. ಸರ್ಫರಾಜ್​ ಖಾನ್​ ಜಾಗದಲ್ಲಿ ಸ್ಥಾನ ಪಡೆದಿರುವ ಮನೀಶ್​ ಪಾಂಡೆ ತವರಿನ ಅಂಗಳದಲ್ಲಿ ಮೋಡಿ ಮಾಡುವವರೇ ಕಾದು ನೊಡಬೇಕಿದೆ. ವೈಯಕ್ತಿಕ ಕಾರಣದಿಂದ ಅಲಭ್ಯರಾಗಿದ್ದ ಮಿಚೆಲ್​ ಮಾರ್ಷ್​ ಈಗ ತಂಡಕ್ಕೆ ಮರಳಿದ್ದಾರೆ. ಬೌಲಿಂಗ್​​​​ನಲ್ಲಿ ಆ್ಯನ್ರಿಚ್​ ನೋಕಿಯಾ ಮಾತ್ರ ಅಬ್ಬರಿಸುತ್ತಿದ್ದಾರೆ.

ಮುಖಾಮುಖಿ ದಾಖಲೆ

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್​ ತಂಡಗಳು ಪರಸ್ಪರ 29 ಬಾರಿ ಮುಖಾಮುಖಿಯಾಗುತ್ತಿವೆ. ಅದರಲ್ಲಿ ಆರ್​ಸಿಬಿ 18 ಗೆದ್ದು ಮೇಲುಗೈ ಸಾಧಿಸಿದೆ. ಡೆಲ್ಲಿ 10 ಪಂದ್ಯಗಳಲ್ಲಿ ಜಯ ಸಾಧಿಸಿದೆ.

ಪಿಚ್​ ರಿಪೋರ್ಟ್​

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಹೈ ಸ್ಕೋರ್​​ ನಿರೀಕ್ಷಿಸಲಾಗಿದೆ. ಬ್ಯಾಟ್ಸ್​​ಮನ್​ಗಳ ಸ್ವರ್ಗ ಎನಿಸಿದೆ. ಟಾಸ್​ ಗೆದ್ದ ತಂಡವು ಚೇಸಿಂಗ್​ ಆಯ್ಕೆ ಮಾಡಿಕೊಂಡರ ಉತ್ತಮ. ವೇಗಿಗಳಿಗೆ ಈ ಪಿಚ್​ ನೆರವಾಗಲಿದೆ. ಕಳೆದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್​​​ 212 ರನ್​ಗಳ ಗುರಿ ಬೆನ್ನತ್ತಿತ್ತು.

ಆರ್​ಸಿಬಿ ಸಂಭಾವ್ಯ ತಂಡ

ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಅನುಜ್ ರಾವತ್/ಮಹಿಪಾಲ್ ಲೊಮ್ರೋರ್, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ (ವಿಕೆಟ್​ ಕೀಪರ್​), ವನಿಂದು ಹಸರಂಗ, ಡೇವಿಡ್ ವಿಲ್ಲಿ, ಹರ್ಷಲ್ ಪಟೇಲ್, ಕರ್ಣ್ ಶರ್ಮಾ, ಮೊಹಮ್ಮದ್ ಸಿರಾಜ್​​.

ಡೆಲ್ಲಿ ಸಂಭಾವ್ಯ ತಂಡ

ಡೇವಿಡ್ ವಾರ್ನರ್ (ನಾಯಕ), ಪೃಥ್ವಿ ಶಾ, ಮನೀಶ್ ಪಾಂಡೆ, ಮಿಚೆಲ್ ಮಾರ್ಷ್, ರಿಲೀ ರೊಸ್ಸೌ /ರೋವ್‌ಮನ್ ಪೊವೆಲ್, ಅಕ್ಷರ್ ಪಟೇಲ್, ಲಲಿತ್ ಯಾದವ್, ಅಭಿಷೇಕ್ ಪೊರೆಲ್ (ವಿಕೆಟ್​ ಕೀಪರ್), ಕುಲ್ದೀಪ್ ಯಾದವ್, ಆ್ಯನ್ರಿಚ್​ ನೋಕಿಯಾ, ಖಲೀಲ್ ಅಹ್ಮದ್/ಮುಖೇಶ್ ಕುಮಾರ್.

Whats_app_banner