ಪ್ಯಾರಿಸ್ ಒಲಿಂಪಿಕ್ಸ್ 2024ರ ಕಿಟ್ ಅನಾವರಣ; ಭಾರತೀಯ ಈಜುಪಟು ಹಂಚಿಕೊಂಡ ವಿಡಿಯೋದಲ್ಲಿ ಏನೇನಿದೆ ನೋಡಿ
ಕನ್ನಡ ಸುದ್ದಿ  /  ಕ್ರೀಡೆ  /  ಪ್ಯಾರಿಸ್ ಒಲಿಂಪಿಕ್ಸ್ 2024ರ ಕಿಟ್ ಅನಾವರಣ; ಭಾರತೀಯ ಈಜುಪಟು ಹಂಚಿಕೊಂಡ ವಿಡಿಯೋದಲ್ಲಿ ಏನೇನಿದೆ ನೋಡಿ

ಪ್ಯಾರಿಸ್ ಒಲಿಂಪಿಕ್ಸ್ 2024ರ ಕಿಟ್ ಅನಾವರಣ; ಭಾರತೀಯ ಈಜುಪಟು ಹಂಚಿಕೊಂಡ ವಿಡಿಯೋದಲ್ಲಿ ಏನೇನಿದೆ ನೋಡಿ

ಪ್ಯಾರಿಸ್ ಒಲಿಂಪಿಕ್ಸ್ 2024ರ ಕಿಟ್‌ನಲ್ಲಿ ಆಟಗಾರರಿಗೆ ಸಮವಸ್ತ್ರ, ಇತರ ಉಡುಗೆಗಳು ಮತ್ತು ಪಾದರಕ್ಷೆಗಳನ್ನು ನೀಡಲಾಗಿದೆ. ಈ ವಿಡಿಯೋವನ್ನು ಭಾರತದ ಈಜುಪಟು ಶ್ರೀಹರಿ ನಟರಾಜ್ ಅನಾವರಣಗೊಳಿಸಿದ್ದಾರೆ.

ಭಾರತೀಯ ಈಜುಪಟು ಹಂಚಿಕೊಂಡ ವಿಡಿಯೋದಲ್ಲಿ ಏನೇನಿದೆ ನೋಡಿ
ಭಾರತೀಯ ಈಜುಪಟು ಹಂಚಿಕೊಂಡ ವಿಡಿಯೋದಲ್ಲಿ ಏನೇನಿದೆ ನೋಡಿ (Instagram/@srihari33)

ಪ್ಯಾರಿಸ್‌ನಲ್ಲಿ ಜುಲೈ 26ರಿಂದ ಆಗಸ್ಟ್ 11ರವರೆಗೆ ಬೇಸಿಗೆ ಒಲಿಂಪಿಕ್ಸ್ (Paris Olympics 2024) ನಡೆಯುತ್ತಿದೆ. ಉದ್ಘಾಟನಾ ಸಮಾರಂಭ 26ರಂದು ನಡೆಯಬೇಕಿದ್ದರೂ, ಈಗಾಗಲೇ ಕೆಲವು ಈವೆಂಟ್‌ಗಳ ಆರಂಭಗೊಂಡಿವೆ. ಜಾಗತಿಕ ಕ್ರೀಡಾ ಈವೆಂಟ್‌ಗೆ ಭಾರತೀಯ ಕ್ರೀಡಾಪಟುಗಳು ಈಗಾಗಲೇ ಪ್ರೇಮನಗರಿಗೆ ಪ್ರಯಾಣಿಸಿದ್ದಾರೆ. ಆಟಗಾರರೆಲ್ಲಾ ತಮ್ಮ ಉತ್ಸಾಹವನ್ನು ಸೋಷಿಯಲ್‌ ಮೀಡಿಯಾದಲ್ಲಿ ವ್ಯಕ್ತಪಡಿಸುತ್ತಿದ್ದಾರೆ. ಆಟಗಾರರು ತಮ್ಮ ಉತ್ಸಾಹ ಹಾಗೂ ಸಂತೋಷದ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ನಡುವೆ ಭಾರತೀಯ ಆಟಗಾರರಿಗೆ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಕಿಟ್‌ ನೀಡಲಾಗಿದೆ. ಈ ಕುರಿತ ಫೋಟೋ-ವಿಡಿಯೋಗಳನ್ನು ಆಟಗಾರರು ಹಂಚಿಕೊಳ್ಳುತ್ತಿದ್ದಾರೆ.

ಭಾರತೀಯ ಈಜುಪಟು ಶ್ರೀಹರಿ ನಟರಾಜ್ ಕೂಡಾ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಈವೆಂಟ್‌ಗಾಗಿ ಅಧಿಕೃತ ಕಿಟ್ ಅನ್ನು ಅನ್‌ಬಾಕ್ಸಿಂಗ್ ಮಾಡುವ ವಿಡಿಯೊವನ್ನು ಅವರು ಪೋಸ್ಟ್ ಮಾಡಿದ್ದಾರೆ.

"ಪ್ಯಾರಿಸ್ ಒಲಿಂಪಿಕ್ಸ್ 2024 ಕಿಟ್ ಅನ್‌ಬಾಕ್ಸಿಂಗ್" ಎಂಬ ಕ್ಯಾಪ್ಷನ್‌ನಲ್ಲಿ ಶ್ರೀಹರಿ ವಿಡಿಯೋ ಹಂಚಿಕೊಂಡಿದ್ದಾರೆ. ಪೂಮಾ ಸಂಸ್ಥೆಯ ಲೋಗೋ ಹೊಂದಿರುವ ಎರಡು ಸೂಟ್‌ಕೇಸ್‌ಗಳಲ್ಲಿ ಆಟಗಾರರಿಗೆ ಬೇಕಾದ ಜೆರ್ಸಿ, ಶೂ ಸೇರಿದಂತೆ ವಿವಿಧ ವಸ್ತುಗಳಿವೆ.

ಭಾರತದ ಕಿಟ್‌ ಅನ್‌ಬಾಕ್ಸಿಂಗ್

ಕ್ರೀಡಾಕೂಟದಲ್ಲಿ ಭಾಗವಹಿಸಲು ಸಾಂಪ್ರದಾಯಿಕ ಉಡುಗೆ ಸೇರಿದಂತೆ ಇತರ ಉಡುಗೆಗಳು, ಸಮವಸ್ತ್ರ, ಶೂ, ಪಾದರಕ್ಷೆಗಳು ಮತ್ತು ಇನ್ನಿತರ ಪರಿಕರಗಳನ್ನು ಶ್ರೀಹರಿ ತೋರಿಸಿದ್ದಾರೆ. ಭಾರತೀಯ ಒಲಿಂಪಿಕ್ ಅಸೋಸಿಯೇಷನ್‌ನ ಅಧಿಕೃತ ಇನ್‌ಸ್ಟಾಗ್ರಾಮ್ ಪುಟವು ಶ್ರೀಹರಿ ನಟರಾಜ್ ಅವರ ವಿಡಿಯೋವನ್ನು ಮರುಹಂಚಿಕೆ ಮಾಡಿದೆ.‌

ಈಜುಪಟು ಶ್ರೀಹರಿ ನಟರಾಜ್ 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪುರುಷರ 100 ಮೀಟರ್ ಬ್ಯಾಕ್‌ ಸ್ಟ್ರೋಕ್‌ನಲ್ಲಿ ಭಾಗವಹಿಸಿದ್ದರು. ಈ ಬಾರಿ ಪದಕ ಗೆಲ್ಲುವ ಭರವಸೆಯಲ್ಲಿದ್ದಾರೆ.

ವಿಶ್ವದ ಅತಿ ದೊಡ್ಡ ಕ್ರೀಡಾಕೂಟವಾದ ಒಲಿಂಪಿಕ್ಸ್‌ನಲ್ಲಿ ಈ ಬಾರಿ ಭಾರತದಿಂದ ಒಟ್ಟು 117 ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ಜುಲೈ 26ರಿಂದ ಪ್ರಾರಂಭವಾಗುವ ಕ್ರೀಡಾ ಹಬ್ಬದಲ್ಲಿ ಭಾರತವು ಜುಲೈ 25ರಿಂದಲೇ ಅಭಿಯಾನ ಆರಂಭಿಸುತ್ತಿದೆ. ಈ ಹಿಂದೆ ನಡೆದ ಟೊಕಿಯೊ ಒಲಿಂಪಿಕ್ಸ್‌ನಲ್ಲಿ ದಾಖಲೆಯ 7 ಪದಕ ಗೆದ್ದು ಅಭಿಯಾನ ಮುಗಿಸಿದ್ದ ಭಾರತ, ಈ ಬಾರಿ ಎರಡಂಕಿ ದಾಟಬೇಕೆಂಬ ಗುರಿ ಹಾಕಿಕೊಂಡಿದೆ. ಅದರಂತೆಯೇ ಈ ಬಾರಿ ಭಾರಿ ಸಂಖ್ಯೆಯಲ್ಲಿ ಆಟಗಾರರನ್ನು ಪ್ಯಾರಿಸ್‌ಗೆ ಕಳುಹಿಸಿದೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.